Saturday, April 25, 2020

ಅಂತರ್ಧ್ವನಿ Part 2 - ಮನವ ಕದ್ದು ಒಲವ ಗೆದ್ದ ಪುಸ್ತಕ ಪರಿಚಾರಕ ನೀ...


ಅಂತರ್ಧ್ವನಿ Part 2 - ಮನವ ಕದ್ದು ಒಲವ ಗೆದ್ದ ಪುಸ್ತಕ ಪರಿಚಾರಕ ನೀ...   

ನಾನು ಮತ್ತು ವಸು ಕೊನೆಗೂ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ "M A in

Economics  " ಸ್ನಾತಕೋತ್ತರ ಪದವಿಗೆ ಸೀಟ್ ಗಿಟ್ಟಿಸಿಕೊಂಡಿದ್ದೆವು ,
ಹಾಸ್ಟೆಲ್ನಲ್ಲಿ ಇರುವುದು ಬೇಡ ಹಾಗಿದ್ದರೆ ಮಾತ್ರ ಕಾಲೇಜಿಗೆ ಸೇರಿ ಎಂದು ನಮ್ಮಿಬರ
ಮನೆಯಲ್ಲಿ ಕಟ್ಟಪಣೆ, ಶಿವಮೊಗ್ಗೆಯ ವಸುವಿನ ದೊಡ್ದಪನ ಮನೆಯಲ್ಲಿ ಉಳಿದು ಅಲ್ಲಿಂದ
ಅಡ್ಡಾಡಿಕೊಂಡು ನಿಮ್ಮ ಓದನ್ನು ಮುಂದ್ವರಿಸಲು ಅಡ್ಡಿಯಿಲ್ಲ ಎಂದು ಅವರ ಅಪ್ಪ ಗೆರೆ
ಎಳೆದಂತೆ ಮಾತಾಡಿದ್ದರು, ಆದರೆ ವಸುವಿಗೆ ಅದು ಇಷ್ಟವಿರಲಿಲ್ಲ , ದೊಡ್ಡಪ್ಪ
"ಗುರ್ರಪ್ಪ" ಕಣೆ ನಮ್ಮಪ್ಪನ ಸಿಟ್ಟು ನೀ ನೋಡಿದ್ದೀಯಾ ಇದರ ಹತ್ತು ಪಟ್ಟು ಹೆಚ್ಚು
ದೊಡ್ಡಪ್ಪನ ಸಿಟ್ಟು ಎಂದು ನೀ ಪರಿ ಪರಿಯಾಗಿ ನಿನ್ನಮ್ಮ ಮತ್ತು ನನ್ನಮ್ಮನ ಬಳಿ
ಹೇಳಿದೆ, ನನ್ನಮನ ಮನಸು ಕಲ್ಲು ಸಕ್ಕರೆ ಅವಳ ಮುಂದೆ ಕಷ್ಟವೆಂದು ಬಾಯಿಬಿಟ್ಟರೆ
ಆಕೆಯಿಂದ ಬರುವುದು ಅಕ್ಕರೆ , ಬರಿ ಸಕ್ಕರೆ , ಅಮ್ಮ ಕೂಡಲೇ ತರೀಕೆರೆಯ ನನ್ನ
ಚಿಕ್ಕಮ್ಮನಿಗೆ ಎಲ್ಲ ವಿಷಯ ಸವಿಸ್ತಾರವಾಗಿ , ಹೇಳಿದಳು , ಚಿಕ್ಕಮ್ಮ ಓ ಬರಲಿ ಬಿಡು
ಇಲ್ಲೇ ಇರಲಿ , ಇಲ್ಲಿ ನಾನು ಪುಟ್ಟಿ ಮಾತ್ರ , ಇವರು ಗೊತ್ತಲ್ಲ ಇವರಿಗೆ ಒಂದೂವರೆ
ವರ್ಷದ assignement ಸಿಂಗಾಪೂರ್ ಕೈ ಬೀಸಿ ಕರೆಯಿತೆಂದು ಹೋಗಿದ್ದಾರೆ ನಮಗೂ ಸ್ವಲ್ಪ
ಬೇಸರ ಕಳೆಯುತ್ತೆ , ಇಬ್ಬರಿಗೂ ಪ್ರತ್ಯೇಕ ಕೋಣೆಯಿದೆ ಅವರ ನೆಪದಲ್ಲಾದರೂ ನೀನು ಬಂದು
ಹೋಗಿ ಮಾಡ್ತಿಯಾ ಎಂದಳು .



ಈ ಎಲ್ಲ ವೃತಾಂತವನ್ನು ಇಬ್ಬರ ಮನೆಯಲ್ಲೂ ಸವಿವರವಾಗಿ ತಿಳಿಸಿ, ಎಲ್ಲರನ್ನು
ಒಪ್ಪಿಸಿದಾಯಿತು , ವಸುಂಧರೆಯ ಅಮ್ಮ ಕೂಡ ಹೌದು ಹೌದು , ಹೆಣ್ಣು ಮಕ್ಕಳು , ಹೆಣ್ಣು
ಮಕ್ಕಳ ಕಣ್ ಅಳತೆಯಲ್ಲೇ ಇದ್ದರೆ ಚೆಂದ ಎಂದರು , ಎಲ್ಲ ಬುಕ್ ಬೆಡ್ಡಿಂಗ್ ರೆಡಿ ಮಾಡಿ
ಇಬ್ಬರ ಮನೆಯವರು ಬಸ್ಟ್ಯಾಂಡಿನ ವರೆಗೂ ಬಂದು ಬೀಳ್ಗೊಟ್ಟರು , ಆದರೆ ಇಬ್ಬರ
ಅಪ್ಪಂದಿರು ಬಸ್ಸ್ಟ್ಯಾಂಡ್ ವರೆಗೆ ಮಾತ್ರ ಎಂದವರು ತರೀಕೆರೆ ವರೆಗೂ ಬಂದಿದ್ದರು , ಆಗ
ತಿಳಿಯಿತು ಇದೆಲ್ಲ ಅಮ್ಮನ ಹುನ್ನಾರವೆಂದೇ , ನಾವು ಬೇಡ ನೀವೇ ಹೋಗಿ ಎಂದು ಇಬ್ಬರ
ಮನೆಯಲ್ಲಿ ಮಾತಾಡಿ ಕೊಂಡಂತಿತ್ತು , ನಮ್ಮನು ನಮ್ಮ ಚಿಕ್ಕಮನ ಸುಪರ್ದಿಯಲ್ಲಿ ಒಪ್ಪಿಸಿ
ಕೂಡಲೇ ಅಲ್ಲಿಂದ ನಮಪ್ಪ ಮತ್ತು ವಸುವಿನ ಅಪ್ಪ ಹೊರಟರು , ಹೊರಡುವಾಗ ಚಿಕ್ಕಮನಿಗೆ
ಅಪ್ಪ , ನಾಳೆ ರಾಧಾ ಮತ್ತು ವಸುವಿನ ಅಮ್ಮಂದಿರು ಬರ್ತಾರೆ ಒಂದೆರಡು ದಿನ ಇದ್ದು
ಹೋಗ್ತಾರೆ ಎಂದಾಗಲೇ ಗೊತ್ತಾದದ್ದು ಅಮ್ಮ ಇಲ್ಲಿ ಬರಲಿದ್ದಾಳೆಂದು , ಅಮ್ಮ ನೀ
ಷರ್ಲಾಕ್  ಹೋಮ್ಸ್ ಅಸಿಸ್ಟಂಟ್ ಆಗಿರಬೇಕಿತ್ತು ಅಂದು ಕೊಂಡೆ ಗುಟ್ಟು ಬಿಟ್ಟು ಕೊಡದ
ಗುಟ್ಟಮ್ಮ ನಿಮ್ಮಮ್ಮ , ನಮ್ಮಮ್ಮ ಎಂದಳು ವಸು .



ಒಂದು ದಿನದ ನಂತರ ಇಬ್ಬರ ಅಮ್ಮಂದಿರು ತರೀಕೆರೆಯ ಚಿಕ್ಕಮನ ಮನೆಗೆ ಲಗ್ಗೆಯಿಟ್ಟರು ,
ಕಾಲೇಜು ಪ್ರಾರಂಭವಾಗಲು ಇನ್ನೆರಡು ದಿನವಿತ್ತು , ನೀವು ಕಾಲೇಜಿಗೆ ಹೊರಡಿ, ನೀವು
ಅತ್ತ ಹೋಗೊತ್ತಿದಂತೆ , ನಾವು ಇತ್ತ ಚೆನ್ನಗಿರಿಗೆ , ಹೋಗಲಿದ್ದೇವೆ ಎಂದರು ,
ನನಗ್ಯಾಕೋ ಡೌಟ್ ಇವರೇನಾದರೂ ಸ್ಕೀಮ್ ಹಾಕಿದರೆ ಅಂತ ವಸು, ನಾವು ಕಾಲೇಜಿಗೆ ಹೋದ ಮೇಲೆ
, ನಮ್ಮನ್ನು ಹಿಂಬಾಲಿಸಲಿದ್ದಾರೆ ಎಂಬ ಡೌಟ್ ಎಂದೆ , ವಸು ಇಲ್ಲ ಇಲ್ಲ ಹಾಗೇನಿಲ್ಲ
ಎಂದಳು , ವಸು ಅಂದುಕೊಂಡಂತೆ ಅವರಿಬ್ಬರೂ ಮರಳಿ ಗೂಡಿಗೆ ಸೇರಿದ್ದರು , ಇತ್ತ ಕಾಲೇಜ್
ಕ್ಯಾಂಪಸ್ ಹಸಿರನ್ನು ಹೊತ್ತು ಕೈ ಬೀಸಿ ಕರೆಯುತ್ತಿತ್ತು , ತರೀಕೆರೆಯಿಂದ ಶಂಕರಘಟ್ಟ
ಕೇವಲ 30  ನಿಮಿಷದ ದಾರಿ , ಸುಂದರ ಪ್ರಕೃತಿಯ ಸೊಬಗನ್ನು ಸವಿಯುತ್ತ , ಕಂಗಳಲ್ಲಿ
ಸಾವಿರ ಕನಸನ್ನು ಹೊತ್ತು ಮೈ ಮನಗಳು ಗಮ್ಯದೆಡೆಗೆ ಗುರಿಯಿಟ್ಟಿದ್ದವು



