Saturday, March 18, 2017

ಚುನಾವಣೆಗಳೆಂಬುದು ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಗಳಲೊಂದು ನಿಜ ಆದರೆ ಈ ಹಬ್ಬಗಳು ಪದೇ ಪದೇ ಬಂದೆರಗಿದರೆ ಆ ಹಬ್ಬಗಳನ್ನು ಆಚರಿಸುವ ಮಾನಸಿಕ ಮತ್ತು ಆರ್ಥಿಕ ಚೈತನ್ಯವಿರಬೇಕಲ್ಲವೇ?

ಇನ್ನೇನ್ನು ಕೆಲವೇ ದಿನಗಳಲ್ಲಿ ಪಂಚ ರಾಜ್ಯಗಳ ಚುನಾವಣೆ ಮುಗಿದು ಸರ್ಕಾರ ರಚನೆಯ ಪ್ರಕ್ರಿಯೆ ಪ್ರಾರಂಭ್ವಾಗುತ್ತದೆ , ಅಷ್ಟರ ಮಟ್ಟಿಗೆ ರಾಜಕೀಯ ಪಕ್ಷಗಳಿಗೆ ಹಾಗು ಕೆಲವು ರಾಜ್ಯಗಳ ಗದ್ದುಗೆಯನ್ನೇರಿರುವ ರಾಜಕೀಯ ಪಕ್ಷಗಳಿಗೆ ನಿರಾಳ  ಆದರೆ ಹಾಗೆ ಬಂದು ಹೀಗೆ ನೋಡುವಷ್ಟರಲ್ಲಿ ಅಂದರೆ ಇನ್ನೊಂದು ೧೦ ತಿಂಗಳು ಕಳೆದರೆ ಗುಜರಾತ್ ವಿಧಾನಸಭೆಯ  ಚುನಾವಣೆಗೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಸಿದ್ಧವಾಗಬೇಕು, ತದನಂತರ ನಾಗಾಲ್ಯಾಂಡ್ , ಕರ್ನಾಟಕ, ಮೇಘಾಲಯ, ಹಿಮಾಚಲ ಪ್ರದೇಶ, ತ್ರಿಪುರ ಮತ್ತು ಮಿಜೋರಾಂ ಹೀಗೆ ೨೦೧೮ರ ವಿಧಾನಸಭಾ ಚುನಾವಣೆಗೆ ಅಣಿಯಾಗಬೇಕು , ಇದರ ಮಧ್ಯೆ ಕೆಲವು ರಾಜ್ಯಗಳಲ್ಲೇನಾದರೂ ವಿಧಾನಸಭೆಯ ಅವಧಿಗೂ ಮುಂಚೆ ವಿಸರ್ಜನೆ , ವಿಶ್ವಾಸ ಮತದ ಕೊರತೆ ಈ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು ಕಂಡು ಬಂದಲ್ಲಿ ಆ ರಾಜ್ಯಗಳು ಕೂಡ ಚುನಾವಣೆಗೆ ಸಿದ್ದಗೊಳ್ಳುವ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಹಾಗೆ ನೋಡಿದರೆ ಮೇಲ್ನೋಟಕ್ಕೆ ಕಂಡು ಬಂದಂತೆ ಪ್ರತಿ ವರ್ಷವೂ ಸರಿ ಸುಮಾರು ನಾಲ್ಕರಿಂದ ಆರು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಲೇ ಇದೆ ಎಂದು ಹೇಳಬಹುದು.

ಈ ಮೇಲ್ಕಂಡ ಅಂಶಗಳನ್ನು ಗಮನಿಸಿದಾಗ ಹೀಗೆ ವರ್ಷದುದ್ದಕ್ಕೂ ಒಂದಲ್ಲ ಒಂದು ರಾಜ್ಯಗಳಲ್ಲಿ ಚುನಾವಣೆ ನಡೆಸುವದಕ್ಕಿಂತ, ವಿಧಾನಸಭೆಗೂ ಲೋಕಸಭೆಗೂ ಏಕ ಕಾಲಕ್ಕೆ ಚುನಾವಣೆ ನಡೆದರೆ ಹೇಗೆ ಎಂಬ ಪ್ರಸ್ಥಾಪನೆಯಾದರೆ ಆಶ್ಚರ್ಯಪಡಬೇಕಾಗಿಲ್ಲ. ಅದರಂತೆ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಯವರು ಕೂಡ "ಏಕ ಕಾಲಕ್ಕೆ" ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಈ ಅಂಶದ ಚರ್ಚೆಯ ಬಗ್ಗೆ ಹೆಚ್ಚು ಒಲವು ತೋರಿಸಿದ್ದಾರೆ. ಚುನಾವಣಾ ಆಯೋಗವು ಕೂಡ ಎಲ್ಲಾ ರಾಜಕೀಯ ಪಕ್ಷಗಳೊಡನೆ ಹಾಗು ಇತರೆ ಸಂಸ್ಥೆಗಳೊಡನೆ ಚರ್ಚಿಸಿ ಮುಂದಡಿ ಇಡುವ ಲಕ್ಷಣಗಳು ಗೋಚರಿಸುತ್ತಿವೆ ಆದರೆ ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದ ಅಭಿಪ್ರಾಯ ಎಂಬ ಅಂಶವೇ ಬಹು ದೊಡ್ಡ ಸವಾಲು.

ಹಾಗಾದರೆ ಪದೇ ಪದೇ ಅಥವಾ ಬೇರೆಯದೇ ಹಂತದಲ್ಲಿ ಅಂದರೆ ವಿಧಾನಸಭೆಯ ಕಾಲ ಮಿತಿಗನುಸಾರವಾಗಿ ಚುನಾವಣೆಗಳು ಬೇಡವೆಂಬ ಕೂಗು ಕೇಳಲು ಕಾರಣವಾದ ಅಂಶಗಳು ಅಥವಾ ಕಾಲ ಮಿತಿಗನುಸಾರವಾಗಿ ಚುನಾವಣೆಗಳಿಂದಾಗಿ ಬಂದೊದಗುವ ಅನಾನುಕೂಲತೆಗಳು ಏನೆಂದು ನೋಡಿದಾಗ ಕಂಡ ಅಂಶಗಳು ಇಂತಿವೆ :
- ಅಘಾದವಾದ ಖರ್ಚುವೆಚ್ಚ
- ಚುನಾವಣೆ ಸಮಯದಲ್ಲಿ ಹೇರಲಾಗುವ ನೀತಿ ಸಂಹಿತೆಯಿಂದಾಗಿ ಹಲವಾರು ಕೆಲಸಗಳು ಮತ್ತು ಹೊಸ ಯೋಜನೆಗಳಿಗೆ ಪೆಟ್ಟು.
- ಅತೀ ಅಗತ್ಯ ಸೇವೆಗಳ ಪಾಲನೆಗಳಲ್ಲಿ ಉಂಟಾಗುವ ವ್ಯತ್ಯಯ
- ಶಾಲಾ ಕಾಲೇಜುಗಳಲ್ಲಿ ಮತ್ತು ಇತರೆ ಸರ್ಕಾರೀ ಕಚೇರಿಗಳಲ್ಲಿ ತೊಡಗಿಸಿಕೊಂಡ ಮಾನವ ಸಂಪನ್ಮೂಲದ ಮೇಲೆ ಹೊರೆ.
- ಪದೇ ಪದೇ ನಡೆಯುವ ಚುನಾವಣೆಗಳಿಂದಾಗಿ ಸರ್ಕಾರ ದೂರಾಲೋಚನೆಯಿಂದ ಕಾರ್ಯಪ್ರವರ್ತರಾಗದೆ, ತತಕ್ಷಣದ ನಿರ್ಧಾರದಿಂದಾಗುವ ಅನಕೂಲಗಳ  ಬಗ್ಗೆ ಕಾರ್ಯಪ್ರವರ್ತರಾಗುವುದು ಮತ್ತು ಚುನಾವಣೆ ಉದ್ದೇಶಿತ ಜನಪ್ರಿಯ ಯೋಜನೆಗಳ ಬಗ್ಗೆ ಮಾತ್ರ ಒಲವು
- ರಾಜ್ಯ ಬೊಕ್ಕಸಕ್ಕೆ ಅಪಾರ ಹೊರೆ ಮತ್ತು ಆಡಳಿತ ಒತ್ತಡ
- ಚುನಾವಣೆಯ ದಿನಾಂಕ ಘೋಷಣೆಯೊಂದಿಗೆ ಹೊಸ ಯೋಜನೆಗಳ ಘೋಷಣೆಯು ಮಾದರಿ ನೀತಿ ಸಂಹಿತೆಯಿಂದಾಗಿ ನಿಲ್ಲುವಂತಾಗುತ್ತದೆ ಮತ್ತು, ಚುನಾವಣಾ ಆಯೋಗದ ಅನುಮತಿಯಿಲ್ಲದೆ ಯಾವುದೇ ಹೊಸ ನೇಮಕಾತಿಗಳನ್ನು, ವರ್ಗಾವಣೆಗಳನ್ನು ಮಾಡಲು ಸಾಧ್ಯವಿಲ್ಲ, ಈ ಅಂಶಗಳು ಸ್ವಲ್ಪ ಮಟ್ಟಿಗಾದರೂ ಸರ್ಕಾರದ ಕೆಲಸ ಕಾರ್ಯಗಳನ್ನು ತಡೆಯುತ್ತವೆ.

ಹೀಗೆ ಪಟ್ಟಿ ಒಂದೋ ಎರಡೂ ಬೆಳೆಯುತ್ತಲೇ ಹೋಗುತ್ತದೆ, ಆದರೆ ಏಕ ಕಲಾಕ್ಕೆ ಚುನಾವಣೆ ಎಂಬುದು ಮುಳ್ಳಿನ ಹಾಸಿಗೆಯ ಮೇಲೆ ನಡೆದಂತೆ ಏಕೆಂದರೆ , ಮೊದಲನೆಯ ಅತಿ ದೊಡ್ಡ ಸವಾಲೆಂದರೆ ಎಲ್ಲ ರಾಜಕೀಯ ಪಕ್ಷಗಳನ್ನು ಈ ನಿಟ್ಟಿನಲ್ಲಿ ಒಂದು ಗೂಡಿಸುವುದು ಒಂದು ಅವಾಸ್ತವದ  ಅಂಶವೇ  ಸರಿ.ಸಾಮಾನ್ಯವಾಗಿ ಕೇಂದ್ರದಲ್ಲಿ ಯಾವ ಪಕ್ಷಕ್ಕೆ ಮತದಾರ ಒಲವು ತೋರುತ್ತಾನೋ ರಾಜ್ಯದಲ್ಲೂ ಅದೇ ಪಕ್ಕ್ಷಕ್ಕೆ ಒಲವು ತೋರುತ್ತಾನೆ (ಕರ್ನಾಟಕ ಹೊರತು ಪಡಿಸಿ) ಆದ್ದರಿಂದ ಪ್ರಾದೇಶಿಕ ರಾಜಕೀಯ ಪಕ್ಷಗಳು ಇದನ್ನು ಒಪ್ಪಲಾರರು.

