Thursday, June 30, 2022

ಗದ್ದುಗೆ ಕಳೆದುಕೊಂಡು ಪಡೆದುಕೊಂಡಿದ್ದು ಶಿವಸೈನಿಕನೇ ಆದರೆ ಗೆದ್ದು ಬೀಗಿದ್ದು ಮಾತ್ರ ಭಾ ಜ ಪ .

ಕಳೆದ ನಾಲ್ಕೈದು ದಿನಗಳಿಂದ ಮಹಾರಾಷ್ಟ್ರದಲ್ಲಿ  ನಡೆಯುತ್ತಿದ್ದ ಗದ್ದುಗೆ ಪ್ರಹಸನ ಕೊನೆಗೂ ಮುಕ್ತಾಯಗೊಂಡಿದೆ , ಆದರೆ ಕೊನೆಯ ಹಂತದ ಕ್ಲೈಮಾಕ್ಸ್ ಮಾತ್ರ ಯಾವ ಮಾಧ್ಯಮಗಳು ಅಷ್ಟೇ ಏಕೆ ಭಾ ಜ ಪ  ಬಳಗಕ್ಕೋ  ತಿಳಿದಿರಲಿಲ್ಲ ಎಂಬುದು ಈ ಕ್ಷಣದ ರೋಚಕ ಸುದ್ದಿ. ಹಾಗೆ ನೋಡಿದರೆ ಶಿವಸೇನೆ ಹಾಗು ಭಾ ಜ ಪ ಮೈತ್ರಿಯು ಲಾಗಾಯ್ತಿನಿಂದಲೂ ಇದ್ದದ್ದೇ ಶಿವಸೇನೆ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಬಹುದೆಂದು ಯಾವೊಬ್ಬ ಶಿವಸೈನಿಕನೂ ಕನಸು ಮನಸಿನಲ್ಲಿ ಎಂದಿಗೂ ಯೋಚಿಸಿರಲಾರನು, ಆದರೆ ಉದ್ಧವ ಠಾಕ್ರೆ ಒಂದು ಕೈ ನೋಡಿಯೇ ಬಿಡುವ ಎಂದು ಏನ್ ಸಿ ಪಿ , ಕಾಂಗ್ರೆಸ್ ನೊಂದಿಗೆ ಸೇರಿ ಮಾಡಿಕೊಂಡ ಮೈತ್ರಿಯಿಂದಾಗಿ ಮಹಾ ಅಘಾಡಿ ಸರ್ಕಾರ ಎರಡು ವರುಷಗಳ ಹಿಂದೆ ಮೈದೆಳೆದಿತ್ತು ಫ್ರಂಟ್ ಸೀಟ್ ಡ್ರೈವರ್ ಆಗಿ ಉದ್ಧವ ಠಾಕ್ರೆ ಇದ್ದರು ಬ್ಯಾಕ್ ಸೀಟ್ ಡ್ರೈವ್ ಮಾಡಿದ್ದೂ ಶರದ್ ಪವಾರ್ ಎಂಬುದು ವೇದ್ಯವಾದ ವಿಷಯ ಅಷ್ಟೇ ಅಲ್ಲ ಅಧಿಕಾರದ ಆಸೆಗೆ ಸಿದ್ಧಾಂತವನ್ನು ಬಲಿ ಕೊಟ್ಟರೆ ಏನಾದೀತು ಎಂಬುದಕ್ಕೆ ಉದ್ಧವ ಠಾಕ್ರೆ ಒಂದು ನಿದರ್ಶನ.

