Friday, July 21, 2017

ಸಣ್ಣ ಕಥೆಗಳು - ಒಂದು ಮುನ್ನೋಟ ಮತ್ತು ಆಧುನಿಕ ಮಂಗಮ್ಮ (ನೋಟು ಬಂಧಿ ಸಮಯದಲ್ಲಿ ಬರೆದದ್ದು)



ಸಣ್ಣ ಕಥೆಗಳ ಅಡ್ಡಿಕ್ಷನ್ನೇ ಹಾಗೆ, ಸಣ್ಣ ಕಥೆಗಳ ಬಗ್ಗೆ ಹೆಸರಾಂತ ಪತ್ರಕರ್ತ ಮತ್ತು ಲೇಖಕ ಬೆಳಗರೆ ಹೀಗೆನ್ನುತಾರೆ - ಸಣ್ಣ ಕಥೆ ಒಬ್ಬ ಗೆಳತಿ ಇದ್ದ ಹಾಗೆ , ಅದೇ ಕಾದಂಬರಿ ಹಾಗಲ್ಲ ಬೆಳಗರೆ ಅವರ ಹೋಲಿಕೆ ನನಗು ನಿಜ ಎಂದು ಅನಿಸುತ್ಹ್ಹದೆ ಕಾರಣವಿಷ್ಟೇ ಒಂದು ಕಾದಂಬರಿ ಯನ್ನು ಬರವಣಿಗೆಗೆ ಒಲಿಸಿಕೊಂಡಷ್ಟು ಸುಲಭವಾಗಿ ಸಣ್ಣ ಕಥೆಗಳನ್ನು ಒಲಿಸಿ ಕೊಳ್ಳಲಾಗುವದಿಲ್ಲ, ಅದು ಸ್ವಲ್ಪ ಕಷ್ಟ ಸಾಧ್ಯ.ಹಾಗಾದರೆ ನಮ್ಮಲಿ ಕಥೆಗಾರರು ಇಲ್ಲವೇ - ಯಾಕಿಲ್ಲ ನಾವೆಲ್ಲ ಹುಟ್ಟು ಕಥೆಗಾರರೇ, ಒಂದು ರೀತಿಯಲ್ಲಿ ಮನುಷ್ಯನ ಹುಟ್ಟಿನೊಂದಿಗೆ ಕಥೆ ಸಹ ಹುಟ್ಟಿ ಕೊಂಡಿತು ಎಂದರೆ ತಪ್ಪಾಗಲಾರದು, ಒಂದು ಮಗು ನಾನು ನಿನ್ನೆ ಶಾಲೆಗೆ ಹೋಗುವಾಗ ಏನಾಯ್ತು ಗೊತ್ತ ಅನ್ನುವಾಗ ಅದರಲ್ಲೂ ಒಂದು ಕಥೆ ಅಡಗಿರುತದೆ. ಆದರೆ ಕಥೆ ಬರವಣಿಗೆಯ ಪ್ರಕಾರವಾಗಿ ಹೊರಹುಮ್ಮುವುದು ಅಷ್ಟು ಸಹಜ ಅಲ್ಲ.ಸಣ್ಣ ಕಥೆಗಳನ್ನು ಹತ್ತು ಹಲವು ಲೇಖಕರು ಬಹಳ ಸೊಗಸಾಗಿ ಬರೆದಿದ್ದಾರೆ, ಇತ್ತೀಚೆಗಂತೂ ಹಲವು ಲೇಖಕರು ಲಲಿತ ಪ್ರಬಂಧ ಗಳ ಮೂಲಕವೂ ಕಥೆಯ ಸಿಂಚನವನ್ನು ಒದಗಿಸುತಾರೆ , ಹಾಗೆ ಬರೆಯುವರಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಭಲವಾಗಿ ಬರೆಯುತಿರುವವರು ಜೋಗಿ ಮತ್ತು  ವಸುಧೇಂದ್ರ.

ಆದರೆ ಇಂದಿಗೂ ಸಣ್ಣ ಕಥೆಗಳೆಂದಾಗ ಹಿರಿಯ ಲೇಖಕರ ಬಗ್ಗೆ ಮಾತಾಡದೆ ಇದ್ದರೆ ಅದು ಸಣ್ಣ ಕಥೆಗಳಿಗೆ ಮಾಡುವ ಅವಮಾನವೇ ಸರಿ ಎಂದು ಭಾವಿಸುತ್ತೆನೆ, ಅವರು ಮತ್ತಾರು ಅಲ್ಲ ನಮ್ಮ ನಿಮ್ಮೆಲ್ಲರ ಆಸ್ತಿ ಕನ್ನಡದ ಮಾಸ್ತಿ - ಮಾಸ್ತಿ ವೆಂಕಟೇಶ ಐಯಂಗಾರ್ - ನಾವು ಮಾಸ್ತಿ ಕನ್ನಡದ ಆಸ್ತಿ ಎಂದು ಕೇವಲ ಪ್ರಾಸಕ್ಕಾಗಿ ಬಳಸುವುದಿಲ್ಲ , ಏಕೆಂದರೆ ಕನ್ನಡ ಸಾಹಿತ್ಯ ಲೋಕ ಕಂಡಂತಹ ಅತ್ಹ್ಯಂತ ಶ್ರೇಷ್ಠ ಮತ್ತು ಸ್ರಜನ ಶೀಲಾ ಪ್ರತಿಭೆ ಮಾಸ್ತಿ. ಮಾಸ್ತಿ ಕಾದಂಬರಿ, ಕಾವ್ಯ, ನಾಟಕ , ವಿಮರ್ಶೆ ಹೀಗೆ ಎಲ್ಲ ಪ್ರಕಾರಗಳ್ಲಲಿ ಕೃಷಿ ಮಾಡಿದ್ದರು ಆದರೆ ನಾವೆಲ್ಲರೂ ಅವರನ್ನು ಗುರುತಿಸುವುದು "ಸಣ್ಣ ಕಥೆಗಳ ಜನಕನೆಂದೇಮಾಸ್ತಿ ಸಣ್ಣ ಕಥೆಗಳ್ಳನೇ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿ ಸಣ್ಣ ಕಥೆಗಳಿಗೆ ಒಂದು ಮಹತ್ತರವಾದ ಸ್ಥಾನವನ್ನು ಒದಗಿಸಿ ಸಣ್ಣ ಕಥೆಗಳಿಗೆ ಒಂದು ಚೌಕಟ್ಟನ್ನು ಒದಗಿಸಿಕೊಟ್ಟರು

ಹಾಗೆ ನೋಡಿದರೆ ನವೋದಯ ಸಾಹಿತ್ಯದ ಪ್ರಮುಖ ಪರಿಕಲ್ಪನೆಗಳಲ್ಲಿ ಒಂದು "ಶ್ರೀ ಸಾಮಾನ್ಯನ ಪರಿಕಲ್ಪನೆ" - ಪರಿಕಲ್ಪನೆ ಯನ್ನು ಮೊದಲಿಗೆ ಬಳಕೆಗೆ ತಂದವರು ಕುವೆಂಪುರವರು. ಆದರೆ ನವೋದಯದ ಪರಿಕಲ್ಪನೆಗಳಲ್ಲಿ "ಶ್ರೀ ಸಾಮಾನ್ಯನ್ನನು" ಸಾಹಿತ್ಯದ ತೆಕ್ಕೆಗೆ ಎಳೆದು ತಂದವರು ಮಾಸ್ತಿ. ಮಾಸ್ತಿ ಅವರ ಕಥೆಗಳಲ್ಲಿ ಶ್ರೀ ಸಾಮಾನ್ಯನ್ನೇ ಕೇಂದ್ರ ಬಿಂದು ಉದಾಹರಣೆಗೆ ಅವರ ಕಥೆಗಳಲ್ಲಿ ಬಂದಥ ರಂಗಪ್ಪ, ಮಂಗಮ್ಮ , ವೆಂಕಟಿಗ ಇವರೆಲ್ಲ ಸಾಮಾನ್ಯ ವ್ಯಕ್ತಿಗಳು ಹಾಗು ಸಾಮಾನ್ಯ ವ್ಯಕ್ತಿಗಳಲ್ಲಿ ಉದಾತ್ತ ಗುಣಗಳಿವೆ ಎಂದು ಬಹಳ ಕಲಾತ್ಮಕವಾಗಿ ಕಟ್ಟಿ ಕೊಟ್ಟವರು ಮಾಸ್ತಿ. ಮಾಸ್ತಿ ಅವರ ಅತ್ಯಂತ ಜನಪ್ರಿಯವಾದ ಕಥೆ "ಮೊಸರಿನ ಮಂಗಮ್ಮ" ಆಕೆಯ ಕಥೆಯಲ್ಲಿ ಆಕೆಯ ಕಥೆ ಅಷ್ಟೇ ಈಕೆ ಮಾಸ್ತಿ ಅವರ ಬಹುತೇಕ ಎಲ್ಲ ಕಥೆಗಳಲ್ಲಿ ಪ್ರಧಾನವಾಗಿ ಕಾಣುವ ಗುಣವೊಂದಿದ್ದರೆ ಅದು "ತಾಳುವಿಕೆ" ಇದು ಅವರ ಬರವಣಿಗೆಯ ಅಂತ:ಸತ್ವ. ತಾಳುವಿಕೆ ಅವರ ಆಶಯ ಮತ್ತು ಅಭಿವ್ಯಕ್ತಿ ಎರಡು ನೆಲೆಗಳಲ್ಲಿ ಅವರ ಬರವಣಿಗೆಯಲ್ಲಿ ಕಾಣಬಹುದು. ಹೀಗೆ ಇಷ್ಟು ವಿವರವನ್ನು ಕೊಡುತಾ ಮೊದಲಿಗೆ ಮಾಸ್ತಿ ಅವರಲ್ಲಿ ಕ್ಷಮೆ ಕೇಳುತಾ ಸಕಲ ಕನ್ನಡ ಸಾರಸ್ವತ ಲೋಕಕ್ಕೆ ಕ್ಷಮೆ ಕೋರುತ್ಹ್ಹ ಮೊಸರಿನ ಮಂಗಮ್ಮ ಕಾಲಕ್ಕೆ ಇದ್ದಿದರೆ ಏನಾಗುತಿತ್ತು ಎಂಬ "ಆಧುನಿಕ ಮೊಸರಿನ ಮಂಗಮ್ಮ" ಕಥೆಯನ್ನು ಒಪ್ಪಿಸಿಕೊಳ್ಳಿ .

