ಅದು ಏಪ್ರಿಲ್
೨೧, ೨೦೧೯ ಈಸ್ಟರ್ ಸಂಭ್ರಮದಲ್ಲಿ ಇಡೀ ಶ್ರೀಲಂಕೆಯೆ ಮುಳುಗಿರುವಾಗ ದುತ್ತೆಂದು ಮತಾಂಧ ಉಗ್ರರು ಬಾಂಬ್ಗಳನ್ನು
ದೀಪಾವಳಿಯ ಪಟಾಕಿಯಂತೆ ಅಲ್ಲಲ್ಲಿ ಸ್ಪೋಟಿಸಿದ್ದರು, ಇಡೀ ಮನುಕುಲವೇ ಪಾಪಿಗಳೇ ನಿಮಗೆ ಮಾನವೀಯತೆಯೇ
ಇಲ್ಲವೇ ಎಂದು ಚಡಪಡಿಸಿತ್ತು, ಒಂದು ತಿಂಗಳ ಹಿಂದೆ ನಾನು ಸಂಚರಿಸಿದ ಸ್ಥಳಗಳಲ್ಲಿ ಬಾಂಬ್ ಸ್ಫೋಟ ಮತ್ತು ನಾನು ಇಳಿದು ಕೊಂಡ ಹೋಟೆಲ್ನಲ್ಲಿ ಬಾಂಬ್ ಸ್ಪೋಟದ ವಿಫಲ ಯತ್ನದ ಸುದ್ದಿ ಒಂದು ಕ್ಷಣ ನನ್ನನ್ನು
ಕಂಗೆಡಿಸಿತ್ತು , ಹಾಗೆ ನೋಡಿದರೆ ಈ ವರುಷದಲ್ಲೇ ನಾನು ಶ್ರೀಲಂಕೆಗೆ ಕೆಲಸದ ನಿಮಿತ್ತ ಮೂರು ಬಾರಿ
ಭೇಟಿನೀಡಿದ್ದೆ , ಅದಿರಲಿ ಅಲ್ಲಿ ಬಾಂಬ್ ಸ್ಪೋಟಿಸುತ್ತಿದಂತೆ ನನ್ನ ಹಲವು ಮಿತ್ರರು ಮೊದಲು ಕರೆ ಮಾಡಿದ್ದೂ
ಅರೆ ಬಾಪಟ್ ವೇರ್ ಆರ್ ಯು ಹೋಪ್ ಯು ಆರ್ ನಾಟ್ ಇನ್ ಕೊಲಂಬೊ ಎಂದು , ಅವರ ಕಾಳಜಿಗೆ ಅವರ ಪ್ರೀತಿಗೆ
ನಾನು ಅಭಾರಿ .. ತತಕ್ಷಣ ನನ್ನ ಕೆಲವು ಸ್ನೇಹಿತರಿಗೆ ಕರೆ ಮಾಡಿ ನಾನು ಅಲ್ಲಿಯ ಪರಿಸ್ಥಿತಿ ಬಗ್ಗೆ
ಹಾಗು ಅವರ ಕುಶಲೋಪರಿಯ ಬಗ್ಗೆ ವಿಚಾರಿಸಿದೆ , ಅವರಲ್ಲಿ ಒಂದು ಬಗೆಯ ಧಿಗ್ಬ್ರಾಂತಿ ಮನೆ ಮಾಡಿತ್ತು,
ಹತ್ತು ವರುಷಗಳ ಹಿಂದೆ ಈ ರೀತಿಯ ಘಟನೆ ನಡೆದಿದ್ದರೆ ಅದು ಇದಿದ್ದೆ ಎಲ್ ಟಿ ಟಿ ಈ ಬಗೆಯ ಕೃತ್ಯಗಳನ್ನು ನಡೆಸುತ್ತಿತ್ತು , ಆದರೆ ಇದೇನಿದು
ಈಗ ಮತ್ತೆ ಬಾಂಬುಗಳ ಸದ್ದು , ಪುಟ್ಟ ದೇಶ ಶ್ರೀಲಂಕೆಯನ್ನು ಕ್ಷಣಾರ್ಧದಲ್ಲಿ ಭಯಭೀತಗೊಳಿಸಿತ್ತು
... ಹೀಗೆ ಅಲ್ಲಿ ಕರ್ಫ್ಯೂಗಳ ಮೇಲೆ ಕರ್ಫ್ಯೂಗಳು
ಹಾಗು ಎಮರ್ಜೆನ್ಸಿ ಘೋಷಿಸಲಾಗಿತ್ತು ... ಸರಿ ಸುಮಾರು ಒಂದು ತಿಂಗಳ ನಂತರ ಮತ್ತೆ ಕೊಲಂಬೊ ಗೆ ಕೆಲಸದ
ನಿಮಿತ್ತ ನನಗೆ ಹೋಗಲೇಬೇಕಿತ್ತು , ಆದರೆ ನನ್ನ ಕಂಪನಿಯವರು ನೌ ಇಟ್ ಇಸ್ ರಿಸ್ಕಿ ಟು ಟ್ರಾವೆಲ್ ಅಂಡ್
ಪ್ರೋಹಿಬೀಟೆಡ್ ಟು ವಿಸಿಟ್ ಎಂದು ನನಗೆ ಈ ಮೇಲ್ ಸಂದೇಶವನ್ನು ರವಾನಿಸಿದರು , ಆದರೆ ಎಷ್ಟು ದಿನ ಹೀಗೆ
ಕೆಲಸ ಮುಂದೂಡುವುದು ಎಂದು ಹೇಳಿ , ಹಾಗೆ ಭಾಯಾವೃತಗೊಂಡ ನಮ್ಮ ಗ್ರಾಹಕರಿಗೆ ಸಾಂತ್ವನದ ಮಾತಾಡುವುದು ನನ್ನ ಕರ್ತವ್ಯ ಎಂದು ಹೇಳಿ ಕೊಲಂಬೊ ಗೆ ಹೊರಟೆಬಿಟ್ಟೆ ...