ಸರಿ ಸುಮಾರು ಎರಡು ದಶಕಗಳ ಕಾಲ ಮಹಾರಾಷ್ಟ್ರದ ರಾಜಕೀಯದಲ್ಲಿ ತನ್ನದೇ ಛಾಪನ್ನು ಒತ್ತಿದ್ದ ಬಾಳ ಠಾಕ್ರೆ ಉಸಿರಾಡುತ್ತಿದುದ್ದೇ  ಹಿಂದುತ್ವ ಮಾತು ಮರಾಠಿಗರ ಒಳಿತನ್ನು.  ಎಂತಹದೇ ಸಂದರ್ಭವಿರಲಿ ಗದ್ದುಗೆಗೋಸ್ಕರ ಬಾಳ ಸಾಹೇಬ್  ಸಿದ್ದಾಂತವನ್ನು ಬಲಿ ಕೊಟ್ಟಿರಲಿಲ್ಲ  ಆದರೆ 2019 ರ ಚುನಾವಣೆಯಲ್ಲಿ ಆದದ್ದೇ ಬೇರೆ ಶಿವಸೇನೆ ಗೆದ್ದ ನಂತರ  ಉದ್ಧವ ಬಾಳ ಸಾಹೇಬರ ಹಾಗು ಆ ಶಿವಸೈನಿಕ ನಂಬಿದ್ದ ಸಿದ್ಧಾಂತದೊಡನೆ  ರಾಜಿ ಮಾಡಿಕೊಂಡು ಶಿವಸೈನಿಕನಿಗೆ ಆಘಾತ ತಂದೊಡ್ಡಿದರು , ಅಸಲಿಗೆ ಈ ಎರಡು ವರುಷಗಳ ಕಾಲ ಅಘಾಡಿ ಸರ್ಕಾರ ಇದ್ದದ್ದೇ ಹೆಚ್ಚು ಎಂಬುದು ಕೆಲವರ ವಾದ , ಕೊರೋನಾ ಇರದೇ ಇದ್ದರೆ ಅಗಾಡಿ ಸರ್ಕಾರದ ಲಗಾಡಿ ಎಂದೋ ಎದ್ದು ಹೋಗುತ್ತಿತ್ತು ಎಂಬುದು, ಅದಕ್ಕೆ ಕಾರಣವೂ ಉಂಟು ಯಾವ ಚುನಾವಣೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಕೈ ಕೈ ಮಿಲಾಯಿಸಿ ಚುನಾವಣೆಯನ್ನು ಎದುರಿಸುತ್ತಿದರೋ ಇಂದು ಅದೇ ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಶಿವಸೈನಿಕರಿಗೆ ಸುತರಾಂ ಒಪ್ಪಿಗೆ ಇರಲಿಲ್ಲ , ಆದರೆ ಶಿವಸೈನಿಕರ ಮಾತನ್ನು ಕೇಳುವರ್ಯಾರು , ಕೊನೆಗೆ ಬೇಸತ್ತ ಶಾಸಕರು ನಾಯಕನೊಬ್ಬ ಸೆಟೆದು ನಿಲ್ಲುವುದನ್ನು ಕಾಯುತ್ತಿದ್ದರು ಆಗ ಕಂಡಿದ್ದೆ ಶಿಂಧೆ , ಅದಕ್ಕೆ ಪೂರಕ ವಾತಾವರಣ ಹಾಗು  ಸಂಪನ್ಮೂಲ ಒದಗಿಸಿಕೊಟ್ಟಿದು ಭಾ ಜ ಪ ಎಂಬುದು ಮತ್ತೆ ಹೇಳಬೇಕಾಗಿಲ್ಲ , ಆದರೆ ಕೊನೆಯ ಕ್ಷಣದಲ್ಲಿ ಉದ್ಧವ್ ಠಾಕ್ರೆ ಮಾಡಿದ ಭಾವನಾತ್ಮಕ ಭಾಷಣ ಭಾ ಜ ಪ ಹಾಗು ಶಿಂಧೆ ಬಣಕ್ಕೆ ಮುಂದಿನ ದಿನಗಳಲ್ಲಿ ಚುನಾವಣಾ ಕಣದಲ್ಲಿ ಪೆಟ್ಟು ಕೊಡುವ ಎಲ್ಲ ಸಂಭವಗಳು ಇದ್ದವು. 