ಇತ್ತೀಚೆಗೆ ನೀತಿ ಆಯೋಗ ಏಕ ಕಾಲಕ್ಕೆ ಚುನಾವಣೆಯ ಸವಾಲುಗಳನ್ನು ಈ ರೀತಿ ಪರಾಮರ್ಶಿಸಿದಾಗ ಕಂಡಂತ ಅಂಶಗಳೆಂದರೆ: ಈಗಾಗಲೇ ಸರ್ಕಾರವನ್ನು ನಡೆಸುತ್ತಿರುವ ಸರ್ಕಾರಗಳ ಅವಧಿಯನ್ನು ಏಕ ಕಾಲಕ್ಕೆ ಚುನಾವಣೆಗೋಸ್ಕರ ಮೊಟಕು ಗೊಳಿಸಬೇಕೇ ಅಥವಾ ಹೆಚ್ಚಿಸಬೇಕೆ?, ಹಾಗೆ ಏಕ ಕಾಲಕ್ಕೆ ಚುನಾವಣೆ ನಡೆದು ಒಂದೊಮ್ಮೆ ಸಮ್ಮಿಶ್ರ ಸರ್ಕಾರ ಆಡಳಿತದ ಸೂತ್ರ ಹಿಡಿದು ನಿಗದಿತ ಸಮಯದ ಮುಂಚೆ ಸರ್ಕಾರ ಅಧಿಕಾರ ಕಳೆದು ಕೊಂಡರೆ ಏನು ಮಾಡುವುದು, ಲೋಕ ಸಭಾ ಮತ್ತು ವಿಧಾನ ಸಭೆಯ ಅವಧಿಯನ್ನು ಪೂರ್ವ ನಿರ್ಧರಿಸಿಬಿಡುವಿದೆ, ಈಗ ನಮ್ಮ ನಂಜನಗೂಡಿನಲ್ಲಿ ಆದಂತ ಬೆಳವಣಿಗೆ ಆದರೆ ಹೇಗೆ ಉಪಚುನಾವಣೆಯನ್ನು ನೆರವೇರಿಸುವುದು , ಈ ರೀತಿಯಾಗಿ  ಏಕ ಕಾಲಕ್ಕೆ ಚುನಾವಣೆಯನ್ನು ಕಾರ್ಯಗತ ಗೊಳಿಸಿದಲ್ಲಿ ಬಂದೊದಗಬಹುದಾದ ಸಂವಿಧಾನಿಕ ಮತ್ತು ಇತರೆ ಸವಾಲುಗಳು ಚರ್ಚೆಯ ವ್ಯಾಪ್ತಿಗೆ ಒಳಪಟ್ಟಿವೆ.
ಹಾಗೆಂದು ಏಕ ಕಾಲಕ್ಕೆ ಚುನಾವಣೆ ಎಂಬುದು ನಮ್ಮ ದೇಶಕ್ಕೆ ಹೊಸತೇನಲ್ಲ, ೧೯೫೧ ರಿಂದ ೧೯೬೭ರ ವರೆಗೂ ವಿಧಾನಸಭೆಗೂ, ಲೋಕಸಭೆಗೂ ಚುನಾವಣಗೆಗಳು ಏಕಕಾಲಕ್ಕೆ ನಡೆದ ನಿದರ್ಶನ ನಮ್ಮ ಮುಂದೆ ಇದೆ ಆದರೆ ೧೯೬೭ ರ ನಂತರದ ಸ್ಥಿತ್ಯಂತರಗಳಿಂದಾಗಿ ಏಕ ಕಾಲದ ಚುನಾವಣೆಯ ಕೊಂಡಿ ಕಳಚಿ ಹೋಯಿತು, ಚುನಾವಣೆಗಳೆಂಬುದು ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಗಳಲೊಂದು ನಿಜ ಆದರೆ ಈ ಹಬ್ಬಗಳು ಪದೇ ಪದೇ ಬಂದೆರಗಿದರೆ ಆ ಹಬ್ಬಗಳನ್ನು ಆಚರಿಸುವ ಮಾನಸಿಕ ಮತ್ತು ಆರ್ಥಿಕ ಚೈತನ್ಯವಿರಬೇಕಲ್ಲವೇ? ಅದೇನೇ ಇರಲಿ ಏಕಕಾಲಕ್ಕೆ ಚುನಾವಣೆಯ ನೆಪದಿಂದಾದರೂ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ರಾಜಕೀಯ ಮತ್ತು ಆಡಳಿತ ಸ್ಥಿರತೆಯ ಬಗ್ಗೆ ಚಿಂತಿಸುವಂತಾಗಿ ರಾಷ್ತ್ರ ಮತ್ತು ರಾಜ್ಯದ ಅಭ್ಯದಯದ ಬಗ್ಗೆ ಚಿಂತಿಸಿ ಆ ಕಡೆಗೆ ದೇಶವನ್ನು ಕೊಂಡೊಯ್ಯುವ ಪ್ರಯತ್ನವಾದರೆ ಅದೇ ಭಾಗ್ಯ.


ಕಾರ್ತಿಕ್ ಯಸ್ ಬಾಪಟ್

Monday, March 13, 2017

ವ್ಯಾಕುಲ ನಿರ್ಗಮನ - ಪೊಲಿಟಿಕಲ್ ಕಮೆಂಟರಿ


ಊದಿ ಬಿಡು ನೀ ಪಾಂಚ ಜನ್ಯವ ಮಾರ್ದನಿಸಲಾದೋ ಮನ್ ಮನಾ ಅಂತ ರೈ ಅವರ ಪದ್ಯ ಸ್ಮ್ರಿತಿ ಪಟಲಕ್ಕೆ ಬಂತು, ಅದಕ್ಕೆ ಕಾರಾಣ ಮೊನ್ನೆ ಕರ್ನಾಟಕ ಕಂಡ ಮೋಸ್ಟ ಡಿಸಿಪ್ಲಿನ್ಡ್ ರಾಜಕರಣಿ ಕೃಷ್ಣ ಅವರು ಕಾಂಗ್ರೆಸ್ ಗೆ ಸೋಡಾ ಚೀಟಿ ಕೊಟ್ಟು ನಿರ್ಗಮಿಸಿದ್ದು, ತಮ್ಮ ಅಭಿಪ್ರಾಯವನ್ನು ಮರು ದಿವಸ ಪತ್ರಕರ್ತರ ಸವಾಲಿಗೆ ತಮ್ಮ ಶ್ರೀಮತಿಯವರ ಮುಖವನ್ನು ನೋಡುತ್ತಾ ಉತ್ತರಿಸಿದರು, ಶ್ರೀಮತಿ ಯವರು ಅಲ್ಲೇ ಇದ್ದದ್ದನ್ನು ನೋಡಿ  ಥಟ್ಟನೆ ನನ್ನ ನೆನಪಿಗೆ ಬಂದದ್ದು ಕೆ ಯಸ್ ನ್ ಅವರ  "ಹೆಂಡತಿ ಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯೀಹೀಗೆ ಸುದ್ದಿ ತಿಳಿದ ಕೆಲವೇ ಘಂಟೆಗಲ್ಲಿ ಉಹಾ ಪೋಹಾ ಅವರು ರಾಷ್ಟ್ರಪತಿ ಯಾಗಲು ವೇದಿಕೆ ಸೃಷ್ಟಿ ಮಾಡಿಕೊಳ್ಳುತ್ತಿದ್ದರೆ, ಉಪರಾಷ್ಟ್ರಪತಿ ಯಾಗಲು ವೇದಿಕೆ ಸೃಷ್ಟಿ ಮಾಡಿ ಕೊಳ್ಳುತ್ತಿದ್ದಾರೆ ಹಾಗೆ ಹೀಗೆ ಎಂದು ಆದರೆ

ಕೃಷ್ಣ ಅವರ ರಾಜಕೀಯ ಜೀವನ ವನ್ನು ನೋಡಿದವರಿಗೆ ಸುದ್ದಿ ಯನ್ನು ಕಂಡು ಅತ್ಯಂತ ತಡೆಯಲಾಗದ ನಗು ಬಂದಿರಬೇಕು, ಏಕೆಂದರೆ ಕೃಷ್ಣ  ಅವರು ರಾಷ್ಟ್ರಪತಿಯೋ ಉಪರಾಷ್ಟ್ರಪತಿಯೋ ಆಗಲಿಕ್ಕೆ ಕಾಂಗ್ರೆಸ್ ಬಿಡಬೇಕಾಗಿಲ್ಲ , ಕಾಂಗ್ರೆಸ್ ನಲ್ಲೆ ಇದ್ದು ಕೊಂಡು ಹುದ್ದೆಯನ್ನು ಅಲಂಕರಿಸುವ ಸಕಲ ಶಕ್ತಿ ಖಂಡಿತವಾಗಿಯೂ ಇದೆ,