ಆಧುನಿಕ ಮೊಸರಿನ ಮಂಗಮ್ಮ ಇಂದಿಗೂ ಮೊಸರನ್ನೇ ಮಾರುತ್ತಿದ್ದಾಳೆ, ಆದರೆ ಆಕೆಯ ಗ್ರಾಮೀಣ ಜಗತು ಸ್ವಲ್ಪ ಬದಲಾವಣೆಯಾಗಿ ಗ್ರಾಮೀಣ ಭಾಗ ಪಟ್ಟಣ ವಾಗಿ ಮಾರ್ಪಾಡಾಗಿದೆ. ಆದ್ದರಿಂದ ಆಕೆ ಈಗ ಮೊಸರಿನೊಂದಿಗೆ ನಂದಿನಿಯ ಹಲವು ಉಪಉತ್ಪನ್ನಗಳನ್ನು ಮಾರುತ್ತಾ ಬದಕುತ್ತಿದಾಳೆ, ಆಕೆಗೆ ಬ್ಯಾಂಕಿನ ವ್ಯಹಾರ ಅಷ್ಟಾಗಿ ಗೊತ್ತಿಲ್ಲ ಹಾಗೆಂದು ಅವಳ ಬಳಿ ಬ್ಯಾಂಕ್ ಖಾತೆ ಇಲ್ಲವೆಂದಲ್ಲ ಖಾತೆ ಇದೆ ಅದು ಪ್ರಧಾನಿ ಮೋಡಪ್ಪನವರ ಕೃಪಾಕಟಾಕ್ಷದಿಂದಾದ "ಜನಧನ" ಖಾತೆ.ಮೊಸರಿನ ಮಂಗಮ್ಮ ಹೀಗೆ ದುಡಿದು ದುಡಿದು ತನ್ನೆಲ್ಲ ಹಣವನ್ನು ಬ್ಯಾಂಕ್ನಲ್ಲಿ ಇಡದೆ ತನ್ನ ಬಳಿಯೇ ಇಟ್ಟೊಕೊಂಡಿದ್ದಾಳೆ, ಆಕೆಗೆ ಒಬ್ಬ ಮಗ ಅವನಿಗೆ ಮದುವೆಯಾಗಿ ಒಬ್ಬ ಮಗಳಿದ್ದಾಳೆ, ಆಕೆಯ ಗಂಡ ರಂಗಪ್ಪ , ರಂಗಪ್ಪನಿಗೆ ಬೇಲಿ ಹಾರುವ ಹವ್ಯಾಸದಿಂದಾಗಿ ಇನ್ನೊಂದು ಮದುವೆಯನ್ನು ಆಗಿದ್ದಾನೆ , ವಿಷಯ ಮಂಗಮ್ಮನಿಗೆ ತಿಳಿದಿಲ್ಲವೆಂದಲ್ಲ ಎಲ್ಲ ತಿಳಿದಿದಿದೆ. ಜೀವನೋಪಾಯಕ್ಕಾಗಿ ಮಂಗಮ್ಮ ತನ್ನ ಹಾಲು ಮೊಸರಿನ ಅಂಗಡಿಯನ್ನು ನಡೆಸಿಕೊಂಡು ಹೋಗುತಿದ್ದಾಳೆ. ಮೊದಲಿನಿಂದಲೂ ಮಂಗಮ್ಮ ವರ್ತನೆ ಯನ್ನು ತಾನೇ ಮಾಡುತಿದಲ್ಲೇ ಈಗ ವಯಸಿನ್ನ ತೊಂದರೆಯಿಂದಾಗಿ ಅವಳ ಮಗ ವರ್ತನೆ ಗೆ ಹೋಗೊತ್ತಾನೆ ಆದರೆ ಮೊದಲಿನ ಪರಿಚಯವಾದ್ದರಿಂದ "ತಂಗಮ್ಮ" ಮನೆಗೆ ಮಾತ್ರ ವರ್ತನೆಗೆ ಆಕೆಯೇ ಹೋಗುತ್ಹಾಳೆ.

ಹೀಗೆ ದಿನಂಪ್ರತಿ ವರ್ತನೆಯಾ ನಂತರ ಕುಶಲೋಪಚಾರಿ ಮಾತು ಮಂಗಮ್ಮನದು ಮತ್ತು ತಂಗಮ್ಮನದು ನಡಿದಿರುತ್ತದೆ , ಒಮ್ಮೆ ಮಂಗಮ್ಮ ತಂಗಮ್ಮನಿಗೆ ಹಾಲು ಮೊಸರು ಎರಡನ್ನು ಕೊಟ್ಟು ಅತ್ಯಂತ ಚಿಂತಾಕ್ರಾಂತಳಾಗಿ ಕುಳಿತಿದ್ದಾಳೆ. ಆಗ ತಂಗಮ್ಮನಿಗೆ ಏನೋ ಅನುಮಾನ ಬಂದು ಏನು ಮಂಗಮ್ಮ ಇವತ್ತು ಯಾಕೋ ನಿನ್ನ ಮುಖ ಇಳಿದು ಹೋಗಿದೆ ಎನ್ನಲು , ಮಂಗಮ್ಮ ತಂಗಮ್ಮ ನವರೇ ನಿಮಗೆ ವಿಷಯ ಗೊತ್ತಿಲ್ವ ನಿನ್ನೆ ಮೋಡಪ್ಪನವ್ರು ಇನ್ ಮೇಲೆ ನಮ್ಮ್ ಹತ್ತಿರ ಇರೋ ಕಾಸು ಗೀಸು ನಡಿಯಲ್ಲ ಅಂತ ಹೇಳಿದ್ರಂತಲ್ಲ , ಅದ್ರುದೇ ಚಿಂತೆ ಎನ್ನಲು ತಂಗಮ್ಮ ಅದಕ್ಕೆ ಯೋಚ್ನೆ ಯಾಕೆ ಮಾಡ್ತಿಯಾ ಮಂಗಮ್ಮ ನಿನ್ನ ಗಂಡನಿಗೆ ಮತ್ತು ಮಗನಿಗೆ ಹೇಳಿ ಬ್ಯಾಂಕ್ ಖಾತೆಗೆ ಜಮಾ ಮಾಡಕ್ಕೆ ಹೇಳು ಎಂದಳು. ಮಂಗಮ್ಮ ಕೂಡಲೇ ಹಾಗಲ್ಲ ತಂಗಮ್ಮ ನಾನು ಈಗ ಅವ್ರಿಗೆ ಹೇಳಿದ್ರೆ ಎಲ್ಲ ವಿಷಯ ಗೊತಾಗಿ ನನ್ನ ಹಣವನ್ನೆಲ್ಲ ತೊಗೊಂಡು ಬಿಡ್ತಾರೆ , ನಂಗೊ ಬ್ಯಾಂಕ್ ವ್ಯವಹಾರ ಅಷ್ಟಕ್ಕಷ್ಟೇ ಅಂದ್ರಾದೆ ಚಿಂತೆ ಆಗಿದೆ ಎಂದಳು ಆಗ ತಂಗಮ್ಮ ಅದಕ್ಯಾಕೆ ಅಷ್ಟು ಚಿಂತೆ ಮಾಡ್ತಿಯಾ ನಂ ಮಗ "ರಾಹುಲ್" ನಿಂಗೆ ಸಹಾಯ ಮಾಡ್ತಾನೆ ನಾನು ಅವ್ನಿಗೆ ಹೇಳ್ತಿನಿ ಎಂದು ಹೇಳಲು , ಇತ್ತ ಮಂಗಮ್ಮನ ಚಿತ್ತ ಎತ್ತಲೋ ಓದುತ್ತಾ ಏನಂದ್ರಿ ಅಮ್ಮೋರೆ ರಾಹುಲ್ , ನಿನ್ನೆ ಮೋಡಪ್ಪನವ್ರು ಎಷ್ಟು ಗಂಟೆಗೆ ಕಾಸು ನಡೆಯಕಿಲ್ಲ ಎಂದು ಹೇಳಿದು ಎಂಟು ಗಂಟೆಗೆ ಮಂಗಮ್ಮ ಎಂದು ತಂಗಮ್ಮ ಹೇಳಿದಳು , ಮಂಗಮ್ಮ ಕೂಡಲೇ ಹಾಗಾದ್ರೆ ಅಸ್ಟೊತ್ತಿಗೆ ನೀವೆಲ್ಲ ಮನೆಗ್ಯೆ ಇದ್ರಿ ಅನ್ನು ನಿಮಗೆ ವಿಸ್ಯ ಆಗ್ಲೇ ಗೊತಿತ್ತು ಅಲ್ವೇ , ತಂಗಮ್ಮ ಹೌದು ಎಂದು ತಲೆ ಅಲ್ಲಾಡಿಸುತ್ತ ಯಾಕೆ ಮಂಗಮ್ಮ ಪ್ರಶ್ನೆ ಎನ್ನಲು ಮಂಗಮ್ಮ ಏನು ಇಲ್ಲ ಹೊತ್ತಾಯ್ತು ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಳು.

