ಅದು ೧೯೯೬ ರ ಲೋಕಸಭ
ಚುನಾವಣೆ ಕಾಲ, ಬಿ ಜೆ
ಪಿ ಮತ್ತು ಕಾಂಗ್ರೆಸ್ ಹುಮ್ಮಸ್ಸಿನಿಂದ
ಕಣಕ್ಕಿಳಿದಿತ್ತು, ಆದರೆ ಆದ್ದದ್ದೇ ಬೇರೆ,
ಜನತಾ ದಳದ ನೇತೃತ್ವದಲ್ಲಿ ಯುನೈಟೆಡ್
ಫ್ರಂಟ್ ಒಕ್ಕೂಟ ವಿಜಯ ಪತಾಕೆ
ಹಾರಿಸಿ, ೧೯೨ ಸ್ಥಾನಗಳನ್ನು ಗೆದ್ದು
ಒಟ್ಟಾರೆ ತ್ರಿಶಂಕು ಸ್ಥಿತಿಯಾಗುವ ಪ್ರಮೇಯ ಬಂದೊದಗಿತ್ತು. ಬಿ
ಜೆ ಪಿ ಗೆ ೧೮೭
ಸ್ಥಾನಗಳನ್ನು ದಕ್ಕಿದ್ದವು, ಕಾಂಗ್ರೆಸ್ಗೆ ೧೪೦ ಸ್ಥಾನಗಳು ದಕ್ಕಿತ್ತು
ಆಗ ಕಾಂಗ್ರೆಸ್ ಪಕ್ಷದ ಈ ಸೋಲನ್ನು
ಇತಿಹಾಸದಲ್ಲೇ ಕಂಡು ಕೇಳರಿಯದ ಸೋಲು
ಎಂದು ರಾಜಕೀಯ ಪಂಡಿತರು ತಮ್ಮ
ಲಹರಿಯನ್ನು ಹರಿಯಬಿಡುತ್ತಿದ್ದರು, ಹಾಗಾದರೆ ಈಗಿನ ಪರಿಸ್ಥಿತಿಯನ್ನು ಏನನ್ನುತ್ತಾರೆ?
ಅದಿರಲಿ ಬದಲಾದ ಅತಂತ್ರ ರಾಜಕೀಯ
ಸನ್ನಿವೇಶದಲ್ಲಿ ಬಿ ಜೆ ಪಿ
ಏನೋ ಒಂದು ಕೈ ನೋಡಿಯೇ
ಬಿಡೋಣ ಎಂದು ಅಂದಿನ ರಾಷ್ಟ್ರಪತಿ
ಶಂಕರ ದಯಾಳ್ ಶರ್ಮ ಅವರ
ಕರೆಯ ಮೇರೆಗೆ ದೇಶ ಕಂಡ
ಅಜಾತ ಶತ್ರು ವಾಜಪಯೀ ಅವರ
ನೇತೃತ್ವದಲ್ಲಿ ತನ್ನ ಪಕ್ಷದೆಡೆ ಒಲವನ್ನು
ಕ್ರೂಡೀಕರಿಸುವ ಪ್ರಯತ್ನವೇನೋ ಮೊದಲಿಗೆ ಮಾಡಿತು ಆದರೆ
ಕೊನೆಗೆ ಇದರ ಗೊಡವೆಯೇ ಬೇಡ
ಎಂದು ಕೇವಲ ಹದಿಮೂರು ದಿನದ
ಆಡಳಿತಕ್ಕೆ ಇತಿಶ್ರೀ ಹಾಡಿತು, ಆ
ಕ್ಶಣಕ್ಕೊ ಕೂಡ ಖುದ್ದು ದೇವೇಗೌಡರಿಗೆ
ಪ್ರಧಾನಿ ಯಾಗುವ ಒಲವಿತ್ತೋ ಇಲ್ಲವೋ,
ಬದಲಾದ ಸನ್ನಿವೇಶದಲ್ಲಿ ನಾಡು ಕಂಡ ಹಿರಿಯ
ರಾಜಕೀಯ ನಾಯಕ "ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು" ಹನ್ನೆರಡನೇ ಪ್ರಧಾನ ಮಂತ್ರಿಯಾಗಿ ಭಾರತದ
ಚುಕ್ಕಾಣಿ ಹಿಡಿದರು.
