" ದಿ ಕಶ್ಮೀರ ಫೈಲ್ಸ್" ಎಂಬ ಚಲನ ಚಿತ್ರ ಕಳೆದ ಕೆಲವು ದಿನಗಳಿಂದ ದೇಶದೆಲ್ಲೆಡೆ ಇನ್ನಿಲ್ಲದಂತೆ ಸದ್ದು ಮಾಡುತ್ತಿದೆ, ಈ ಚಿತ್ರದ ವಸ್ತುವೇ ಅಂತಹದು , ಈ ಚಲನ ಚಿತ್ರ ದೇಶಾದ್ಯಂತ ಒಂದು ರೀತಿಯ ಸಂಚಲನವನ್ನು ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು, ಹಾಗಾದರೆ ನೇರ ನೇರಾ ಈ ಚಲನಚಿತ್ರದ ಬಗ್ಗೆ ಗಮನ ಹರಿಸುವ ಮುನ್ನ ಸಂಕ್ಷಿಪ್ತವಾಗಿ ಕಾಶ್ಮೀರದ ಸ್ವಾತಂತ್ರಾನಂತರ ಹಾಗು ಸ್ವತಂತ್ರ ಪೂರ್ವದಲಿಲ್ಲ ನಡೆದ ಘಟನೆಗಳ ಅವಲೋಕನ ಅತ್ಯಗತ್ಯ.
ಅದು 1946 ಹಾಗು 1947 ಸ್ವತಂತ್ರ ಪೂರ್ವದ ಸಮಯ ಆಗ ಬ್ರಿಟಿಷ್ ಸರ್ಕಾರ ಇನ್ನೇನು ಹಿಂದುಸ್ತಾನದಿಂದ ಕಾಲ್ಕಿತ್ತುವ ಎಲ್ಲಾ ತಯಾರಿಯನ್ನು ನಡೆಸಿತ್ತು ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ನಾಯಕರು, ವಿವಿಧ ಸ್ತರಗಳಲಿದ್ದ ವಿವಿಧ ರಂಗದ ಗಣ್ಯರು ಹಾಗು ಬ್ರಿಟಿಷ್ ಸಾಮ್ರಾಜ್ಯ ಭಾರತ ಸಂಪೂರ್ಣ ಸ್ವಾಯತ್ತತೆ ಪಡೆದ ರಾಷ್ಟ್ರವಾಗಿ ಹೊರ ಹೊಮ್ಮಲು ತತಕ್ಷಣಕ್ಕೆ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ರೂಪು ರೇಷೆಯನ್ನು ಸಿದ್ಧಪಡಿಸುತ್ತಿತ್ತು ಅದರಲ್ಲೂ ಸ್ವತಂತ್ರ ಒಕ್ಕೂಟವಾಗಿ ರಾಜ್ಯವಾಳುತ್ತಿದ್ದ ರಾಜರುಗಳ , ಸಾಮಂತರುಗಳನ್ನು ಹೇಗೆ ಸ್ವತಂತ್ರ ಭಾರತದಲ್ಲಿ ಸೇರಿಸಿಕೊಂಡು ಏಕೀಕೃತ ಹಿಂದುಸ್ತಾನವನ್ನು ಕಟ್ಟಬೇಕೆಂಬ ಚರ್ಚೆಗಳು ನಡೆಯುತ್ತಿದ್ದವು ಆದಾಗ್ಯೂ ಹಲವು ಒತ್ತಡಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳಾಗಿ ಹಿಂದುಸ್ತಾನವನ್ನು ಇಬ್ಬಾಗ ಮಾಡುವ ನಿರ್ಧಾರಕ್ಕೆ ಹೆಚ್ಚು ಕಡಿಮೆ ಬ್ರಿಟಿಷ್ ಸಾಮ್ರಾಜ್ಯ ಮುಂದಾಗಿತ್ತು ಅದರಂತೆ ಕೆಲವು ರಾಜರುಗಳು ತಮ್ಮ ಇಚ್ಛೆಯಂತೆ ಭಾರತದೊಂದಿಗೋ ಅಥವಾ ಪಾಕಿಸ್ತಾನದೊಂದಿಗೆ ಸೇರಿಕೊಳ್ಳುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿದ್ದರು ಆದರೆ ಕಾಶ್ಮೀರ ಪ್ರಾಂತ್ಯದ ರಾಜ, ರಾಜ ಹರಿಸಿಂಗ್ ತಾನು ಭಾರತ ಅಥವಾ ಪಾಕಿಸ್ತಾನ ಯಾರೊಂದಿಗೂ ವಿಲೀನಗೊಳ್ಳಲು ಒಪ್ಪಿಕೊಳ್ಳದೆ ಸ್ವತಂತ್ರ ವಾಗಿರಲು ನಿರ್ಧರಿಸುವುದಾಗಿ ಘೋಷಿಸುತ್ತಾನೆ , ಆದರೆ ಜಿನ್ನಾ ಮೊದಲಿಂದಲೂ ಹೇಗಾದರೂ ಮಾಡಿ ಕಾಶ್ಮೀರವನ್ನು ಪಾಕಿಸ್ತಾನದ ತೆಕ್ಕೆಗೆ ಸೇರಿಸಿಕೊಳ್ಳಬೇಕೆಂದು ಹೊಂಚು ಹಾಕುತ್ತಿದ್ದನು , ಜಿನ್ನಾ ಅಣತಿಯಂತೆ ಪಾಕಿಸ್ತಾನದ ಮಿಲಿಟರಿ ಪಡೆ ಪಾಕಿಸ್ತಾನದ ಕೆಲವು ಬುಡಕಟ್ಟು ಜನಾಂಗದೊಂದಿಗೆ ಕೈ ಜೋಡಿಸಿ ಕಾಶ್ಮೀರದ ಮೇಲೆ ಯುದ್ಧಕ್ಕೆ ಪ್ರಚೋದನೆ ನೀಡುತಿತ್ತು , ಮೊದಲಿಗೆ ಪಾಕಿಸ್ತಾನ ಕಾಶ್ಮೀರ ದೊಂದಿಗೆ ಮಾಡಿಕೊಂಡಿದ್ದ ಸ್ಟಾಂಡ್ ಸ್ಟಿಲ್ ಅಗ್ರಿಮೆಂಟ್ ಅನ್ನು ಮುರಿದು ಹಾಕಿ ಪಾಕಿಸ್ತಾನಕ್ಕೆ ಸರಬರಾಜಾಗುತ್ತಿದ ಪೆಟ್ರೋಲ್ ಹಾಗು ಇತರೆ ವಸ್ತುಗಳ ಸರಬರಾಜನ್ನು ನಿಲ್ಲಿಸಿ ಕಾಶ್ಮೀರದ ರಾಜನ ಕೈ ಕಟ್ಟಿ ಹಾಕಿತು , ನಂತರ ಸೀಲ್ಕೋಟ್ ಮತ್ತು ಜಮ್ಮುವಿನ ನಡುವೆ ಸಮರ್ಕ ಸಾದಿಸುತ್ತಿದ ರೈಲ್ವೆ ಸಂಪರ್ಕವನ್ನು ಕಡಿತಗೊಳಿಸಿತು. ಹೀಗೆ ಪಾಕಿಸ್ತಾನ ಕಾಶ್ಮೀರ ಮತ್ತು ರಾಜ ಹರಿಸಿಂಗ್ ನನ್ನ ಕಟ್ಟಿ ಹಾಕುತ್ತ ಹೋಯಿತು , ಆಗ ಹರಿ ಸಿಂಗ್ ಭಾರತವು ಮಿಲಿಟರಿ ಸಹಾಯ ಮಾಡಬೇಕೆಂದು ಕೇಳಿ ಕೊಳ್ಳುತ್ತಾನೆ, ಆ ಸಂಧರ್ಭದಲ್ಲಿ ಪಟೇಲರಿಂದಾದಿಯಾಗಿ ನೆಹರು ವರೆಗೆ ಎಲ್ಲರ ಅಭಿಪ್ರಾಯವು ತತಕ್ಷಣವೇ ಸೈನ್ಯವನ್ನು ಕಾಶ್ಮೀರದ ರಕ್ಷಣೆಗೆ ಕಳಿಸಿ ಕೊಡಬೇಕೆಂದಾಗಿತ್ತು ಆದರೆ ಭಾರತ ಸ್ವತಂತ್ರ ಗೊಂಡಿತ್ತೆ ವಿನಾ ಸಂಪೂರ್ಣ ಸ್ವಾಯತ್ತತೆ ಪಡೆದಿರಲಿಲ್ಲ ಅದರ ಪರಿಣಾಮವಾಗಿ ಮೌಂಟ್ ಬ್ಯಾಟನ್ ಇನ್ನು ಭಾರತದ ಗವರ್ನರ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದನು , ಆದರೆ ಪಾಕಿಸ್ತಾನ ಜಿನ್ನಾ ರನ್ನು ಪಾಕಿಸ್ತಾನದ ಗವರ್ನರ್ ಜನರಲ್ ಆಗಿ ಆಯ್ಕೆ ಮಾಡಿಕೊಂಡಾಗಿತ್ತು ಅದರ ಪರಿಣಾಮವಾಗಿ ಮೌಂಟ್ ಬ್ಯಾಟನ್ ಅಣತಿಯಂತೆ ಪ್ರತಿ ಹೆಜ್ಜೆ ಇಡಬೇಕಿತ್ತು ಹಾಗು ಮೌಂಟ್ ಬ್ಯಾಟನ್ ಸೈನ್ಯವನ್ನು ಕಾಶ್ಮೀರಕ್ಕೆ ಕಳಿಸಲು ಒಪ್ಪಲಿಲ್ಲ , ಮೌಂಟ್ ಬ್ಯಾಟನ್ ಪ್ರಕಾರ ಹರಿ ಸಿಂಗ್ ವಿಲೀನಕ್ಕೆ ಸಹಿ ಹಾಕುವ ವರೆಗೂ ಸೇನೆಯನ್ನು ಕಳುಹಿಸಿ ಕೊಡುವುದು ಸಮಂಜಸವಲ್ಲ ಎಂಬುದಾಗಿತ್ತು , ಆದರೆ ಅಲ್ಲಿ ಕಾಲ ಮೀರುತ್ತಿತ್ತು ಪಾಕ್ ಪ್ರಚೋದಿತ ಆಕ್ರಮಣಕಾರರು ಕಾಶ್ಮೀರದ ಆಯಕಟ್ಟಿನಲ್ಲಿ ಬಂದು ಕುಳಿತಿದ್ದರು , ಕೊನೆಗೆ ಮೌಂಟ್ ಬ್ಯಾಟನ್ ನ ಅಣತಿಯಂತೆ ವಿ ಪಿ ಮೆನನ್ ರಾಜ ಹರಿ ಸಿಂಗ್ ಗೆ ಮನದಟ್ಟಾಗುವಂತೆ ಪರಿಸ್ಥಿತಿಯನ್ನು ತಿಳಿಸಿ ರಾಜ ಹರಿ ಸಿಂಗ್ ನಿಗೆ ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರಗೊಳ್ಳಲು ಸಲಹೆ ಕೊಡುತ್ತಾರೆ, ರಾಜ ಹರಿ ಸಿಂಗ್ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲು ಕರಾರು ಪಾತ್ರಕ್ಕೆ ಸಹಿ ಮಾಡುತ್ತಾನೆ , ಆದರೆ ದುರದೃಷ್ಟವಶಾತ್ ಅಷ್ಟು ಹೊತ್ತಿಗೆ ಪಾಕ್ ಪ್ರಚೋದಿತ ಬುಡಕಟ್ಟು ಬಂಡುಕೋರರು ಆಯಾ ಸ್ಥಳದಲ್ಲಿ ಸ್ಥಾಪಿತರಾಗಿರುತ್ತಾರೆ , ಜಿನ್ನಾ ರಾಜ ಹರಿ ಸಿಂಗ್ ನ ನಡೆಯಿಂದಾಗಿ ವಿಚಲಿತನಾಗಿ ಬ್ರಿಟಿಷರಿಗೆ ಸೈನ್ಯ ಸಹಾಯ ಕೇಳುತ್ತಾನೆ ಆದರೆ ಬ್ರಿಟಿಷ್ ಅಧಿಕಾರಿಗಳು ಸಾರ ಸಗಟಾಗಿ ನಿರಾಕರಿಸುತ್ತಾರೆ , ಇದೆ ಸಂದರ್ಭದಲ್ಲಿ ಮೌಂಟ್ ಬ್ಯಾಟನ್ ಸೇನೆಯನ್ನು ಹಿಂಪಡೆಯುವಂತೆ ಜಿನ್ನಾ ಗೆ ಕೇಳಿ ಕೊಳ್ಳುತ್ತಾನೆ , ಅಷ್ಟರಲ್ಲಿ ನೆಹರು ಆಕಾಶವಾಣಿಯಲ್ಲಿ ತಮ್ಮ ಭಾಷಣದಲ್ಲಿ UNO ಮಧ್ಯಸ್ಥಿಕೆಯಲ್ಲಿ ಕಾಶ್ಮೀರದಲ್ಲಿ ಜನ ಮತ ಸಂಗ್ರಹಿಸುತ್ತೇವೆ ಎಂಬ ಘನಘೋರ ಹೇಳಿಕೆಯನ್ನು ಕೊಟ್ಟು ಬಿಡುತ್ತಾರೆ , ನಂತರ ನಡೆದದ್ದು ಎಲ್ಲರಿಗು ತಿಳಿದೇ ಇದೆ , ಪಾಕಿಸ್ತಾನ ಕಾಶ್ಮೀರದಿಂದ ಕಾಲ್ಕಿತ್ತರು ಕೆಲವು ಪ್ರದೇಶದಿಂದ ಹಿಂದೆ ಸರಿಯಲೇ ಇಲ್ಲ ಇಂದಿಗೂ ಅದು ಪಾಕ್ ಆಕ್ರಮಿತ ಕಾಶ್ಮೀರವೆಂದು ನಾವು ಕರೆಯುತ್ತೇವೆ , ಅದು ಸರಿ ಕೆಲವೊಮ್ಮೆ ರಾಜ್ಯಭಾರ ಮಾಡುವಾಗ ಇಂಥ ತಪ್ಪುಗಳು ಆಗುತ್ತವೆ ತಪ್ಪುಗಳು ಸಹಜ ಆದರೆ ಪ್ರಮಾದಗಳಾಗಬಾರದಲ್ಲವೇ? ಆರ್ಟಿಕಲ್ 370 ಮತ್ತು 35 ಎ ಒಡಂಬಡಿಕೆಗೆ ಸಹಿ ಮಾಡಿದ್ದೇಕೆ ? ಮತ್ತು ಅದು ತಾತ್ಕಾಲಿಕವೆಂದು ಪರಿಗಣಿಸಲ್ಪಟ್ಟರು ಏಳು ದಶಕಗಳ ವರೆಗೆ ಹಾಗೆ ಉಳಿಸಿಕೊಂಡಿದ್ದೇಕೆ ? ಎಂದು ನೋಡ ಹೊರಟರೆ ಕಾಣ ಸಿಗುವುದು ಶೇಕ್ ಅಬ್ದುಲ್ಲಾ ಎಂಬ ಕಾಶ್ಮೀರದ ರಾಜಕಾರಣಿ , ಈತನಿಗೂ ಸ್ವತಂತ್ರ ಭಾರತದ ಪ್ರಧಾನಿಗಳಾದ ನೆಹರು ಅವರಿಗೂ ಅಪಾರ ಸ್ನೇಹವಿತ್ತು , ಸ್ನೇಹಿತನ ಸ್ನೇಹಕ್ಕೆ ಕಟ್ಟು ಬಿದ್ದು ಒಂದಿಡೀ ಕಾಶ್ಮೀರದ ಜನತೆಯನ್ನು ಮಹಾಕೂಪಕ್ಕೆ ತಳ್ಳಿದರೆ ಎಂದು ಪ್ರಶ್ನೆ ಏಳುವುದು ಸಹಜ ಅದಕ್ಕೆ ಪೂರಕವಾಗಿ ನೆಹರು 1946 ರಲ್ಲಿ ಶೇಕ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಕ್ವಿಟ್ ಕಾಶ್ಮೀರ ಮೂವ್ಮೆಂಟ್ ಅನ್ನು ನೋಡಿಯೂ ನೋಡದೆ ಸುಮ್ಮನೆ ಕುಳಿತಿದ್ದರು ಅಷ್ಟೇ ಅಲ್ಲ ಒಂದು ಹೆಜ್ಜೆ ಮುಂದೆ ಹೋಗಿ ಶೇಕ್ ಅಬ್ದುಲ್ಲಾ is my blood brother a man above suspicion ಎಂಬ ಹೇಳಿಕೆ ಕೊಟ್ಟು ಭಾರತವನ್ನು ಒಡೆಯುವ ಪ್ರಯತ್ನಕ್ಕೆ ಇನ್ನಷ್ಟು ಇಂಪು ಕೊಟ್ಟಿದ್ದರು , ಇದೆಲ್ಲದರ ಫಲವಾಗಿ ಶೇಕ್ ಅಬ್ದುಲ್ಲಾ ಕಾಶ್ಮೀರದ ಹೆಡ್ ಹಾಫ್ ಎಮರ್ಜೆನ್ಸಿ ಅಡ್ಮಿನಿಸ್ಟ್ರೇಟರ್ ಎಂದು ನೇಮಕನಾಗಿ ಮುಂದೆ ಕಾಶ್ಮೀರದ ಮುಖ್ಯಮಂತ್ರಿಯಾಗಿ ನೆಹರು ಸರ್ಕಾರವನ್ನು ತನ್ನ ಅಣತಿಯಂತೆ ಆರ್ಟಿಕಲ್ 370 ಮತ್ತು 35 ಎ ಒಡಂಬಡಿಕೆಗೆ ಒಪ್ಪುವಂತೆ ಮಾಡಿತು , ಹೀಗೆ ಕಾಶ್ಮೀರಿ ಮೂಲನಿವಾಸಿಗಳ, ಕಾಶ್ಮೀರಿ ಪಂಡಿತರ ನರಮೇಧದ ಮುನ್ನುಡಿ ಅಂದಿನಿಂದಲೇ ಬರೆಯಲಾಯಿತು , ಇದು 1990 ರಲ್ಲಿ ಅತ್ಯಂತ ತೀವ್ರವಾಗಿ ಪಂಡಿತರ ಮಹಾವಲಸೆಗೆ ಹಾಗು ಕಂಡು ಕೇಳಿರದ ನರಮೇಧಕ್ಕೆ ಕಾರಣವಾಯಿತು ಇದೇ ಅಂಶವನ್ನು ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರ ಎಳೆ ಎಳೆಯಾಗಿ ಕಟ್ಟಿ ಕೊಟ್ಟಿದೆ.
ಸಾಮಾನ್ಯವಾಗಿ ಭಾರತೀಯರಿಗೆ ಪುರಾಣ ಪ್ರಜ್ಞೆ ಇದ್ದಷ್ಟು ಇತಿಹಾಸ ಪ್ರಜ್ಞೆ ಇಲ್ಲ ಎಂಬ ಆರೋಪ ಇದೆ ಆದರೆ ಸರಿಯಾದ ಇತಿಹಾಸವನ್ನು ಹೇಳುವ , ಬರೆಯುವ ದ್ರಾಷ್ಟ್ಯ ಇದ್ದರು ಅದನ್ನು ಮುಕ್ತವಾಗಿ ಭಾರತೀಯರಿಗೆ ತಲುಪದಿರುವಂತೆ ಮಾಡಿದ ಕೈಗಳಾವುವು ಎಂಬುದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ ಬಿಡಿ ಆದರೆ ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರದ ಮೂಲಕ ಈ ಕೆಲಸವಾಗಿದೆ ಕೆಲವು ನಿರ್ಬಂಧಗಳ ಹಿನ್ನಲೆಯಲ್ಲಿ ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರ ಕೂಡ ಕೆಲವು ವಿಷಯಗಳನ್ನು ಕೇವಲ ಒಂದು glimpse ಅಥವಾ birds eye view ಎಂಬಂತೆ ತೋರಿಸಿದ್ದರು ಇತಿಹಾಸದ ಗರ್ಭದಲ್ಲಿ ಹುದುಗಿರುವ ಕಪ್ಪು ಪುಟಗಳ ಅನಾವರಣಕ್ಕೆ ಮುನ್ನುಡಿ ಬರೆದಿದೆ ಎಂದರೆ ತಪ್ಪಾಗಲಾರದು ಹಾಗು ಇದರ ಕೀರ್ತಿ ವಿವೇಕ್ ಅಗ್ನಿಹೋತ್ರಿ ತಂಡಕ್ಕೆ ಸಂಪೂರ್ಣವಾಗಿ ಸಲ್ಲುತ್ತದೆ.