 ಶಂಕರಘಟ್ಟ ಯೂನಿವರ್ಸಿಟಿ ಸ್ಟಾಪ್ ಎಂದು ಕಂಡಕ್ಟರ್ ಕೂಗಿ ಕೊಂಡನು, ನಾನು ವಸು
ಕೆಳಗಿಳಿದು ಇನ್ನೇನು ಕ್ಯಾಂಪಸ್ ನ ಬಳಿ ಹೋಗಬೇಕು , ವಸು ನಡಿಯೇ "ಚಹಾ" ಕುಡಿಯೋಣ
ಇಲ್ಲೆಲ್ಲಾ ಬರಿ ಕಾಫಿ , ಚಹಾ ಕುಡಿಯದ ಹೊರತು ನನ್ನ ತಲೆಯೇ ಓಡಲ್ಲ ಎಂದಳು ,
ಬಸ್ಸ್ಟ್ಯಾಂಡ್ ಗೆ ಆತು ಕೊಂಡಂತೆ ಇತ್ತು ಪುಟ್ಟ ಚಹಾದಂಗಡಿ, ಅದರ ಹೆಸರು "ಮಂಜಣ್ಣ"
ಕ್ಯಾಂಟೀನ್ ಆದಕೆ ಆತು ಕೊಂಡು ಸುಂದರವಾಗಿ ಅಲಂಕರಿಸಿದ್ದ ಪುಸ್ತಕದ ಅಂಗಡಿ , ಅದರ
ಹೆಸರು "ಅಕ್ಷರ" ಅದರ ಅಡಿ ಬರಹ  "ಕೈ  ಮುಗಿದು ಒಳಗೆ ಬಾ ಇದು ಅಕ್ಷರದ ಅಂಗಡಿ, ನಾವು
ಕೊಡುವೆವು ಕಲ್ಲು ಸಕ್ಕರೆ ದಂಡಿ ದಂಡಿ" ಆ ಪುಸ್ತಕದಂಗಡಿಯ ಅಡಿ ಬರಹ ನನ್ನನು ಬಹುವಾಗಿ
ಆಕರ್ಷಿಸಿತ್ತು , ಮಂಜಣ್ಣ ಅಂಗಡಿ "ಟೀ" A1  ಆಗಿತ್ತು , ಅಣ್ಣ ಟೀ ಸೂಪರ್ ಅಂದಳು ವಸು
, ಮಂಜಣ್ಣ ಹೌದ ಅಂದರು , ಆಗ ಗೊತ್ತಾಯಿತು ಸಕಲ ವೃತಾಂತ ಮಂಜಣ್ಣ is  ಫ್ರಮ್
ದಾವಣಗೆರೆ ಥಟ್ ಐಸ್ ವೈ ಟೀ is  ಸೂಪರ್ ಎಂದು , ಹೀಗೆ ಟೀ ಕುಡಿದು ಕಾಲೇಜಿನ
ಅಂಗಳಕ್ಕೆ ಕಾಲಿಟ್ಟೆವು , ನಮ್ಮಿಬರಲ್ಲೂ ಮೊದಲ ದಿನ ಮೌನ , ಆದರೆ ವಸುಂಧರೆಗೆ ತನ್ನ
ಗಡ್ಡದೊರೆ ಕಂಡೊಡನೆ ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿತ್ತು (ಕಳೆದ ಸಂಚಿಕೆಯಲ್ಲಿ
ವಸು ಇದನ್ನು ಹೇಳಿ ಕೊಂಡಿದ್ದಾಳೆ, ನೀಳ್ಗಥೆ ಪ್ರಾರಂಭವಾಗಿರುವುದೇ ಅವಳಿಂದ) ಆಗ ನಾನು
ಮತ್ತೊಮೆ ಉಲಿದಿದ್ದೆ ವಸು ಗಡ್ಡ ಡೇಂಜರ್ ಕಣಮ್ಮಿ , ಇದರ ಮೇಲೆ ನಿನ್ನಿಷ್ಟ ಎಂದು
ಆದರೆ ವಸು ಕೇಳಬೇಕಲ್ಲ .



 ಹೀಗೆ ಕಾಲೇಜು ಬ್ಯಾಕ್ ಟು ತರೀಕೆರೆ , ಮಂಜಣ್ಣ ಟೀ ಶಾಪ್ ಸ್ವಲ್ಪ ಹರಟೆ ಸಾಗುತಿತ್ತು
, ಅಂದೊಂದು ದಿನ ಮಂಜಣ್ಣನ ಅಂಗಡಿಯಲ್ಲಿ ಕುಳಿತು ಇಬ್ಬರು ಟೀ ಹೀರುತ್ತಿದೆವು , ನನ್ನ
ನೋಟ ಬಸ್ಸ್ಟ್ಯಾಂಡ್ ನತ್ತ ಹೊರಳಿತು , ಆಗಂದುಕೊಂಡೆ ಈ ಬಸ್ ಸ್ಟಾಂಡ್ ಗಳ ಹೆಸರು ಬಸ್
ಸ್ಟಾಂಡ್ ಎಂದು ಏಕಿಡಬೇಕು , "ಕನಸಿನೆಡೆಗೆ ಕೊಂಡೊಯುವ" ಕನಸಿನ ಗಾಡಿ ನಿಲ್ಲುವ ಸ್ಥಳ
"ಕನಸು ಸ್ಟಾಂಡ್" ಏಕಾಗಬಾರದು ಎಂದು ವಸುವಿಗೆ ಕೇಳಿದೆ , ಮೊದಲಾದರೆ ಆಕೆ ತಲೆ
ಕೆಟ್ಟಿದೆಯಾ ನೀನು ಎಕನಾಮಿಕ್ಸ್ ಕನ್ನಡ litrature ತರಹ ಮಾತಾಡಬೇಡ
ಅನ್ನುತಿದ್ದಳೇನೋ, ಆದರೆ ಮೊದಲ ಬಾರಿಗೆ ಆಕೆ ಹೌದು ಕಣೆ , ನೀ ಹೇಳಿದ್ದು ಸರಿ ಊರು
ಸಣ್ಣದಿರಬಹುದು , ಆದರೆ ಈ ಊರಿನ ಬಸ್ ಸ್ಟ್ಯಾಂಡ್ನಲ್ಲಿ ಬಂದು ನಿಂತಿರುವ ಕಂಗಳಲಿ
ಒಂದೊಂದು ಕನಸಿದೆ ಎಂಬಂತೆ ಭಾಸವಾಗುತ್ತಿದೆ ನೋಡು , ಅದೋ ಆ ಹುಡುಗಿಯನ್ನು ನೋಡು,
ನಮ್ಮ್ಮನ ಕನಸಿನ ಸಂಪ್ರದಾಯಿಣಿ ಪ್ರೇಮ ಶ್ರಾವಣಿಯಂತೆ ಭಾಸವಾಗುತ್ತಿದಾಳೆ , ಅವಳೆಷ್ಟು
ಸುಂದರವೋ ಅವಳ ಕಂಗಳಲಿ ಪ್ರತಿಫಲಿಸುತ್ತಿರುವ ಕನಸು ಅಷ್ಟೇ ಸುಂದರ , ಅವಳ ಕನಸುಗಳಿಗೆ
ರೆಕ್ಕ ಪುಕ್ಕ ಕೊಟ್ಟರೆ ಅವಳ ಹಿಡಿಯುವರಿಲ್ಲ ನೋಡು ಎಂದಳು , ಆಗ ಬೆರಗಾಗುವ ಸರದಿ
ನನ್ನದು, ನಾನು ಆಗ ಕೇಳಿಯೇ ಬಿಟ್ಟೆ ಮೈ ಡಿಯರ್ ವಸು ನೀನ್ ಯಾವಾಗ kannada
litrature ಆದೆ ಎಂದು , ವಸು ಅದು ಚಮತ್ಕಾರ ಕಣಮ್ಮಿ ಎಂದಳು . ಅಂದು ಮೊಟ್ಟ ಮೊದಲ
ಬಾರಿಗೆ ಎಲ್ಲಿಂದಲೋ ಎರಡು ಕಂಗಳು ನನ್ನನ್ನು ನೋಡಿದಂತೆ ಭಾಸವಾಯಿತು, ಹೆಣ್ತನಕೊಂದು
ವರ , ಹೆಣ್ಣಿಗೆ ಅತೀ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳು ಗಕ್ಕನೆ ಅರ್ಥವಾಗುತ್ತವೆ,
ವಸುವಿಗೆ ಈ ವಿಷಯ ತಿಳಿಸಿದೆ , ಅವಳು ಸುತ್ತಮುತ್ತ ಕಣ್ಣಾಡಿಸಿ ಗಡ್ಡದೊರೆ ಅಲಿಲ್ಲ
ಎಂದು ಖಾತ್ರಿ ಪಡಿಸಿಕೊಂಡು , ಹೌದು ಹೌದು ಎರಡಲ್ಲ ಹತ್ತು ಕಣ್ ನೋಡ್ತಿವೆ "ರಾಧು"
ಎಂದಳು , ನಡಿ ನಡಿ ಎಂದಳು , ಆದರೆ ಮತ್ತೆ ಮತ್ತೆ ನನಗನಿಸಿದ್ದು ಎಲ್ಲೋ ಯಾವುದೊ ಎರಡು
ಕಂಗಳು ನನ್ನ ನೋಡುತ್ತಿವೆ ಎಂದು ಇನ್ನೇನು ಹೊರಡ ಬೇಕು, ಗಮನ ಮತ್ತೆ ಆ ಪುಸ್ತಕದಂಗಡಿಯ
ಸುಂದರ ಹೆಸರು "ಅಕ್ಷರ" ಕೈ ಮುಗಿದು ಒಳಗೆ ಬಾ , ಇದು ಪುಸ್ತಕದ ಅಂಗಡಿ ಎಂಬ ಸಾಲು
ಮತ್ತೆ ನನ್ನನ್ನು ಆವರಿಸಿಕೊಂಡಿತು .