ಕೃಷ್ಣ ಅವರ ಅಂದಿನ ಪ್ರೆಸ್ ಕಾನ್ಫರೆನ್ಸ್ ಅನ್ನು ಸರಿಯಾಗಿ ಗಮನಿಸಿದ್ದೆ ಆದರೆ, ಅವರ ನಿರ್ಣಯ ಧಿಡೀರ್ ಅಲ್ಲ ಅಳದು ತೂಗಿ ತೆಗೆದು ಕೊಂಡ ನಿರ್ಣಯವೇ, ಏಕೆಂದರೆ ವಿದೇಶಾಂಗ ಸಚಿವ ಸ್ಥಾನದಿಂದ ನಿರ್ಗಮನದ ನಂತರ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲಿಲ್ಲ, ಯಾರೇ ಆಗಲಿ ಆತ್ಮಾಭಿಮಾನಕ್ಕೆ ಪೆಟ್ಟು ಬಿದ್ದರೆ ತಡೆಯಲಾರರು ಮತ್ತು ಈಗಾಗಲೇ ಕಂಡಂತೆ ಕೃಷ್ಣ ಅವರ ಜಾಗದಲ್ಲಿ  ಬೇರೆಯವರ್ಯಾರಾದರು ಇದ್ದಿದ್ದರೆ ಯಾವಾಗಲೋ ಕಾಂಗ್ರೆಸ್ ಪಕ್ಶಕ್ಕೆ ಬೈ ಹೇಳುತ್ತಿದ್ದರು ಆದರೆ ಕೃಷ್ಣ ಅವರದು ರೀತಿಯ ವ್ಯಕ್ತಿತ್ವವೇ ಅಲ್ಲ ಎಲ್ಲವನ್ನು , ತೂಗಿ ಅಳೆದು ತಾಳ್ಮೆಯ ನಿರ್ಧಾರ ಹೊತ್ತಿನವರೆಗೂ ಅವರಿಗೆ ಕಾಂಗ್ರೆಸ್ ನಲ್ಲಿ ಇರುವಂತೆ ಮಾಡಿತ್ತು ಆದರೆ ಇದು ಯಾವಾಗ ಇನ್ನು ಬಗೆಹರಿಯುವ ಲಕ್ಷಣಗಳಿಲ್ಲ ಎಂದು ಅನಿಸಿತು ವ್ಯಾಕುಲ ನಿರ್ಗಮನ ವಾಗಿದೆ , ಈಗ ಎಲ್ಲರು ಹೇಳುವಂತೆ ಉತ್ತರ ಪ್ರದೇಶದ ಚುನಾವಣೆಯ ನಂತರ ಬಿ ಜೆ ಪಿ ಗೆ ಸೇರಲು ವೇದಿಕೆ ಸಜ್ಜಾಗಿದೆ ಎಂದು ,

ಏನಾಗುತ್ತದೋ ಇಲ್ಲವೋ ಮಂಡ್ಯ ಮತ್ತು ಮೈಸೂರ್ ನಲ್ಲಿ ಜನಮನ್ನಣೆ ಗಲಸಿದ್ದ ನಾಯಕನ ನಿರ್ಗಮನದಿಂದ ಪೆಟ್ಟಾಗುವದೋ ಕಾಂಗ್ರೆಸ್ಗೆ, ಇದರ ಉಪಯೋಗ ಪಡೆದು ಕೊಳ್ಳುವುದು ಹೇಗೆ ಎಂದು ಬೇರೆ ಪಕ್ಷದವ ಲೆಕ್ಕಾಚಾರ ಶುರವಾಗಿರುವುದೇನೋ ನಿಜ ಆದರೆ , ಕೃಷ್ಣ ಯಾವ ಪಕ್ಷಕ್ಕೂ ಸೇರದೆಯೂ ತಟಸ್ಥರಾಗಿದ್ದರು ಕೂಡ ಮಾಡಬಹುದಾದ ಡ್ಯಾಮೇಜ್ ಅನ್ನು ಮಾಡಬಲ್ಲವ ರಾಗಿದ್ದಾರೆ , ತಟಸ್ಥ ರಾಗಿ ಉಳಿದರೆ ಜೆ ಡೀ ಯಸ್ ಗಂತೂ ಖಂಡಿತ ಲಾಭ ಉಂಟು, ಕಾವೇರಿ ಸೀಮೆಯ ಜನರಿಗೆ ಕೃಷ್ಣ ಅವರನ್ನು ಕಾಂಗ್ರೆಸ್ ರಾಜಕೀಯ ಕತ್ತಲೆಯಲ್ಲಿ ಇರಿಸಲಾಗಿತ್ತು ಎಂಬ ಮೆಸೇಜ್ ಅಂತೂ ಪಾಸ್ ಆಗಿ ಹೋಗಿದೆ, ಆದರೆ ಪ್ರಶ್ನೆ ಇರುವುದು ಕಚ್ಚಾಡುವವರನು ಕುಡಿಸಿ ಒಲಿಸುವದರಲ್ಲೇ ಬ್ಯುಸಿ ಆಗಿರುವ ಬಿ ಜೆ ಪಿ, ಕೃಷ್ಣ ಅವರ ಆಗಮನಕ್ಕೆ ಸಿದ್ಧವಾಗಿದೆಯೇ ಅಥವಾ ಕೃಷ್ಣಾಗಮನದಿಂದ ಅವರಿಗೆ ಯಾವ ಸ್ಥಾನ ವನ್ನು ಕಲ್ಪಿಸಿ ಕೊಡಲಿದ್ದಾರೆ ಹೀಗ್ ಹತ್ತು ಹಲವು ಪ್ರಶ್ನೆಗಳು ಎದ್ದಿರುವುದಂತೂ ನಿಜ , ಏಕೆಂದರೆ ಬಿ ಜೆ ಪಿ ಯಲ್ಲಿಯೇ "ಹಿರಿಯರ ಮಾರ್ಗದರ್ಶಿ ಮಂಡಳಿ" ಇದೆ ಎಂದು ಎಲ್ಲರಿಗು ತಿಳಿದಿದೆ ಹೀಗೆ, ಬಿ ಜೆ ಪಿ ಯಲ್ಲಿ ಹೋಗಿ ಮಾರ್ಗದರ್ಶ ಮಂಡಳಿಗಷ್ಟೇ ಸೀಮಿತವಾಗಬಾರದು,

ಆದರಿಂದ ಕೃಷ್ಣ ಯಾವ ಪಕ್ಷಕ್ಕೂ ಸೇರದೆ ತಟಸ್ಥ ರಾಗಿ ಉಳಿದು ಯುವಕರಿಗೆ ಮಾರ್ಗದರ್ಶನ ಮಾಡಬಹದು, ಖಂಡಿತವಾಗಿ ಅವರ ವಯಸ್ಸು ಇನ್ನೊಂದು ಹೊಸ ಪಕ್ಷ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಆದರೆ ಯಾವ ಪಕ್ಷಕ್ಕೂ ಸೇರದೆ ಮತ್ತೊಂದು ಪ್ರಾದೇಶಿಕ ಪಕ್ಷ ಸ್ಥಾಪಿಸುವವರ ಬೆನ್ನಿಗೆ ನಿಲ್ಲ ಬಹುದು ಅಥವಾ ಅವರಿಗೆ ಮಾರ್ಗದರ್ಶನ ನೀಡಬಹುದು, ಏಕೆಂದರೆ ಕಾವೇರಿಯ ಕಾವೇರಿದ ಮೇಲೆ ಕನ್ನಡಿಗನ ಮನಸ್ಸಿನ ಎದೆಯಾಳದಲ್ಲಿ ಕರುನಾಡಿಗೊಂದು ಕನ್ನಡ ಪಕ್ಷ ಬೇಕು ಎಂದು ಅನ್ನಿಸುತ್ತಿದೆ ಆದರೆ ಮೋದಿಯವರ ಮೋಡಿಯಿಂದ ಹೊರಬರುವುಡ್ ಅಷ್ಟು ಸುಲಭವಲ್ಲ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಯಾರು ತೆಗೆದು ಕೊಳ್ಲಲಾಗದ ನಿರ್ಧಾರವನ್ನು ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಪ್ರಧಾನಿಗಳಿಗೆ ಇದೆ ಎಂದು ಈಗಾಗಲೇ ತೋರಿಸಿದ್ದಾರೆ, ಆದರೆ ಕರ್ನಾಟಕದ ಜನತೆಗೆ  ಅದರಲ್ಲೂ ಭಾ ಕಾರ್ಯಕರ್ತರಿಗಂತೂ ಹೇಳಲಾಗದ ಮನಸ್ಥಿತಿ ಸುಮಾರು ಒಂದು ವರ್ಷದ ಹಿಂದೆ, ಬಿ ಯಸ್ ವೈ, ರಾಜ್ಯ ಬಿ ಜೆ ಪಿ ಅದ್ಯಕ್ಶರಾಗಿ ನೇಮಿತರಾದಾಗಿನ  ಉತ್ಸಾಹ ಇತ್ತೀಚಿನ ದಿನಗಳಲ್ಲಿ ಒಳ ವುಮನಸ್ಸುಗಳಿಂದ ಕಳೆದು ಹೋಗಿದೆ ನಮ್ಮ ಗುರಿ ೧೫೦ ಎಂದು ಕೂಗುತ್ತಿದ್ದವರ ಕೂಗು   ಕ್ಷೀಣ ಗೊಂಡಂತೆ ಕಂಡರೆ ಅದಕ್ಕೆ ಮತದಾರ ಹೊಣೆಯಲ್ಲ, ಇದೆಲ್ಲದರ ಪರಿಣಾಮವಾಗಿ ಆಬ್ ಕಿ ಬಾರ್ ಜೆ ಡೀ ಯಸ್ ಸರ್ಕಾರ್ ಎಂಬ ಬಿ ಜೆ ಪಿ ಯವರ ಸ್ಲೋಗನ್ನೇ ಆದರೆ ಪಾರ್ಟಿ ಮಾತ್ರ ಚೇಂಜ್ ಎಂಬತಾಗಿ ಜೆ ಡೀ ಯಸ್ ಮತ್ತೆ ಎದ್ದು ಕೂಡುವ ಲಕ್ಷಣಗಳು ಗೋಚರಿಸುತ್ತಿದೆ, ಮನದ ಮೂಲೆಯಲ್ಲಿ ಕನ್ನಡ ಮನಸ್ಸುಗಳು ತಮಿಳುನಾಡಿನ ಭಾಷಾಭಿಮನ ಪ್ರಾಂತ್ಯಾಭಿಮಾನವನ್ನು ಕಂಡು ನಂಗೂ ಒಂದು ಪ್ರಭಲ ಪ್ರಾದೇಶಿಕ ಪಕ್ಷವೊಂದು ಬೇಕು ಎಂದು ತೀರ್ಮಾನಿಸದರೆ ಜೆ ಡೇ ಯಸ್ ಗೆ ರೊಟ್ಟಿ ಜರಿ ತುಪ್ಪಕ್ಕೆ ಬಿದ್ದಂತೆ ಹಾಗಾಗುವ ಲಕ್ಷಣ ಗಳು ಗೋಚರಿಸುತ್ತಿವೆ ಎಲ್ಲದಕ್ಕೂ ಕಾದು ನೋಡಣ.