ಮುಖ್ಯವಾಗಿ ಉದ್ಧವ ಠಾಕ್ರೆ ತಮ್ಮ ಭಾಷಣದಲ್ಲಿ ಹೇಳಿದ್ದು ಬಾಳ ಸಾಹೇಬರ ಮಗನನ್ನು ಗದ್ದುಗೆಯಿಂದ ಕೆಳಗಿಳಿಸಬೇಕೆಂದು ನಮ್ಮವರೇ ನಿರ್ಧರಿಸದರೆ ನಾವೇನು ಮಾಡುವುದು ಹಾಗು ಶಿವಸೈನಿಕ ಬಾಳಸಾಹೇಬರ ಪುತ್ರನನ್ನು ಗದ್ದುಗೆಯಿಂದ ಕೆಳಗಿಳಿಸಿದ ಪುಣ್ಯ ನಿಮಗೆ ದಕ್ಕುವುದಾದರೆ ದಕ್ಕಲಿ ಆ ಪುಣ್ಯ ನಿಮಗೆ ಪ್ರಾಪ್ತಿಯಾಗಲಿ , ಹಾಗು ನೀವು ಎದೆಯುಬ್ಬಿಸಿ  ಶಿವಸೇನೆಯನ್ನು ಹುಟ್ಟು ಹಾಕಿದ ಬಾಳಸಾಹೇಬರ ಮಗನನ್ನು ಕೆಳಗಿಳಿಸಿದ  ಕೀರ್ತಿ ನಮಗೆ ಸಿಕ್ಕಿತು ಎಂದು ಬೀಗುವ ತೃಪ್ತಿ ನಿಮಗೆ ಪ್ರಾಪ್ತಿಯಾಗಲಿ ಆ ಸಂತೋಷದ ಪೇಡೆಯನ್ನು ನೀವೇ ತಿನ್ನಿರಿ ಏಕೆಂದರೆ ಇದು   ನಿಮ್ಮ ತಪ್ಪಲ್ಲ ನಿಮ್ಮ ಮೇಲೆ  ಅಷ್ಟಾಗಿ ನಂಬಿಕೆಯಿಟ್ಟ ನನ್ನದೇ ತಪ್ಪು ಆದರೆ  ನೀವು ಭಾ ಜ ಪ ದೊಂದಿಗೆ ಸರ್ಕಾರ ರಚಿಸಿದ ನಂತರ ಶಿವಸೈನಿಕನನ್ನು  ಮತ್ತೆ ಮುಖ್ಯ ಮಂತ್ರಿ ಮಾಡಬಲ್ಲರೇ? ಇಲ್ಲ ಅದು ಎಂದಿಗೂ ಸಾಧ್ಯವಾಗದು ಎಂದು, ಹೀಗೆ ಉದ್ಧವ್ ಠಾಕ್ರೆ ತಮ್ಮ ವಿದಾಯ ಭಾಷಣದುದ್ದಕ್ಕೂ  ಭಾವನಾತ್ಮಕ ವಿಷಯಗಳನ್ನು ಉಲ್ಲೇಖಿಸಿ ಅನುಕಂಪವನ್ನು ಗಿಟ್ಟಿಸುವ ಪ್ರಯತ್ನವನ್ನು ಮಾಡಿದ್ದರು . 

ಆದರೆ ತಾನೊಂದು ಬಯಸಿದರೆ ದೈವವೊಂದು ಬಯಸಿತು ಎಂಬಂತೆ ಹಲವು ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಫಡ್ನವಿಸ್ ಇದೆಲ್ಲದರ ಅರಿವಿದ್ದು ಸದ್ದಿಲ್ಲದೇ  ಮುಖ್ಯಮಂತ್ರಿ ಗದ್ದುಗೆಗೆ ಹೆಸರು ಸೂಚಿಸಿದ್ದು ಮಾತ್ರ ಏಕನಾಥ ಶಿಂದೆಯದ್ದೂ , ಆ ಮೂಲಕ ಒಂದೇ ಏಟಿಗೆ ಮೂರು ನಾಲ್ಕು ಹಕ್ಕಿಗಳನ್ನು ಹೊಡೆದ ಕೀರ್ತಿ ಫಡ್ನವಿಸ್ ತಂಡಕ್ಕೆ ಸಲ್ಲುತ್ತದೆ , ಕಳೆದೆರಡು ದಿನಗಳಿಂದ ಈ ಪ್ರಹಸನವನ್ನು ಗಮನಿಸುತ್ತಿದ್ದ NCP ಹಾಗು Congress ಸದ್ದಿಲ್ಲದೇ ಮತ್ತೆ ಬ್ರಾಹ್ಮಣರನ್ನು ಪ್ರಭಲ ಹುದ್ದೆಗೆ ಭಾ ಜ ಪ ತಂದು ಕೂರಿಸುತ್ತಿದೆ ಎಂದು ಪುಕಾರು ಹರಿಯ ಬಿಟ್ಟು ಭಾ ಜ ಪ ಎಂದಿಗೂ ಮೇಲ್ವರ್ಗದ ಪರ ಎಂಬ ಅಭಿಪ್ರಾಯ ಬರುವಂತೆ ಬಿಂಬಿಸುವ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿತು, ಆದರೆ ಭಾ ಜ ಪ ಶಿಂದೆ ಎಂಬ ಆಟೋ ರಾಜನಿಗೆ ಮುಖ್ಯ ಮಂತ್ರಿ ಗದ್ದುಗೆಯನ್ನು ಬಿಟ್ಟು ಕೊಟ್ಟು ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡ ಮೇಲು ಮಾಡಿದೆ.


