ಅದು ಐದನೇ ಪಂಚ
ವಾರ್ಷಿಕ ಯೋಜನೆ, ಆ ಯೋಜನೆಯಲ್ಲೆಯೇ ಕಾಂಗ್ರೆಸ್ ಸರ್ಕಾರ ಗರೀಬಿ ಹಟಾವೋ (ರಿಮೂವಲ್ of ಪಾವರ್ಟಿ)
ಎಂಬ ಘೋಷ ವಾಕ್ಯವನ್ನು ಮೊಳಗಿಸಿತ್ತು, ಬಡತನ ನಿರ್ಮೂಲನೆಯನ್ನೇ ಐದನೇ ಪಂಚವಾರ್ಷಿಕ ಯೋಜನೆಯ ಮೂಲ ಧ್ಯೇಯೋದ್ದೇಶವನ್ನಾಗಿ
ಹಮ್ಮಿಕೊಂಡು ಕಾರ್ಯಪ್ರವರ್ತವಾಗಿತ್ತು , ಆದರೆ ತದ ನಂತರ ತುರ್ತುಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ
ಕಾಂಗ್ರೆಸ್ ರಾಜ ಗಾದಿ ಬಿಡಬೇಕಾಗಿ ಬಂತು ಆದ್ದರಿಂದ ಗರೀಬಿ ಹಟಾವೋ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ
ಬರಲಿಲ್ಲ , ಆದರೆ ತುರ್ತು ಪರಿಸ್ಥಿತಿಯ ಛಾಯೆಯಿಂದ ಕೆಡವಿಕೊಂಡು ಎದ್ದು ಬಂದ ಕಾಂಗ್ರೆಸ್ 1980 ರಲ್ಲಿ
ಮತ್ತೆ ಗರೀಬಿ ಹಟಾವೋ ಎಂಬ ರಣ ಕಹಳೆ ಮೊಳಗಿಸಿತು, ಅಂದರೆ ಅದಾಗಿ ಇಂದಿಗೆ ಸರಿ ಸುಮಾರು 29 ವರ್ಷಗಳೇ
ಆದವು , 1980 ರಿಂದ ಇಲ್ಲಿಯವರೆಗೆ ಈ 29 ವರ್ಷಗಳಲ್ಲಿ
ನೋಡ ಹೊರಟರೆ ಒಟ್ಟಾರೆಯಾಗಿ ಕಾಂಗ್ರೆಸ್ ಆಡಳಿತ ನಡೆಸಿದ್ದೆ ಹೆಚ್ಚು, ಇದೆಲ್ಲ ಇಂದು ಏಕೆ ನೆನಪಾಯಿತೆಂದರೆ
ಕಾಂಗ್ರೆಸ್ ಪಕ್ಷ ಬಿಡುಗಡೆ ಗೊಳಿಸಿದ ಚುನಾವಣಾ ಪ್ರಣಾಳಿಕೆ , ಅಂದಿಗೂ ಇಂದಿಗೂ ಏನು ವ್ಯತ್ಯಾಸ ಎಂದು
ನೋಡಲು ಹೊರಟರೆ ಮತ್ತದೇ ರಾಗ ಅದೇ ಹಾಡು ಗರೀಬಿ ಹಟಾವೋ ಎಂಬುದನ್ನೇ ಈಗ "ನ್ಯಾಯ" ಎಂಬ
ಧ್ಯೇಯ ವಾಕ್ಯದೊಂದಿಗೆ ಹೊರ ತಂದಿದೆ , ಒಂದು ರೀತಿಯಲ್ಲಿ ಓಲ್ಡ್ ವೈನ್ ಇನ್ ನ್ಯೂ ಬೋಟೊಲ್ ಎಂದರೆ
ತಪ್ಪಾಗಲಾರದು , ಇತ್ತೀಚಿನ ದಿನಗಳಲಲ್ಲಿ ಚುನಾವಣಾ ಪ್ರಣಾಳಿಕೆಗಳು ತಮ್ಮ ಮಹತ್ವವನ್ನೇ ಕಳೆದುಕೊಂಡಿದೆ
ಎಂಬುದು ಎಲ್ಲರು ಒಪ್ಪುವ ವಿಷಯ , ಏಕೆಂದರೆ ಎಲ್ಲ ಪಕ್ಷಗಳು ಗದ್ದುಗೆ ಏರಿದ ಮೇಲೆ ಚುನಾವಣಾ ಪ್ರಣಾಳಿಕೆಯಲ್ಲಿ