ಮಂಗಮ್ಮ ತನ್ನ ಅಂಗಡಿಯ ಬಾಗಿಲನ್ನು ತೆರೆದು ತನ್ನ ಕಷ್ಟವನ್ನು ಪಕ್ಕದಂಗಡಿಯ ಬೇಕರಿಯ ಕಿಟ್ಟಪನಿಗೆ ಮತ್ತು ಅವನ ಹೆಂಡತಿಗೆ ಹೇಳುತ್ತಾ "ನೋಡ್ರಿ ಗಾಂಧಿ ಚೌಕದ ಮೂಲೆ ಮನೆಯ ಹೆಂಗಸು ತಂಗಮ್ಮ ಎಷ್ಟು ಒಳ್ಳೆಯವರು ಆದ್ರೆ ಆಕೆಯ ಮಗ ರಾಹುಲ್ ನೋಡಿ ಮೋಡಪ್ಪನವ್ರು ನೋಟು ನಡೆಯುವುದಿಲ್ಲ ಎಂದು ಹೇಳಿ ಒಂದು ಗಂಟೆಯೊಳಗೆ ಬಂದು ತನ್ನ ಹತ್ತಿರ ಒಂದು ಸಾವಿರ ರೂಪಾಯಿಗಳಿಗೆ ಚಿಲ್ಲರೆ ಕೇಳಿ ತೆಗೆದು ಕೊಂಡು ಹೋದ ಅಂದ್ರೆ ಅರ್ಥ ಏನು ಅವನಿಗೆ ನೋಟು ನಡೆಯದ ವಿಷಯ ಗೊತಿತ್ತು ಅಲ್ಲವೇ , ತಂಗಮ್ಮನೂ ಮಹಾ ಕರುಣಾಮಯಿ ಮಗ ನೋಡಿದರೆ ಸಣ್ಣ ಭುದ್ಧಿಯವನು, ತಂಗಮ್ಮ ನನ್ನ ಬಳಿ ಇರುವ ದುಡ್ಡನ್ನು ಬ್ಯಾಂಕಿಗೆ ಹಾಕಲು ರಾಹುಲ್ ನನ್ನ ಕಳಿಸ್ತಾರಂತೆ ಅವ್ನು ಇನ್ನೇನು ಮಾಡ್ತಾನೋ ಎಂದು ಬಾಯಿ ಬಿಡಲು , ಕಿಟಪ್ಪ ಎಷ್ಟು ದುಡ್ಡು ಇಟ್ಟಿದೀಯ ಮಂಗಮ್ಮ ಎಂದನು , ಆಗ ಮಂಗಮ್ಮ ತನಗೆ ಅರಿವಿಲ್ಲದೆ ಒಂದು ಅರವತ್ತು ಸಾವಿರ ಇದೆ ಇನ್ನೊಂದಿಷ್ಟು ಎಣಿಸಬೇಕು ಎಂದು ಏನು ಅರಿವಿಲ್ಲದೆ ಬಾಯಿ ಬಿಡಲು ಮಂಗಮ್ಮನಿಗೆ ತಾನು ಮಡಿದ ತಪ್ಪಿನ ಅರಿವಾಗಿತು ಆದರೆ ಬೇಕರಿ ಕಿಟ್ಟಪ್ಪನ ಕಣ್ಣು ಮಂಗಮ್ಮನ ದುಡ್ಡಿನ ಮೇಲೆ ಬಿದ್ಧಿತು.

ಹೀಗೆ ಮಂಗಮ್ಮ ತನ್ನ ಕೆಲಸದಲ್ಲಿ ತೊಡಗಿದ್ದಳು, ಅಂದು ಮೋಡಪ್ಪನವರ ಪ್ರಭಾವದಿಂದಾಗಿ ಯಾರ ಬಳಿಯೂ ಹಣ ವಿರಲಿಲ್ಲ, ಮಂಗಮ್ಮನ ಮೊಸರಿನ ವ್ಯಾಪಾರವು ಅಷ್ಟಕಷ್ಟೆ ಆಗಿ ಎಲ್ಲರು ಉದ್ರಿ ಗಿರಾಕಿಗಳೇ ಆಗಿ ಹೋಗಿದ್ದರು, ಕೆಲವು ಕಾಲೇಜಿನ ಯುವಕ ಯುವತಿಯರು ಬಂದು ಪೇಟಿಎಂ ಇಲ್ವಾ ಮಂಗಮ್ಮ ಎಂದು ಕೇಳಿ ಕೇಳಿ , ಹೋಗುತಿದ್ದರು, ಮಂಗಮ್ಮನಿಗೆ ಪೆಟಿಎಂ ಪಾಟೀಮ್ ಏನು ಇಲ್ಲ ಎಂದು ಹೇಳಿ ಹೇಳಿ ಸಾಕಾಗಿತ್ತು , ಆದರೆ ಬೇಕರಿಯ ಕಿಟ್ಟಪ್ಪ ಮಾತ್ರ ಪೇಟಿಎಂ, ಭೀಮ್ ಎಲ್ಲ ಇದೆ ಎಂದು ಹೇಳಿ ಗ್ರಾಹಕರನ್ನು ಸೆಳೆಯುತ್ತಿದನ್ನು.ಒಂದೆರಡು ದಿನ ಯೋಚನೆ ಮಾಡಿ ಮಂಗಮ್ಮ ಎಷ್ಟೇ ತೊಂದರೆಯಾದರೂ ಅಂಗಡಿ ಬಾಗಿಲನ್ನು ಮುಚ್ಚದೇ, ವರ್ತನೆ ಅನ್ನು ಬಿಡದೆ ತನ್ನ ಬಳಿ ಇದ್ದೆ ೧೦೦ ಮತ್ತು ೫೦ತರ ನೋಟಿನಲ್ಲೇ ವ್ಯಾಪಾರ ಮಾಡುತ್ತ ಬಹಳ ಕಷ್ಟ ಪಡುತ್ತಿದ್ದಳು , ತಂಗಮ್ಮ ಮನೆಗೆ ವರ್ತನೆಗೆ ಹೋದಾಗ ತನ್ನ ಸಕಲ ಕಷ್ಟವನ್ನು ಮತೊಮ್ಮೆ ಹೇಳಲು ತಂಗಮ್ಮ ಒಳಗೆ ಹೋಗಿ ಸಾಸಿವೆ ಡಬ್ಬದಲ್ಲಿ ಹುಗಿದಿಟ್ಟಿದ ಒಂದು ಸಾವಿರ ರುಪಾಯೀ ಯನ್ನು ಮಂಗಮ್ಮನಿಗೆ ಕೊಟ್ಟು ನೋಡು ಮಂಗಮ್ಮ ಇದು ನಾನು ಕೊಟ್ಟೆ ಎಂದು ಯಾರಿಗೂ ಹೇಳ್ಬೇಡ , ನನ್ನ ಮಗನನ್ನು ಕಳಿಸ್ತೀನಿ ಅದು ದುಡ್ಡು ಅವ್ನ ಕೈಯಲ್ಲಿ ಕೊಟ್ಟು ಬಿಡು ಅವ್ನು ಹೋಗಿ ನಿನ್ನ ಖಾತೆ ಗೆ ಜಮಾ ಮಾಡ್ತಾನೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿ ತನ್ನ ಮಗನನ್ನು ಕರೆದು ಮಂಗಮ್ಮನಿಗೆ ಸಹಾಯ ಮಾಡಲು ರಾಹುಲನಿಗೆ ತಾಕೀತು ಮಾಡುತಾಳೆ ತಂಗಮ್ಮ ರಾಹುಲ್ ಒಲ್ಲದ ಮನಸಿನ್ನಿಂದ ಒಪ್ಪಿಕೊಳ್ಳುತಾನೆ.