 ಹೀಗೆ ಸಾಗುತ್ತಿತ್ತು , ಅದೇ ಅನಿಸಿಕೆ ಯಾವುದೊ ಎರಡು ಕಂಗಳು , ನನ್ನನು ನೋಡುತ್ತಿವೆ
ಆದರೆ ಹಿಂಬಾಲಿಸುತ್ತಿಲ್ಲ ಎಂಬ ಭಾವನೆ , ಹಿಂಬಾಲಿಸುತ್ತಿಲ್ಲ ಹಿಂಬಾಲಿಸಿದರೆ
ಪ್ರಾಬ್ಲಮ್ ನೋಡಿದರೆ okay  ಅಲ್ಲವ ವಸು ಎನ್ನಲು , ವಸು ಲೇ ನೀನು ಕಂಪ್ಲೀಟ್ ರಾಂಗ್
ಆಗಿದಿಯ , ನಿಜವಾಗಿಯೂ ನಿನಗೆ ತಲೆ ಕೆಟ್ಟಿದೆ  ಮೊನ್ನೆ ಎರಡು ಕಂಗಳು ನೋಡಿದವು ಅಂದೇ
ಇವತ್ತು ಹಿಂಬಾಲಿಸಿಲ್ಲ ಆದರೆ ನೋಡುತ್ತಿವೆ ಅಂತೀಯ do you think ಇದು ಬೆಟರ್ ಸೈನ್?  ಇದು okay
ಅಂತೆಲ್ಲ ಕೇಳ್ತಿಯಾ ಏನಾಗಿದೆ ನಿಂಗೆ ನಡಿ ನಡಿ ಎಂದು ಕೂಗಾಡಿದಳು , ಅಷ್ಟ್ರಲ್ಲಿ
ಅಸ್ಪಷ್ಟ ಸುಂದರ ಕಂಗಳು ಪುಸ್ತಕದಂಗಡಿಯಲ್ಲಿ ಸರಿದಂತಾಯಿತು , ಹಾಗಾದರೆ ನೀ ಪುಸ್ತಕ
ಪರಿಚಾರಕ ನಾ? ............



ಮುಂದುವರೆಯುವುದು



ಕಾರ್ತಿಕ್ ಯಸ್ ಬಾಪಟ್...


Friday, April 3, 2020

"ಅಂತರ್ಧ್ವನಿ" ಭಾಗ 1- ಆಟ ನೋಡಲು ಬಂದವಳ, ನೋಟ ಕದ್ದು ಹೃದಯದೋಟಕ್ಕೆ ಲಗ್ಗೆ ಇಟ್ಟವನೆ.