ಘೋಷಿಸಿದ ಎಲ್ಲ ಅಂಶಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ, ಆ ನಿಟ್ಟಿನಲ್ಲಿ
ನೋಡ ಹೋದರೆ ಇತ್ತೀಚಿಗೆ ಸ್ಥಾಪನೆಗೊಂಡ ಉಪೇಂದ್ರ ನೇತ್ರದ್ವದ UPP ಯೇ ಪರವಾಗಿಲ್ಲ , ನಾವು ಚುನಾವಣಾ
ಪ್ರಣಾಳಿಕೆಯನ್ನು ಹೊರತರುವುದಿಲ್ಲ ಎಂದಿದೆ ಅದಲ್ಲದೆ ಜನರ ಕಷ್ಟ ಕೋಟಲೆಗಳನ್ನು ಜನರಿಂದಲೇ ಕೇಳಿ ನಂತರ
ಅದಕ್ಕೆ ಉಪಾಯವನ್ನು ಕಂಡು ಹಿಡಿದು ಅವುಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುತ್ತೇವೆಂದು ಹೇಳುತ್ತಿದೆ
UPP . ಉಪೇಂದ್ರ ಮಾಧ್ಯಮದವರೊಂದಿಗೆ ಮಾತಾಡುವಾಗ ನಮಗೆ ryaali ಗಳಲ್ಲಿ ಹಾಗು ರೋಡ್ ಶೋ ಗಳಲ್ಲಿ ನಂಬಿಕೆಯಿಲ್ಲ
ಎಂದು ಹೇಳುತ್ತಾರೆ , ಮೇಲ್ನೋಟಕ್ಕೆ ಈ ನಿಲುವು ಮೂರ್ಖತನದ್ದು ಎಂದು ಕಂಡು ಬಂದರು ಅವರ ತರ್ಕದಲ್ಲಿ
ಒಪ್ಪಿಕೊಳ್ಳುವ ಅಂಶವಿದೆ ಎಂದು ನೀವೇ ಮನಗಾಣಬಹುದು. , ryaali ರಹಿತ ಮತ್ತು ರೋಡ್ ಶೋ ರಹಿತ ಚುನಾವಣೆಗಳನ್ನು
ನಾವು ಊಹಿಸಲು ಅಸಾಧ್ಯ ಏಕೆಂದರೆ ಚುನಾವಣೆಗಳೆಂಬುದು ಪ್ರಜಾತಂತ್ರದ ಬಹುದೊಡ್ಡ ಹಬ್ಬಗಳಲೊಂದು , ಆದರೆ
ಈ ryaali ಗಳು ಮತ್ತು ರೋಡ್ ಷೋಗಳು ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸ್ತುತತೆಯನ್ನೇ ಕಳೆದುಕೊಂಡಿದೆ
, ಹೀಗೆ ತನ್ನ ಪ್ರಸ್ತುತತೆಯನ್ನು ಕಳೆದು ಕೊಳ್ಳಲು ಕಾರಣವೇನೆಂದು ಬಿಡಿಸಿ ಹೇಳುವು ಅಗತ್ಯವಿಲ್ಲ
, ryaali ಗಳ ಮತ್ತು ರೋಡ್ ಶೋ ಗಳನ್ನೂ ಯಶಸ್ವಿಯಾಗಿ
ಮಾಡುವ ವೃತ್ತಿಪರ ಗುತ್ತಿಗೆದಾರರೇ ಹುಟ್ಟಿಕೊಂಡಿದ್ದಾರೆ ಎಂದರೆ ನೀವೇ ಊಹಿಸಿ ಒಂದು ರೋಡ್ ಶೋ ನಡೆಸಲು
ಎಷ್ಟು ಹಣ ಖರ್ಚಾದೀತೆಂದು.