ಸರಿಯಾಗಿ ಬೆಳಗ್ಗೆ ಒಮ್ಬತು ಗಂಟೆಗೆ ರಾಹುಲ್ ಮಂಗಮ್ಮ ಬಳಿ ತೆರಳಿ ಎಷ್ಟು ಜಮೆ ಮಾಡಬೇಕು ಎಂದು ಕೇಳಲು, ಆಕೆಯ ಗಂಡ ರಂಗಪ್ಪ ಏನದು ಎಂದು ಕೂಗಿದನು , ಮಂಗಮ್ಮ ಏನು ಇಲ್ಲ ಒಂದು ಎಂಟು ಸಾವಿರ ನನ್ನ ಬಳಿ ಇದೆ ತಂಗಮ್ಮ ಮಗ ಜಮೆ ಮಾಡಿ ಬರ್ತಾನೆ ಬ್ಯಾಂಕ್ ಗೆ ಎಂದಳು , ರಂಗಪ್ಪ ಸರಿ ಎಂದು ಹೇಳಿ ಮರು ಮಾತಾಡದೆ ಹೊರಡುತ್ತಾನೆ, ಆಗ ರಾಹುಲ್ ಏನ್ ಮಂಗಮ್ಮ ಬರಿಯ ಎಂಟು ಸವಾರಿಯಾಕ್ಕೆ ಇಷ್ಟೊಂದು ಯೋಚಿನೆ ಮಾಡ್ತಿದೀಯ ಎಂದು ವ್ಯಂಗವಾಡಿದನು ಆಗ ಮಂಗಮ್ಮ ಏನು ಹೇಳಲು ತೋಚದೆ ರಾಹುಲನಿಗೆ ದುಡ್ಡು ಕೊಡ್ಬೇಕೋ ಬೇಡವೋ ಎಂದು ಯೋಚನೆ ಮಾಡಿ ಕೊನೆಗೆ ಇಪ್ಪತು ಸಾವಿರ ರುಪಾಯೀಗಳನ್ನು ರಾಹುಲನಿಗೆ ಕೊಟ್ಟು ಕಳಿಸಿದಳು , ರಾಹುಲನು ಸಂಜೆ ವೇಳೆಗೆ ಬ್ಯಾಂಕ್ನಲ್ಲಿ ಹದಿನಯ್ದು ಸಾವಿರ ರುಪಾಯೀ ಗಳನ್ನೂ ಬ್ಯಾಂಕ್ ನಲ್ಲಿ ಜಮೆ ಮಾಡಿ ಉಳಿದ ಹಣವನ್ನು ತನ್ನ ಜೇಬಿಗೇರಿಸಿ ಮಂಗಮ್ಮನ ಬಳಿ ಬಂದು ಮಂಗಮ್ಮ ಎಲ್ಲ ದುಡ್ಡು ಜಮೆ ಮಾಡಿದೀನಿ ಬ್ಯಾಂಕ್ನೋರಿಗೆ ತುಂಬಾ ಕೆಲಸ ನಿನ್ನ ಖಾತೆಗೆ ದುಡ್ಡು ಬರಲು ಬಹಳ ಸಮಯ ಆಗತ್ತೆ ಅವ್ರು ಮೆಲ್ಲಗೆ ದುಡ್ಡು ಹಾಕ್ತಾರೆ ಎಂದು ಸಬೂಬು ಹೇಳಿ ಹೊರತು ಹೋದನು.

ಆದರೆ, ಮಂಗಮ್ಮನಿಗೆ ಉಳಿದ ನಲವತ್ತು ಸಾವಿರ ರುಗಳದೇ ಚಿಂತೆಯಾಗಿತ್ತು, ಆ ಹಣದ ಮೇಲೆ ಬೇಕರಿ ಕಿಟ್ಟಪ್ಪನ ಕಪ್ಪು ಕಣ್ಣು ಆಗಲೇ ಬಿದ್ಧಿತು. ಏನೇ ಆದರೂ ನನ್ನವರು ನನ್ನನು ಮೋಸ ಮಾಡುವುದಿಲ್ಲ ಎಂದು ನಂಬಿದ್ದ ಮಂಗಮ್ಮ ಹಳೆ ಗಂಡನ ಪಾದವೇ ಗತಿ ಎಂದು ನಂಬಿ ತನ್ನ ಗಂಡನಿಗೆ ಊಟ ಬಡಿಸಿ, ನೋಡಪ್ಪ ನೀನು ಆ ಸವತಿ ಮನೆಗೆ ಹೋಗೋದು ಬಿಟ್ಟು ಬಿಡು, ನನ್ನ ಬಳಿ ಒಂದು ಇಪ್ಪತು ಸಾವಿರ ಹಣವಿದೆ ಅದನ್ನು ಬ್ಯಾಂಕಿಗೆ ಹಾಕಿ ನೀನು ನಿನ್ನ ಖರ್ಚಿಗೆ ಒಂದು ಸಾವಿರ ಇಟ್ಕೋ ಎಂದು ಹೇಳಿದಾಗ ರಂಗಪ್ಪನ ಮುಖ ಕಮಲದಂತೆ ಅರಳಿತು, ಮಂಗಮ್ಮನ ಇಚ್ಚಿಯೆಯಂತೆ ರಂಗಪ್ಪ ಇಪ್ಪತ್ತು ಸಾವಿರ ವನ್ನು ಬ್ಯಾಂಕ್ ಗೆ ಹೋಗಿ ಹತ್ತು ಸಾವಿರವನ್ನು ಮಂಗಮ್ಮನ ಖಾತೆ ಗೆ ಜಮೆ ಮಾಡಿ ಇನ್ನೊಂದು ಸರಿ ಸಾರಥಿ ಸಾಲಿನಲ್ಲಿ ನಿಂತು ಹೊಸ ನೋಟಿಗೆ ವಿನಿಮಯ ಮಾಡಿಕೊಂಡು ಬಂದು , ನಾನು ಎರಡು ಸಾವಿರ ತೊಗೊಂಡಿದೀನಿ ಅದು ನನಗೇನಲ್ಲ ನಿನಗೆ ಒಂದು ಸೀರೆ ತಂದಿದೀನಿ ಎಂದು ೧೫೦ ರುಪಾಯೀ ಸೀರೆಯನ್ನು ಮಂಗಮ್ಮನಿಗೆ ಕೊಟ್ಟನು, ಆದ್ರೆ ಬ್ಯಾಂಕ್ನೋರು ಬರಿಯ ಹತ್ತು ಸಾವಿರ ರುಪಾಯೀ ಯನ್ನು ಮಾತ್ರವೇ ತೆಗೆದುಕೊಂಡು ಇನ್ನುಳಿದ ಎಂಟು ಸಾವಿರ ಮುಂದಿನ ಮೂರ್ ವರ್ಷಕ್ಕೆ ಜಮೆ ಮಾಡಿದ್ದಾರೆ ಅದು ಮೂರೂ ವರ್ಷದ ನಂತರವೇ ನಿಮಗೆ ಸಿಗೋದು ಅಂತ ಹೇಳಿದ್ದಾರೆ ಎಂದು ಹೇಳಿ ಹೊರಟನು.

ಮಂಗಮ್ಮ ಗಂಡ ಹೇಳಿದೆಲ್ಲ ನಿಜ ಎಂಬ ನಂಬಿಕೆಯಿಂದಾಗಿ ಸಂತೋಷವಾಯಿತು , ಆದರೆ ಇನ್ನು ಉಳಿದ ಹಣದ ಬಗ್ಗೆ ಚಿಂತೆ ಅಂತೂ ಇದ್ದೆ ಇತ್ತು , ತನ್ನ ಮಗನಿಗೆ ಇನ್ನುಳಿದ ಹಣವನ್ನು ಜಮೆಮಾಡಲು ಹೇಳಿದಳು ಆಗ ಅವಳ ಮಗ ಚೆನ್ನಾಗಿ ಆಯಿತು ಕೊಡು ಅಮ್ಮ ನಾನು ನಮ್ಮ ಮನೆ ಮೇಲೆ ಸ್ವಲ್ಪ ಸಾಲ ಗಿಲಾ ಮಾಡೀನಿ ಅದನ್ನ ತೀರಿಸಿಬಿಡ್ತೀನಿ ಎಂದು ಹೇಳಿ ಅಷ್ಟು ಹಣವನ್ನು ಮಂಗಮ್ಮ ಒಪ್ಪಿಗೆ ಕೊಡುವ ಮುನ್ನವೇ ಬಾಚಿಕೊಂಡನು , ಹೀಗೆ ದಿನ ಕಳೆದಿರಲು ಮೋಡಪ್ಪನವರು ಬ್ಯಾಂಕಿಗೆ ಹಣ ಹಾಕುವ ಮತ್ತು ತೆಗೆಯುವ ನಿಯಮವನ್ನು ಸಡಿಲಗೊಳಿಸಿದ್ದರು.ಅಂತೆಯೇ ಕೆಲವು ದಿನಗಳು ಕಳೆದಿರಲು ಬ್ಯಾಂಕಿನ ಅಧಿಕಾರಿ ಮಂಗಮ್ಮನ ಬಳಿ ಬಂದು ನನ್ನ ಮಗನ ನಾಮಕರಣಕ್ಕೆ ಒಂದು ೨೦ ಲೀಟರ್ ಹಾಲು ಬೇಕಿತ್ತು ಮಂಗಮ್ಮ ನಾಳೆಗೆ ಎಂದು ಕೇಳಿದಾಗ ಮಂಗಮ್ಮ ಸಂತಸಗೊಂಡು , ಮಂಗಮ್ಮ ಹಾಲನ್ನು ಮನೆಗೆ ಕೊಡಲು ಒಪ್ಪಿ, ಕೊಟ್ಟ ಮಾತಂತೆ ಮರುದಿನ ಬೆಳಗ್ಗೆ ರಾಘವೇಂದ್ರ ಹೊಳ್ಳ ಅವರ ಮನೆಗೆ ೨೦ ಲೀಟರ್ ಹಾಲಿನೊಂದಿಗೆ ಕಾಲು ಕೆಜಿ ಬೆಣ್ಣೆಯನ್ನು ಮಗುವಿಗೆ ಇರ್ಲಿ ಎಂದು ಕೊಟ್ಟಾಗ ಹೊಳ್ಳರವರ ಪತ್ನಿ ಗೆ ಖುಷಿಯಾಗಿ ಒಳಗೆ ಬಾರಮ್ಮ ಮಂಗಮ್ಮ ಎಂದು ಕರೆದು ಅವಳನ್ನು ಕೂಡಿಸಿದಳು.
ಇದೇ ಸಮಯ ಎಂದು ಅರಿತ ಮಂಗಮ್ಮ ರಾಘಣ್ಣನವರೇ ನಮ್ಮ ಖಾತೆಗೆ ಒಂದಿಷ್ಟು ಹಣ ಜಮಾ ಮಾಡಿದ್ರು, ಬಂದಿತ್ರ ಅಂತ ವಸಿ ನೋಡ್ಬೇಕಿತ್ತು ಎಂದು ನಮ್ರವಾಗಿ ಕೇಳಿದಳು, ರಾಘಣ್ಣನವರು ನಾಳೆ ಬ್ಯಾಂಕ್ಗೆ ಬಂದು ಬಿಡು ಮಂಗಮ್ಮ ನಿನ್ನ ಹತ್ತಿರ ಇರುವ ಎಲ್ಲ ಬ್ಯಾಂಕ್ನ ಪುಸ್ತಕಗಳನ್ನು ತೆಗೆದುಕೊಂಡು ಬಾ ಎಂದು ಹೇಳಿ ಕಳಿಸಿದರು, ಮಂಗಮ್ಮ ಅತ್ಯಂತ ಸಂತಸಗೊಂಡು ಆಯಿತು ಎಂದು ಹೇಳಿ ಹೊರಟುಹೋದಳು