ಆದರೆ ಇದೇನಿದು
ಕೊಲಂಬೊ ವಿಮಾನ ನಿಲ್ದಾಣ ಇಳಿಯುತ್ತಿದಂತೆ, ಸದಾ ಪ್ರವಾಸಿಗರಿಂದ ಗಿಜಿಗುಡಿತ್ತಿದ ವಿಮಾನ ನಿಲ್ದಾಣದಲ್ಲಿ ಸ್ಮಶಾನ ಮೌನ ,
ನನನ್ನು ಸೇರಿಸಿ ಎಷ್ಟು ಜನರಿದ್ದೇವೆಂದು ಎಣಿಸಬಹುದಾದಷ್ಟು ಬೆರಳೆಣಿಕೆಯಷ್ಟು ಜನಗಳು , ಹಾಗೆ ಮುಂದೆ
ಸಾಗಿ ನನ್ನನು ಎದಿರುಗೊಳ್ಳಲು ಬಂದ "ತಾಜ್ ಸಮುದ್ರದ" ಸಿಬ್ಬಂದಿಯೊಂದಿಗೆ ಹೊರಬಂದರೆ ಕಗ್ಗತ್ತಲಿನಲ್ಲಿ
AK 47 ಹಿಡಿದುಕೊಂಡು ನಿಂತಿದ್ದ ಶ್ರೀಲಂಕೆಯ ಸೈನಿಕರು
ಅಕ್ಕ ಪಕ್ಕದಲ್ಲಿದ್ದ ಬಂಕರ್ಗಳು ಆ ದೃಶ್ಯವೇ ಸಾಕು ಪ್ರಕರಣದ ತೀವ್ರತೆಯನ್ನು ಸಾರಲು , ನಾನು ತಾಜ್
ಸಮುದ್ರ ಹೋಟೆಲ್ನ ಸಿಬ್ಬಂದಿ ಕಳುಹಿಸಿದ ಕಾರಿನಲ್ಲಿ ಕುಳಿತು ತಾಜ್ ಸಮುದ್ರ ಹೋಟೆಲ್ನತ್ತ ಪ್ರಯಾಣ
ಬೆಳೆಸಿದೆ , ಹಾಗೆ ಚಾಲಕನನ್ನು ಮಾತಿಗೆಳೆದೆ " ಇಸ್ ಈಟ್ Okay ನೌ ಎಂದೇ , ಚಾಲಕ ಹೇಗೆ ನಾಟ್ Okay ಎಂದು ಹೇಳಿಯಾನು , ಯಸ್
ಸರ್ ಇಟ್ ಲುಕ್ಸ್ ಲೈಕ್ Okay ನೌ ಎನ್ನತೊಡಗಿದ್ದ
, ಇದೇ ಚಾಲಕ ಮೊದಲ ಬಾರಿ ನಾನು ಶ್ರೀಲಂಕೆಗೆ ಭೇಟಿ ನೀಡಿದಾಗ , LTTE ಯ ಭಯ ಈಗಿಲ್ಲ ಎವ್ರಿಥಿಂಗ್ ವಾಸ್
ಓವರ್ ಬೈ ೨೦೦೯ ನೌ ಇಟ್ ಇಸ್ ಓಲ್ಡ್ ಸ್ಟೋರಿ ಅಂಡ್ ನೌ ಎವೆರಿವೇರ್ ಪೀಸ್ ಎಂದು ಹೇಳುತ್ತಾ ೧೦ ವರುಷದ
ಹಿಂದೆ ಎಲ್ ಟಿ ಟಿ ಈ ಉಗ್ರರು ಬಾಂಬ್ ಸ್ಪೋಟಿಸಿದ್ದ ಸ್ಥಳಗಳನ್ನು ತೋರಿಸಿದ್ದ ಆದರೆ ಕೇವಲ ಎರಡು ತಿಂಗಳ
ಅಂತರದಲ್ಲಿ ಐಸಿಸ್ ಉಗ್ರರಿಂದಾಗಿ ಸ್ಪೋಟಗೊಂಡ ಸ್ಥಳಗಳನ್ನು ಅವನು ತೋರಿಸುತ್ತಾನೆಂದು ಅವನಿಗಾಗಲಿ
ನನಗಾಗಲಿ ಊಹೆಯೆಯಿರಲಿಲ್ಲ , ಇದುವೇ ಜೀವನ ಇಂದು ನೀ ಬದುಕಿದರೆ ಅದೇ ಪುಣ್ಯ , ನಾಳೆಯ ಮಾತು ನಾಳೆಗೆ
ಎಂಬಂತ ಜಾಗತಿಕ ವಾತಾವರಣದಲ್ಲಿ ಇದೆಂತ ಧುರ್ಬರ ಬದುಕು ಎಂದೆನಿಸಿತ್ತು .. ಹೀಗೆ ದಾರಿಯುದ್ದಕೆ ಸಾಗುತ್ತಿದ್ದರೆ
ಸರ್ ದಿಸ್ ಶಾಂಗ್ರಿಲಾ ಎಂದು ಸ್ಪೋಟಗೊಂಡ ಸ್ಥಳದ ಮುಂದೆ ತೋರಿಸಿದ , ಒನ್ ಸೆಕೆಂಡ್ ಐ ವಿಲ್ ಟೇಕ್
ಪಿಕ್ಚರ್ ಎಂದೇ , ನೋ ಸರ್ , ಯು ಕ್ಯಾನ್ ಸೀ ಮಿಲಿಟರಿ ಪೀಪಲ್ ಆರ್ ವಾಚಿಂಗ್ ದೆ ವಿಲ್
question ಎಂದು ಹೇಳಿ ನನ್ನನು ಸುಮ್ಮನಾಗಿಸಿದ, ಹೀಗೆ ಮಾತು ಸಾಗುತಿತ್ತು ಅಷ್ಟ್ರಲ್ಲಿ ತಾಜ್ ಹೋಟೆಲ್
ಸೇರುವ ಮುನ್ನವೇ ಎರಡು ಬಾರಿ ಚಾಲಕ ತಾಜ್ ಹೋಟೆಲ್ ಗೆ ಕರೆ ಮಾಡಿ ನಾನು ಇಂಥವರನ್ನು ಕರೆದು ಕೊಂಡು
ಬರುತ್ತಿದ್ದೇನೆ ಎಂದು ಹೇಳಿದ್ದ , ಸರ್ ಫಸ್ಟ್ ಕಾಲ್ ಇಸ್ ಟು ಅವರ್ ರಿಸೆಪ್ಶನ್ ಸೆಕೆಂಡ್ ಒನ್ ಟು
ಮಿಲಿಟರಿ ಕಮಾಂಡೋಸ್, ಸೊ ದಟ್ they ಆರ್ ಅವೇರ್ ದಟ್ ಗೆಸ್ಟ್ ಇಸ್ ಕಮಿಂಗ್ ಎಂದ, ಹೀಗೆ ಅವನು ಮಾತು
ಮುಗಿಸುವಶ್ಟರಲ್ಲಿ ಗಾಡಿ ತಾಜ್ ನ ಮುಂಬಾಗಿಲಿನ ಅನತಿ ದೂರದಲ್ಲಿ ನಿಂತಿತು , ಅರೆರೆ ನಾನು ಮೊದಲು
ತಾಜ್ ಗೆ ಭೇಟಿ ನೀಡಿದಾಗ ಇರುತ್ತಿದ್ದ ದೃಶ್ಯವೇ ಬೇರೆ ಈಗಿನ ದೃಶ್ಯವೇ ಬೇರೆ ತಾಜ್ ಎಂಬ ತಾಜ್ ಅಕ್ಷರಶ
ಮಿಲಿಟರಿ ಕ್ಯಾಂಪ್ ನಂತೆ ಭಾಸವಾಗುತಿತ್ತು , ಎರಡೆರಡು ಬಂಕೆರಗಳು ಬಂಕರ್ನ ಒಳಗೆ ಸುಸಜಿತ
AK 47
ಹಿಡಿದ ಸೈನಿಕರು, ಮಿಲಿಟರಿ ವ್ಯಾನ್ , ಆಂಬುಲೆನ್ಸ್ ಎರಡೆರಡು ಬಾರಿ ತಪಾಸಣೆ , ಫ್ರಮ್ ಇಂಡಿಯಾ ಎನ್ನುತ್ತಿದಂತೆ
ಲಂಕೆಯ ಮಿಲಿಟರಿ ಸೈನಿಕರಲ್ಲಿ ಮಂದಹಾಸ , ಹೀಗೆ ಇದೆಲ್ಲವನು ನೋಡುತ್ತಾ ತಾಜ್ ಒಳ ಹೊಕ್ಕರೆ ಒಂದು ಕಡೆ
ಆತಂಕವಾದರೂ ಇನ್ನೊಂದು ಕಡೆ ಇಷ್ಟೊಂದು ಸುರಕ್ಶತೆಯಿದೆಯಲ್ಲ ಎಂಬ ಸಮಾಧಾನ , ಹಾಗೆ ಒಳ ಹೊಕ್ಕು ವಿಶ್ರಮಿಸಿ
ತಾಜ್ ಸಿಬ್ಬಂದಿಯೊದಿಂಗೆ ಮಾತಿಗಿಳಿದಾಗ ತಿಳಿದು ಬಂದದ್ದು ಇದೆಲ್ಲ ಸುರಕ್ಷತೆ ಇಂಡಿಯನ್ ಹೈ ಕಮಿಷನ್
ಕೋರಿಕೆಯ ಮೇರೆಗೆ ಎಂದು , ಇಂಡಿಯನ್ ಹೈ ಕಮಿಷನ್ ಭಾರತೀಯರು ಹೆಚ್ಚು ಭೇಟಿ ಕೊಡುವ ಜಾಗಕ್ಕೆ ಹೆಚ್ಚು
ಸುರಕ್ಷತೆಯನ್ನು ಒದಗಿಸಬೇಕೆಂದು ಕೋರಿಕೊಂಡಿತ್ತಂತೆ , ಹಾಗೆ ನೋಡಿದರೆ ಅಂದು ಕೊಲಂಬೊ ನಗರದ ಪ್ರತಿಷ್ಠಿತ
ಪಂಚ ತಾರಾ ಹೋಟೆಲ್ ಗಳು ಹಾಗು ಚುರ್ಚ್ಗಳಲ್ಲಿ ಬಾಂಬ್ ಗಳ ಸುರಿಮಳೆಯಾಗುತ್ತಿದರೆ ತಾಜ್ ಹೋಟೆಲ್ ಮಾತ್ರ
ಪವಾಡ ಸಾದೃಶ್ಯವಾಗಿ ಇದರಿಂದ ಹೊರತಾಗಿತ್ತು , ಹಾಗೆಂದು ಅಲ್ಲಿ ಪ್ರಯತ್ನ ನಡೆದಿರಲಿಲ್ಲವೆಂದಲ್ಲ
, ಪಾಪಿ ಅಲ್ಲಿ ಎರಡು ಬಾರಿ ಪ್ರಯ್ತ್ನಿಸಿ ಸಫಲನಾಗದಿದ್ದಾಗ ಅಲ್ಲಿಂದ ಕಾಲ್ ಕಿತ್ತಿದಾನೆ ಹಾಗೆ ಬಾಂಬ್
ಅನ್ನು ತನ್ನ ಚೀಲದಲಿರಿಸಿ ತಾಜ್ ನ ರೋಲಿಂಗ್ ಗಟನಿಂದ ಹೊರಹೋಗುವಾಗ ಅವನ ಬ್ಯಾಗ್ ಅಲ್ಲಿ ಸಿಕ್ಕಿ ಹಾಕಿಕೊಂಡಿದೆ
, ಆ ಸಮಯಕ್ಕೆ ತಾಜ್ ಸಿಬ್ಬಂದಿಗಳು ತಮಗರಿವಿಲ್ಲದೆ ಅಯ್ಯೋ ಪಾಪ ಎಂದು ಸಿಕ್ಕಿ ಹಾಕಿ ಕೊಂಡ ವಸ್ತುವನ್ನು