ಅದಿರಲಿ ಮತ್ತೆ
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳಿಗೆ ಬರುವುದಾದರೆ "ನ್ಯಾಯ"
ಎಂಬ ಪ್ರಮುಖ ಅಂಶ ಎಲ್ಲೆಡೆ ಸದ್ದು ಮಾಡುತ್ತಿದೆ , ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ತಿಂಗಳಿಗೆ
ಆರು ಸಾವಿರ ಮೀರದಂತೆ , ವರ್ಷಕ್ಕೆ 72 ಸಾವಿರ ರೂಪಾಯಿನ್ಗಳನ್ನು
ದೇಶದಲ್ಲಿಯ 20 % ರಷ್ಟುಬಡ ಕುಟುಂಬಗಳಿಗೆ ಕೊಡುವುದಾಗಿ ಹೇಳಿಕೊಂಡಿದೆ , ಇದು ಇಡೀ ಭಾರತದಲ್ಲಿಯೇ
ಬಹು ಚರ್ಚಿತ ವಿಷಯ , ಈ ವಿಷಯದ ಮೇಲೆ ಕಾಂಗ್ರೆಸ್ ಕೆಲವೊಂದಿಷ್ಟು ವೋಟುಗಳನ್ನು ಬಾಚುವ ತಂತ್ರ ಮುಂದಿಡುತ್ತಿದೆ
, ಆದರೆ ಒಂದಂಶವನ್ನು ಗಮನಿಸಬೇಕು " ಸಮರ್ಪಕ ಅಭಿವೃದ್ಧಿಯ" ಬಗ್ಗೆ ಮಾತನಾಡಬೇಕಾದ ರಾಜಕೀಯ
ಪಕ್ಷಗಳು ಮತ್ತದೇ ಓಲಯ್ಕೆಯ ರಾಜಕಾರಣವನ್ನು ಮಾಡುತ್ತಿದೆ , ಸಮಪ್ರಕವಾಗಿ ಎಲ್ಲರನ್ನೊಳಗೊಂಡ ಅಭಿವೃದ್ಧಿಯಾದರೆ
ದೇಶದ ಕಟ್ಟ ಕಡೆಯ ವ್ಯಕ್ತಿಗೂ ಒಂದಿಲ್ಲೊಂದು ರೀತಿಯಲ್ಲಿ ಇದರ ಉಪಯೋಗಗಳು ತಲುಪುತ್ತವೆ , ಆದರೆ ನ್ಯಾಯ
ನಂತಹ ಯೋಜನೆಗಳು ಕೇವಲ ಆ ಒಂದು ಗುಂಪಿಗೆ ಮಾತ್ರ ಸೀಮಿತವಾಗಿ ಅದು ಅಸಮರ್ಪಕ ರೂಪದಲ್ಲಿ ದೇಶದ ಬೆಳವಣಿಗೆಯನ್ನು
ಕುಂಠಿತಗೊಳಿಸುವ ಅಪಾಯವಿದೆ, ಹಾಗೆ ನೋಡಿದರೆ ಕಾಂಗ್ರೆಸ್ ಸರ್ಕಾರವೇ ತಂದಂತಹ "ಮಹತ್ಮಾ ಗಾಂಧಿ
ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಸ್ಕೀಮ್" ಒಂದು ಅತ್ಯುತ್ತಮ ಯೋಜನೆ ಎನ್ನುವುದರಲ್ಲಿ ಎರಡು
ಮಾತಿಲ್ಲ , ಕಾರಣವಿಷ್ಟೇ ಅಲ್ಲಿ ನಿರುದ್ಯೋಗಿಗೆ ಕೈ ತುಂಬ ಕೆಲಸ ಕೊಟ್ಟು ಅವನಿಗೆ ಸಂಭಾವನೆಯು ಸಿಗುತಿತ್ತು
ಇಲ್ಲಿ ಯಾರು ಮೈಗಳ್ಳರಾಗುವ ಪ್ರಮೇಯ ಬರುವುದಿಲ್ಲ ಆದರೆ ನ್ಯಾಯ ನಂತಹ ಯೋಜನೆಗಳಿಂದಾಗಿ ದುಡಿಯುವ ಕೈಗಳಿಗೆ
ಮುಷ್ಕರ ಹೂಡಲು ತಾನೇ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ.