ಕಾರ್ತಿಕ್  ಯಸ್ ಬಾಪಟ್

Sunday, March 12, 2017

ಆದಿಯೋಗಿ


ಸಾಂಸ್  ಶಾಶ್ವತ  (ಸಾ - - - -ನಮ್),
ಧ್ಯಾನ್  ಗುಂಜನ್  (ತಾ - -ನಂ -ದಃ-ನನ್)
ಉತರೇ ಮುಜೆ  ಮೇ ಆದಿಯೋಗಿ,
ಉತರೇ ಮುಜೆ  ಮೇ ಆದಿಯೋಗಿ,

ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,ಆದಿಯೋಗಿ,
ಹೀಗೆ ಕೈಲಾಶ್ ಖೇರ್ ಆದಿ ಯೋಗಿಯ ಹಾಡಿಗೆ ಧನಿಯಾದಾಗ ಇಡೀ ಕೊಯಂಬತೂರಿನ ಕಣಕಣದಲ್ಲೂ ಆದಿಯೋಗಿ,ಆದಿಯೋಗಿ ಎಂಬ ಝೇಂಕಾರ ಕೇಳಿಸುತಿತ್ತು, ಆದಿ ಯೋಗಿಯ ಪುತ್ತಳಿಯ ಹಿಂದಿರುವ ಶಕ್ತಿ ಸದ್ಗುರು ಜಗ್ಗಿ ವಾಸುದೇವ್, ಪ್ರಪಂಚದಲ್ಲಿ  ಅತಿ ದೊಡ್ಡದಾದ ಮುಖವನ್ನು ಹೊಂದಿರುವಂತಹ ಪುತ್ತಳಿ ಎಂದು ಖ್ಯಾತಿಗೆ ಒಳಗಾಗಿರ ತಕ್ಕ್ಷತಂತಹ ಆದಿ ಯೋಗಿಯ ಪುತ್ತಳಿಯ ಎತ್ತರ ೧೧೨ ಅಡಿ, ೧೧೨ರ ಪ್ರತೀಕ ವೇನೆಂದರೆ ಮಾನವನಿಗಿರುವ ಮುಕ್ತಿ ಸಾಧನೆಯ ಮಾರ್ಗ, ಸದ್ಗುರು ಅವರೇ ಹೇಳುವಂತೆ ಉಕ್ಕಿನ  ಪುತ್ತಳಿಯನ್ನು ನಿರ್ಮಿಸಲು ಸರಿ ಸುಮಾರು ಮೂರು ವರ್ಷ ಮೂರು ತಿಂಗಳು ಬೇಕಾಯಿತು, ಇದರಲ್ಲಿ ವಿನ್ಯಾಸವೇ ಎರಡೂವರೆ ವರ್ಷಗಳ ಕಾಲ ಸಮಯವನ್ನ ತೆಗೆದುಕೊಂಡಿತು, ಆದರೆ ಉಳಿದ ಎಂಟು ತಿಂಗಳಲ್ಲಿ ಆದಿ ಯೋಗಿಯ ಪುತ್ತಳಿ ಸಿದ್ಧವಾಗಿದೆ.

೨೪--೨೦೧೭ ರಂದು ನಡೆದ ಮಹಾ ಶಿವರಾತ್ರಿಯ ಆಚರಣೆಯಂದು ಆದಿ ಯೋಗಿಯ ಪುತ್ತಳಿಯನ್ನು ಲೋಕಾರ್ಪಣೆ ಮಾಡಲಾಯಿತು. ನಮ್ಮ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲಿನಿಂದಲೂ ಯೋಗಕ್ಕೆ ಹೆಚ್ಚು ಆದ್ಯತೆ ಕೊಡುತ್ತಾ ಬಂದಿದ್ದರಿಂದ, ಅವರ ಮೂಲಕ ಆದಿಯೋಗಿಯ ಪುತ್ತಳಿಯ ಲೋಕಾರ್ಪಣೆ ಹೆಚ್ಚು ಅರ್ಥಗರ್ಭಿತವಾಗಿತ್ತು

ಸಾಮಾನ್ಯವಾಗಿ ಎಲ್ಲಾ ಖಾವಿಧಾರಿತರನ್ನು ಪೂರ್ವಾಪರ ನೋಡದೆ ಅಥವಾ ಪರಾಮರ್ಶಿಸದೆ ಒಪ್ಪಿಕೊಳ್ಲಲು ನನ್ನ ಒಳ ಮನಸ್ಸು ಒಪ್ಪಿಕೊಳ್ಳುವುದಿಲ್ಲ, ಹೇಗೆ ಎಲ್ಲಾ ಖಾದಿ ಮತ್ತು ಖಾವಿವಂತರು ಸಂಭಾಳಿತರಲ್ಲವೋ ಹಾಗೆಯೆ ಅವರಲ್ಲಿ ಕೆಲವರು ಸಂಭಾಳಿತಾರೂ, ಲೋಖದೆಡೆಗೆ ಅಪಾರ ಪ್ರೀತಿಯನ್ನಿಟ್ಟುಕೊಂಡು ದೇವತಾಕೈಂಕರ್ಯವನ್ನು ಮಾಡುತ್ತಾ ಸಮಾಜದ ಆಗು ಹೋಗುಗಳಿಗೆ ಹಿಂದಿನಿಂದಲೂ ಸ್ಪಂದಿಸಿದ್ದಾರೆ ಮತ್ತು ಸ್ಪಂದಿಸುತ್ತಿದ್ದಾರೆ, ಆದ್ದರಿಂದ ಸದ್ಗುರುಗಳ ಬಗ್ಗೆಯೂ ಕೂಡ ನೋಡಿದಾಕ್ಷಣ ಒಪ್ಪಿಕೊಳ್ಳುವ ಮನೋಭಾವನೆ ಇಲ್ಲದೆ ಅವರ ನಡೆ, ನುಡಿ, ಆಚಾರ, ವಿಚಾರ  ಗಳನ್ನೂ ಬೆಂಬೆತ್ತಿದಾಗ ನನಗೆ ಅನಿಸಿದ್ದು ಸದ್ಗುರುಗಳು ಇತರೆ ಸದ್ಗುರುಗಳಂತೆ ಅಲ್ಲಎಂಬುದು. ಏಕೆಂದರೆ ನೀವು ಸದ್ಗುರು ಜಗ್ಗಿ ವಾಸುದೇವ್ ಅವರನ್ನು "ಗಾಲ್ಫ್" ಆಟದಲ್ಲಿ ಕಾಣಬಹುದು, "ಬೈಕ್" ಓಡಿಸುವಾಗ ಕಾಣಬಹುದು , ಹೀಗೆ ನೋಡಿದಾಗ ನನಗೆ ಅನಿಸುದ್ದು ಆಧುನಿಕ ಜಗತ್ತಿಗೆ ಸಿಕ್ಕಿರುವ ಸಮಕಾಲೀನ ಸದ್ಗುರುಗಳೇನೋ ? ಅಂದರೆ "The Most contemporary ಸದ್ಗುರು”. Creating a temple of wellness ಎಂಬ ಪರಿಕಲ್ಪನೆಯೇ ಅತೀ ಉನ್ನತ ಕಲ್ಪನೆ, ಸದ್ಗುರು ವಾಸುದೇವ್ ಜಗ್ಗಿ ಅವರ ದ್ಯೇಯವು ಅದೇ ಭಾರತದ ನಾಲ್ಕು ದಿಕ್ಕುಗಳಲ್ಲಿ ಆದಿಯೋಗಿಯ ಪುತ್ತಳಿ ಅನಾವರಣ ಗೊಳ್ಳಬೇಕು, ನಾಲ್ಕು ದಿಕ್ಕಿನೆಡೆಗೆ ಜನ ಬಂದಾಗ ಅಲ್ಲಿ ಕುಳಿತು ಮೂರು ನಿಮಿಷ , ನಾಲ್ಕು ನಿಮಿಷ ಹೀಗೆ ಯೋಗವನ್ನು ಕಲಿತರೆ ಅದು ಆದಿ ಯೋಗಿಯ ಪುತ್ತಳಿ ನಿರ್ಮಿಸಿದ್ದಕ್ಕೂ ಸಾರ್ಥಕತೆ ಬಂದೊದಗುತ್ತದೆ ಎಂಬುದು ಅವರ ಆಶಯ. ನಿಟ್ಟಿನಲ್ಲಿ ದಕ್ಷಿಣದಲ್ಲಿ ಪುತ್ತಳಿಯ ಲೋಕಾರ್ಪಣೆಯಾಗಿದೆ ಇನ್ನು ಮೂರು ದಿಕ್ಕಿನಲ್ಲಿ ಆಗಬೇಕು.

ಆದಿಯೋಗಿಯ ಲೋಕಾರ್ಪಣೆಗಯ್ಯುವ ಎರಡು ಮೂರು ದಿನಗಳ ಮುಂಚೆ ನನ್ನ ಮೊಬೈಲ್(ಜಂಗಮ ವನಿಗೆ) ಒಂದು ಸಂದರ್ಶನದ ತುಣುಕನ್ನು ಯಾರೋ ಒಬ್ಬ ಮಹಾನುಭಾವರು ಕಳಿಸಿದ್ದರು. ಅದುಸದ್ಗುರು ವಾಸುದೇವ ಅವರ ಸಂದರ್ಶನ, ಸಂದರ್ಶನದಲ್ಲಿ -ನಿರೂಪಕ ಸೂರ್ಯ ಸಮಸ್ಕಾರವನ್ನು ಹೇಗೆ ಎಲ್ಲರು ಒಪ್ಪಿಕೊಳ್ಳುವುದು ಅದು ಒಂದು ವರ್ಗಕ್ಕೆ ಸೇರಿದ ಕ್ರಿಯೆ ಅಲ್ಲವೇ ಎಂದಾಗ ಆಗ ಸದ್ಗುರು ಉತ್ತರ- ಸೂರ್ಯ ನಮಸ್ಕಾರ ಇದು ನಮಗೆ ಶಕ್ಕ್ತಿ ತುಂಬುವ ಸೌರಶಕ್ತಿಗೆಯನ್ನು ನಮ್ಮಲ್ಲಿ ಪಡೆದುಕೊಳ್ಳುವುದು ಎಂದರ್ಥ, ಆಗ ಆತ ಮತ್ತೆ ಹಾಗಾದರೆ ಸೂರ್ಯ ನಮಸ್ಕಾರ ಸಂದರ್ಭದಲ್ಲಿ ಮಂತ್ರ ಉಚ್ಚಾರಣೆ ಮಾಡುವುದಿಲ್ಲವೇ ಅಂದಾಗ ಅವರ ಉತ್ತರ ನೀವು ಮಂತ್ರವನ್ನು ಉಚ್ಚರಿಸದೆ ಹಾಗೆ ಮಾಡಿ. ಹೀಗೆ ಸಾಗುತ್ತ ಸಾಗುತ್ತ ಒಂದು ಅಂಶವನ್ನು ಗಮನಿಸಿದೆ ನಾನು ಇಲ್ಲಿ ಉಪಹಾರವನ್ನು ಸೇವಿಸುತ್ತಿದಾಗ ಮತ್ತೆ ಏನೋ ಮಂತ್ರ ಪಠಣ ಮಾಡಿದ ಹಾಗೆ ಕಂಡಿತು ಎಂದು ನಿರೂಪಕ ಕೇಳುತ್ತಾನೆ. ಆಗ ಸದ್ಗುರು ಹೌದೇ ಏನದು ಎಂದಾಗ  ಅದು :

सह नाववतु
सह नौ भुनक्तु
सह वीर्यं करवावहै
तेजस्वि नावधीतमस्तु मा विद्विषावहै
शान्तिः शान्तिः शान्तिः .

ಅದರಲ್ಲಿ ಎಲ್ಲಿ ತಪ್ಪಿದೆ ತೋರಿಸಿ. ದೇವರೇ ನಮ್ಮಿಬ್ಬರನ್ನು ರಕ್ಷಿಸು (ಗುರು ಮತ್ತು ಶಿಷ್ಯ) ನಮ್ಮಿಬ್ಬರನ್ನು ಪೋಷಿಸು , ನಮ್ಮಿಬ್ಬರಿಗೆ ಒಟ್ಟಿಗೆ ಕೆಲಸ ಮಾಡುವ ಶಕ್ತ್ತಿ ತುಂಬು ಮತ್ತು ಎಲ್ಲೆಡೆ ಶಾಂತಿ ಪಸರಿಸಲಿ ಎಂದು ಹೇಳುವುದು ತಪ್ಪೇ ಎಂದು ಸಂದರ್ಶಕರ ಪ್ರೆಶ್ನೆಗೆ ಮರು ಪ್ರಶ್ನೆಯನ್ನೆಸದು ಎಲ್ಲರನ್ನು ಚಕಿತಗೊಳಿಸುತ್ತಾರೆ.

ಅದೇ ರೀತಿ ಇನ್ನೊಬ್ಬ ಸಂದರ್ಶಕಿ  ಸದ್ಗುರುಗಳೇ ದೇವರೇ ಇಲ್ಲಯಂಬ ಒಂದು ಅಂಶವನ್ನೇ ಇಟ್ಟುಕೊಂಡರೆ ನಮಗೇಕೆ ಸದ್ಗುರು  ಬೇಕೇ ಎಂದು ಕೇಳುತ್ತಾಳೆ. ಆಗ ಸದ್ಗುರು  ಜಗ್ಗಿ ಕ್ಲಿಷ್ಟ ಪ್ರಶ್ನೆಯನ್ನು ಅತ್ಯಂತ ಹಾಸ್ಯಾತ್ಮಕವಾಗಿ ಉತ್ತರಿಸುತ್ತಾರೆ. -> ನೀವು ಕಾರನ್ನು ಡ್ರೈವ್ ಮಾಡುತ್ತೀರಲ್ಲವೇ , ಹಾಗಾದರೆ GPRS (ಮೊಬೈಲ್ app ) ಅನ್ನು ಉಪಯೋಗಿಸುತ್ತಿರಲ್ಲವೇ , ಹಾಗು ಆದರಲ್ಲೂ ನೀವು ನಿಮಗೆ ಗೊತ್ತಿಲ್ಲದ ಪ್ರದೇಶದಲ್ಲಿ ಗಾದಿಯನ್ನು ಓಡಿಸುವಾಗ , ಒಂದು ಹೆಂಗಸು ನಿಮಗೆ right  ತೊಗೊಳ್ಳಿ left  ತೊಗೊಳ್ಳಿ ಎಂದು ಹೇಳಿತ್ತಾಳೆ , ಏಕೆಂದರೆ ನಿಮಗೆ   ಗೊತ್ತಿಲ್ಲದ ಪ್ರದೇಶದಲ್ಲಿ ("It  is advisable to take  instruction ") ಅಂದರೆ ನೀವು ಸೂಚನೆ ತೆಗೆದುಕೊಳ್ಳುವುದು ನಿಮಗೆ ಶ್ರೇಯಸ್ಸು  ಎಂದು ಉತ್ತರಿಸುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಾರೆ , ಇಷ್ಟಕ್ಕೂ ಸುಮ್ಮನಾಗದ ಸಂದರ್ಶಕಿ ಹಾಗಾದರೆ ಗುರುಗಳು ಆಧುನಿಕ "ಜಿಪಿಎಸ್" ಎನ್ನುತ್ತೀರಾ ಎಂದು ಕೇಳಿದಾಗ ಸದ್ಗುರು ಇರಬಹುದು "Guru  Positioning System " ಎಂದು ನಗುತ್ತ ಹೇಳುತ್ತಾರೆ.
ಇಂತಹ ಯೋಗದ ಪಸರಿಸಿಕೆ  ಮತ್ತು ಪುನರುತ್ಥಾನವನ್ನು ನೋಡಿದಾಗ ಮಾಸ್ಮುಲ್ಲೆರ್ (MaxMuller) ಮತ್ತು ಸಿಸ್ಟೆರ್ ನಿವೇದಿತಾ ಹೇಳಿದ ಮಾತು ನೆನಪಿಗೆ ಬರುತ್ತದೆ  “ಭಾರತ ಸತ್ತರೆ ಇಡೀ ಜಗತ್ತೇ ಸತ್ತಂತೆ.” (If India is dead world is dead much before). ಅಂದರೆ ಇನ್ನೇನು ಭಾರತೀಯ ಸಂಸ್ಕೃತಿ ನಶಿಸಿ ಹೋಗುತ್ತದೆ ಎಂದು ಎಲ್ಲರು ಬೊಬ್ಬೆ ಹೊಡೆಯುವಾಗ ಎಲ್ಲೆಡೆ ಯೋಗದ ಬಗ್ಗೆ ಅರಿವು ಮೂಡುವ ಕಾರ್ಯ ಪ್ರಾರಂಭವಾಗುತ್ತದೆ ಮತ್ತು ಇಂಥಹುದೇ ಹಲವು ವಿಸ್ಮಯದ ಸಂಗತಿಗಳಿಗೆ ಭರತಖಂಡ ವೇದಿಕೆಯಾಗುತ್ತ ಹೋಗುತ್ತದೆ.


ಕಾರ್ತಿಕ್ ಎಸ್ ಬಾಪಟ್

Friday, March 10, 2017

ಅವರೊಬ್ಬರಿದ್ದರು ಕೆ ಕಾಮರಾಜ್ ಶಾಸ್ತ್ರೀಜಿಯವರ ಬೆನ್ನಿಗೆ - (ತಮಿಳುನಾಡಿನ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಕಾಮರಾಜ್ ನೆನಪಾದರು ಅವರೊಂದಿಗೆ ನೆಹರು ನಂತರದ ಪರಿಸ್ಥಿತಿ ಯನ್ನು ಯಶಸ್ವಿಯಾಗಿ ನಿಭಾಯಿಸಿದ ಶಾಸ್ತ್ರೀಜಿ ಕೂಡ ನೆನಪಾದಾಗ ಹುಟ್ಟಿದು ಈ ಲೇಖನ.)

ಅವರೊಬ್ಬರಿದ್ದರು ಕೆ ಕಾಮರಾಜ್ ಶಾಸ್ತ್ರೀಜಿಯವರ ಬೆನ್ನಿಗೆ.
   
ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ಜಯಲಲಿತಾ  ಮರಣಾ ನಂತರದ ಬೆಳವಣಿಗೆಯನ್ನು ನೋಡಿದವರಿಗೆ, ಇದೇನಾಗುತ್ತಿದೆ "The Most Intellectual " ನಾಡಿನಲ್ಲಿ ಎಂದೆನಿಸಿದರೆ ಅದು ಸಹಜ, ಏಕೆಂದರೆ ತಮಿಳುನಾಡಿನಲ್ಲಿ ೧೯೬೭ರ ನಂತರ ಕೇವಲ ದ್ವಿಪಕ್ಷಿಯರಾಜಕೀಯವೇ, ಒಮ್ಮೆ "DMK" ಇಡೀ ಸರಕಾರವನ್ನು ತಹಬಂದಿಗೆ  ತಂದು ಕೊಂಡರೆ ಇನ್ನೊಮ್ಮೆ "AIADMK " , DMK ಯಾದರು ತನ್ನ ಎರಡನೇ ಸಾಲಿನ ನಾಯಕರನ್ನು ತಯಾರು ಮಾಡಿ "DMK " ಅಲ್ಲಿ ನಾಯಕರಿಲ್ಲ ಎಂಬ ಕೊರಗಿಗೆ ತಕ್ಕ ಮಟ್ಟಿಗಾದರೂ ಇತಿಶ್ರೀ ಹಾಕಿದೆ, ಎರಡನೇ ಸಾಲಿನ ನಾಯಕರೆಂದು ರೂಪು ಗೊಂಡವರಲ್ಲಿ ಆ ಬಗೆಯ "ವರ್ಚಸ್ವಿ" ನಾಯಕರ್ಯಾರು ಹೊರ ಹೊಮ್ಮಲಿಲ್ಲ, ಎಲ್ಲರು ಆಜ್ನ್ಯ ಪಾಲಕರಾದರೆ ಹೊರತು ಸ್ವಂತ ವರ್ಚಸ್ಸನ್ನು ಬೆಳಸಿಕೊಳ್ಳಲಿಲ್ಲ, ಅದೆಲ್ಲದರ ಪರಿಣಾಮವಾಗಿಯೇ ನಾವು ಇತ್ತೀಚಿಗೆ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದೆವು, ಅರೆ, ಒಬ್ಬ ಹಂಗಾಮೀ ಮುಖ್ಯ ಮಂತ್ರಿಗೆ ರೆಸಾರ್ಟ್ ಒಳಗೆ ಪ್ರವೇಶ ವಿಲ್ಲಾ ಎಂದರೆ ಹೇಗೆ ? ಕೊನೆಗೂ ಹಾಗು ಹೀಗೂ ಕ್ಷಣ ಕ್ಷಣಕ್ಕೂ ಕುತೂಹಲದ ತಿರುವಿನೊಂದಿಗೆ "ಪಳನಿ ಸ್ವಾಮಿ" ಮುಖ್ಯಮಂತ್ರಿಯಾಗಿ ಆಯ್ಕೆ ಯಾದರು, ಇಷ್ಟೆಲ್ಲಾ ಪ್ರಹಸನದ ಮದ್ಯೆ ಕೆಲವರ ಕೂಗು ಪಳನಿ ಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರಬಹುದು ಆದರೆ ಅವರನ್ನು ಅಕ್ಷರಶಃ ನಿಭಾಯಿಸುತ್ತಿರುವುದು "ಶಶಿಕಲಾ" ಎಂಬ ಕೂಗು.