ಆ ಮೂಲಕ ಮರಾಠ ಸಮುದಾಯದ ಒಲವನ್ನು ಗಳಿಸಿ NCP ಯ ಮರಾಠ ಪಾಲಿಟಿಕ್ಸ್ ಗೆ ಹಿನ್ನಡೆ ಉಂಟುಮಾಡುವುದು , ಶಿವಸೈನಿಕ ಶಿಂದೆಗೆ  ಅಧಿಕಾರ ಬಿಟ್ಟು ಕೊಡುವ ಮೂಲಕ ಠಾಕ್ರೆ ಪರಿವಾರಕ್ಕೆ ಸಿಗಬಹುದಾದ ಅನುಕಂಪಕ್ಕೂ ಇತಿಶ್ರೀ ಹಾಡುವುದು , ಇನ್ನೇನು  ಕೆಲವೇ ಕೆಲವು ತಿಂಗಳಲ್ಲಿ ಮುಂಬೈ ಮಹಾನಗರ ಪಾಲಿಕೆಗೆ ಬರುವ ಚುನಾವಣೆಯಲ್ಲಿ ಭಾ ಜ ಪ ಮತ್ತು ಶಿವಸೇನೆ ಶಿಂದೆ ಬಣ ಮತ್ತೆ ಅಧಿಕಾರದ ಗದ್ದುಗೆಗೇರುವಂತೆ ನೋಡಿಕೊಳ್ಳುವುದು ಇವೆಲ್ಲವೂ ಶಿಂದೆ ಮುಖ್ಯಮಂತ್ರಿಯಾಗುವದರ ಹಿಂದಿನ ಲೆಕ್ಕಾಚಾರ. 

ಹೀಗೆ ಇನ್ನೇನು ಡೆಲ್ಲಿಗೆ ನರೇಂದ್ರ , ಮಹಾರಾಷ್ಟ್ರಕ್ಕೆ ದೇವೇಂದ್ರ , ಕರ್ನಾಟಕಕ್ಕೆ ವಿಜಯೇಂದ್ರ ಎಂಬ ಸ್ಲೋಗನ್ನು ಫೇಸ್ ಬುಕ್ನಲ್ಲಿ  ಪೋಸ್ಟ ಮಾಡಲು ಹೋದ BSY ಅಭಿಮಾನಿಗಳು  ಚಕಿತರಾಗಿ ಸುಮ್ಮನಾಗಿದ್ದಾರೆ, ಆದರೆ ಇದೆಲ್ಲದರ ನಡುವೆ  ಈ ಪ್ರಹಸನದಿಂದ ಭಾ ಜ ಪ ದ ಚಾಣಕ್ಯರ ಲಿಸ್ಟ್ ನಲ್ಲಿ ಫಡ್ನವಿಸ್ ಹೆಸರು ಕೂಡ ಸೇರಿಕೊಂಡಿದೆ ಬರುವ ದಿನಗಳಲ್ಲಿ ಫಡ್ನವಿಸ್ ಡೆಲ್ಲಿಯ ಪಡಸಾಲೆಯಲ್ಲಿ ಕಂಡು ಬಂದರೆ ಆಶರ್ಯವಿಲ್ಲ ಬಿಡಿ, ಅಂದ ಹಾಗೆ ಬಿ ಜೆ ಪಿ 2019 ರಲ್ಲೇ ಶಿವಸೇನೆಗೆ ಮುಖ್ಯ ಮಂತ್ರಿ ಪದವಿಯನ್ನು ಬಿಟ್ಟುಕೊಡಬಹುದಿತ್ತಲ್ಲವೇ ಎಂದು ಜನಸಾಮಾನ್ಯ ಕೇಳುತ್ತಿದಾನೆ , ಅದು ನಿಜವೇ ಆದರೆ ಶಿವಸೇನೆ  ಬಿ ಜೆ ಪಿ ಪಕ್ಷದ ನ್ಯಾಚುರಲ್ ಅಲಯನ್ಸ್ ನಂತೆ ಇದ್ದವರು  ಆದ್ದರಿಂದ ಶಿವಸೇನೆ ಎಂದಿಗೂ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಲಾರರೆಂದು ಅಂದು ಬಿ ಜೆ ಪಿ ಲೆಕ್ಕ ಹಾಕಿತ್ತೇನೋ. ಅದೇನೇ ಇರಲಿ ಜನಸಾಮಾನ್ಯ ಬಯಸುವುದು  ಪ್ರಜಾಪ್ರಭುತ್ವ ಪದೇ ಪದೇ ರೆಸಾರ್ಟಿನ ಕದ ತಟ್ಟದಿರಲೆಂದು. 