ಈ ಸಂಧರ್ಭದಲ್ಲಿ ಜಾತಿ, ಮತ , ಪಂಥ
ಭೇದ ಮರೆತು, ಅವರಿಗಾಗುವವರು, ಆಗದವರು
, ಪಕ್ಷಾತೀತವಾಗಿ ಸಂಭ್ರಮಿಸಿದ್ದರು ಕರ್ನಾಟಕದ ನಾಯಕರೊಬ್ಬರು ನಮ್ಮ ದೇಶದ ಪ್ರಧಾನ
ಮಂತ್ರಿ ಹುದ್ದೆಯನ್ನಲಂಕರಿಸುವುದೆಂದರೆ ಕಡಿಮೆ ಮಾತೆ, ಹಾಸನದ
ಜನರಿಗಂತೂ ಸ್ವರ್ಗಕ್ಕೆ ಮೂರೇ ಗೇಣು, ಆದರೆ
ಅವರಿಗೆ ಪ್ರಧಾನಿಯಾಗುಳಿಯುವ ಅವಕಾಶ ಸಿಕ್ಕಿದ್ದು ಮಾತ್ರ
ಹದಿನೆಂಟೇ ತಿಂಗಳು , ಈ ಸೀಮಿತ ಅವಧಿಯಲ್ಲೂ
ಕರ್ನಾಟಕಕ್ಕೆ ಸಾಕಷ್ಟು ಒಳಿತಾಗುವ ಕಾರ್ಯಕ್ರಮವನ್ನು
ತಂದರು ಅದರಲ್ಲೂ ಹಾಸನದ ಜನತೆಯಂತೂ
ಬೆಂಗಳೂರು - ಹಾಸನದ ರೈಲ್ವೆ ಮಾರ್ಗದ
ಶಂಕುಸ್ಥಾಪನೆಯನ್ನು ದೇವೆಗೌಡರು
ನೆರವೇರಿಸಿದಾಗ ಹಾಸನದ ಜನತೆ ಅಂದೇ
ರೈಲಲ್ಲಿ ಕೂತಷ್ಟು ಹಿರಿಹಿರಿ ಹಿಗ್ಗಿದ್ದರು
ಅದು ಸಹಜವೂ ಕೂಡ ಹೌದು
ಆದರೆ ಆದದ್ದೇನು ಇಪ್ಪತ್ತೊಂದು ವರ್ಷಗಳ ನಂತರ ರೈಲ್ವೆ
ಮಾರ್ಗ ಲೋಕಾರ್ಪಣೆಯಾಗಿದೆ.
ಆ ಸಂಧರ್ಭದಲ್ಲಿಯೇ ನಮ್ಮ ನಾಯಕರುಗಳ ಬಹುಮುಖ
ಪ್ರತಿಭೆಯನ್ನರಿತಿದ್ದ ಜನ ಬೀದಿ ಬೀದಿಯಲ್ಲಿ,
ಚಹಾದಂಗಡಿಯಲ್ಲಿ , ಹೋಟೆಲಿನಲ್ಲಿ ಹೀಗೆ ವಿವಿಧ ಸ್ಥಳಗಳಲ್ಲಿ
೧೯೯೬ ರಲ್ಲಿ ಶಂಕು ಸ್ಥಾಪನೆಯಾಗಿದೆ,
ದೇವೇಗೌಡರ ಸರ್ಕಾರವಿದ್ದರೆ ತ್ವರಿತಗತಿಯಲ್ಲಿ ಆಗಬಹುದೇನೋ ಏಕೆಂದರೆ ಇದು ಅವರ
ಕನಸು, ಈ ಕನಸನ್ನು ನನಸಾಗಲು ಹೆಚ್ಚು ಕಾಳಜಿ
ವಹಿಸುತ್ತಾರೆ ಎಂದು ಆದ್ದರಿಂದ ಏನೇ
ಆದರೂ ಬೇರೆ ಸರ್ಕಾರ ಬಂದರು
೨೦೦೬ ಅಥವಾ ೨೦೦೭ ರಲ್ಲಿ
ನಾವು ಹಾಸನದಿಂದ ಬೆಂಗಳೂರಿಗೆ ಹಾಗು ಬೆಂಗಳೂರಿನಿಂದ ಹಾಸನಕ್ಕೆ
ಅಡ್ಡಾಡಬಹುದು ಎಂದು ಮನಸ್ಸಿನಲ್ಲಿಯೇ ಮಂಡಿಗೆಯನ್ನು
ತಿಂದೆದ್ದಿದರು, ಆದರೆ ೨೦೦೭ ರವರೆಗೂ
ಆದದ್ದೇನು ಬರಿ ಆಶ್ವಾಸನೆಗಳೇ, ಜನರೆಂದು
ಕೊಂಡಂತೆ ಹದಿನೆಂಟು ತಿಂಗಳಲ್ಲಿ ದೇವೇಗೌಡರು ಪದತ್ಯಾಗ ಮಾಡುವ ಸಂಧರ್ಭ
ಬಂತು, ಇಲ್ಲಿ ವಿಷಯ ದೇವೇಗೌಡ್ರ
ಸರ್ಕಾರ ಇರುವಿಕೆಯದೋ ಅಥವಾ ಇಲ್ಲದಿರುವುದೋ ಅಲ್ಲ,
ಯಾವೂದೇ ಒಂದು ಮೂಲ ಸೌಕರ್ಯವನ್ನು
ಕೊಡಮಾಡುವ ಯೋಜನೆಯನ್ನು ಕೈ ಗೆತ್ತಿಕೊಂಡಾಗ ಅದರ
ಅಡೆ ತಡೆಗಳು ಭಾರತದಂತಹ ವಿಶಾಲ
ದೇಶದಲ್ಲಿ ಸರ್ವೇ ಸಾಮಾನ್ಯ ಆದರೆ
ಇದೇನಿದು ಬರೋಬ್ಬರಿ ಇಪ್ಪಂತೊಂದು ವರ್ಷ ಅಂದ್ರೆ ಎರಡು
ದಶಕ, ಸುಮ್ಮನೆ ಹಾಗೆ ಕಣ್ಣಾಡಿಸಿನೋಡಿ
೧೯೯೬ರಲ್ಲಿ ಈ ಯೋಜನೆಗೆ ಎತ್ತಿಟ್ಟ
ಅಂದಾಜು ವೆಚ್ಚ ಸರಿ ಸುಮಾರು
ಇನ್ನೂರ ತೊಂಬತ್ತು ಕೋಟಿ, ಆದರೆ ೨೦೧೭ರಲ್ಲಿ
ಮೊನ್ನೆ ಈ ರೈಲು ಮಾರ್ಗ
ಲೋಕಾರ್ಪಣೆಯಾದಾಗ ತಗಲಿದ ವೆಚ್ಚ ಬರೋಬ್ಬರಿ
೧,೩೦೦ ಕೋಟಿ
ಅಂದರೆ ಮೊದಲು ಊಹಿಸಿದ್ದಕ್ಕಿಂತ ನಾಲ್ಕು
ಪಟ್ಟು ಹೆಚ್ಚು , ನಮ್ಮ ಇತ್ತೀಚಿನ ಸ್ಟೀಲ್
ಸೇತುವೆಗೆ ಮಾಡಬೇಕೆಂದು ಕೊಂಡಿದ್ದ ವೆಚ್ಚಕಿಂತ ಕಡಿಮೆ ಎಂಬುದೇ ಒಂದು
ಬಹು ದೊಡ್ಡ ಸಮಾಧಾನ, ಅದು
ಕಾರ್ಯೋನ್ಮುಖಗೊಳ್ಲಲಿಲ್ಲ ಆದದ್ದು ಒಳಿತೇ ಆಯಿತು
ಬಿಡಿ, ಹಾಗೆಂದ ಮಾತ್ರಕ್ಕೆ ಕಷ್ಟಗಳು
ಅಡೆತಡೆಗಳು ಇರಲಿಲ್ಲವೆಂದೆಲ್ಲಾ ಹಲವು ಅಡೆತಡೆಗಳು ಬಂದವು
ಅದನ್ನು ಕಾಲ ಕಾಲಕ್ಕೆ ಆಯಾ
ಕಾಲದ ಸರ್ಕಾರಗಳು ತಕ್ಕ ಮಟ್ಟಿಗೆ ಯಶಸ್ವಿಯಾಗಿ
ನಿಭಾಯಿಸಿದವು ಎನ್ನಬಹುದು.