ಆ ಗೇಟ್ನಿಂದ ತಪ್ಪಿಸಿ ಅವನಿಗೊಪ್ಪಿಸಿದ್ದಾರೆ ಆ ಪಾಪಿ ನಂತರ ಒಂದು ಚಿಕ್ಕ ಬಜೆಟ್ ಹೋಟೆಲ್ ಒಳ ಹೊಕ್ಕು
ಬಾಂಬ್ ಸ್ಪೋಟಿಸಿ ಇಬ್ಬರ ಜೀವಕ್ಕೆ ಕುತ್ತು ತಂದಿದ್ದಾನೆ , ತಾಜ್ ಸಿಬ್ಬಂದಿಗಳು ಸರ್ ಯು ಬಿಲಿವೆ
ಓರ್ ನಾಟ್ ಗಾಡ್ ಸ್ಟಯ್ಸ್ ಇನ್ ತಾಜ್ we all escaped
miracalously ಎಂದು ಹೇಳಿದ...
ಮರು ದಿನ ಬೆಳಗ್ಗೆ
ಎದ್ದು ನೋಡಿದರೆ , ಎಂದಿಗೂ ಸದಾ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ತಾಜ್ ನಲ್ಲಿ ಅಲಲ್ಲಿ ಬೆರಳಣಿಕೆಯಷ್ಟು
ಜನಗಳು , ಎಲ್ಲರು ಪಾಠವನ್ನು ಕಲಿತಂತೆ ೮ :೩೦ ರ ಸಮಯದಲ್ಲಿ ತಿಂಡಿ ತಿನ್ನಲು ಬಂದರೆ ಅಂದು ನನ್ನನು
ಸೇರಿಸಿ ೭:೩೦ ಕ್ಕೆ ಸಮಸ್ತ ತಾಜ್ ನ ಅತಿಥಿಗಳು ಬ್ರೇಕ್ ಫಾಸ್ಟ್ ಏರಿಯಾ ದಲ್ಲಿ ಹಾಜರು ಬಹುಷ್ಯ ಎಲ್ಲರು
ನನ್ನನಂತೆಯೇ ಬೇಗ ಬರಲು ಯೋಚಿಸಿದ್ದರೇನೋ , ಅಂದಿನ ದಿನ ಲಘು ಫಲಹಾರ ಮಾಡಿ ನಾನು ನನ್ನ ಗ್ರಾಹಕರನ್ನು
ಭೇಟಿ ಮಾಡಲು ಹೊರೆತೆನು , ಓಲಾ ಉಬೆರ್ ಸಹವಾಸ ಬೇಡ ಎಂದು ತಾಜ್ ನ ಕಾರ್ ಅನ್ನು ಬಾಡಿಗೆಗೆ ಪಡೆದು
ಹೊರ ಬಿದ್ದೆ , ಹಾಗೆ ನಮ್ಮ ಸಂಸ್ಥೆಯ ಗ್ರಾಹಕರಲ್ಲಿ ಒಬ್ಬರಾದ ಸರಕಾರಿ ಸಂಸ್ಥೆಯ ಅಧಿಕಾರಿಗಳೊಂದಿಗೆ
ಮಾತಾಡುತ್ತಿದೆ ಆದರೆ ಅಂದು ವ್ಯವಹಾರವನ್ನು ಅವರಾಗಿಯೇ ಮಾತಾಡಿದರೆ ಮಾತಾಡಲಿ ನಾನು ಮಾತಡುವುದಿಲ್ಲ
ಎಂಬ ನಿರ್ಧಾರಕ್ಕೆ ನಾನು ಬಂದಿದ್ದೆ, ಹೀಗೆ ಅವರೊಂದಿಗೆ ಮತ್ತು ಇತರೆ ಖಾಸಗಿ ಸಂಸ್ಥೆಯ ಅಧಿಕಾರಿಗಳೊಂದಿಗೆ
ಮಾತಾಡುತ್ತಿದಾಗ ಅವರು ಹೇಳಿದ್ದು "Now it is safe karthik but we
really need powerfull govt who
can take tough decision like Modi ಎಂದು ... ಅದಿರಲಿ ಹೀಗೆ ಒಂದು ಪ್ರದೇಶ ಈ ರೀತಿಯ ದಾಳಿಗೊಳಗಾದಾಗ
ಹಲವಾರು ಅಂತೆ ಕಂತೆಗಳ ಕಥೆಗಳು ಹುಟ್ಟುತ್ತವೆ .... ಅದರಂತೆ ಅಲ್ಲಿ ಹುಟ್ಟಿಕೊಂಡಿರುವ ನಂಬಲು ಅನರ್ಹವಾದ
ಕಹಾನಿಯೆಂದರೆ ಇದು ಇನ್ನೊಂದು ದೇಶದ ಕೃತ್ಯವಂತೆ ಅದಕ್ಕೆ ಕಾರಣ ಹೀಗೆ ಹೇಳುತ್ತಾರೆ , ಅಂದು ಶಾಂಗ್ರಿ
ಲ ಹೋಟೆಲ್ ನಲ್ಲಿ 5 ಜನ ಚೀನಾ ಪ್ರಾಂತ್ಯದಿಂದ ಬಂದ