ಮರುದಿನ ಮಂಗಮ್ಮ ಕಿಟ್ಟಪ್ಪನ ಮೇಲೆ ಅದೇನೋ ನಂಬಿಕೆಯಿಡದೆ ತರಕಾರಿ ಅಂಗಡಿಯ ರಾಚಪ್ಪನಿಗೆ ಅಂಗಡಿ ನೋಡಿಕೊಳ್ಳಲು ಹೇಳಿ ಬ್ಯಾಂಕ್ಗೆ ಹೋದಳು, ರಾಘವೇಂದ್ರ ರಾಯರು ದೂರದಿಂದಲೇ ಮಂಗಮ್ಮನನ್ನು ನೋಡಿ ಬಾ ಮಂಗಮ್ಮ ಎಂದು ಕರೆದು ಕುಳ್ಳಿರಿಸಿ ಗ್ರಾಹಕರೊಬ್ಬರ ಹಲವು ಕೆಲಸಗಳನ್ನು ನಿಭಾಯಿಸಿ ಮತ್ತೆ ಮಂಗಮ್ಮನನ್ನು ತನ್ನ ಜಾಗಕ್ಕೆ ಕರೆದು ಖಾತೆ ಪುಸ್ತಕವನ್ನು ಕೇಳಿದರು, ಮಂಗಮ್ಮನಿಗೋ ಯಾವುದು ಎಂಬ ಗೊಂದಲವಾಗಿ ತಂಡ ಚೀಲವನ್ನೇ ರಾಘಣ್ಣನವರ ಮುಂದೆ ಇಟ್ಟಳು , ರಾಘವೇಂದ್ರ ರಾಯರು ಇದೇನಿಂದು ಎಂದು ನೋಡಿದಾಗ ಸೊಸೆಯ ಲಕ್ಷ್ಮಿ ಸಹಸ್ರನಾಮ , ಶುಕ್ರವಾರ ಲಕ್ಷ್ಮಿ ಪೂಜೆ  ಹೀಗೆ ಎಲ್ಲ ಪುಸ್ತಕಗಳೊಂದಿಗೆ ಕೊನೆಗೂ ಮಂಗಮ್ಮನ ಬ್ಯಾಂಕಿನ ಖಾತೆಯ ಪುಸ್ತಕವು ಸಿಕ್ಕಿತು, ರಾಘಣ್ಣನವರು ಒಂದು ನಿಮಷ ಇರು ಮಂಗಮ್ಮ ಎಂದು ಕಂಪ್ಯೂಟರ್ನ ಕೋರ್ ಬ್ಯಾಂಕಿಂಗ್ ಸಾಫ್ಟ್ವೇರ್ ಅಪ್ಲಿಕೇಶನ್ ನಲ್ಲಿ ಮಂಗಮ್ಮನ ಖಾತೆಯ ಅಷ್ಟು ಮಾಹಿತಿಯು ಕಂಪ್ಯೂಟರ್ ಪರದೆ ಮೇಲೆ ಮೂಡಿತ್ತು, ರಾಘವೇಂದ್ರರಾಯರು ಮಂಗಮ್ಮನಿಗೆ ಇಂಚಿಂಚು ಬಿಡದೆ ಆಕೆಯ ಖಾತೆಯ ಸಕಲ ಜಾತಕವನ್ನು ಬಿಡಿಸಿಟ್ಟಿದ್ದರು - ಮಂಗಮ್ಮನಿಗೆ ಮಾತ್ರ ಆ ಕ್ಷಣ ಸಿಡಿಲು ಬಡಿದಂತಾಗಿತ್ತು ತಾನು ಮೋಸ ಹೋದೆ ಎಂದು ಗೊತ್ತಾದರೂ ಏನು ಮರು ಮಾತಾಡದೆ ಧನ್ಯವಾದಗಳು ರಾಘಣ್ಣನವರೇ ಎಂದು ಹೇಳಿ ಹೊರನಡೆದಳು.

ದಿನವೆಲ್ಲ ಈ ಮೋಸದಿಂದಾಗಿ ಅದರಲ್ಲೂ ತನ್ನವರೇ ತನಗೆ ಮೋಸ ಮಾಡಿದ್ದರಿಂದ ಮಂಗಮ್ಮನಿಗೆ ಉತ್ಸಾಹ ಕಡಿಮೆಯಾಗಿ ಸುಮ್ಮ್ನೆ ಕುಳಿತಿದ್ದಳು ಸಂಜೆ ಸರಿ ಸುಮಾರು ಎಂಟು ಗಂಟೆಗೆ ಯಾವುದೊ ಒಂದು ಕಂಪನಿಯ ಉನ್ನತಾಧಿಕಾರಿಯಂತೆ ಕಾಣುತಿದ್ದ ಟಿಪ್ ಟಾಪ್ ವ್ಯಕ್ತಿಯೊಬ್ಬ ಮಂಗಮ್ಮನ ಅಂಗಡಿಗೆ ಬಂದು ಒಂದು ಲೀಟರ್ ಹಾಲು ಮತ್ತು ಮೊಸರು ಕೇಳಿ , ಬದಲಿಗೆ ಎರಡು ಸಾವಿರ ರುಪಾಯೀಗಳನ್ನೂ ಕೊಡಲು ಮುಂದಾದಾಗ ಮಂಗಮ್ಮ ಚಿಲ್ಲರೆ ಇಲ್ಲ ಸ್ವಾಮಿ ಎಂದು ಹೇಳಿದಳು ಆಗ ಆ ಮನುಷ್ಯ ನೋಡು ಮಂಗಮ್ಮ ಎಷ್ಟೆಲ್ಲ ಪ್ರಾಬ್ಲಮ್ ಅದಕ್ಕೆ ಹೇಳ್ಲಿದು ಈ ಮೋಡಪ್ಪನವರಿಗೆ ನಮ್ಮಂಥ ಜನರ ಕಷ್ಟ ಅರ್ಥ ಆಗುವುದಿಲ್ಲ ಎಂದು , ಇದ್ದಕಿದ್ದ ಹಾಗೆ ನಾಳೆಯಿಂದ ಈ ಹಣ ನಡೆಯಲ್ಲ ಅಂದರೆ ಹೇಗೆ ಅದು ಇದು ಎಂದು ಸುಮ್ನೆ ಹೇಳ್ತ ಇರ್ತಾರೆ , ನಾನು ಈಗ ಎಲ್ಲಿಗೆ ಹೋಗ್ಬೇಕು ನೀನೆ ಹೇಳು ಎಷ್ಟು ಕಷ್ಟ ನಂಗೆ , ನಿಂಗು ಹಿಂಗೇ ಆಗಿರತ್ತೆ ಅಲ್ವ ನೀವೆಲ್ಲ ಪ್ರತಿಭಟನೆ ಮಾಡಬೇಕು ಸುಮ್ನೆ ಕುತ್ಕೊಂಡು ಬಿಟ್ರೆ ಹೆಂಗೆ ಎಂದು ಹೇಳಿದನು.