ಭಾಗ ೧ - ಲಾಕ್ ಡೌನ್ ಸಮಯದಲ್ಲಿ ,  ಹೀಗೊಂದು "ಅಂತರ್ಧ್ವನಿ" ಎಂಬ ನೀಳ್ಗಥೆ , ಸಾಧ್ಯವಾದಷ್ಟು ಬಿಡಿ ಬಿಡಿಯಾಗಿ ಒಂದೊಂದೇ  ಭಾಗವನ್ನುಟೈಪಿಸಿ ನನ್ನ ಬ್ಲಾಗ್ನಲ್ಲಿ ಹಾಗು ಫೇಸ್ ಬುಕ್ ನಲ್ಲಿ ಹಾಕುತ್ತೇನೆ , ಓದಿ ಇಷ್ಟವಾದರೆ ಲೈಕುಗಳ ಬದಲು ಏನಿಷ್ಟವಾಯಿತೆಂದು ತಿಳಿಸಿದರೆ ಇನ್ನಷ್ಟು ಬರೆಯಲು ಪ್ರೋತ್ಸಾಹ ಸಿಕ್ಕೀತು - ಮನೆಯಲ್ಲೇ ಇರಿ ಇದು ಬಂಧನದ ಸಮಯವಲ್ಲ , ಅನುಬಂಧನದ ಸಮಯ ...


ಅಂತರ್ಧ್ವನಿ - 

ಆಟ ನೋಡಲು ಬಂದವಳ, ನೋಟ ಕದ್ದು ಹೃದಯದೋಟಕ್ಕೆ ಲಗ್ಗೆ ಇಟ್ಟವನೆ.

ಅದು ಚೆನ್ನಗಿರಿಯ , ಚೆನ್ನಗಿರಿ ತಾಲೂಕಿನ ಅಂತರ ಕಾಲೇಜು ಕ್ರೀಡಾ ಸ್ಪರ್ಧೆ , ಅಂದು
ಮುಂಜಾನೆಯಿಂದಲೇ, ಅಮಿತೋತ್ಸಹದಿಂದ ನಾವೆಲ್ಲರೂ ಕಾಲೇಜಿನಿಂದ ಹೊರಡುವಾಗ ಮೈಮನಗಳು "
ಬಾರ್ ಬಾರ್ ಹೊ , ಬೋಲೋ ಯಾರ್ ಹೊ ಅಪನೇ ಜೀತ್ ಹೊ, ಊನಕಿ ಹಾರ್ ಹೊ , ಕೊಹಿ ಹಮ್ ಸೆ
ಜೀತ್ ನ ಪಾಏ ಚಲೋ ಚಲೋ ಚಲೇ ಚಲೋ" ಎಂದು ಗುನುಗುತ್ತಿತ್ತು , ನನ್ನ ತಂಡದ ಸ್ಪರ್ಧೆ ಖೋ
ಖೋ ಆಟದ ಎಲ್ಲ ಹಂತವನ್ನು ಮುಗಿಸಿ ಕೊನೆಯ ಎರಡು ಹಂತದ ಪಂದ್ಯಕ್ಕೆ ತೇರ್ಗಡೆಯಾಗಿತ್ತು
, ಇನ್ನು ಸಾಕಷ್ಟು ಸಮಯವಿದೆಯಲ್ಲ ಎಂದು ನಮ್ಮ ಕಾಲೇಜಿನ ಹುಡುಗರನ್ನು ಪ್ರೋತ್ಸಾಹಿಸಲು
"ವಾಲಿಬಾಲ್" ತಂಡದ ಆಟ ನೋಡಲು ಬಂದೆವು , ಅಂದಿನ ಆ ಒಂದು ಆಟ ನನ್ನ ಹೃದಯದ ಓಟವನ್ನು
ಬದಲಿಸಬಲ್ಲದೆಂದು ನಾನಂದುಕೊಂಡಿರಲಿಲ್ಲ .

ಆಟ ಶುರುವಾಯಿತು , ಸಹಜವಾಗಿಯೇ ನನ್ನ ತಂಡದವರ ಪರ "ಚೀರ್ಸ್" ಶುರುವಾಗಿತ್ತು, ಲಲನೆಯರ
ಚೀರ್ಸ್ ಗೆ ಮನಸೋತ ಹುಡುಗರ ಗುಂಪು ರಣರಂಗವೇನೋ ಎಂಬಂತೆ ಪೈಪೋಟಿಗೆ ಬಿದ್ದರು. ಆದರೆ
ಅದೆಲ್ಲಿದೆ ಗಡ್ಡವರ್ಮನೆ , ನಮ್ಮ ತಂಡದ ಅತ್ಯುತ್ತಮ್ಮ ಸರ್ವ್ ಗೆ ಎದುರಾಳಿ
ತಂಡದವನಾದರೂ ಶಭಾಷ್ ಶಭಾಷ್ "what a serve" beauty , guys look at that, this
is what I was telling  ಎಂದು ನೀನು ಇಂಗ್ಲಿಷ್ನಲ್ಲಿ ಉಲಿಯುತಿರೆ, ಆಟ ನೋಡಲು
ಬಂದವಳ ನೋಟ ಕದಿಯುವ ಮುನ್ಸೂಚನೆ ಕೊಟ್ಟಿದ್ದೆ, ನನಗೆ ಗಡ್ಡವೆಂದರೆ ಅಲೆರ್ಜಿ , ಗಡ್ಡ
ಬಿಟ್ಟವರ ಕಂಡರೆ ನಾನು ಗಾವುದ ಗಾವುದ ದೂರ, ಅದೇನೋ ಗಡ್ಡವೆಂದರೆ ಸಿಟ್ಟು,
ಗಡ್ಡವೆಂದರೆ ದುಗುಡ, ಗಡ್ಡವೆಂದರೆ ಭಯ , ಆದರೆ ಅಂದು ನಿನ್ನ ನೋಡಿದಾಗಂದಿನಿಂದ ಈ
ಹೃತಿಕ್ , ಆಮಿರ್ ಖಾನ್, ರಣಭೀರ್, ಶಾರುಖ್ ಎಂಬ ಕ್ಲೀನ್ ಷೇವ್ಡ್ boys ಗಳನ್ನೂ
ನಿನ್ನ ಮುಂದೆ ನಿವಾಳಿಸಿ ತೆಗೆಯಬೇಕೆಂದೆನಿಸುತ, ಅಂದು ಆ ವೆರೆಗಿದ್ದ ಗಡ್ಡದ ಮೇಲಿನ
ವಿರೋಧಾಭಾಸಗಳೆಲ್ಲ ಮಾಯವಾಗಿ ಗಡ್ಡವೆಂದರೆ ಸ್ಟ್ರಾಂಗ್, ಗಡ್ಡವೆಂದರೆ ಪೌರುಷ,
ಗಡ್ಡವಿದ್ದರೇನೇ ಹುಡುಗ ಎಂದೆನಿಸಿತು, ನಾನು ನಾನಾಗಿರದೆ ನಿನ್ನ ತಂಡದ ಸಂಭ್ರಮಕ್ಕೂ
ದನಿಯಾಗತೊಡಗಿದೆ, ಆಗ ಉಲಿದಳು ರಾಧಿಕೆ "ವಸು" ಗಡ್ಡ ಡೇಂಜರ್ ಕಣಮ್ಮಿ , ಗಡ್ಡ
ಬಿಟ್ಟವರು ಕಿಲಾಡಿಗಳು ನಂಬಬಾರದು ಎಂದು, ನಾನು ಆಕೆಯನ್ನು ಛೆ ಛೆ ಆಟ ಅಷ್ಟೇ ಕಣೇ
ಸುಮ್ಮನೆ ನಮ್ಮ ಹುಡುಗ್ರು ರೊಚ್ಚಿಗೆದ್ದು ಆಟವಾಡಲಿ ಎಂದು ಅವರಿಗೆ "ಚೀರ್ಸ್" ಎಂದೇ,
ರಾಧಿಕೆ ನನ್ನ ಮನದ ತುಮುಲಗಳು ಅರ್ಥವಾಗದಷ್ಟು ದಡ್ದಳಲ್ಲ , ಆಯ್ತು ಮುಂದುವರೆಸು ಎಂದು
ಕುಹುಕ ನಗೆ ಬೀರಿದಳು , ಅಂದು ಮೊದಲ ಬಾರಿ ನನ್ನ ಮೊಗ ಕೆಂಪೇರಿ , ನಾಚಿ ನೀರಾಗಿತ್ತು,
ಅಲೆಲೆ ವಸು ಎಂದು ನನಗೆ ನಾನೆ ಹೇಳಿಕೊಂಡಿದ್ದೆ.