ಹೀಗೆ ಇದು ನ್ಯಾಯ
ನ ಕಥೆ ಯಾದರೆ ಸುಮ್ಮನಿರಲಾರದೆ ಹುಳ ಬಿಟ್ಕೊಂಡ್ರು ಎಂಬಂತೆ ಸೆಕ್ಷನ್ 124 A ಅನ್ನು ಕಿತ್ತು ಹಾಕುವ ಬಗ್ಗೆಯೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ
ಉಲ್ಲೇಖಿಸಿದೆ , ಅಂದರೆ ಇನ್ನುಮುಂದೆ ಯಾರಾದರೂ ರಾಜದ್ರೋಹವೆಸಗಿದರೆ ರಾಜದ್ರೋಹದಡಿಯಲ್ಲಿ ಯಾರನ್ನು
ಬಂಧಿಸುವಂತಿಲ್ಲ , 124 A , ನ ನಂತರ ಮತ್ತೊಂದು ಉಲ್ಲೇಖಿಸಿಲ್ಪಟ್ಟ ಅಂಶವೆಂದರೆ armed force special act 1958 ಅನ್ನು ತಿದ್ದು ಪಡಿ
ಮಾಡಲಾಗುವುದೆಂದು ಅಂದರೆ ಸಶಸ್ತ್ರ ಪಡೆಗೆ ಕೆಲವು ವಿಶೇಷ ಅಧಿಕಾರವನ್ನು ಸರ್ಕಾರ ಕಾನೂನಿನ ಅಡಿಯಲ್ಲಿ
ಕಲ್ಪಿಸಿಕೊಟ್ಟಿದೆ, ಗಮನಾರ್ಹ ಅಶವೆಂದರೆ ಜಮ್ಮು ಕಾಶ್ಮೀರದಲ್ಲಿ ಹಾಗು ಕೆಲವು ಆಯ್ದ ರಾಜ್ಯ್ಗಳಲ್ಲಿ
AFSA ಜಾರಿಯಲ್ಲಿದೆ, ಹೀಗೆ ಇಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್ ತಾನಾಗಿಯೇ
ವಿರೋಧ ಪಕ್ಷಗಳಿಗೆ ಆಹಾರವಾಗಿದೆ , ನ್ಯಾಯ್ ನಂತಹ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿ
ಕಂಡು ಬಂದರು ಇನ್ನುಳಿದ ಸೂಕ್ಷ್ಮ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದರಿಂದ ಚೌಕಿದಾರರಿಗೆ
ಕಾಂಗ್ರೆಸ್ ತನ್ನ ವಿರುದ್ಧ ಹೋರಾಡಲು ತಾನೇ ಅಸ್ತ್ರವನ್ನು ಕೊಟ್ಟಂತಾಗಿದೆ , ಇದೆಲ್ಲದರ ನಡುವೆ ಭಾ
ಜ ಪ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ , ಆದರೆ ಮತದಾರ ಪ್ರಣಾಳಿಕೆಗಳ ಬೆನ್ನೇರಿ ಮತದಾನ
ಮಾಡುವನೆಂದು ಕೊಂಡರೆ ಅದು ಶುದ್ಧ ಮೂರ್ಖತನ ಏಕೆಂದರೆ ರಾಜಕೀಯ ಪಕ್ಷದ ಪ್ರಣಾಳಿಕೆಗಳು ಅಪ್ರಸ್ತುತವಾಗಿ
ದಶಕವೇ ಕಳೆದು ಹೋಗಿದೆ.
ಕಾರ್ತಿಕ್ ಎಸ್ ಬಾಪಟ್
Picture Courtesy : Shutterstock.com