ವಿಜ್ಞಾನಿ ಗಳು ತಂಗಿದರಂತೆ ಆ ವಿಜ್ಞಾನಿಗಳು ಶ್ರೀಲಂಕೆಯ ಉತ್ತರ ಪ್ರಾಂತ್ಯದಲ್ಲಿ ತೈಲ ಸಿಗುವ ಸಂಭವವನ್ನು
ಬೆನ್ನೆತ್ತಿ ಸಂಶೋದನೆಗೆಂದು ಬಂದಿದ್ದರು ಅವರನ್ನೇ ಕೇಂದ್ರೀಕರಿಸಿ ನಡೆಸಿದ ಮಾರಣ ಹೋಮ ಇದು ಎಂದು
, ಇದು ನಿಜವೇ ಆಗಿದ್ದರೆ ಬೇರೆ ಹೋಟೆಲ್ಗಳನ್ನು ಹಾಗು ಚರ್ಚ್ ಗಳನ್ನೂ ಗುರಿಯಾಗಿಸಿದ್ದೇಕೆ? ಎಂದು ಕೇಳಿದರೆ
ಅದಕ್ಕೆ ಉತ್ತರವಿಲ್ಲ , ಆದ್ದರಿಂದಲೇ ಹೇಳಿದ್ದು ಕಟ್ಟು ಕಥೆಗಳಿಗೆ ಬರವಿಲ್ಲವೆಂದು...
ಆದರೆ ಕುತೂಹಲಕ್ಕಾಗಿ
ಮತ್ತು ಈ ಅಂತೆ ಕಂತೆಗಳ ಕಥೆಯನ್ನು ಕೇಂದಿರಿಕರಿಸಿ ನೀವು ನೋಡ ಹೊರಟರೆ ಶ್ರೀಲಂಕೆಯಲ್ಲಿ ಚೀನಿಗಳ ಪ್ರಭಾವವೇನು
ಕಡಿಮೆಯಿಲ್ಲ , ಕೊಲಂಬೊ ನಗರದಲ್ಲಿ ಹಾಗೆ ನಡೆದಾಡಿಕೊಂಡು ಹೋದರೆ ಹಲವು ಚೀನೀ ನಾಗರಿಕರನ್ನು ತಾವು
ಕಾಣಬಹುದು , ಇದರ ಅರಿವು ನಾನಾಗಿದ್ದರು ಕುತೂಹಲಕ್ಕೆ ಆರ್ they ಟೂರಿಸ್ಟ್ಸ್ ಎಂದು ಸವಾರನಿಗೆ ಮತ್ತು
ಅಂಗಡಿಯವರಲ್ಲಿ ಕೇಳುತ್ತಿದೆ , ಆಗ ಅವರು ನೋ ಸರ್ ಬಿಗ್ ಪ್ರಾಜೆಕ್ಟ್ಸ್ ಆರ್ ಗೋಯಿಂಗ್ ಆನ್ ಇನ್ ಸೆವೆರಲ್
ಪಾರ್ಟ್ ಆ ಶ್ರೀಲಂಕಾ ಎನ್ನುತಿದ್ದರು (ಹಂಬನತೊಟ ಪೋರ್ಟ್ ಎಂದು ಗೂಗಲ್ ಮಾಡಿ ನೋಡಿ ನಿಮಗೆ ತಿಳಿಯುತ್ತದೆ)
ಹೀಗೇಕೆ ಬಹುಷ್ಯ ತನ್ನ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಚೀನಾ ಹೀಗೆ ತನ್ನ ಹಲವು ಕಾರ್ಯಕ್ರಮಗಳನ್ನು
ಹಮ್ಮಿ ಕೊಂಡಿದೆ ಎಂದು ನಿಮಗೆ ಅನಿಸಬಹುದು ಆದರೆ ಇದರೊಂದಿಗೆ ಇನ್ನೊಂದು ಹಿಡನ್ ಅಜೆಂಡಾ ಎಂದರೆ ರಾಜತಾಂತ್ರಿಕವಾಗಿ
ಎಲ್ಲೆಲ್ಲಿ ಭಾರತ ತನ್ನ ಬೇರುಗಳನ್ನು ಬಲಪಡಿಸಿಕೊಳ್ಳಲು ಪ್ರಯ್ತ್ನಿಸುತ್ತದೆಯೋ ಅಲ್ಲಲ್ಲಿ ಚೀನಾ ಕೂಡ
ಜಿದ್ದಿಗೆ ಬಿದ್ದು ತನ್ನ ಅಸ್ತಿತ್ವವನ್ನು ಕಂಡು ಕೊಳ್ಳಲು ಪ್ರಯ್ತ್ನಿಸುತ್ತದೆ , ಮೊದಲಿಗೆ ಚೀನಾ
ಆರ್ಥಿಕವಾಗಿ ಹಣ ಸಹಾಯ ಮಾಡುತ್ತದೆ , ನಂತರ ದೊಡ್ಡ ದೊಡ್ಡ ಯೋಜನೆಗಳ ಮೂಲಕ ಆ ಈಡೀ ದೇಶವನ್ನು ತನ್ನ
ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ , ಇಲ್ಲಿ ಪಾಕಿಸ್ತಾನ , ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಳೊಂದಿಗೆ ಚೀನಾ ದ ಒಡನಾಟವನ್ನು ನೀವು ಗಮನಿಸಬಹುದು , ಇತ್ತೀಚಿಗೆ