ಮಂಗಮ್ಮ ಬಹಳ ದೈನ್ಯತೆಯಿಂದ ಹೋಗ್ಲಿ ಬಿಡಿ ಸ್ವಾಮಿ ನೀವು ಈಗ ದುಡ್ಡು ಕೊಡದೆ ತೆಗೆದುಕೊಂಡು ಹೋಗಿ, ನಿಮ್ಮ ಹತ್ತಿರ ಚಿಲ್ಲರೆ ಇದ್ದಾಗ ತಂದು ಕೊಡಿ ಆ ಅಧಿಕಾರಿಗೆ ಸಂತೋಷವೇನು ಆಯಿತು ಆದರೂ ಆತ ಬಿಡದೆ ಹಾಗಲ್ಲ ಮಂಗಮ್ಮ ಎಷ್ಟು ತೊಂದರೆ ನೋಡು ನೀವೆಲ್ಲ ಹೀಗೆ ಬಿಡ್ಬಾರ್ದು ಎಲ್ಲರು ಸೇರಿ ಪ್ರತಿಭಟನೆ ಮಾಡಲೇಬೇಕು ಎಂದು ಬಿಟ್ಟಿ ಸಲಹೆ ಕೊಡಲಾರಂಭಿಸಿದನು . ಮಂಗಮ್ಮ ಒಂದು ಕ್ಷಣ ಸುಮ್ಮನಾಗಿ ಬಿಡಿ ಸ್ವಾಮಿ ನಾವೇನು ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿದಾಗ ಜಾನ್ ಕಷ್ಟ ಪಡ್ತಿದ್ರಲ್ಲ ಅಷ್ಟು ಕಷ್ಟ ಪಡ್ತಿಲ್ಲ ತಾನೇ ಎಷ್ಟೋ ಜನ ಸ್ವಾತಂತ್ರಕ್ಕಾಗಿ ಪ್ರಾಣ ನೇ ಕೊಟ್ರು, ನಾವು ಇವ್ರಿಗೊಂದು ಅವಕಾಶ ಕೊಡನ ಎಂದಾಗ ಆ ಅಧಿಕಾರಿ ಪೆಚ್ಚು ಮೋರೆ ಹಾಕಿಕೊಂಡು ನೀರವ ಮೌನದೊಂದಿಗೆ ಆತ ಮರು ಮಾತಾಡದೆ ಕಿಸೆಯಿಂದ ಚಿಲ್ಲರೆಯನ್ನು ಕೊಟ್ಟು ತನ್ನ ಕಾರನ್ನು ಶರವೇಗದಲ್ಲಿ ಓಡಿಸಿಕೊಂಡು ಹೋದನು.


                                                                     ಕಾರ್ತಿಕ್ ಯಸ್ ಬಾಪಟ್ 

Wednesday, May 24, 2017

ಕೊನೆಗೂ ಬಂತು ಉಗಿಬಂಡಿ - ಇಲ್ಲಿ ಹಾಸನ ಬೆಂಗಳೂರಿನ ರೈಲು ಮಾರ್ಗದ ಉಲ್ಲೇಖ ಕೇವಲ ಸಾಂಧರ್ಭಿಕವಾದದ್ದು ಮತ್ತು ಈ ಮಾರ್ಗ ನಿರೀಕ್ಷೆಗೂ ಮೀರಿ ವಿಳಂಬವಾದದ್ದು ಇದರಲ್ಲಿ ಎರಡು ಮಾತಿಲ್ಲ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ರೀತಿಯ ವಿವಿಧ ಯೋಜನೆಗಳ ಸ್ಥಗಿತ ಅಥವಾ ವಿಳಂಬ ತನನ್ನು ತಾನು ಶರವೇಗಕ್ಕೊಡ್ಡಿ ಕೊಳ್ಳುತ್ತಿರುವ ಭಾರತದಂತ ದೇಶಕ್ಕೆ ಸಹ್ಯವೇ? (ಬೆಂಗಳೂರು ಹಾಸನ ರೈಲು ಮಾರ್ಗ ಉದ್ಘಾಟನೆಯಾದಾಗ ಬರೆದದ್ದು ಪ್ರಕಟಿಸಲಾಗದೆ ಎಲ್ಲೋ ಕಂಪ್ಯೂಟರ್ನ ಮೂಲೆಯಲ್ಲಿ ಕುಳಿತಿತ್ತು - ಇದೀಗ ಓದಿಕೊಳ್ಳಿ.)

ಅದು ೧೯೯೬ ಲೋಕಸಭ ಚುನಾವಣೆ ಕಾಲ, ಬಿ ಜೆ ಪಿ ಮತ್ತು ಕಾಂಗ್ರೆಸ್ ಹುಮ್ಮಸ್ಸಿನಿಂದ ಕಣಕ್ಕಿಳಿದಿತ್ತು, ಆದರೆ ಆದ್ದದ್ದೇ ಬೇರೆ, ಜನತಾ ದಳದ ನೇತೃತ್ವದಲ್ಲಿ ಯುನೈಟೆಡ್ ಫ್ರಂಟ್ ಒಕ್ಕೂಟ ವಿಜಯ ಪತಾಕೆ ಹಾರಿಸಿ, ೧೯೨ ಸ್ಥಾನಗಳನ್ನು ಗೆದ್ದು ಒಟ್ಟಾರೆ ತ್ರಿಶಂಕು ಸ್ಥಿತಿಯಾಗುವ ಪ್ರಮೇಯ ಬಂದೊದಗಿತ್ತು. ಬಿ ಜೆ ಪಿ ಗೆ ೧೮೭ ಸ್ಥಾನಗಳನ್ನು ದಕ್ಕಿದ್ದವು, ಕಾಂಗ್ರೆಸ್ಗೆ ೧೪೦ ಸ್ಥಾನಗಳು ದಕ್ಕಿತ್ತು ಆಗ ಕಾಂಗ್ರೆಸ್ ಪಕ್ಷದ ಸೋಲನ್ನು ಇತಿಹಾಸದಲ್ಲೇ ಕಂಡು ಕೇಳರಿಯದ ಸೋಲು ಎಂದು ರಾಜಕೀಯ ಪಂಡಿತರು ತಮ್ಮ ಲಹರಿಯನ್ನು ಹರಿಯಬಿಡುತ್ತಿದ್ದರು, ಹಾಗಾದರೆ ಈಗಿನ ಪರಿಸ್ಥಿತಿಯನ್ನು ಏನನ್ನುತ್ತಾರೆ? ಅದಿರಲಿ ಬದಲಾದ ಅತಂತ್ರ ರಾಜಕೀಯ ಸನ್ನಿವೇಶದಲ್ಲಿ ಬಿ ಜೆ ಪಿ ಏನೋ ಒಂದು ಕೈ ನೋಡಿಯೇ ಬಿಡೋಣ ಎಂದು ಅಂದಿನ ರಾಷ್ಟ್ರಪತಿ ಶಂಕರ ದಯಾಳ್ ಶರ್ಮ ಅವರ ಕರೆಯ ಮೇರೆಗೆ ದೇಶ ಕಂಡ ಅಜಾತ ಶತ್ರು ವಾಜಪಯೀ ಅವರ ನೇತೃತ್ವದಲ್ಲಿ ತನ್ನ ಪಕ್ಷದೆಡೆ ಒಲವನ್ನು ಕ್ರೂಡೀಕರಿಸುವ ಪ್ರಯತ್ನವೇನೋ ಮೊದಲಿಗೆ ಮಾಡಿತು ಆದರೆ ಕೊನೆಗೆ ಇದರ ಗೊಡವೆಯೇ ಬೇಡ ಎಂದು ಕೇವಲ ಹದಿಮೂರು ದಿನದ ಆಡಳಿತಕ್ಕೆ ಇತಿಶ್ರೀ ಹಾಡಿತು, ಕ್ಶಣಕ್ಕೊ ಕೂಡ ಖುದ್ದು ದೇವೇಗೌಡರಿಗೆ ಪ್ರಧಾನಿ ಯಾಗುವ ಒಲವಿತ್ತೋ ಇಲ್ಲವೋ, ಬದಲಾದ ಸನ್ನಿವೇಶದಲ್ಲಿ ನಾಡು ಕಂಡ ಹಿರಿಯ ರಾಜಕೀಯ ನಾಯಕ "ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು" ಹನ್ನೆರಡನೇ ಪ್ರಧಾನ ಮಂತ್ರಿಯಾಗಿ ಭಾರತದ ಚುಕ್ಕಾಣಿ ಹಿಡಿದರು.