ನನ್ನೀ ನೋಟ ಎಗ್ಗಿಲದೆ ಮುಂದ್ವರಿದಿತ್ತು , ನನ್ನ ಮೇಲೆ ಆ ವರುಣನಿಗೆ ಏನು ಸಿಟ್ಟೋ
ಎಂಬಂತೆ ಅಲ್ಲಿಯವರೆಗೂ ಇಲ್ಲದ ಮಳೆ ಧೋ ಎಂದು ಸುರಿಯಿತು, ಸ್ನೇಹಿತರೆಲ್ಲರೂ ಧಿಕ್ಕಾ
ಪಾಲಾಗಿ ಓಡುತ್ತಿರೆ ನಾನು ಮಾತ್ರ ಅಲ್ಲೇ , ಆದರೆ ನೀನೆ ಓಡಿ ಹೋಗಲು ನಿಂತಾಗ
ನಾನೋಡದಿದ್ದರೆ ಹೇಗೆ? , ಹೀಗೆ ನೀ ಓಡುತ್ತಿದೆ , ಒಮ್ಮೆಲೇ ನೀ "ವಸು" ಎಂದೇ ,
ಹೃದಯದಲ್ಲಿ ನೂರ್ ವೀಣೆ ಮೀಟಿದಂತಾಯಿತು , ಹಿಂತಿರುಗಿ ನಾ ನೋಡಲು ಕಣ್ಣಲೇ ಏನೆಂದು
ಕೇಳಲು ಅಯ್ಯೋ ಸಾರಿ ನೀವಲ್ಲ ನನ್ ದೋಸ್ತು ಕಣ್ರೀ ವಸುಧೇಂದ್ರ ಎಂದೇ , ಆಗ ನಾನು
ಮನಸಲ್ಲೇ ಯಾವನ್ ಅವ್ನು ವಸುಧೇಂದ್ರ  ಮನಸಲ್ಲೇ ಶಪಿಸಿ ಮಳೆಯಿಂದ ಇನಿತು ದೂರ ಸರಿದೆ.

ಧುತ್ತೆಂದು ಬಂದ ಮಳೆ ವಿರಾಮ ತೆಗೆದುಕೊಂಡಿತು, ಆಟ ಮುಂದ್ವರಿಯಿತು, ನೋಟ ಕ್ಷಣ
ಕ್ಷಣಕ್ಕೂ ನೂರ್ಮಡಿಯಾಗುತ್ತಿತ್ತು , ಕೊನೆಗೆ ನಿನ್ನ ತಂಡವೇ ಗೆದ್ದಿತು, ಆದರೆ ನಿನಗೆ
ಕಿಂಚಿತ್ ಹಮ್ಮಿಲ್ಲ ಬಿಮ್ಮಿಲ್ಲ , ನನ್ನ ತಂಡದವರಿಗೆ ನಿನ್ನ ಕಾಂಪ್ಲಿಮೆಂಟ್
ಮುಂದುವರೆದಿತ್ತು, ನಿನ್ನ ಕಾಲೇಜಿನ ಲಲನೆಯರು "ಸಮೀರ್" ಇಟ್ ವಾಸ್ ರಿಯಲಿ ಗುಡ್ ಗೇಮ್
ಎಂದು ಕೈ ಕುಲುಕುತ್ತಿದರು, ಆದರೆ ನೀನು ಮಾತ್ರ ಹೌದ್ರಿ, ಥಾಂಕ್ ಯು  ಥಾಂಕ್ ಯು
ಅನ್ನುತ್ತಿದೆ.  ಆದರೆ ಅಂದು ಮೊದಲಬಾರಿಗೆ ನನ್ನಲಿದ್ದ ಹೆಣ್ತನದ ಪೋಸ್ಸ್ಸಿವೆನೆಸ್ಸ್
ಜಾಗ್ರತವಾಗಿತ್ತು, ಆದರೂ ಪರವಾಗಿಲ್ಲ ಸಮೀರ್ ಅಂಡ್ ವಸುಂಧರಾ ಚೆನ್ನಾಗಿದೆ ಹೆಸರು
ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಿದೆ, ಅಷ್ಟ್ರಲ್ಲಿ ಅಚಾನಕ್ಕಾಗಿ ನಮ್ಮ ಕಂಗಳು
ಎರಡನೇ ಬಾರಿ ಘಾಡವಾಗಿ ಸಂಧಿಸಿದ್ದವು , ನಿನ್ನ ಕಂಗಳಲ್ಲಿ ಪ್ರೀತಿ ಮೊಳಕೆಯೊಡೆದು
ನಕ್ಷತ್ರ ಮೂಡುವ ಮುನ್ಸೂಚನೆ ಕಾಣುತ್ತಿತ್ತು.