ಶ್ರೀಲಂಕೆ ಹೆಚ್ಚು ಹೆಚ್ಚಾಗಿ ಚೀನಾ ದಟ್ಟ ವಾಲುತ್ತಿದಂತೆ ಕಂಡು ಬಂದಿತ್ತು , ಅದೇ ಕಾರಣಕ್ಕೆ ಭಾರತ
ಮೂರ್ ನಾಲ್ಕು ಬಾರಿ ಸಂಭಾವಿ ದಾಳಿಯ ಬಗ್ಗೆ ಎಚ್ಚರಿಸಿದ್ದರು , ಇದು ಪಾಕಿಸ್ತಾನ ಹಾಗು ಶ್ರೀಲಂಕೆಯ
ಮಧ್ಯೆ ಕಂದಕವನ್ನು ನಿರ್ಮಿಸಲು ಪ್ರಯತ್ನಿಸುವ ಯತ್ನ ಎಂದು ಎಣಿಸಿತು, ಆದರೆ ಇಂದು ಶ್ರೀಲಂಕೆ ಭಾರತದ
ಎಚ್ಚರಿಕೆಯನ್ನು ಕಡೆಗಣಿಸಿ ಪಶ್ಚಾತಾಪದ ಬೇಗುದಿಯಲ್ಲಿ ಬೇಯುತ್ತಿದೆ.
ಅದೇನೇ ಇರಲಿ
ಶ್ರೀಲಂಕೆಯಲ್ಲಿ ಎಲ್ ಟಿ ಟಿ ಯ ಅಟ್ಟಹಾಸ ಮುಗಿದ ನಂತರ ಶ್ರೀಲಂಕೆ ಒಂದು ಬಗೆಯ relax ಮೋಡ್ ನಲ್ಲಿತ್ತು ಅದು ಸಹಜವೂ ಹೌದು , ಇದಕ್ಕೆ ಇಂಬು ಕೊಡುವಂತೆ
ಇತ್ತೀಚಿಗೆ ಶ್ರೀಲಂಕೆಗೆ ಪ್ರವಾಸಕ್ಕೆ ಹೋಗುವವವರ ಸಂಖ್ಯೆಯು ಹೆಚ್ಚಿತ್ತು , ಶ್ರೀಲಂಕೆಯ ಒಟ್ಟು ಉತ್ಪಾದನೆಯ
GDP ಗೆ ಟೂರಿಸಂ ನ ಕೊಡುಗೆಯೇ 10 % ಎಂದರೆ ನೀವೇ ಊಹಿಸಿ
ಟೂರಿಸಂ ಎಷ್ಟು ಅಗಾಧವಾಗಿ ಬೇರೂರಿತ್ತು ಎಂದು. ಆದರೆ ಇಂದು ಆ ಆದಾಯದ ಮೂಲಕ್ಕೆ ಪೆಟ್ಟು ಬಿದ್ದಿದೆ
, ಅಲ್ಲಿಗೆ ಶ್ರೀಲಂಕೆ ತಕ್ಕಮಟ್ಟಿಗೆಯಾದರು ಮತ್ತೆ ಆರ್ಥಿಕವಾಗಿ ಜರ್ಜರಿತವಾದರೆ ಆಶರ್ಯವಿಲ್ಲ, ಇದೆಲ್ಲವೂ
ಶ್ರೀಲಂಕೆಯ ಆತಂಕದ ಸವಾಲುಗಳು ಇನ್ನು ಮುಗಿದಿಲ್ಲವೆನ್ನುವುದನ್ನು ಹೇಳುತ್ತಿದೆ , ಆದರೆ ಇದೆಲ್ಲದರಿಂದ
ಎಚ್ಚೆತ್ತುಕೊಂಡಿರುವ ಲಂಕೆ ಹಲವು ಮಿತ್ರ ದೇಶಗಳ ಸಹ್ಯದೊಂದಿಗೆ ವ್ಯರಿಗಳ ಹೆಡೆಮುರಿ ಕಟ್ಟಲು ಪ್ರೇತಿನಿಸುತ್ತಿದೆ
ಲಂಕೆಯೆಯ ಪ್ರಾರ್ಥಮಿಕ ವರದಿಯ ಪ್ರಕಾರ ಹಲವು ದೇಶ ದ್ರೋಹಿಗಳನ್ನು ಬಂಧಿಸಿದೆ "NTJ " ನ್ಯಾಷನಲ್ Towheed ಜಮಾತ್
" ಎಂಬ ಸಂಘಟನೆಯ ಮೇಲೆ ಬಲವಾದ ಗುಮಾನಿಯನ್ನು ಶ್ರೀಲಂಕೆ ವ್ಯಕ್ತಪಡಿಸಿದೆ , ಇತ್ತ ಇಸ್ಲಾಮಿಕ್
ಸ್ಟೇಟ್ ಈ ದುಷ್ಕೃತ್ಯವನ್ನು ತಾನೇ ಮಾಡಿದ್ದೂ ಎಂಬ ತನ್ನ AMAQ ಮುಖವಾಣಿಯಲ್ಲಿ ಹೇಳಿಕೊಂಡಿದೆ , ಇದೆಲ್ಲದರ
ನಡುವೆ ಕಂಡು ಬರುವ ಆತಂಕಕಾರಿ ಬೆಳವಣಿಗೆಯೆಂದರೆ ಸಿಂಹಳೀಯರು ಮತ್ತು ತಮಿಳು ಪ್ರತ್ಯೇಕತಾವಾದಿಗಳ ಹೊರ್ತಾತಾಗಿ
ಮತ್ತೊಂದು ಜನಾಂಗೀಯ ವಿಭಜನೆಯತ್ತ ಶ್ರೀಲಂಕಾ ಮುಖ ಮಾಡಿದೆ , ಈಗಾಗಲೇ ಹಿಂದೊಮ್ಮೆ ಇದೇ ವಿಷಯದಲ್ಲಿ
ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು .
ಅದಿರಲಿ , ಇತ್ತೀಚಿನ
ಬೆಳವಣಿಗೆಯನ್ನು ನೋಡಿದರೆ ಐಸಿಸ್ , ದಕ್ಷಿಣ ಏಷ್ಯಾವನ್ನು ತನ್ನ ಸಂಘಟನೆಯ ಸ್ಥಾಪನೆಗೆ ಫಲವತ್ತಾದ
ಭೂಮಿ ಎಂದು ಪರಿಗಣಿಸಿದಂತೆ ಕಾಣುತ್ತಿದೆ. ಹೀನಾಯವಾಗಿ ಐಸಿಸ್ ಹಿನ್ನಡೆಯನ್ನು ಅನುಭವಿಸಿದರೂ ಜಾಗತಿಕ ಭಯೋತ್ಪಾದಕ ಶಕ್ತಿಯಾಗಿ ಇನ್ನು ಉಳಿದಿದೆ , ಇದರ ಕುರುಹನ್ನು
ನೈಜಿರಿಯಾದಲ್ಲಿ , ಅಫ್ಘಾನಿಸ್ತಾನದಲ್ಲಿ ಕಾಣಬಹುದು , ನೈಜಿರಿಯಾ ದೇಶದ ಕೆಲವು ಭಾಗವನ್ನು ನಿಯಂತ್ರಿಸುವ
"Boko Haram " ಎಂಬ ಸಂಸ್ಥೆ ಐಸಿಸ್
ಗೆ ತನ್ನ ನಿಷ್ಠೆಯನ್ನು ಘೋಷಿಸಿದೆ . ಅಫ್ಘಾನಿಸ್ತಾನದಲ್ಲಿ ಐಸಿಸ್ ಸದಸ್ಯರು ಮತ್ತು ಐಸಿಸ್ನೆಡೆಗೆ ಸಹಾನುಭೂತಿಯುಳ್ಳವರು
, ಇರಾಕ್ ಇಸ್ಲಾಮಿಕ್ ರಾಜ್ಯ ಮತ್ತು ಪೂರ್ವ ಪ್ರಾಂತ್ಯದ ಲೆವೆಂಟಾ ಬೋರಾಸನ ಪ್ರಾಂತ್ಯವನ್ನು ಐಸಿಸಿ
ಬೆಂಬಲಿತ ಪ್ರಾಂತ್ಯವಾಗಿ ಪರಿವರ್ತಿಸಲಾಗಿದೆ (ಈ ಪ್ರಾಂತ್ಯಗಳಿಗೆ ಐಸಿಸಿ ತನ್ನ ಪ್ರತೇಯಕ ಪ್ರಾಂತ್ಯವನ್ನು
ಮಾಡಿ ಅದನ್ನು ಉರ್ದು ಭಾಷೆಯಲ್ಲಿ ತನ್ನ ವಿಲಾಯತ್ ಎಂದು ಕರೆದು ಕೊಳ್ಳುತ್ತಿದೆ) ಈ ಪ್ರಾಂತ್ಯಗಳಲ್ಲಿ
ಐಸಿಸಿ ಆತ್ಮಾಹುತಿ ದಾಳಿಗಳನ್ನು ಮಾಡಿರುವುದನ್ನು ನೀವು ಗಮನಿಸಬಹುದು . ಈ ಪ್ರದೇಶಗಳಲ್ಲಿ ಶಿಯಾ ಮುಸ್ಲಿಂರನ್ನು
ಕೇಂದ್ರವಾಗಿಸಿ ಹಲವು ದಾಳಿಗಳನ್ನು ಮಾಡಿದೆ ಮತ್ತು ಗಮನಾರ್ಹ ಅಮಾಶವೆಂದರೆ ಈ ಬೋರಾಸನ ಪ್ರಾಂತ್ಯದಿಂದಲೇ
ಐಸಿಸ್ , ಭಾರತ , ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಕಾರ್ಯಾಚರಣೆ
ನಡೆಸುತ್ತಿದೆ . ಭಾರತದಲ್ಲಿ ಇದುವರೆಗೆ ಐಸಿಸ್ ಯಾವುದೇ ಪ್ರಮುಖ ಭಯೋತ್ಪಾದನಾ ದಾಳಿಯನ್ನು ಮಾಡಿಲ್ಲ
ಹಾಗು ಭಾರತದಲ್ಲಿ ಯಾವುದೇ ಸಂಘಟನೆಯ ಮಟ್ಟದಲ್ಲಿ ಉಪಸ್ಥಿತಿಯನ್ನು ಹೊಂದಿಲ್ಲ ಆದರೆ ಐಸಿಸ್ ಹಲವು ಯುವಕರನ್ನು ತನ್ನತ ಆಕರ್ಷಿಸುತ್ತಲೇ ಇದೆ ಎಂದು
ನಾವುಗಳು ಅಲಲ್ಲಿ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯೇ ಸರಿ
.
