ಇಫ್ತಾರ್ ಕೂಟದ ಆ ಸಂದೇಶ ಯಾರಿಗಾಗಿ ? ಕಾರ್ತಿಕ್ ಎಸ್ ಬಾಪಟ್.
ನಿತಿನ್ ಗಡ್ಕರಿ ಎಂಬ ಹೆಸರನ್ನು ಕೇಳದ ಜನರು ವಿರಳಾತಿವಿರಳ ಅವರ ಯೋಚನಾ ಲಹರಿ ಅವರ ಕಾರ್ಯವೈಖರಿ ಹೀಗೆ ಎಲ್ಲದಕ್ಕೂ ಹೆಚ್ಚಾಗಿ ನಿತಿನ್ ಗಡ್ಕರಿ ಹೆಚ್ಚು ಹೆಸರು ವಾಸಿಯಾಗಿರುವುದು ಅವರ ಸರ್ಕಾರ ಹಮ್ಮಿಕೊಂಡಿರುವ ಸಚಿವಾಲಯದ ಕಾರ್ಯಕ್ರಮಗಳಿಂದ , ಆದ್ದರಿಂದಲೇ ಗಡ್ಕರಿ ಇಸ ಹೈವೇ ಮ್ಯಾನ್ , ಇನ್ಫ್ರಾಸ್ಟ್ರಕ್ಚರ್ ಮ್ಯಾನ್ ಎಂದು ಕರೆಯುವುದು , ಇದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ ಹೀಗಾದ್ಯಾಗ್ಯೂ ಅದೇಕೋ ಈ ಬಾರಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಘೋಷಣೆಯ ಸಂದರ್ಭದಲ್ಲಿ ಅವರ ಹೆಸರನ್ನು ನಾಗ್ಪುರ್ ಕ್ಷೇತ್ರದ ಭಾ ಜ ಪ ಅಭ್ಯರ್ಥಿಯಾಗಿ ಘೋಷಿಸಲು ತೆಗೆದು ಕೊಂಡ ಸಮಯ ಯಾರನ್ನಾದರೂ ಅಚ್ಚರಿಗೆ ದೂಡಿದರೆ ಆಶರ್ಯವಿಲ್ಲ , ಕೆಲವು ಮೂಲದ ಪ್ರಕಾರ ಪಕ್ಷದ ವಲಯದಲ್ಲೇ ಅವರನ್ನು ಕಟ್ಟಿ ಹಾಕಲು ಪ್ರಯತ್ನ ನಡೆದಿತ್ತು ಎಂಬುದಾಗಿ, ಅದೇನೇ ಇರಲಿ ಸ್ವಲ್ಪ ಮಟ್ಟಿಗೆ ಈ ಬಾರಿಯ ಚುನಾವಣೆ ಸವಾಲಿನ ಚುನಾವಣೆಯಾಗಿ ಗಡ್ಕರಿ ಅವರಿಗೆ ಕಂಡು ಬಂದಿದರಲ್ಲಿ ಆಶರ್ಯವಿಲ್ಲ ಅದೇನೇ ಇರಲಿ ಹಾಗೆಂದ ಮಾತ್ರಕ್ಕೆ ನಾಗ್ಪುರ್ ನಲ್ಲೆ RSS ಕೇಂದ್ರ ಕಛೇರಿ ಇದ್ದರು ನಾಗ್ಪುರ್ 2014 ರ ವರೆಗೂ ಕಾಂಗ್ರೆಸ್ ನ ತೆಕ್ಕೆಯಲ್ಲಿ ಇತ್ತು ಹಾಗು 1996 ರಲ್ಲಿ ಒಮ್ಮೆ ಭಾ ಜ ಪ ಕೇಸರಿ ಧ್ವಜ ಹರೆದಾಡಿದ್ದು ಬಿಟ್ಟರೆ ಕೇಸರಿ ಧ್ವಜ ಮತ್ತೆ ಹಾರಿದ್ದು ಮತ್ತೆ 2014 ರಲ್ಲಿ ಇದೀಗ ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿ ಗಡ್ಕರಿ ಈ ಬಾರಿ ಮತ್ತೆ ಸ್ಪರ್ದಿಸಿದ್ದಾರೆ , ಈ ಹಿಂದಿನ ಚುನಾವಣೆಗಳೇ ಒಂದು ತೂಕವಾದರೆ ಈ ಬಾರಿಯ ಚುನಾವಣೆ ಹಲವಾರು ಕಾರಣಗಳಿಗೆ ಗಡ್ಕರಿ ಹಾಗು ಭಾ ಜ ಪ ಪಕ್ಷಕ್ಕೆ ಮಹತ್ವದ್ದಾಗಿದೆ.