ಇಲ್ಲಿ ಹಾಸನ ಬೆಂಗಳೂರಿನ ರೈಲು
ಮಾರ್ಗದ ಉಲ್ಲೇಖ ಕೇವಲ ಸಾಂಧರ್ಭಿಕವಾದದ್ದು
ಮತ್ತು ಈ ಮಾರ್ಗ ನಿರೀಕ್ಷೆಗೂ
ಮೀರಿ ವಿಳಂಬವಾದದ್ದು ಇದರಲ್ಲಿ ಎರಡು ಮಾತಿಲ್ಲ
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ರೀತಿಯ ವಿವಿಧ
ಯೋಜನೆಗಳ ಸ್ಥಗಿತ ಅಥವಾ ವಿಳಂಬ
ತನನ್ನು ತಾನು ಶರವೇಗಕ್ಕೊಡ್ಡಿ
ಕೊಳ್ಳುತ್ತಿರುವ ಭಾರತದಂತ ದೇಶಕ್ಕೆ ಸಹ್ಯವೇ?
ಖಂಡಿತ ಇಲ್ಲ, ೨೦೧೪-೨೦೧೫ ರ ಸಾಲಿನಲ್ಲಿ
ಹೊರತಂದಂತಹ ಭಾರತೀಯ ಆರ್ಥಿಕ ಸಮೀಕ್ಷೆಯ
ಪ್ರಕಾರ ಪ್ರತಿ ನೂರು ರೂಪಾಯಿಯ
ಯೋಜನೆ ಅನುಷ್ಠಾನಗೊಂಡಾಗ ಹತ್ತು ರುಪಾಯೀಯಷ್ಟು ಕೆಲಸ
ನಿಲುಗಡೆ ಹಾಗು ವಿಳಂಬವಾಗುತ್ತದೆ - ಇದು
ಸಾರ್ವಜನಿಕ ಯೋಜನೆಯ ಪರಿಸ್ಥಿತಿಯಾದರೆ, ಖಾಸಗಿ
ಸಹ ಭಾಗಿತ್ವದ ಯೋಜನೆಯಲ್ಲಿ ಹದಿನಾರು ರುಪಾಯೀಯಷ್ಟು ಕೆಲಸ
ನಿಲುಗಡೆಯಾಗುತ್ತದೆ. "ಮಿನಿಸ್ಟ್ರಿ ಒಫ್ ಸ್ಟ್ಯಾಟಿಸ್ಟಿಕ್ಸ್ ಅಂಡ್
ಪ್ರೋಗ್ರಾಮ್" ನ ಇತ್ತೀಚಿನ ವರದಿಯ
ಪ್ರಕಾರ ಇಂತಹ ೧೧೮೬ ಪ್ರಮುಖ
ಯೋಜನೆಗಳಲ್ಲಿ ೯೪ ಯೋಜನೆಗಳು ಕಾಲ
ಪರಿಧಿಯ ಹಿಂದಿರುವುದಲ್ಲದೆ ಮೊದಲಿನ ಅಂದಾಜು ವೆಚ್ಚವನ್ನು
ನಿರಂತರವಾಗಿ ಮೀರುತ್ತಿದೆ ಇದೆಲ್ಲದರ ಕಾರಣವೇನೆಂದು ನೋಡಲು ಹೋದರೆ ಅದೇ
ಹಳೆಯ ಕಾರಣಗಳೇ ೧. ಕಾನೂನಿನ
ಅಡೆತಡೆ, ೨ ಭೂ ಸ್ವಾಧೀನ ೩
ಪರಿಸರ ಮತ್ತು ಅರಣ್ಯ ಇಲಾಖೆ
ಪರವಾನಗಿಗಳು, ೪ ಸ್ಥಳೀಯ ಸಂಸ್ಥೆ
ಅನುಮತಿಗಳು ಹೀಗೆ ಇದೆ ಹತ್ತು
ಹಲವು ದಶಕದಿಂದ ಪೀಳೆಗೆಯಿಂದ ಪೀಳಿಗೆಗೆ
ವರ್ಗವಾಗುತ್ತಿರುವ ಗೊತ್ತಿರುವ ಸಮಸ್ಯೆಗಳೇ ಹೊರತು ಯಾವುದಾದರು ಹೊಸ
ಸಮಸ್ಯೆ ಇದೆಯೇ ಎಂದು ದುರ್ಬಿನ್
ಹಾಕಿ ನೋಡಬೇಕು ಅಂದರೆ ಈ
ಸಮಸ್ಯೆಗಳು ಹೊಸದಲ್ಲ ಎಲ್ಲ ಕಾಲಕ್ಕೂ