ಇದೇನಿದು ಖುರ್ಚಿಗಾಗಿ ಕಾದಾಟ, ಜಗ್ಗಾಟ ನಾಯಿ ಕತ್ತೆಗಳೆಂಬ ಪದ ಪ್ರಯೋಗಗಳ ಮದ್ಯೆ ನೆನಪಾದವರು  ಒಲಿದು ಬಂದ"ಪ್ರದಾನ ಮಂತ್ರಿ" ಗಾದಿಯನ್ನು ನಯವಾಗಿ ತಿರಸ್ಕರಿಸಿ ಪಕ್ಷ ಸಂಘಟನೆಗಾಗಿಯೇ "ಮುಖ್ಯಮಂತ್ರಿ ಪದವಿಯನ್ನು" ಬಿಟ್ಟುಕೊಟ್ಟ ದೂರಗಾಮಿ ನೆಲೆಯಲ್ಲಿ ಚಿಂತಿಸುತಿದ್ದ ತಮಿಳುನಾಡು ಕಂಡಂತಹ ಅಪರೂಪದ ನಾಯಕ "ಕೆ ಕಾಮರಾಜ್" ಮತ್ತು ರೈಲ್ವೆ ದುರಂತ ವಾದಾಗ ನೈತಿಕ ಹೊಣೆಯನ್ನು ಹೊತ್ತು ಮಂತ್ರಿ ಪದವಿಯನ್ನು ತ್ಯಜಿಸಿದ ಭಾರತ ಕಂಡಂತಹ ಕಠಿಣ ಧೋರಣೆಯ ಮೃದು ಹೃದಯದ ಮಾಜಿ ಪ್ರಧಾನಿ ಶಾಸ್ತ್ರಿಜಿ .

ಅದು ೧೯೧೯ರ ಸಮಯ ರೌಲಟ್ಟ್ ಆಕ್ಟ್ (rowlatt act) ಎಂಬ ಅಮಾನವೀಯ ಆಕ್ಟ್ ಅನ್ನು ಭಾರತೀಯರ ಮೇಲೆ ಹೇರಲಾಗಿತ್ತು , ಇದರ ಪ್ರಕಾರ ಬಂಡಾಯದ ಬಾವುಟವನ್ನೇರಿಸಿದ  ಕಿಂಚಿತ್ ಅನುಮಾನ ಬಂದರು ಅವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟಲಾಗುತ್ತಿತ್ತು , ಇದರ ವಿರುದ್ಧ ಭಾರತೀಯರು ಸಹಜವಾಗಿಯೇ ಸಿಡಿದಿದ್ದೆರು, ಆಗ ಗಾಂಧೀಜಿಯವರು ಈ ಖಠಿಣ ನಿಯಮದ ಬಗ್ಗೆ ಸಮರ ಸಾರಿ  ದೇಶದೆಲ್ಲಡೆ ಈ ನಿರ್ಧಾರದ ವಿರುದ್ಧ "ಸತ್ಯಾಗ್ರಹಕ್ಕೆ" ಆದೇಶಿಸಿದ್ದರು, ಅದಾದ ನಂತರ ಎರಡೇ ದಿನಕ್ಕೆ ಗಾಂಧೀಜಿಯವರ ಬಂಧನವಾಯಿತು. ಗಾಂಧೀಜಿಯವರ ಬಂಧನ ದೇಶದೆಲ್ಲಡೆ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿತ್ತು. ಅದಾದನಂತರ ಡಾ||ಕಿಚುಲು (Dr || kitchlu) ಮತ್ತು ಡಾ|| ಸತ್ಯಪಾಲ್ ಎಂಬ ಹೋರಾಟಗಾರರ ಬಂಧನವಾಯಿತು (10th ಏಪ್ರಿಲ್ 1919). ಇದೆಲ್ಲದರ ವಿರುದ್ಧ ಅಮೃತ್ಸರದ ಜನತೆ ದೊಡ್ಡ ಮೆರವಣಿಗೆಯನ್ನು ಮಾಡಿ ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಿದರು. ಆದರೆ ಇದರ ಮರುದಿನ ಅಂದರೆ ಏಪ್ರಿಲ್ 13 ೧೯೧೯ ರಂದು, ಬ್ರಿಟಿಷರ ವಿರುದ್ಧ ಒಂದು ಸಭೆಯನ್ನು ಏರ್ಪಡಿಸಲಾಗುತ್ತದೆ ಮತ್ತು ಪವಿತ್ರ "ಬೈಸಾಕಿಯ" ದಿನವೂ ಕೂಡ ಆಗಿರುತ್ತದೆ. ಇದರ ಬಗ್ಗೆ ಅರಿವಿಲ್ಲದೆ "ಜನರಲ್ ಡೈಯರ್" ಯಾವುದೇ ತರಹದ ಸಭೆ ಸಮಾರಂಭಗಳನ್ನು ಮಾಡುವಂತಿಲ್ಲ ಎಂದು ನಿಷೇದಾಜ್ಞೆ ಹೊರಡಿಸಿರುತ್ತಾನೆ. ಇದನ್ನರಿಯದ ಎಷ್ಟೋ ಜನ ಮುಗ್ದರು "ಜಲಿಯನ್ ವಾಲಾಬಾಗ್" ನಲ್ಲಿ ೧೩ನೆ ಏಪ್ರಿಲ್ ೧೯೧೯ ರಂದು ಸೇರಿರುತ್ತಾರೆ, ಇದರ ಸೂಕ್ಷ್ಮತೆಯನ್ನು ಅರಿಯದ ಡೈಯರ್ ಶಸ್ತ್ರಾಸ್ತ್ರಗಳನ್ನೇ ನೋಡದ ಮುಗ್ಧ ಜನರ ಮೇಲೆ ಮದ್ದು ಗುಂಡುಗಳನ್ನು ಭೋರ್ಗರಿಯಲು ಆದೇಶ ನೀಡುತ್ತಾನೆ.

ಈ ದುರಂತ ಮುಂದೆ ಹಲವಾರು ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು, ಆದರೆ ದೂರದ ತಮಿಳುನಾಡಿನ ವಿರುದ ನಗರದೂರಿನ ಒಬ್ಬ ೧೫ ವರ್ಷದ ಬಾಲಕನಿಗೆ ಸ್ವತಂತ್ರ ಸಂಗ್ರಾಮದಲ್ಲಿ ಧುಮುಕುವಂತೆ ಪ್ರೇರೇಪಿಸಿತ್ತು. ಆ ಬಾಲಕ ಮತ್ತಾರು ಅಲ್ಲ , ಅವರೇ "ಕೆ ಕಾಮರಾಜ್" , ಇದಾದ ೨ ವರ್ಷದಲ್ಲಿ ಗಾಂಧೀಜಿಯವರ ಸಾಂಗಾತ್ಯಾ ದೊರೆತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಲ್ಲಿ ಸಕ್ರಿಯರಾದರು, ಆದಾದ ನಂತರ ಕಾಮರಾಜ್ ಹಿಂತಿರುಗಿ ನೋಡಲೇ ಇಲ್ಲ. ಹತ್ತು ಹಲವು ಸ್ವತಂತ್ರ ಚಳುವಳಿಗಳಲ್ಲಿ ಪಾಲ್ಗೊಂಡು ಸೆರೆಮನೆ ವಾಸವನ್ನು ಅನುಭವಿಸಿದರು.
ಸ್ವತಂತ್ರ ನಂತರ ೧೯೫೪ ರಲ್ಲಿ ಮದ್ರಾಸ್ ಪ್ರಾಂತ್ಯದ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿ ಸರಿ ಸುಮಾರು ೯ ವರ್ಷಗಳ ಉತ್ತಮ ಆಡಳಿತವನ್ನು ನಡೆಸಿದರು, ಮನಸ್ಸು ಮಾಡಿದ್ದಾರೆ ಇನ್ನಷ್ಟು ವರ್ಷಗಳ ಕಾಲ ಮುಖ್ಯಮಂತ್ರಿ ಯಾಗಿ ಮುಂದುವರೆಯ ಬಹುದಾಗಿತ್ತು, ಆದರೆ ಯಾರು ಊಹಿಸಲಸಾಧ್ಯವಾದ ಬೆಳವಣಿಗೆ ನಾಂದಿ ಹಾಡಿ ಎಲ್ಲರು ಆಚ್ಚರಿಗೊಳ್ಳುವಂತೆ ಮಾಡಿದವರು ಕಾಮರಾಜ್.

ಎಲ್ಲವೂ ಚೆನ್ನಾಗಿರುವಾಗಲೇ ಕಾಮರಾಜ್ ಕಂಡುಕೊಂಡಿದ್ದೇನೆಂದರೆ ಪಕ್ಷ ಇನ್ನಷ್ಟು ಬಲಿಷ್ಠವಾಗಬೇಕು ಎಂದು, ಕಾಮರಾಜ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಶಕ್ತಿ ತುಂಬುವ ಕೆಲಸಕ್ಕೆ ಧುಮುಕಿದರು , ಅಷ್ಟೇ ಅಲ್ಲದೇ ಎಲ್ಲ ಹಿರಿಯರು ಉನ್ನತ ಹುದ್ದೆಗಳನ್ನು ತೊರೆದು ಕಾಂಗ್ರೆಸ್ ಪಕ್ಷವನ್ನ ಬಲಿಷ್ಠಗೊಳಿಸುವಲ್ಲಿ ತೊಡಗಬೇಕೆಂದು ಕೇಳಿಕೊಂಡರು ಮುಂದೇ ಈ ನಿರ್ಧಾರ " ಕಾಮರಾಜ್ ಯೋಜನೆ " ಎಂದೇ ಖ್ಯಾತಿಯಾಯಿತು. ಕಾಮರಾಜ್ ಅವರ ಸೇವೆ ಕೇವಲ ತಮಿಳುನಾಡಿಗೆ ಸೀಮಿತವಾಗಿರಬಾರದೆಂದು ಮನಗೊಂಡು ನೆಹರು ಅವರು ( ೯ ನೇ ಅಕ್ಟೋಬರ್ ೧೯೬೩) ಕಾಮರಾಜ್ ಅವರು ಭಾರತೀಯ ನ್ಯಾಷನಲ್ ಕಾಂಗ್ರೆಸನ ಅಧ್ಯಕ್ಷರಾಗುವಂತೆ ನೋಡಿಕೊಂಡರು.

    ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ಕಾದಿತ್ತು. ೧೯೬೪ ಮೇ ೨೭ ರಂದು ನೆಹರು ನಿಧನಾನಂತರ ಕಾಂಗ್ರೆಸನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಬಂದಾಗ ಆ ಸವಾಲನ್ನ ಸಮರ್ಥವಾಗಿ ನಿಭಾಯಿಸಿದರು ಕಾಮರಾಜ್. ಅದಾಗಲೇ ನೆಹರು ಅವರ ಸಮರ್ಥ ಉತ್ತರಾಧಿಕಾರಿಯಾಗಿ ಬಿಂಬಿತರಾಗಿದ್ದವರು " ಲಾಲ್ ಬಹದ್ದೂರ್ ಶಾಸ್ತ್ರೀಜಿ " ಶಾಸ್ತ್ರೀಜಿ ನೆಹರು ಅವರ ಕ್ಯಾಬಿನೆಟ್ನ ವಿಶೇಷ ಮಂತ್ರಿಯಾಗಿದ್ದರು ,ಆದರೆ ಕಾಂಗ್ರೆಸ್ನಲ್ಲಿ ಅವರ ವಿರೋಧಿಗಳಿಗೇನು ಕಡಿಮೆ ಇರಲಿಲ್ಲ.

ಆದರೆ ಶಾಸ್ತ್ರಿಜಿಯ್ವರಿಗಾಗಲಿ ಕಾಮರಾಜ್ ಅವರಿಗಾಗಲಿ ಪಕ್ಷದ ನಾಯಕನ ಆಯ್ಕೆಗಾಗಿ ಚುನಾವಣೆ ನಡೆಯುವ / ನಡೆಸುವ ಪ್ರಮೇಯವೇ ಬೇಕಿರಲಿಲ್ಲ ,ಆ ಸಂದರ್ಭದಲ್ಲಿ ತಮ್ಮ ಈ ಇಂಗಿತವನ್ನು ಕಾಮರಾಜ್ ಇತರರ ಬಳಿ ವ್ಯಕ್ತ ಪಡಿಸಿದರು ; ಗುಲ್ಜಾರಿ ಲಾಲ್ ನಂದ ಅವರನ್ನು ಹಂಗಾಮಿ " care taker  " ಪ್ರಧಾನ ಮಂತ್ರಿಗಳಾಗಿ ನೇಮಿಸಲಾಗಿತ್ತು ಆದರೆ ಮುರಾರ್ಜಿ  ದೇಸಾಯಿಯವರು ಕೂಡ ನಾನು ಒಬ್ಬ ಪ್ರಬಲ ಸ್ಪರ್ಧಿ / ಆಕಾಂಕ್ಷಿಯೆಂಬ ಸಂದೇಶವನ್ನು ಸಹ ಕಳಿಸಿದ್ದರು . ಆಗ ಶಾಸ್ತ್ರೀಜಿಯವರು ನಾನು ದೇಸಾಯಿಯವರ ವಿರುದ್ಧ ಸ್ಪರ್ಧಿಸಿ ಗೆಲ್ಲ ಬಲ್ಲೆ ಆದರೆ ನನ್ನ ಮನಸ್ಸಿಗೆ ಈ ತಕ್ಷಣಕ್ಕೆ ತೋಚುತ್ತಿರುವ ಹೆಸರು " JP " ಮತ್ತು " ಇಂದಿರಾ " ಇವರಿಬ್ಬರಲ್ಲಿ ಯಾರೇ ಆದರೂ ಸಂತೋಷವೇ ( ಇಂದಿನ ಪರಿಸ್ಥಿತಿಗೆ ಹೋಲಿಸಿ ನೋಡಿ , ನನ್ನ ಹೆಸರು ಪಟ್ಟಿಯಲ್ಲಿಲ್ಲ ಎಂದು ಲಾಬಿ ಮಾಡುವ ರಾಜಕಾರಣಿಗಳಿಗೂ ಅಂದಿನ ರಾಜಕಾರಣಿಗಳ ಮನಸ್ಥಿತಿಗೆ ಹಿಡಿದ ಕನ್ನಡಿ ) ಎಂದರು.

 ಆದರೆ ಕಾಮರಾಜ್ ತನ್ನೊಂದಿಗೆ ಅಹಿಂದೀಯೇತರ ರಾಜ್ಯಗಳ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡರು  ( ಸಂಜೀವ್ ರೆಡ್ಡಿ ,ನಿಜಲಿಂಗಪ್ಪ , ಅತುಲ್ಯ ಘೋಷ್, S K ಪಾಟೀಲ್ ) ನಮ್ಮ ಆಯ್ಕೆ ಶಾಸ್ತ್ರೀಜಿ ಎಂದು ಷರಾ ಬರೆದರು ಮತ್ತು ಶಾಸ್ತ್ರೀಜಿಯವರ ಪರ ಎಲ್ಲೆಡೆ ಅಭಿಪ್ರಾಯ ವ್ಯಕ್ತವಾಗುತ್ತಿತ್ತು ಇದಕ್ಕೆ ಪೂರಕವಾಗಿ ಶಾಸ್ತ್ರೀಜ ಅಂತಹ ಚತುರ ಮತಿಯ ನಾಯಕನೊಬ್ಬ ಭಾರತದ ಪ್ರಧಾನಮಂತ್ರಿಯಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಶೋಭೆ ತಂದಿತು .

 ಶಾಸ್ತ್ರೀಜಿಯವರ ಹಾದಿ ಅಷ್ಟೊಂದು ಸುಗಮವಾಗಿ ಏನು ಇರಲಿಲ್ಲ , ಅವರ ಮುಂದೆ ಹಲವು ಸವಾಲುಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಿತ್ತು ,ಮೊದಲಿಗೆ " ತೀನ್ ಮೂರ್ತಿ ಭವನ್ "( teen  moorti  bhavan  ) ಬಗ್ಗೆ ಇದ್ದ ಗೊಂದಲ ಮತ್ತು ಅದರ ನಿರ್ವಹಣೆ ಹೀಗೆ ಅದರ ಸಮಸ್ಯೆ ಕಾಣುತಿತ್ತು . ಶಾಸ್ತ್ರೀಜಿಯವರಂತು ಒಮ್ಮೆ ತೀನ್ ಮೂರ್ತಿ ಭವನ್ ವಿಚಾರವಾಗಿ ಕೆಲವರ ಅಭಿಪ್ರಾಯದಿಂದ ನೊಂದು ಅದರ ಬಗ್ಗೆ ಬೇಸರಿಸಿ ಕೊಂಡು ಆ ಕಡೆ ತಲೆ ಹಾಕಿಯೂ ಮಲಗುವುದಿಲ್ಲ ಎಂದು ನಿರ್ಧರಿಸಿದ್ದರು .  ಈಗಾಗಲೇ ಹೇಳಿದಂತೆ ಶಾಸ್ತ್ರೀಜಿಯವರ ಪದಗ್ರಹಣದ ಮೂರೇ ತಿಂಗಳಲ್ಲಿ ಅವ್ರ ವಿರುದ್ಧ ಸಂಸತ್ತಿನಲ್ಲಿ ಅವವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು ಆದ್ರೆ ಈ ಸವಾಲನ್ನು ಯಶಸ್ವಿಯಾಗಿ ಹಿಮ್ಮೆಟಿಸಿದ್ದಿರು ಶಾಸ್ತ್ರೀಜಿ .ಆದರೆ ಸವಾಲುಗಳು ಮತ್ತು ಕಷ್ಟಗಳು ಯಾರನ್ನು ಕೇಳಿ ಬರುವುದಿಲ್ಲ  ೧೯೬೫ ರಲ್ಲೇ ಆಹಾರ ಪಧಾರ್ಥಗಳ ಉಪಲಬ್ಧತೆ ಕಡಿಮೆಯಾಯಾಯಿತು ಆಹ್ರ ಪದಾರ್ಥಗಳ ದಾಸ್ತಾನು ಕೊರತೆ ಶಾಸ್ತ್ರೀಜಿಯವರ ನಿದ್ದೆಗೆಡಿಸ್ಸಿತ್ತು, ಈ ಸಂದರ್ಭದಲ್ಲಿ ಅವರು ಕೊಟ್ಟ ಕರೆ ಮತ್ತು ಅವರ ನಡೆ ಎಲ್ಲೆದ್ದೆ ಪ್ರಶಂಸೆಗೆ ಪಾತ್ರವಾಯಿತು.

  ಅವರು ತಮ್ಮ ಶ್ರೀಮತಿಗೆ ಮನೆಯಲ್ಲ ನಾವೆಲ್ಲರೂ ಒಂದು ಹೊತ್ತಿಗೆ ಊಟವಿಲ್ಲದೆ ಇರಬಹುದೇ ಎಂದು ನೋಡಣ ಎಂದು ಮೊದಲ ಪ್ರಯೋಗವನ್ನು ಮನೆಯಿಂದಲೇ ಪ್ರಾರಂಭಿಸಿದರು.ಯಾವಾಗ ಒಂದು ದಿವಸ ತನ್ನ ಮನೆಯಲ್ಲಿ ಉಪವಾಸವಿರಬಹುದು ಎಂದು ಸ್ವತಃ ಅನುಭವಕ್ಕೆ ತಂದುಕೊಂಡರೋ ಆಗ ಇಡೀ ರಾಷ್ಟ್ರಕ್ಕೆ ಸಾದ್ಯವಾದರೆ ವಾರಕೊಮ್ಮೆ ಒಪ್ಪತ್ತು ಉಪವಾಸ ಮಾಡಿ ಎಂದು ಕೇಳಿಕೊಂಡರು ಮತ್ತು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ನಿವಾಸದಲ್ಲಿ ಇದ್ದ "ಲಾನ್" ಅನ್ನು ತೆಗಸಿ ಅಲ್ಲಿಯೇ ನೇಗಿಲು ಹೂಡಿದರು, ಈ "ಕಿಚನ್ ಗಾರ್ಡನ್" ಪರಿಕಲ್ಪನೆ ಎಷ್ಟು ಪ್ರಮುಕ್ಯತೆ ಪಡೆಯೆತೆಂದರೆ , ಎಲ್ಲಿ ಸಣ್ಣ ಜಾಗ ಸಿಕ್ಕರೂ ಅಲ್ಲಿ ಬೆಳೆ ತೆಗೆದು ದೇಶದ ಪ್ರಗತಿಗೆ ನಾಂದಿ ಹಾಡಬೇಕು ಎಂಬ ಸಂದೇಶವನ್ನು ಸಾರಿದರು.