ಭಾ ಜ ಪ ಕಳೆದೊಂದು ತಿಂಗಳಿಂದ ಅಬ್ ಕಿ ಬಾರ್ 400 ಪಾರ್ ಎಂಬ ಘೋಷಣೆಯನ್ನೇನೋ ಹರಿಯ ಬಿಟ್ಟಿದೆ , ಆದರೆ ಆಳದಲ್ಲಿ 400 ಪಾರ್ ಅಷ್ಟು ಸುಲಭವಲ್ಲ ಎಂಬ ಪರಿಕಲ್ಪನೆ ಭಾ ಜ ಪ ಪಕ್ಷಕ್ಕೂ ಅರಿವಿಲ್ಲದಲ್ಲ ಆದ್ದರಿಂದಲೇ ಅಳೆದು ತೂಗಿ ಆಯಾ ಪ್ರತ್ಯಂದ ಪ್ರಾಂತೀಯ ಪಕ್ಷಗಳತ್ತ ಮೈತ್ರಿಗಾಗಿ ಕೈ ಚಾಚಿದೆ, ಚುನಾವಣೆಯ ನಾನಾ ಹಂತಗಳು ಹತ್ತಿರ ಸಮೀಪಿಸುತ್ತಿರುವಾಗ ಮೊದಲೆರಡು ಹಂತದ ಚುನಾವಣೆಯ ವೋಟರ್ಸ್ turnout ನೋಡಿದಾಗ ಬಿಜೆಪಿಯ 400 ಪಾರ್ ಇರಲಿ 300 ಪಾರ್ ಆದರೂ ಆದೀತೆ ಎಂಬ ಚಡಪಡಿಕೆ ಭಾ ಜ ಪ ದ ಹಿತ ಚಿಂತಕರಲ್ಲಿ ಪ್ರಾರಂಭವಾಗಿದೆ , ಹಾಗೇನಾದರೂ ಭಾ ಜ ಪ ಮತ್ತು ಮಿತ್ರ ಪಕ್ಷಗಳ ಸ್ಕೋರು 250 ರ ಹೊಸ್ತಿಲಿಗೆ ಬಂದು ನಿಂತರೆ ಮುಂದೇನು ಎಂಬ ಪ್ರಶ್ನೆ ಗಿರಕಿ ಹೊಡೆಯುತ್ತಿದೆ. ಹಾಗೇನಾದರೂ ಆದರೆ ಎಲ್ಲರೂ ಅಪ್ಯಾಯಮಾನವಾಗಿ ನೋಡುವುದು ಗಡ್ಕರಿಯತ್ತ ಹಾಗಾಗಲು ಕಾರಣಗಳು ಹಲವು ಇದೆಲ್ಲದಕ್ಕೂ ಉತ್ತರವೆಂಬುವಂತೆ ಗಡ್ಕರಿ ಪುತ್ರ ಸಾರಂಗ ಗಡ್ಕರಿ ನಾಗ್ಪುರ್ ನ ಇಫ್ತಾರ್ ಕೂಟದಲ್ಲಿ ತಂದೆಯ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದಾಗ ಆಡಿದ ಮಾತುಗಳು, ಸಾಮಾನ್ಯವಾಗಿ ಇಫ್ತಾರ್ ಕೂಟಗಳಲ್ಲಿ ರಾಜಕೀಯ ನಾಯಕರು ಪಾಲ್ಗೊಂಡರೆ ಇದೊಂದು ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿಯೇ ಅವರ ಓಲೈಕೆಗಾಗಿಯೇ ನಡೆಸುವ ಕಾರ್ಯಕ್ರಮ ಎಂಬುದು ಭಾ ಜ ಪ ದ ನಾಯಕರ ಅಂಬೋಣ ಆದರೆ ಇಲ್ಲಿ ಖುದ್ದು ಗಡ್ಕರಿ ಪುತ್ರನೇ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ತನ್ನ ತಂದೆಯ ಪರ ಮತ ಯಾಚಿಸಿದಲ್ಲದೆ ಪ್ರತಿ ಧರ್ಮದಲ್ಲಿ ಮಾನವೀಯತೆಗೆ ಹೆಚ್ಚು ಒತ್ತು ಕೊಡಲಾಗಿದೆ ಹಾಗು ನಿತಿನ್ ಗಡ್ಕರಿ ಮಾನವೀಯತೆಗೆ ಹೆಚ್ಚು ಒತ್ತು ಕೊಡುವವರಾಗಿದ್ದರೆ ಹಾಗು 2014 ರ ವರೆಗೆ ಭಾ ಜ ಪ ನಾಗ್ಪುರದಲ್ಲಿ ಇರಲಿಲ್ಲ ನಾಗ್ಪುರ್ ಕ್ಷೇತ್ರದಲ್ಲಿ ಭಾ ಜ ಪ ಕಾಲೂರಿದ್ದು ಗಡ್ಕರಿ ಅವರಿಂದಲೇ ಹೊರೆತು ಬೇರೆಯವರಿಂದಲ್ಲ ಹೀಗೆ ಗಡ್ಕರಿ ಪುತ್ರ ಅಲ್ಲಿ ಆಡಿದ ಮಾತುಗಳು ಭಾ ಜ ಪ ದ ಆಯ್ದ ನಾಯಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ಸಂದೇಶ ಕಳಿಸಿದಂತಿದೆ ಅದೇನೆಂದರೆ ಭಾ ಜ ಪ ಪಕ್ಷಕ್ಕೆ ಬೇಕಾದ ಅಂಕೆ ಸಂಖ್ಯೆ ಬಾರದಿದ್ದಲ್ಲಿ ಮೋದಿಜಿ ಗೆ ಪರ್ಯಾಯವಾಗಿ ಬಿ ಜೆ ಪಿ ಯ ಸೆಕ್ಯುಲರ್ ಫೇಸ್ ಆಗಿ ಹಾಗು ಬಿ ಜೆ ಪಿ ಯಲ್ಲಷ್ಟೇ ಅಲ್ಲದೆ ಪ್ರತಿಪಕ್ಷಗಳಿಗೂ ಸರ್ವ ಸಮ್ಮತ ಅಭ್ಯರ್ಥಿಯಾಗಿ ಗಡ್ಕರಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಹೊರ ಹೊಮ್ಮಲಿದ್ದಾರೆ ಎಂದು ಹಾಗಾಗುವುದೇ? ಎಲ್ಲದಕ್ಕೂ ಜೂನ್ ನಾಲ್ಕು ಉತ್ತರ ಕೊಡಲಿದೆ.
ಮೇಲ್ನೋಟಕ್ಕೆ ಇದೆಲ್ಲವೂ ಅಂತೆ ಕಂತೆ ಗಳ ಸಂಗತಿ ಎಂದು ಕಂಡರೂ ಇತ್ತೀಚಿನ ಕೆಲವು ಬೆಳವಣಿಗೆಗಳು ಈ ಪುಕಾರುಗಳಿಗೆ ಇಂಬು ಕೊಡುವಂತಿದೆ. ಈ ಕಳೆದ ಹತ್ತು ವರುಷಗಳಲ್ಲಿ ಮೋದಿಜಿ ಒಮ್ಮೆಯೂ ಆರ್ ಯಸ್ ಯಸ್ ನ ಕೇಂದ್ರ ಕಛೇರಿ ನಾಗ್ಪುರ್ ಗೆ ಭೇಟಿ ನೀಡದೆ ಇದ್ದದು ಮೊನ್ನೆ ಮೊನ್ನೆ ನಾಗ್ಪುರ್ ನ R S S ಕೇಂದ್ರ ಕಚೇರಿಗೆ ಧಿಡೀರ್ ಭೇಟಿ ಕೊಟ್ಟಿದ್ದು ಹಾಗು ನಾಗ್ಪುರ್ನಲ್ಲಿ ಮೊದಲ ಹಂತದ ಎಲೆಕ್ಷನ್ ಸಂಪನ್ನವಾಗಿದ್ದರು ನಾಗ್ಪುರ್ ನಲ್ಲಿಯೇ ವಾಸ್ತವ್ಯ ಹೂಡಿದ್ದು, ಖುದ್ದು ಮೋದಿಯೇ ನಾಗ್ಪುರ್ ನಲ್ಲಿ ಇದ್ದರು ಗಡ್ಕರಿ ಮೋದಿ ಭೇಟಿಯಾಗದೆ ಇದ್ದದ್ದು ಮೊದಲೆರಡು ಹಂತದ ಚುನಾವಣೆಯ ನಂತರ ಭಾ ಜ ಪ ದ ಚುನಾವಣಾ narrative ಗಳು (ಸಂದೇಶ ) ಒಮ್ಮೆಲೇ ಬದಲಾಗಿರುವುದು , ಟೆಸ್ಲಾ ಒಡೆಯ ಎಲೋನ್ ಮಸ್ಕ್ ಹಠಾತ್ತನೆ ಭಾರತದ ಭೇಟಿಯನ್ನು ಮುಂದೂಡಿದ್ದು ಎಲ್ಲವೂ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತಿದೆ.
ಕಾರ್ತಿಕ್ ಎಸ್ ಬಾಪಟ್ .