ಇದೆಲ್ಲದರ ನಡುವೆ ನಮ್ಮ ಆಟ ಶುರುವಾಯಿತು, ಆಟದಲ್ಲಿ ಮಗ್ನನಾಗಿದ್ದೆ ಆದರೆ ಆಟದಲ್ಲಿ
ಖೋ ಖೋ ಎಂದು ಖೋ ಕೊಡುವಾಗ ಬಾಯಿ ತಪ್ಪಿ "ಸಮೀರ್" "ಸಮೀರ್" ಎಂದಿದ್ದೆ, ಆಗ ರಾಧಿಕೆ
ಮತ್ತೊಮೆ ಉಲಿದಿದ್ದಳು "ವಸು" ಆವಾಗಲೇ ಹೇಳ್ದೆ ಗಡ್ಡ ಡೇಂಜರ್ ಬೇಡ , ಮತ್ತೆ ನಾ
ಭ್ರಮಾ ಲೋಕದಿಂದ ಹೊರಬಂದು ಆಟದಲ್ಲಿ ಮಗ್ನನಾಗಿ ಖೋ ಖೋ ಚಾಂಪಿಯನ್ ಆಗಿ ಹೊರ
ಹೊಮ್ಮಿದ್ದೆವು, ಅಂದು ನಾನು ಮತ್ತು ನಮ್ಮ ತಂಡ  ಆಟದಲ್ಲಿ ಗೆದ್ದಿದ್ದೆವು, ಆದರೆ
ಗೆಳೆಯ ನಾ ನಿನ್ನ ನೋಟಕ್ಕೆ ಸೋತಿದ್ದೆ, ಕೊನೆಗೆ ಎಲ್ಲವು ಮುಗಿಯಿತು, ಕ್ರೀಡಾಕೂಟ
ಮುಗಿದು ಹೊರಡಬೇಕು, Mr ಸಮೀರ್ ದಿಸ್ ಇಸ್ ವಸುಂಧರಾ ಫ್ರಮ್ ಎಂದು
ಪರಿಚಯಿಸಿಕೊಳ್ಳಬೇಕೆಂದೆನಿಸಿತು, ಆದರೆ ಅಂದಿನವರೆಗೂ ಇರದ ಸಂಕೋಚ ಅಂದು ನನ್ನನು
ಅಪೋಷನ್ ತೆಗೆದು ಕೊಂಡಿತ್ತು, ಆಗಂದುಕೊಂಡೆ ಅದೇ ಅಲ್ಲವೇ ಹೆಣ್ತನದ ಕುರುಹು ಎಂದು,
ನನ್ನ ಪಾಡಿಗೆ ನಾನು ಹೊರಟಿದ್ದೆ , ನೀನು ನಿನ್ನ ಪಾಡಿಗೆ ಹೊರಟಿದ್ದೆ , ಮತ್ತೆಂದಿಗೂ
ನಾವು ಸಂಧಿಸುವುದಿಲ್ಲವೇನೋ ಎಂಬ ಭಾವನೆ ನನನ್ನು ಖಿನ್ನಳನ್ನಾಗಿಸಿತ್ತು , ಆದರೆ ಪರಮ
ನಾಸ್ತಿಕಳಾದ ನನ್ನ ಕಿವಿಯಲ್ಲಿ "ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು
ಇದಕೆ ಸಂಶಯ ಬೇಡ" ಎಂಬ ದಾಸರ ಪದ ಗುನುಗಿದಂತಾಯಿತು , ಈ ಗುನುಗು ಭರವಸೆಯ ಬೆಳಕನ್ನು
ಮೂಡಿಸಿತ್ತು, ಆದರೆ ನೀ ಸಿಗದಿದ್ದರೆ ಎಂಬ ವಿರಹಾನುಭಾವ ಕಾಡುತ್ತಲೇ ಇತ್ತು,
ದಿವಸಗಳುರುಳುತ್ತಾ ಸಾಗಿತ್ತು , ಅಂದೊಂದು ದಿನ ಅಮ್ಮ ನಡಿ ರಾಯರ ಆರಾಧನೆಯಾಗುತ್ತಿದೆ
ಹೋಗಿ ಬರೋಣ ಎಂದಾಗ, ಅಂದಿನವರೆಗೂ ಇಲ್ಲ ನೀ ಹೋಗೆ ಎನ್ನುತಿದ್ದವಳು ಅಮ್ಮನೊಂದಿಗೆ
ಹೆಜ್ಜೆ ಹಾಕಿದ್ದೆ, ರಾಯರೊಂದಿಗೆ ನವನೀತ ಚೋರನ ದರ್ಶನವು ಆಗಿತ್ತು, ಆಗ ಕೇಳಿಸಿತು
ನೋಡು ಭಕ್ತಾದಿಗಳು ಮುಂದೆ ಬನ್ನಿ, ಮುಂದೆ ಬನ್ನಿ, ಎಂಬ ಕೂಗು, ಅದು ಅಂದಿನ "ವಾಟ್ ಆ
ಸರ್ವ್" ಎಂಬ ಕೂಗಿನಷ್ಟೇ ಘಾಡವಾಗಿತ್ತು , ಕತ್ತರಳಿಸಿ ನೋಡಿದೆ ಅಲ್ಲಿ ನೀನು!
ಆಗಂದುಕೊಂಡೆ ಅಂದು ನನ್ನ ಕಿವಿಯಲ್ಲಿ ದಾಸರ ಪದ ಗುನುಗಿದಕ್ಕೂ ಇಂದು ನೀ
ಇಲ್ಲಿರುವುದಕ್ಕೂ ಏನು ನಂಟು? , ಅದಿರಲಿ ಅಮ್ಮ ನನ್ನ ಜೀವನ ಪಾವನಯಾಯಿತೆಂದೆ,
ಅಮ್ಮನಿಗೆ ಆಶರ್ಯ!!! , ನೀನು ಭಕ್ತಾದಿಗಳು ಮುಂದೆ ಬನ್ನಿ ಮುಂದೆ ಬನ್ನಿ ಎನ್ನುತ್ತಲೆ
ಇದ್ದೆ , ನಾ ಮುಂದೆ ಮುಂದೆ ಬರುತ್ತಲೇ ಇದ್ದೆ ಆದರೆ ನೀ ಮಾತ್ರ ಭಕ್ತಾದಿಗಳನ್ನ
ನೋಡುತ್ತಿದೆ, ನಿನ್ನ ಭಕ್ತೆಯನ್ನು ನೀ ಮರೆತಿದ್ದೆ, ಆದರೂ ಕಣ್ ನೋಟಗಳು ಕೊನೆಗೂ
ಸಂಧಿಸಿ ಬಿಟ್ಟವು , ನೀನು ಒಂದು ಕ್ಷಣ ಒಹೋ "ಸ್ಪೋರ್ಟ್ಸ್" ಎಂದು ಹಲ್ಲು ಗಿಂಜಿ
ಮಾತಾಡಲು ನಿಲ್ಲುವೆ ಅಂದು ಕೊಂಡೆ ಆದರೆ ನೀನಂತವನಲ್ಲ , ಬರೇ ಒಂದು ಮುಗುಳ್ನಗೆ , ಆ
ನಗೆಯಲ್ಲೇ ಓ ಗೊತಾಯ್ತು ಗೊತಾಯ್ತು ಮುಂದೆ ಬನ್ನಿ ಮುಂದೆ ಬನ್ನಿ ಎನ್ನುತ್ತಿದೆ ,
ಅಂದಿನಿಂದ ರಾಯರ ಮಠಕ್ಕೆ ಪ್ರತಿ ಗುರುವಾರ ನನ್ನ ರುಜುವಾತು ಮುಂದುವರೆಯಿತು , ಆದರೆ
ಅಲ್ಲಿ ನೀನಿಲ್ಲ , ಆದರೇನು ಗುರುರಾಯರ ಮೇಲಿನ ಶ್ರದ್ಧಾ ಭಕ್ತಿ ಕಿಂಚಿತ್ತೂ
ಕಮ್ಮಿಯಾಗಲಿಲ್ಲ