ಒಂದು ಸಮಾಜ ಮೂಲಭೂತವಾದಿ ಭಯೋತ್ಪಾದಕರ ವಿರುದ್ಧ ಹೋರಾಡಲು ಸಿದ್ಧವಾಗದಿದ್ದರೆ ಏನಾಗುತ್ತದೆ ಎಂಬುದರ ಕಥೆಯಾಗಿ ದಿ ಕಾಶ್ಮೀರ ಫೈಲ್ಸ್ ನಿಮ್ಮ ಮುಂದೆ ಅನಾವರಗೊಳ್ಳುತ ಹೋಗುತ್ತದೆ ಅಷ್ಟೇ ಅಲ್ಲ ಒಂದು ಜವಾಬ್ದಾರಿಯುತ ಹಾಗು ಕ್ರಿಯಾಶೀಲ ಆಡಳಿತ ವ್ಯವಸ್ಥೆ ಇಲ್ಲದಿದ್ದಲ್ಲಿ ಏನೇನಾದೀತು ಎಂಬುದೇ ದಿ ಕಾಶ್ಮೀರ ಫೈಲ್ಸ್ ಹೂರಣ .
ಒಂದಂತೂ ಸತ್ಯ ಇತರೆ ಚಲನ ಚಿತ್ರಗಳಾಗಿದ್ದಲ್ಲಿ ನೋಡಿ ಆನಂದಿಸಿ ಎನ್ನ ಬಹುದಾಗಿತ್ತು ಆದರೆ ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರ ಅಂತಹುದಲ್ಲ , ಚಲನ ಚಿತ್ರ ನೋಡಿ ಹೊರಬರುವಾಗ ತೇವಗೊಳ್ಳದ , ರೋಷಗೊಳ್ಳದ ಕಣ್ಣುಗಳನಂತೂ ನಾ ಕಾಣಲಿಲ್ಲ ಹಾಗೆಂದು ನೀವು ಈ ಚಲನ ಚಿತ್ರವನ್ನು ನೋಡದೆ ಇದ್ದಲ್ಲಿ ಅಂದು ನಡೆದ ನರಮೇಧದ ಪ್ರಭಾವದ ಅರಿವು ನಿಮಗೆಂದು ಆಗಲಿಕ್ಕಿಲ್ಲ ಅಷ್ಟೇ ಅಲ್ಲ ಇದೆಲ್ಲದರ ಮಧ್ಯೆ ನನ್ನನ್ನು ತೀವ್ರವಾಗಿ ಕಾಡಿದ್ದು ಇಂತಹ ಸನ್ನಿವೇಶದಲ್ಲೂ ಮೆರೆದ ರಾಜಕೀಯ ಹಾಗು ಸ್ವಾರ್ಥ.
ಬಹುಷ್ಯ ಇತಿಹಾಸ ಎಂದರೆ ಮೂಗು ಮುರಿಯುವ ಕೆಲವರಿಗಾಗದರು ಈ ಚಿತ್ರ ವೀಕ್ಷಿಸಿದ ಮೇಲೆ ಇತಿಹಾಸದ ಅರಿವು ನಮಗೇಕಿರಬೇಕೆಂದು ಅರಿವಾಗಿರಬಹದು ಎಂದು ಅಂದು ಕೊಂಡಿದ್ದೇನೆ , ಅಂದ ಹಾಗೆ ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರವನ್ನು ತಾವುಗಳು ನೋಡಿಲ್ಲವಾದರೆ ಒಮ್ಮೆ ನೋಡಿ, ಯಾವ ರಾಜಕೀಯದ ಗೊಡವೆಗೆ ಹೋಗದೆ ಅಂದು ಈ ಭೀಕರ ಕುಕೃತ್ಯಕ್ಕೆ ತುತ್ತಾದ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ನಾವುಗಳು ಹೇಗೆ ಕೈಜೋಡಿಸಬೇಕೆಂದು ಕೇಳಿ, ನೀವೇನು ಮಾಡಿದಿರೆಂದು ನಮ್ಮನಾಳುವ ಸರ್ಕಾರಕ್ಕೂ ಒಕ್ಕೂರಲಿನಿಂದ ನ್ಯಾಯ ಸಿಗುವವರೆಗೂ ಕೇಳುತ್ತಲೇ ಇರಿ. ಏಕೆಂದರೆ ಇದು ಚಂದಮಾಮನ ಕಥೆಯಂತೆ ಕೇಳಿ ಹಾಗು ನೋಡಿ ಮರೆಯುವ ವಿಷಯವಲ್ಲ.
ನಿಮ್ಮ ,
ಕಾರ್ತಿಕ್ ಎಸ್ ಬಾಪಟ್ .