ಎಲ್ಲರಿಗೂ ಗೊತ್ತಿರುವ ಸಮಸ್ಯೆಗಳೇ, ಈ ಸಮಸ್ಯೆಗೆ ಪರಿಹಾರವನ್ನು
ಹುಡುಕಿ ಕಾರ್ಯ ಪ್ರವ್ರತಃರಾಗುವ ಇಚ್ಛಾಶಕ್ತಿಯೊಂದಿರಬೇಕು
ಅಷ್ಟೇ
ಈ ರೀತಿಯ ಯೋಜನೆಗಳ ಸ್ಥಗಿತಗೊಳ್ಳುವಿಕೆ
ಹಾಗು ವಿಳಂಬವಾಗುವುದು
ಆರ್ಥಿಕ ವಲಯಕ್ಕಂಟಿಕೊಂಡಿರುವ ಮಹಾ ಪಿಡುಗು, ಇದರ
ಪರಿಣಾಮ ಎಂಥವುದೆಂದು ಜನಸಾಮಾನ್ಯರು ಊಹಿಸಲು ಅಸಾಧ್ಯ, ಬ್ಯಾಂಕ್ಗಳಲ್ಲಿ
ಅನುತ್ಪಾದಕ ಸಾಲದ ಏರಿಕೆಗು ಈ
ರೀತಿಯ ಬೆಳವಣಿಗೆಗೂ ನೇರ ಸಂಪರ್ಕವಿದೆ ಎಂದರೆ
ನಾವು ನಂಬಲೇ ಬೇಕು - ಕೆಲವೊಮ್ಮೆ
ಹಲವಾರು ಯೋಜನೆಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಕೈ
ಜೋಡಿಸಿದ ಕಂಪನಿಗಳು ವಿಳಂಬದಿಂದಾಗಿ ಹಾಗು ಯೋಜನೆಗಳ ಸ್ಥಗಿತದಿಂದಾಗಿ
ಉಂಟಾಗುವ ಹೆಚ್ಚುವರಿ ಖರ್ಚನ್ನು ಭರಿಸಲಾಗದೆ ಅರ್ಧಕ್ಕೆ ತಮ್ಮ ಕೆಲಸವನ್ನು ನಿಲ್ಲಿಸುತ್ತವೆ
, ಆ ಮೂಲಕ ಸಾಲ ಮರು
ಪಾವತಿಯಲ್ಲೋ ಸ್ಥಿರತೆ ಕಂಡು ಕೊಳ್ಳಲು
ಹೆಣಗಾಡಿ ಮತ್ತೆ ಬ್ಯಾಂಕಿನ ಬ್ಯಾಂಕಿನ
ಮುಂದೆ ಸಾಲಕ್ಕೆ ಕೈ ಒಡ್ಡಬೇಕಾಗುತ್ತದೆ
ಆಗ ಬ್ಯಾಂಕುಗಳ ಪರಿಸ್ಥಿತಿ ಹೇಳ ತೀರದು ಅವರ
ಕೈ ಕಟ್ಟಿದಂತಾಗಿ ಕೊಟ್ಟ ಸಾಲದ ಕಂತೆ
ಮರು ಪಾವತಿಯಾಗಿರುವುದಿಲ್ಲ ಹೇಗೆ ಹೆಚ್ಚುವರಿ ಸಾಲವನು
ಕೊಡುವುದು ಎಂದು ಕೈ ಕಟ್ಟಿ
ಕುಳಿತು ಬಿಡುತ್ತವೆ , ಆಗ ಆರ್ಥಿಕ ಪರಿಸರದಲ್ಲಿ
ಹೂಡಿಕೆಗೆ ಬೇಕಾಗುವ ಅಗತ್ಯ ಹಣ
ಕಡಿಮೆಯಾಗುತ್ತ ಬರುತ್ತದೆ , ಹೂಡಿಕೆ ಕಡಿಮೆಯಾದಾಗ ಸಹಜವಾಗಿ
ಉದ್ಯೋಗದ ಅವಕಾಶಗಳು ಕ್ಷೀಣಿಸುತ್ತವೆ ಈ ಬೆಳವಣಿಗೆ ಒಟ್ಟಾರೆಯಾಗಿ
ದೇಶಿಯ ಉತ್ಪನ್ನಗಳ (ಜಿಡಿಪಿ - ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್)
ಮೇಲೆ ಪರಿಣಾಮ ಉಂಟು ಮಾಡುತ್ತ
ಹೋಗುತ್ತದೆ.
ಇದೆಲ್ಲಕ್ಕೂ
ಪರಿಹಾರವೆಂದರೆ ಇಂತಹ ಸಮಸ್ಯೆಗಳ ಶೀಘ್ರ
ಪರಿಹಾರ ಕಂಡುಕೊಳ್ಳುವುದು, ಹಾಗು ಹೊಸ ಹೊಸ
ಯೋಜನೆಗಳಿಗಿಂತಲೂ ಈಗಾಗಲೇ ಘೋಷಿಸಿರುವ ಯೋಜನೆಗಳ
ಷೀಗ್ಗ್ರ್ ಅನುಷ್ಠಾನಕ್ಕೆ ನಾಂದಿ ಹಾಡಿ ಪ್ರತಿ ಸಮಸ್ಯೆಗಳಿಗೂ
ಪ್ರತ್ಯೇಕ ಸೆಲ್ ಗಳನ್ನೂ ನಿರ್ಮಿಸಿ
ಎಲ್ಲ ಸಮಸ್ಯೆಗಳ ಮೂಲಕ್ಕೆ ಪರಿಹಾರ ಒಂದೇ
ಸಂಸ್ಥೆಯಡಿ ಬರುವಂತೆ ಮಾಡಿ ಕಾರ್ಯಪ್ರವೃತಃರಾಗುವುದು
, ಹಾಗಾಗುವದೇ? ಮೇಲ್ನೋಟಕ್ಕೆ ಹಾಗಾಗುವ ಲಕ್ಷಣಗಳು ಕೇಂದ್ರದಲ್ಲಿ
ತ್ಯಾಗಿ ಉತ್ತರದಲ್ಲಿ ಯೋಗಿ ಎಂಬ ಘೋಷವಾಕ್ಯದಲ್ಲಿ
ಕಾಣಿಸುತ್ತಿವೆ, ಆದರೂ ಪ್ರತ್ಯಕ್ಷ ಕಂಡರೂ
ಪ್ರಮಾಣಿಸಿ ನೋಡು ಎಂಬ ನಾನುಡಿಯು
ಇದೆ ಅದೇನೇ ಇದ್ದರು ಈಗಿನ
ಸರ್ಕಾರ ಪೂರೈಸಿರುವುದು 3 ವರ್ಷ ಮಾತ್ರ
, ಮೋದಿ ಯವರೇ ನನ್ನ ಗುರಿ
೨೦೨೨ ಎಂದು ಹೇಳಿದ್ದಾರೆ ಕಾದು
ನೋಡಣ, ಜನ ಸಾಮಾನ್ಯನ ನಂಬಿಕೆ ಹುಸಿಯಾಗದಂತೆ ಕೆಲಸವಾಗಬೇಕಷ್ಟೆ
, ಇದೆಲ್ಲದರ ನಡುವೆ ಕೊನೆಗೂ ಬಂದ
ಉಗಿ ಬಂಡಿಯನ್ನು ನೋಡಿ ಹಾಸನದ ಜನತೆಗೆ
ಅಂದೇ ಯುಗಾದಿಯನ್ನು ಆಚರಿಸಿದ ಅನುಭವ, ಇನ್ನು
ಮಂಗಳೂರಿಗರು ಖುಷಿ ಪಡುವ ದಿನಗಳು
ದೂರವಿಲ್ಲ ಎಂದು ಪ್ರಭುಗಳು ಹೇಳಿದ್ದಾರೆ
ಪ್ರಜೆಗಳಾದ ನಾವು ಕಾದು ನೋಡಣ.