ಸಂಧರ್ಭದಲ್ಲಿ ಜಾತಿ, ಮತ , ಪಂಥ ಭೇದ ಮರೆತು, ಅವರಿಗಾಗುವವರು, ಆಗದವರು , ಪಕ್ಷಾತೀತವಾಗಿ ಸಂಭ್ರಮಿಸಿದ್ದರು ಕರ್ನಾಟಕದ ನಾಯಕರೊಬ್ಬರು ನಮ್ಮ ದೇಶದ ಪ್ರಧಾನ ಮಂತ್ರಿ ಹುದ್ದೆಯನ್ನಲಂಕರಿಸುವುದೆಂದರೆ ಕಡಿಮೆ ಮಾತೆ, ಹಾಸನದ ಜನರಿಗಂತೂ ಸ್ವರ್ಗಕ್ಕೆ ಮೂರೇ ಗೇಣು, ಆದರೆ ಅವರಿಗೆ ಪ್ರಧಾನಿಯಾಗುಳಿಯುವ ಅವಕಾಶ ಸಿಕ್ಕಿದ್ದು ಮಾತ್ರ ಹದಿನೆಂಟೇ ತಿಂಗಳು , ಸೀಮಿತ ಅವಧಿಯಲ್ಲೂ ಕರ್ನಾಟಕಕ್ಕೆ ಸಾಕಷ್ಟು ಒಳಿತಾಗುವ ಕಾರ್ಯಕ್ರಮವನ್ನು ತಂದರು ಅದರಲ್ಲೂ ಹಾಸನದ ಜನತೆಯಂತೂ ಬೆಂಗಳೂರು - ಹಾಸನದ ರೈಲ್ವೆ ಮಾರ್ಗದ ಶಂಕುಸ್ಥಾಪನೆಯನ್ನು  ದೇವೆಗೌಡರು ನೆರವೇರಿಸಿದಾಗ ಹಾಸನದ ಜನತೆ ಅಂದೇ ರೈಲಲ್ಲಿ ಕೂತಷ್ಟು ಹಿರಿಹಿರಿ ಹಿಗ್ಗಿದ್ದರು ಅದು ಸಹಜವೂ ಕೂಡ ಹೌದು ಆದರೆ ಆದದ್ದೇನು ಇಪ್ಪತ್ತೊಂದು ವರ್ಷಗಳ ನಂತರ ರೈಲ್ವೆ ಮಾರ್ಗ ಲೋಕಾರ್ಪಣೆಯಾಗಿದೆ.

ಸಂಧರ್ಭದಲ್ಲಿಯೇ ನಮ್ಮ ನಾಯಕರುಗಳ ಬಹುಮುಖ ಪ್ರತಿಭೆಯನ್ನರಿತಿದ್ದ ಜನ ಬೀದಿ ಬೀದಿಯಲ್ಲಿ, ಚಹಾದಂಗಡಿಯಲ್ಲಿ , ಹೋಟೆಲಿನಲ್ಲಿ ಹೀಗೆ ವಿವಿಧ ಸ್ಥಳಗಳಲ್ಲಿ ೧೯೯೬ ರಲ್ಲಿ ಶಂಕು ಸ್ಥಾಪನೆಯಾಗಿದೆ, ದೇವೇಗೌಡರ ಸರ್ಕಾರವಿದ್ದರೆ ತ್ವರಿತಗತಿಯಲ್ಲಿ ಆಗಬಹುದೇನೋ ಏಕೆಂದರೆ ಇದು ಅವರ ಕನಸು, ಕನಸನ್ನು  ನನಸಾಗಲು ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಆದ್ದರಿಂದ ಏನೇ ಆದರೂ ಬೇರೆ ಸರ್ಕಾರ ಬಂದರು ೨೦೦೬ ಅಥವಾ ೨೦೦೭ ರಲ್ಲಿ ನಾವು ಹಾಸನದಿಂದ ಬೆಂಗಳೂರಿಗೆ ಹಾಗು ಬೆಂಗಳೂರಿನಿಂದ ಹಾಸನಕ್ಕೆ ಅಡ್ಡಾಡಬಹುದು ಎಂದು ಮನಸ್ಸಿನಲ್ಲಿಯೇ ಮಂಡಿಗೆಯನ್ನು ತಿಂದೆದ್ದಿದರು, ಆದರೆ ೨೦೦೭ ರವರೆಗೂ ಆದದ್ದೇನು ಬರಿ ಆಶ್ವಾಸನೆಗಳೇ, ಜನರೆಂದು ಕೊಂಡಂತೆ ಹದಿನೆಂಟು ತಿಂಗಳಲ್ಲಿ ದೇವೇಗೌಡರು ಪದತ್ಯಾಗ ಮಾಡುವ ಸಂಧರ್ಭ ಬಂತು, ಇಲ್ಲಿ ವಿಷಯ ದೇವೇಗೌಡ್ರ ಸರ್ಕಾರ ಇರುವಿಕೆಯದೋ ಅಥವಾ ಇಲ್ಲದಿರುವುದೋ ಅಲ್ಲ, ಯಾವೂದೇ ಒಂದು ಮೂಲ ಸೌಕರ್ಯವನ್ನು ಕೊಡಮಾಡುವ ಯೋಜನೆಯನ್ನು ಕೈ ಗೆತ್ತಿಕೊಂಡಾಗ ಅದರ ಅಡೆ ತಡೆಗಳು ಭಾರತದಂತಹ ವಿಶಾಲ ದೇಶದಲ್ಲಿ ಸರ್ವೇ ಸಾಮಾನ್ಯ ಆದರೆ ಇದೇನಿದು ಬರೋಬ್ಬರಿ ಇಪ್ಪಂತೊಂದು ವರ್ಷ ಅಂದ್ರೆ ಎರಡು ದಶಕ, ಸುಮ್ಮನೆ ಹಾಗೆ ಕಣ್ಣಾಡಿಸಿನೋಡಿ ೧೯೯೬ರಲ್ಲಿ ಯೋಜನೆಗೆ ಎತ್ತಿಟ್ಟ ಅಂದಾಜು ವೆಚ್ಚ ಸರಿ ಸುಮಾರು ಇನ್ನೂರ ತೊಂಬತ್ತು ಕೋಟಿ, ಆದರೆ ೨೦೧೭ರಲ್ಲಿ ಮೊನ್ನೆ ರೈಲು ಮಾರ್ಗ ಲೋಕಾರ್ಪಣೆಯಾದಾಗ ತಗಲಿದ ವೆಚ್ಚ ಬರೋಬ್ಬರಿ ,೩೦೦ ಕೋಟಿ ಅಂದರೆ ಮೊದಲು ಊಹಿಸಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು , ನಮ್ಮ ಇತ್ತೀಚಿನ ಸ್ಟೀಲ್ ಸೇತುವೆಗೆ ಮಾಡಬೇಕೆಂದು ಕೊಂಡಿದ್ದ ವೆಚ್ಚಕಿಂತ ಕಡಿಮೆ ಎಂಬುದೇ ಒಂದು ಬಹು ದೊಡ್ಡ ಸಮಾಧಾನ, ಅದು ಕಾರ್ಯೋನ್ಮುಖಗೊಳ್ಲಲಿಲ್ಲ ಆದದ್ದು ಒಳಿತೇ ಆಯಿತು ಬಿಡಿ, ಹಾಗೆಂದ ಮಾತ್ರಕ್ಕೆ ಕಷ್ಟಗಳು ಅಡೆತಡೆಗಳು ಇರಲಿಲ್ಲವೆಂದೆಲ್ಲಾ ಹಲವು ಅಡೆತಡೆಗಳು ಬಂದವು ಅದನ್ನು ಕಾಲ ಕಾಲಕ್ಕೆ ಆಯಾ ಕಾಲದ ಸರ್ಕಾರಗಳು ತಕ್ಕ ಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದವು ಎನ್ನಬಹುದು.

ಇಲ್ಲಿ ಹಾಸನ ಬೆಂಗಳೂರಿನ ರೈಲು ಮಾರ್ಗದ ಉಲ್ಲೇಖ ಕೇವಲ ಸಾಂಧರ್ಭಿಕವಾದದ್ದು ಮತ್ತು ಮಾರ್ಗ ನಿರೀಕ್ಷೆಗೂ ಮೀರಿ ವಿಳಂಬವಾದದ್ದು ಇದರಲ್ಲಿ ಎರಡು ಮಾತಿಲ್ಲ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರೀತಿಯ ವಿವಿಧ ಯೋಜನೆಗಳ ಸ್ಥಗಿತ ಅಥವಾ ವಿಳಂಬ ತನನ್ನು ತಾನು ಶರವೇಗಕ್ಕೊಡ್ಡಿ  ಕೊಳ್ಳುತ್ತಿರುವ ಭಾರತದಂತ ದೇಶಕ್ಕೆ ಸಹ್ಯವೇ? ಖಂಡಿತ ಇಲ್ಲ೨೦೧೪-೨೦೧೫ ಸಾಲಿನಲ್ಲಿ ಹೊರತಂದಂತಹ ಭಾರತೀಯ ಆರ್ಥಿಕ ಸಮೀಕ್ಷೆಯ ಪ್ರಕಾರ ಪ್ರತಿ ನೂರು ರೂಪಾಯಿಯ ಯೋಜನೆ ಅನುಷ್ಠಾನಗೊಂಡಾಗ ಹತ್ತು ರುಪಾಯೀಯಷ್ಟು ಕೆಲಸ ನಿಲುಗಡೆ ಹಾಗು ವಿಳಂಬವಾಗುತ್ತದೆ - ಇದು ಸಾರ್ವಜನಿಕ ಯೋಜನೆಯ ಪರಿಸ್ಥಿತಿಯಾದರೆ, ಖಾಸಗಿ ಸಹ ಭಾಗಿತ್ವದ ಯೋಜನೆಯಲ್ಲಿ ಹದಿನಾರು ರುಪಾಯೀಯಷ್ಟು ಕೆಲಸ ನಿಲುಗಡೆಯಾಗುತ್ತದೆ. "ಮಿನಿಸ್ಟ್ರಿ ಒಫ್ ಸ್ಟ್ಯಾಟಿಸ್ಟಿಕ್ಸ್ ಅಂಡ್ ಪ್ರೋಗ್ರಾಮ್" ಇತ್ತೀಚಿನ ವರದಿಯ ಪ್ರಕಾರ ಇಂತಹ ೧೧೮೬ ಪ್ರಮುಖ ಯೋಜನೆಗಳಲ್ಲಿ ೯೪ ಯೋಜನೆಗಳು ಕಾಲ ಪರಿಧಿಯ ಹಿಂದಿರುವುದಲ್ಲದೆ ಮೊದಲಿನ ಅಂದಾಜು ವೆಚ್ಚವನ್ನು ನಿರಂತರವಾಗಿ ಮೀರುತ್ತಿದೆ ಇದೆಲ್ಲದರ ಕಾರಣವೇನೆಂದು ನೋಡಲು ಹೋದರೆ ಅದೇ ಹಳೆಯ ಕಾರಣಗಳೇ . ಕಾನೂನಿನ ಅಡೆತಡೆ, ಭೂ ಸ್ವಾಧೀನ ಪರಿಸರ ಮತ್ತು ಅರಣ್ಯ ಇಲಾಖೆ ಪರವಾನಗಿಗಳು, ಸ್ಥಳೀಯ ಸಂಸ್ಥೆ ಅನುಮತಿಗಳು ಹೀಗೆ ಇದೆ ಹತ್ತು ಹಲವು ದಶಕದಿಂದ ಪೀಳೆಗೆಯಿಂದ ಪೀಳಿಗೆಗೆ ವರ್ಗವಾಗುತ್ತಿರುವ ಗೊತ್ತಿರುವ ಸಮಸ್ಯೆಗಳೇ ಹೊರತು ಯಾವುದಾದರು ಹೊಸ ಸಮಸ್ಯೆ ಇದೆಯೇ ಎಂದು ದುರ್ಬಿನ್ ಹಾಕಿ ನೋಡಬೇಕು ಅಂದರೆ ಸಮಸ್ಯೆಗಳು ಹೊಸದಲ್ಲ ಎಲ್ಲ ಕಾಲಕ್ಕೂ ಎಲ್ಲರಿಗೂ ಗೊತ್ತಿರುವ ಸಮಸ್ಯೆಗಳೇ, ಸಮಸ್ಯೆಗೆ ಪರಿಹಾರವನ್ನು ಹುಡುಕಿ ಕಾರ್ಯ ಪ್ರವ್ರತಃರಾಗುವ ಇಚ್ಛಾಶಕ್ತಿಯೊಂದಿರಬೇಕು ಅಷ್ಟೇ