೧೯೬೫ರಲ್ಲಿ ಭಾರತ ಮತ್ತು ಪಾಕ್ ಯುದ್ಧದಲ್ಲಿ ಅವರು ತೋರಿದ ನಿಲುವಂತೂ, ಅವರ ಕಠಿಣ ನಿಲುವನ್ನು ತೆಗೆದುಕೊಳ್ಳಬಹುದಾದ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿತ್ತು. ಅದುವರೆಗೂ ವಿಶ್ವ ಅವರನ್ನು ಮೃದು ಹೃದಯೇ ಕಠಿಣ ಧೋರಣೆಯನ್ನ ಅನುಸರಿಸಲಾಗದ ಪ್ರಧಾನಮಂತ್ರಿಯೆಂದು ನೋಡುತಿತ್ತು. ಅದು ೧೯೬೫ರ ಸಮಯ , ೧೯೬೨ರ ಇಂಡೋ ಚೀನಾ ಯುದ್ಧದ ಗಯಾ ಇನ್ನು ಮಾಸಿರಲಿಲ್ಲ , ಪಾಕಿಸ್ತಾನ ಇದೆ ಸರಿಯಾದ ಸಮಯ ಹೇಗಿದ್ದರೂ ದುರ್ಬಲ ಪ್ರದಾನಿಯಿದ್ದಾರೆ ಮತ್ತು ೧೯೬೨ ಗಾಯ ಮಾಸಿಲ್ಲವೆಂದು ತಿಳಿದು ಗುಜರಾತ್ - ಕಚ್ (Katch) ನ "ಕಂಜರ್ ಕೋಟ್" ನ ಮೇಲೆ ಮುಗಿಬಿದ್ದು ತನ್ನ ಬಾಹುಳ್ಯಕ್ಕೆ ತೆಗೆದುಕೊಂಡಿತ್ತು . ಅದೇ ರೀತಿ ಜಮ್ಮು ಕಾಶ್ಮೀರದ ಚಂಬ್ ನ ಮೇಲು ಆಕ್ರಮಣ ಮಾಡಿತ್ತು ಶತ್ರು ದೇಶ. ಆ ಭಾಗದ ಮೇಲಿನ ಆಕ್ರಮಣ ಮತ್ತು ಬಾಹುಳ್ಯವೆಂದರೆ ಭಾರತವನ್ನು ಜಮ್ಮು ಮತ್ತು ಕಶ್ಮೀರ ಒಂದುಗೂಡಿಸುವ ಆ ಚಿಕನ್ ಪಾಯಿಂಟ್ ನ ಮೇಲೆ ಪ್ರಹಾರ ಮಾಡಿದಂತೆ ಮತ್ತು ಎಲ್ಲಾ ಸೇವಾ ಸರಂಜಾಮುಗಳ ಪೂರೈಕೆಗೆ ಅಡ್ಡಿಮಾಡಿದಂತೆ.

ಆಗ ವಾಯುಪಡೆಯ ಉಪಯೋಗ ಮಾಡುವ ಅನಿವಾರ್ಯ ಪರಿಸ್ಥಿತಿ ಸೇನೆಗೆ ಬಂದಿತ್ತು, ಆದರೆ ವಾಯುಪಡೆಯನ್ನು ಉಪಯೋಗಿಸುವುದೆಂದರೆ ಯುದ್ಧ ಪಡೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವುದು ಎಂಬುದೇ ಅರ್ಥ, ಆಗ ಶಾಸ್ತ್ರೀಜಿ ಏಕೆ ತಡಮಾಡುತ್ತಿದ್ದಿರಿ ವಾಯುಪಡೆಯನ್ನು ಉಪಯೋಗಿಸಿ ಅಂದಿದ್ದಲ್ಲದೆ,  ಅವರು ಆಕ್ರಮಿಸಿದ ಜಾಗ ಅಂತರರಾಷ್ಟ್ರೀಯ ಗಡಿಯಾದರೆ, ನಾವು ಕೂಡ ಪಂಜಾಬ್ ಮತ್ತು ರಾಜಸ್ಥಾನ್ ಮೂಲಕ ಅವರ ಗಡಿಯನ್ನು ದಾಟಲು  ಮೀನಾ ಮೇಷ ಎಣಿಸುವುದೇಕೆ ಎಂಬುದಾಗಿತ್ತು, ಪಾಕಿಸ್ತಾನ ಕನಸು ಮನಸಲ್ಲೂ ಈ ಭಗೆಯ ನಿರ್ಧಾರವನ್ನು ಶಾಸ್ತ್ರೀಜಿ ಕೈಗೊಳ್ಳುತ್ತಾರೆ ಎಂದು ಊಹಿಸಿರಲಿಲ್ಲ.

ಈ ನಿರ್ಧಾರದಿಂದಾಗಿ ಯುದ್ಧಭೂಮಿ ಅಕ್ಷರಶಃ ರಣ ರಂಗವಾಗಿ ಮಾರ್ಪಾಡಾಗಿತ್ತು, ಶಾಸ್ತ್ರೀಜಿಯವರ ಈ ಒಂದು ದಿಟ್ಟ ನಿರ್ಧಾರದಿಂದ ಲಾಹೋರ್ ಇನ್ನೇನು ಕ್ಷಣಮಾತ್ರದ ಗುರಿಯಾಗಿತ್ತು, ಕಾಶ್ಮೀರದ " ಹಾಜಿ ಪೀರ್" ಕೂಡ ಭಾರತದ ತಹಬಂದಿಗೆ ಬಂದಾಗಿತ್ತು. ಲಾಹೋರ್ನಂತೆ ಸಿಯಲ್ ಕೋಟ್ ಕೂಡ ಕ್ಷಣಮಾತ್ರದ ಗುರಿಯಾಗಿತ್ತು.ಹೀಗೆ ಸಿಯಾಲ್ಕೋಟ್ ಮತ್ತು ಲಾಹೋರ್ ಕ್ಷಣಮಾತ್ರದ ಗುರಿಯಾಗಿದ್ದರು , ಸಂಪೂರ್ಣವಾಗಿ ಆಕ್ರಮಿಸದೇ ಹಾಗೆ ಬಿಟ್ಟುಕೊಟ್ಟಿದ್ದು ಕೂಡ ಶಾಸ್ತ್ರೀಜಿಯವರ ನಿಪುಣತೆಗಿದ್ದ ಸಾಕ್ಷಿ . ಮುಂದೆ "ಯುನೈಟೆಡ್ ನೇಶನ್"(United  nation ) ಹಾಗು ಜಾಗತಿಕ ಒತ್ತಡದಿಂದಾಗಿ ಯುದ್ಧ ಒಂದು ಹಂತಕ್ಕೆ ತಲುಪಿ , ಪಾಕಿಸ್ತಾನ ಭಾರತದೊಂದಿಗೆ ಕಾದಾಡಿ ನಿಸ್ತೆಜನಾಗಿ ಬಂದ ದಾರಿಗೆ ಮಮ್ಮಲು ಮರಗಿ ಯುದ್ಧದಲ್ಲಿ ಸೋತು ಹೋಯಿತು , ಭಾರತ ತಾನು ಆಕ್ರಮಿಸಿಕೊಂಡಿದ್ದ ಪ್ರದೇಶವನ್ನು ಪುನಃ ಪಾಕಿಸ್ತಾನಕ್ಕೆ ಓಪ್ಪಿಸಿ ತನ್ನ ಹಿರಿಮೆ ಮತ್ತು ಗರಿಮೆಯನ್ನು ಮರುಸ್ಥಾಪಿಸಿತು.

ಮುಂದೆ ಶಾಸ್ತ್ರೀಜಿಯವರು ಅಲಹಾಬಾದ್ನಲ್ಲಿ ಮೊಳಗಿಸಿದ ಘೋಷ ವಾಕ್ಯ "ಜೈ ಜವಾನ್ ಜೈ ಕಿಸಾನ್" ಇಂದಿಗೂ ಪ್ರಸ್ತುತ, ತದನಂತರ ಶಾಸ್ತ್ರೀಜಿ ತಾಷ್ಕೆಂಟ್ನಲ್ಲಿ ಭಾರತಕೊಸ್ಕರ ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತವಾಗಿ ನಿಧನ ಹೊಂದಿದರು. ಅವರ ಅಗಲಿಕೆ ನೈತಿಕ ಮೌಲ್ಯಗಳಿಗಾದ ಆಘಾತವೇ ಸರಿ. ಇತ್ತೀಚಿನ ತಮಿಳ್ ನಾಡಿನ ರಾಜಕೀಯವನ್ನು ಗಮನಿಸುತ್ತಿದ್ದಾಗ ಕಾಮರಾಜ್ ನೆನಪಾದರು , ಅವರ ನೆನಪಿನೊಂದಿಗೆ ಶಾಸ್ತ್ರೀಜಿ ಕೂಡ ನೆನಪಾದರು , ಹೀಗೆ ಶಾಸ್ತ್ರೀಜಿ ಕೇವಲ ೧೮ ತಿಂಗಳು ಪ್ರಧಾನಿ ಹುದ್ದೆಯಲ್ಲಿದ್ದರು ಜನಮಾನಸದಲ್ಲಿ ಇಂದಿಗೂ ಅವರ ನೆನಪಿರುವುದು ಅವರ ಸರಳತೆಯಿಂದ ಮತ್ತು ಜನಾನುರಾಗಿ/ಸಮಾಜಮುಖಿ ಕಾರ್ಯಗಳಿಂದ ಇಂತಹ ನಾಯಕರಿಂದಾಗಿಯೇ ನಮಗೆಲ್ಲಾ ಇಂದು ಆಶಾಭಾವವೊಂದು ಜೀವಂತವಾಗಿದೆ.

ಕಾರ್ತಿಕ್ ಯಸ್ ಬಾಪಟ್