ಇನ್ನು ನೀ ಸಿಗಲಾರೆಯೇನೋ ಅಂದು ಕೊಂಡೆ , ಆದರೆ ನೀನೆಂಬ ಜೀವೋನ್ಮಾದ ನನ್ನಲಿ
ಜೀವಂತವಾಗೇ ಇತ್ತು, ಸೇವಾ ಫಲಕದಲ್ಲಿ (ರಾಯರ ಮಠದ) ಎಲ್ಲಿಯಾದರೂ ಇಂದು ಪಂಚಾಮೃತ
ಅಭಿಷೇಕ "ಸಮೀರ್" ಅವರಿಂದ ಎಂದು ಬರೆದಿದೆಯೇನೋ
ಎಂದು ಹುಡುಕುತ್ತಿದೆ, ಹೀಗೆ ಜೀವನದ ಬಂಡಿ ಸಾಗುತಿತ್ತು ನನ್ನ ಬಿ ಏ ಕೋರ್ಸ್
ಮುಗಿದಿತ್ತು , ಕುವೆಂಪು ವಿಶ್ವ ವಿದ್ಯಾಲಯ ಕೈ ಬೀಸಿ ಕರೆಯುತ್ತಿತ್ತು , ವಸುಂಧರಾ ,
ಎಂ ಏ ಇನ್ ಎಕನಾಮಿಕ್ಸ್ ಎಂದು ಅಮ್ಮ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದಳು, ತರಗತಿಗಳು
ಪ್ರಾರಂಭವಾಗಿದ್ದವು , ಎಲ್ಲರು ನಮ್ ನಮ್ಮ ಪರಿಚಯವನ್ನು ಸ್ನಾತಕೋತ್ತರ ಪದವಿಯ
ಗುರುಗಳಿಗೆ ಹೇಳಿ ಕೊಳ್ಳುತಿದ್ದವು , ಅದೆಲ್ಲಿಂದ ಬಂದೆಯೋ ನಾನು "ಸಮೀರ್" ನನಗೆ
"ತೇಜಸ್ವಿ" ಬಹಳ ಇಷ್ಟ ಹೀಗೆ ನಿನ್ನ ಪರಿಚಯ ಸಾಗುತಿತ್ತು , ನನ್ನ ಕಣ್ಗಳಲ್ಲಿ ಸಾವಿರ
ನವಿಲುಗಳು ರೆಕ್ಕೆ ಬಿಚ್ಚಿ ಕುಣಿಯುತ್ತಿದವು , ಮನಸು ವ್ಹಾ ರೇ ಮೇರೇ ಚಿಮಣಿ
ಕಾಲೇಜಿಗೆ ಬಂದವನು ನೊಟ್ಸ್ ಗೆ ಬಾರನೆ ಎಂದೆಂದಿತು 

ಮುಂದುವರೆಯುವುದು...

ಕಾರ್ತಿಕ್ ಎಸ್ ಬಾಪಟ್