ರೀತಿಯ ಯೋಜನೆಗಳ ಸ್ಥಗಿತಗೊಳ್ಳುವಿಕೆ ಹಾಗು ವಿಳಂಬವಾಗುವುದು ಆರ್ಥಿಕ ವಲಯಕ್ಕಂಟಿಕೊಂಡಿರುವ ಮಹಾ ಪಿಡುಗು, ಇದರ ಪರಿಣಾಮ ಎಂಥವುದೆಂದು ಜನಸಾಮಾನ್ಯರು ಊಹಿಸಲು ಅಸಾಧ್ಯ, ಬ್ಯಾಂಕ್ಗಳಲ್ಲಿ ಅನುತ್ಪಾದಕ ಸಾಲದ ಏರಿಕೆಗು ರೀತಿಯ ಬೆಳವಣಿಗೆಗೂ ನೇರ ಸಂಪರ್ಕವಿದೆ ಎಂದರೆ ನಾವು ನಂಬಲೇ ಬೇಕು - ಕೆಲವೊಮ್ಮೆ ಹಲವಾರು ಯೋಜನೆಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಕೈ ಜೋಡಿಸಿದ ಕಂಪನಿಗಳು ವಿಳಂಬದಿಂದಾಗಿ ಹಾಗು ಯೋಜನೆಗಳ ಸ್ಥಗಿತದಿಂದಾಗಿ ಉಂಟಾಗುವ ಹೆಚ್ಚುವರಿ ಖರ್ಚನ್ನು ಭರಿಸಲಾಗದೆ ಅರ್ಧಕ್ಕೆ ತಮ್ಮ ಕೆಲಸವನ್ನು ನಿಲ್ಲಿಸುತ್ತವೆ , ಮೂಲಕ ಸಾಲ ಮರು ಪಾವತಿಯಲ್ಲೋ ಸ್ಥಿರತೆ ಕಂಡು ಕೊಳ್ಳಲು ಹೆಣಗಾಡಿ ಮತ್ತೆ ಬ್ಯಾಂಕಿನ ಬ್ಯಾಂಕಿನ ಮುಂದೆ ಸಾಲಕ್ಕೆ ಕೈ ಒಡ್ಡಬೇಕಾಗುತ್ತದೆ ಆಗ ಬ್ಯಾಂಕುಗಳ ಪರಿಸ್ಥಿತಿ ಹೇಳ ತೀರದು ಅವರ ಕೈ ಕಟ್ಟಿದಂತಾಗಿ ಕೊಟ್ಟ ಸಾಲದ ಕಂತೆ ಮರು ಪಾವತಿಯಾಗಿರುವುದಿಲ್ಲ ಹೇಗೆ ಹೆಚ್ಚುವರಿ ಸಾಲವನು ಕೊಡುವುದು ಎಂದು ಕೈ ಕಟ್ಟಿ ಕುಳಿತು ಬಿಡುತ್ತವೆ , ಆಗ ಆರ್ಥಿಕ ಪರಿಸರದಲ್ಲಿ ಹೂಡಿಕೆಗೆ ಬೇಕಾಗುವ ಅಗತ್ಯ ಹಣ ಕಡಿಮೆಯಾಗುತ್ತ ಬರುತ್ತದೆ , ಹೂಡಿಕೆ ಕಡಿಮೆಯಾದಾಗ ಸಹಜವಾಗಿ ಉದ್ಯೋಗದ ಅವಕಾಶಗಳು ಕ್ಷೀಣಿಸುತ್ತವೆ ಬೆಳವಣಿಗೆ ಒಟ್ಟಾರೆಯಾಗಿ ದೇಶಿಯ ಉತ್ಪನ್ನಗಳ (ಜಿಡಿಪಿ - ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಮೇಲೆ ಪರಿಣಾಮ ಉಂಟು ಮಾಡುತ್ತ ಹೋಗುತ್ತದೆ.


ಇದೆಲ್ಲಕ್ಕೂ ಪರಿಹಾರವೆಂದರೆ ಇಂತಹ ಸಮಸ್ಯೆಗಳ ಶೀಘ್ರ ಪರಿಹಾರ ಕಂಡುಕೊಳ್ಳುವುದು, ಹಾಗು ಹೊಸ ಹೊಸ ಯೋಜನೆಗಳಿಗಿಂತಲೂ ಈಗಾಗಲೇ ಘೋಷಿಸಿರುವ ಯೋಜನೆಗಳ ಷೀಗ್ಗ್ರ್ ಅನುಷ್ಠಾನಕ್ಕೆ ನಾಂದಿ ಹಾಡಿ ಪ್ರತಿ ಸಮಸ್ಯೆಗಳಿಗೂ ಪ್ರತ್ಯೇಕ ಸೆಲ್ ಗಳನ್ನೂ ನಿರ್ಮಿಸಿ ಎಲ್ಲ ಸಮಸ್ಯೆಗಳ ಮೂಲಕ್ಕೆ ಪರಿಹಾರ ಒಂದೇ ಸಂಸ್ಥೆಯಡಿ ಬರುವಂತೆ ಮಾಡಿ ಕಾರ್ಯಪ್ರವೃತಃರಾಗುವುದು , ಹಾಗಾಗುವದೇ? ಮೇಲ್ನೋಟಕ್ಕೆ ಹಾಗಾಗುವ ಲಕ್ಷಣಗಳು ಕೇಂದ್ರದಲ್ಲಿ ತ್ಯಾಗಿ ಉತ್ತರದಲ್ಲಿ ಯೋಗಿ ಎಂಬ ಘೋಷವಾಕ್ಯದಲ್ಲಿ ಕಾಣಿಸುತ್ತಿವೆ, ಆದರೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ನಾನುಡಿಯು ಇದೆ ಅದೇನೇ ಇದ್ದರು ಈಗಿನ ಸರ್ಕಾರ ಪೂರೈಸಿರುವುದು 3 ವರ್ಷ ಮಾತ್ರ , ಮೋದಿ ಯವರೇ ನನ್ನ ಗುರಿ ೨೦೨೨ ಎಂದು ಹೇಳಿದ್ದಾರೆ ಕಾದು ನೋಡಣ, ಜನ ಸಾಮಾನ್ಯನ ನಂಬಿಕೆ ಹುಸಿಯಾಗದಂತೆ ಕೆಲಸವಾಗಬೇಕಷ್ಟೆ , ಇದೆಲ್ಲದರ ನಡುವೆ ಕೊನೆಗೂ ಬಂದ ಉಗಿ ಬಂಡಿಯನ್ನು ನೋಡಿ ಹಾಸನದ ಜನತೆಗೆ ಅಂದೇ ಯುಗಾದಿಯನ್ನು ಆಚರಿಸಿದ ಅನುಭವ, ಇನ್ನು ಮಂಗಳೂರಿಗರು ಖುಷಿ ಪಡುವ ದಿನಗಳು ದೂರವಿಲ್ಲ ಎಂದು ಪ್ರಭುಗಳು ಹೇಳಿದ್ದಾರೆ ಪ್ರಜೆಗಳಾದ ನಾವು ಕಾದು ನೋಡಣ.