ಇಸ್ಲಾಂ ಮತ್ತು
ಇತರ ಸಂಸ್ಕೃತಿಗಳ ನಡುವಿನ ಸಂಘರ್ಷ ಇಂದು ಹಲವು ಜಿಹಾದಿಗಳನ್ನು ಐಸಿಸ್ ಸೇರಲು ಆಕರ್ಷಿಸುತ್ತಿದೆ ಮತ್ತು
ಅದು ತನ್ನದೇ ರೀತಿಯ ಸಂವಹನ ಶೈಲಿಯನ್ನು ಬೆಳೆಸಿಕೊಂಡು ಇನ್ನಿಲದಂತೆ ಪ್ರಪಂಚದಾದ್ಯಂತ ತನ್ನ ಜಾಲವನ್ನು
ವಿಸ್ತರಿಸಲು ಪ್ರತಿ ದಿನವೂ ಪ್ರಯತ್ನಿಸುತ್ತಿದೆ , ಈ ಪಾಪಿಗಳಿಗೆ ಆ ದೇಶ ಈ ದೇಶವೆಂಬ ಭೇದವಿಲ್ಲ ಅವರ
ಒಂದಂಶದ ಕಾರ್ಯಕ್ರಮವೆಂದರೆ ಪ್ರಪಂಚದಾದ್ಯಂತ ಭಯದ ವಾತಾವರಣ ನಿರ್ಮಿಸುವುದು , ಇಸ್ಲಾಂ ಮತ್ತು ಇತರೆ ನಂಬಿಕೆಗಳ ನಡುವೆ ಯುದ್ಧವನ್ನು ಪ್ರಚೋದಿಸುವುದು ಇದೇ ಅವರ ಗುರಿ ಅದು ಇಂದು ಶ್ರೀಲಂಕಾ ನಾಳೆ ಇನ್ನೆಲ್ಲೋ
? ಐಸಿಸ್ ಈಗಾಗಲೇ ಆಫ್ಘಾನಿಸ್ತಾನ್ ಮತ್ತು ಲಿಬಿಯಾಗಳಲ್ಲಿ ತನ್ನದೇ ಬೆಂಬಲಿತ ಕಿರು ಸಾಮ್ರಾಜ್ಯಗಳನ್ನು
ಹುಟ್ಟು ಹಾಕಿದೆ , ಐಸಿಸ್ ಹೇಗಾದರೂ ಸರಿಯೇ ಎಂದು ತನ್ನ ಸಂಘಟನೆಗೆ ಯುವಕರನ್ನು ಬೇರೆ ದೇಶಗಳಿಂದ ಸೇರಿಸಿಕೊಳ್ಲು
ಪ್ರಯತ್ನಿಸುತ್ತಿರುವು ನಡೆ ಮೇಲ್ನೋಟಕ್ಕೆ ಐಸಿಸ್ ದುರ್ಬಲಗೊಂಡಂತೆ ಕಾಣುವಂತೆ ತೋರಬಹುದು ಆದರೆ ಐಸಿಸ್ ಇನ್ನು ಪರಾಜಯಗೊಂಡಿಲ್ಲ ಹಾಗು ಸತ್ತಿಲ್ಲ
ಎಂಬುದೇ ನಮ್ಮೆಲ್ಲರನ್ನೂ ಚಿಂತೆಗೀಡು ಮಾಡುತ್ತಿರುವ ವಿಷಯ, ಐಸಿಸ್ ಅಷ್ಟೇ ಅಲ್ಲ ವರ್ಗ ವರ್ಗಗಳ ನಡುವೆ
ಸಂಘರ್ಷವನ್ನುಟು ಮಾಡುವ ಯಾವುದೇ ಸಂಘಟನೆ ಇರಲಿ ಅದು
ಇನ್ನಿಲದಂತೆ ನಿರ್ನಾಮವಾಗಬೇಕು , ಜಗತ್ತಿನೆಲ್ಲೆಡೆ ಶಾಂತಿ ನೆಲೆಗೊಳ್ಳಬೇಕು - ಇದೆಲ್ಲದರ ನಡುವೆ
ಇನ್ನೇನು ಇದೆಲ್ಲವನ್ನು ಬರೆದು ಮುಗಿಸಿ ತಾಜ್ ನ ಕೋಣೆಯಲ್ಲಿ
ಕುಳಿತಾಗ ಬಂದ ಸುದ್ದಿ ನೌ ಶ್ರೀಲಂಕಾ ೯೯% ಸೇಫ್ ಟು ಟ್ರಾವೆಲ್ ಎಂಬ ಶ್ರೀಲಂಕೆಯ ಘೋಷಣೆ , ಅದು ನಿಜವಾಗಲಿ
ಶ್ರೀಲಂಕೆ ಬಹು ಬೇಗ ಚೇತರಿಸಿಕೊಳ್ಳಲಿ ...
ಕಾರ್ತಿಕ್ ಎಸ್ ಬಾಪಟ್