ಕಾರ್ತಿಕ್ ಎಸ್ ಬಾಪಟ್ . 

Picture Courtesy: Internet 


Sunday, April 17, 2022


ಆ ಶ್ವೇತ ಭೂಮಿಯ ಮೇಲೆ ಇನ್ನೆಷ್ಟು ದಿನ ನೆತ್ತರ ಹೊಳೆ? 


" ದಿ ಕಶ್ಮೀರ ಫೈಲ್ಸ್" ಎಂಬ ಚಲನ ಚಿತ್ರ ಕಳೆದ ಕೆಲವು ದಿನಗಳಿಂದ ದೇಶದೆಲ್ಲೆಡೆ ಇನ್ನಿಲ್ಲದಂತೆ ಸದ್ದು ಮಾಡುತ್ತಿದೆ, ಈ ಚಿತ್ರದ ವಸ್ತುವೇ ಅಂತಹದು , ಈ ಚಲನ ಚಿತ್ರ ದೇಶಾದ್ಯಂತ ಒಂದು ರೀತಿಯ ಸಂಚಲನವನ್ನು ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು, ಹಾಗಾದರೆ ನೇರ ನೇರಾ ಈ ಚಲನಚಿತ್ರದ ಬಗ್ಗೆ ಗಮನ ಹರಿಸುವ ಮುನ್ನ ಸಂಕ್ಷಿಪ್ತವಾಗಿ ಕಾಶ್ಮೀರದ  ಸ್ವಾತಂತ್ರಾನಂತರ ಹಾಗು ಸ್ವತಂತ್ರ ಪೂರ್ವದಲಿಲ್ಲ ನಡೆದ ಘಟನೆಗಳ ಅವಲೋಕನ ಅತ್ಯಗತ್ಯ.

ಅದು 1946  ಹಾಗು 1947 ಸ್ವತಂತ್ರ ಪೂರ್ವದ ಸಮಯ ಆಗ ಬ್ರಿಟಿಷ್ ಸರ್ಕಾರ ಇನ್ನೇನು ಹಿಂದುಸ್ತಾನದಿಂದ ಕಾಲ್ಕಿತ್ತುವ ಎಲ್ಲಾ ತಯಾರಿಯನ್ನು ನಡೆಸಿತ್ತು  ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ  ನಾಯಕರು, ವಿವಿಧ ಸ್ತರಗಳಲಿದ್ದ ವಿವಿಧ ರಂಗದ ಗಣ್ಯರು ಹಾಗು ಬ್ರಿಟಿಷ್ ಸಾಮ್ರಾಜ್ಯ  ಭಾರತ ಸಂಪೂರ್ಣ ಸ್ವಾಯತ್ತತೆ ಪಡೆದ ರಾಷ್ಟ್ರವಾಗಿ ಹೊರ ಹೊಮ್ಮಲು ತತಕ್ಷಣಕ್ಕೆ  ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ರೂಪು ರೇಷೆಯನ್ನು ಸಿದ್ಧಪಡಿಸುತ್ತಿತ್ತು ಅದರಲ್ಲೂ ಸ್ವತಂತ್ರ ಒಕ್ಕೂಟವಾಗಿ ರಾಜ್ಯವಾಳುತ್ತಿದ್ದ ರಾಜರುಗಳ , ಸಾಮಂತರುಗಳನ್ನು ಹೇಗೆ ಸ್ವತಂತ್ರ ಭಾರತದಲ್ಲಿ ಸೇರಿಸಿಕೊಂಡು ಏಕೀಕೃತ ಹಿಂದುಸ್ತಾನವನ್ನು ಕಟ್ಟಬೇಕೆಂಬ ಚರ್ಚೆಗಳು ನಡೆಯುತ್ತಿದ್ದವು ಆದಾಗ್ಯೂ ಹಲವು ಒತ್ತಡಗಳಿಂದಾಗಿ  ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳಾಗಿ ಹಿಂದುಸ್ತಾನವನ್ನು ಇಬ್ಬಾಗ ಮಾಡುವ ನಿರ್ಧಾರಕ್ಕೆ  ಹೆಚ್ಚು ಕಡಿಮೆ ಬ್ರಿಟಿಷ್ ಸಾಮ್ರಾಜ್ಯ ಮುಂದಾಗಿತ್ತು ಅದರಂತೆ ಕೆಲವು ರಾಜರುಗಳು ತಮ್ಮ ಇಚ್ಛೆಯಂತೆ ಭಾರತದೊಂದಿಗೋ ಅಥವಾ ಪಾಕಿಸ್ತಾನದೊಂದಿಗೆ ಸೇರಿಕೊಳ್ಳುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿದ್ದರು ಆದರೆ ಕಾಶ್ಮೀರ ಪ್ರಾಂತ್ಯದ  ರಾಜ, ರಾಜ  ಹರಿಸಿಂಗ್ ತಾನು ಭಾರತ ಅಥವಾ ಪಾಕಿಸ್ತಾನ ಯಾರೊಂದಿಗೂ ವಿಲೀನಗೊಳ್ಳಲು ಒಪ್ಪಿಕೊಳ್ಳದೆ ಸ್ವತಂತ್ರ ವಾಗಿರಲು ನಿರ್ಧರಿಸುವುದಾಗಿ ಘೋಷಿಸುತ್ತಾನೆ , ಆದರೆ ಜಿನ್ನಾ ಮೊದಲಿಂದಲೂ  ಹೇಗಾದರೂ ಮಾಡಿ ಕಾಶ್ಮೀರವನ್ನು ಪಾಕಿಸ್ತಾನದ ತೆಕ್ಕೆಗೆ ಸೇರಿಸಿಕೊಳ್ಳಬೇಕೆಂದು ಹೊಂಚು ಹಾಕುತ್ತಿದ್ದನು , ಜಿನ್ನಾ ಅಣತಿಯಂತೆ  ಪಾಕಿಸ್ತಾನದ ಮಿಲಿಟರಿ ಪಡೆ  ಪಾಕಿಸ್ತಾನದ ಕೆಲವು ಬುಡಕಟ್ಟು ಜನಾಂಗದೊಂದಿಗೆ ಕೈ ಜೋಡಿಸಿ ಕಾಶ್ಮೀರದ ಮೇಲೆ ಯುದ್ಧಕ್ಕೆ ಪ್ರಚೋದನೆ ನೀಡುತಿತ್ತು , ಮೊದಲಿಗೆ ಪಾಕಿಸ್ತಾನ ಕಾಶ್ಮೀರ ದೊಂದಿಗೆ ಮಾಡಿಕೊಂಡಿದ್ದ ಸ್ಟಾಂಡ್ ಸ್ಟಿಲ್ ಅಗ್ರಿಮೆಂಟ್ ಅನ್ನು ಮುರಿದು ಹಾಕಿ ಪಾಕಿಸ್ತಾನಕ್ಕೆ ಸರಬರಾಜಾಗುತ್ತಿದ ಪೆಟ್ರೋಲ್ ಹಾಗು ಇತರೆ ವಸ್ತುಗಳ ಸರಬರಾಜನ್ನು ನಿಲ್ಲಿಸಿ ಕಾಶ್ಮೀರದ ರಾಜನ ಕೈ ಕಟ್ಟಿ ಹಾಕಿತು , ನಂತರ ಸೀಲ್ಕೋಟ್ ಮತ್ತು  ಜಮ್ಮುವಿನ ನಡುವೆ ಸಮರ್ಕ ಸಾದಿಸುತ್ತಿದ ರೈಲ್ವೆ ಸಂಪರ್ಕವನ್ನು ಕಡಿತಗೊಳಿಸಿತು. ಹೀಗೆ ಪಾಕಿಸ್ತಾನ ಕಾಶ್ಮೀರ ಮತ್ತು ರಾಜ ಹರಿಸಿಂಗ್ ನನ್ನ  ಕಟ್ಟಿ ಹಾಕುತ್ತ ಹೋಯಿತು , ಆಗ ಹರಿ ಸಿಂಗ್ ಭಾರತವು ಮಿಲಿಟರಿ ಸಹಾಯ ಮಾಡಬೇಕೆಂದು ಕೇಳಿ ಕೊಳ್ಳುತ್ತಾನೆ, ಆ ಸಂಧರ್ಭದಲ್ಲಿ ಪಟೇಲರಿಂದಾದಿಯಾಗಿ ನೆಹರು ವರೆಗೆ ಎಲ್ಲರ ಅಭಿಪ್ರಾಯವು ತತಕ್ಷಣವೇ ಸೈನ್ಯವನ್ನು ಕಾಶ್ಮೀರದ ರಕ್ಷಣೆಗೆ ಕಳಿಸಿ ಕೊಡಬೇಕೆಂದಾಗಿತ್ತು ಆದರೆ ಭಾರತ ಸ್ವತಂತ್ರ ಗೊಂಡಿತ್ತೆ ವಿನಾ ಸಂಪೂರ್ಣ ಸ್ವಾಯತ್ತತೆ ಪಡೆದಿರಲಿಲ್ಲ ಅದರ ಪರಿಣಾಮವಾಗಿ ಮೌಂಟ್ ಬ್ಯಾಟನ್ ಇನ್ನು ಭಾರತದ ಗವರ್ನರ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದನು , ಆದರೆ ಪಾಕಿಸ್ತಾನ ಜಿನ್ನಾ ರನ್ನು ಪಾಕಿಸ್ತಾನದ ಗವರ್ನರ್ ಜನರಲ್ ಆಗಿ ಆಯ್ಕೆ ಮಾಡಿಕೊಂಡಾಗಿತ್ತು ಅದರ ಪರಿಣಾಮವಾಗಿ ಮೌಂಟ್ ಬ್ಯಾಟನ್ ಅಣತಿಯಂತೆ ಪ್ರತಿ ಹೆಜ್ಜೆ ಇಡಬೇಕಿತ್ತು ಹಾಗು ಮೌಂಟ್ ಬ್ಯಾಟನ್ ಸೈನ್ಯವನ್ನು ಕಾಶ್ಮೀರಕ್ಕೆ ಕಳಿಸಲು  ಒಪ್ಪಲಿಲ್ಲ , ಮೌಂಟ್ ಬ್ಯಾಟನ್ ಪ್ರಕಾರ ಹರಿ ಸಿಂಗ್ ವಿಲೀನಕ್ಕೆ ಸಹಿ ಹಾಕುವ ವರೆಗೂ ಸೇನೆಯನ್ನು ಕಳುಹಿಸಿ ಕೊಡುವುದು ಸಮಂಜಸವಲ್ಲ ಎಂಬುದಾಗಿತ್ತು , ಆದರೆ ಅಲ್ಲಿ ಕಾಲ ಮೀರುತ್ತಿತ್ತು ಪಾಕ್ ಪ್ರಚೋದಿತ ಆಕ್ರಮಣಕಾರರು ಕಾಶ್ಮೀರದ ಆಯಕಟ್ಟಿನಲ್ಲಿ ಬಂದು ಕುಳಿತಿದ್ದರು , ಕೊನೆಗೆ ಮೌಂಟ್ ಬ್ಯಾಟನ್ ನ ಅಣತಿಯಂತೆ  ವಿ ಪಿ ಮೆನನ್ ರಾಜ ಹರಿ ಸಿಂಗ್ ಗೆ ಮನದಟ್ಟಾಗುವಂತೆ   ಪರಿಸ್ಥಿತಿಯನ್ನು ತಿಳಿಸಿ  ರಾಜ ಹರಿ ಸಿಂಗ್ ನಿಗೆ ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರಗೊಳ್ಳಲು ಸಲಹೆ ಕೊಡುತ್ತಾರೆ, ರಾಜ ಹರಿ ಸಿಂಗ್ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲು ಕರಾರು ಪಾತ್ರಕ್ಕೆ ಸಹಿ ಮಾಡುತ್ತಾನೆ , ಆದರೆ ದುರದೃಷ್ಟವಶಾತ್ ಅಷ್ಟು ಹೊತ್ತಿಗೆ ಪಾಕ್ ಪ್ರಚೋದಿತ ಬುಡಕಟ್ಟು ಬಂಡುಕೋರರು ಆಯಾ ಸ್ಥಳದಲ್ಲಿ ಸ್ಥಾಪಿತರಾಗಿರುತ್ತಾರೆ  , ಜಿನ್ನಾ ರಾಜ ಹರಿ ಸಿಂಗ್ ನ ನಡೆಯಿಂದಾಗಿ ವಿಚಲಿತನಾಗಿ ಬ್ರಿಟಿಷರಿಗೆ ಸೈನ್ಯ ಸಹಾಯ ಕೇಳುತ್ತಾನೆ ಆದರೆ ಬ್ರಿಟಿಷ್ ಅಧಿಕಾರಿಗಳು ಸಾರ ಸಗಟಾಗಿ ನಿರಾಕರಿಸುತ್ತಾರೆ , ಇದೆ ಸಂದರ್ಭದಲ್ಲಿ ಮೌಂಟ್ ಬ್ಯಾಟನ್ ಸೇನೆಯನ್ನು ಹಿಂಪಡೆಯುವಂತೆ ಜಿನ್ನಾ ಗೆ ಕೇಳಿ ಕೊಳ್ಳುತ್ತಾನೆ , ಅಷ್ಟರಲ್ಲಿ  ನೆಹರು ಆಕಾಶವಾಣಿಯಲ್ಲಿ ತಮ್ಮ ಭಾಷಣದಲ್ಲಿ UNO ಮಧ್ಯಸ್ಥಿಕೆಯಲ್ಲಿ ಕಾಶ್ಮೀರದಲ್ಲಿ ಜನ ಮತ ಸಂಗ್ರಹಿಸುತ್ತೇವೆ ಎಂಬ ಘನಘೋರ ಹೇಳಿಕೆಯನ್ನು ಕೊಟ್ಟು ಬಿಡುತ್ತಾರೆ , ನಂತರ ನಡೆದದ್ದು ಎಲ್ಲರಿಗು ತಿಳಿದೇ ಇದೆ , ಪಾಕಿಸ್ತಾನ ಕಾಶ್ಮೀರದಿಂದ ಕಾಲ್ಕಿತ್ತರು ಕೆಲವು ಪ್ರದೇಶದಿಂದ ಹಿಂದೆ ಸರಿಯಲೇ ಇಲ್ಲ ಇಂದಿಗೂ ಅದು ಪಾಕ್ ಆಕ್ರಮಿತ ಕಾಶ್ಮೀರವೆಂದು ನಾವು ಕರೆಯುತ್ತೇವೆ , ಅದು ಸರಿ ಕೆಲವೊಮ್ಮೆ ರಾಜ್ಯಭಾರ ಮಾಡುವಾಗ ಇಂಥ ತಪ್ಪುಗಳು ಆಗುತ್ತವೆ ತಪ್ಪುಗಳು ಸಹಜ ಆದರೆ ಪ್ರಮಾದಗಳಾಗಬಾರದಲ್ಲವೇ?   ಆರ್ಟಿಕಲ್ 370 ಮತ್ತು 35 ಎ ಒಡಂಬಡಿಕೆಗೆ ಸಹಿ ಮಾಡಿದ್ದೇಕೆ ? ಮತ್ತು ಅದು ತಾತ್ಕಾಲಿಕವೆಂದು ಪರಿಗಣಿಸಲ್ಪಟ್ಟರು ಏಳು ದಶಕಗಳ ವರೆಗೆ ಹಾಗೆ ಉಳಿಸಿಕೊಂಡಿದ್ದೇಕೆ ? ಎಂದು ನೋಡ ಹೊರಟರೆ ಕಾಣ ಸಿಗುವುದು ಶೇಕ್ ಅಬ್ದುಲ್ಲಾ ಎಂಬ ಕಾಶ್ಮೀರದ ರಾಜಕಾರಣಿ , ಈತನಿಗೂ ಸ್ವತಂತ್ರ ಭಾರತದ ಪ್ರಧಾನಿಗಳಾದ ನೆಹರು ಅವರಿಗೂ ಅಪಾರ ಸ್ನೇಹವಿತ್ತು , ಸ್ನೇಹಿತನ ಸ್ನೇಹಕ್ಕೆ ಕಟ್ಟು ಬಿದ್ದು ಒಂದಿಡೀ ಕಾಶ್ಮೀರದ ಜನತೆಯನ್ನು ಮಹಾಕೂಪಕ್ಕೆ ತಳ್ಳಿದರೆ ಎಂದು ಪ್ರಶ್ನೆ ಏಳುವುದು ಸಹಜ ಅದಕ್ಕೆ ಪೂರಕವಾಗಿ ನೆಹರು 1946 ರಲ್ಲಿ ಶೇಕ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಕ್ವಿಟ್ ಕಾಶ್ಮೀರ ಮೂವ್ಮೆಂಟ್ ಅನ್ನು ನೋಡಿಯೂ ನೋಡದೆ ಸುಮ್ಮನೆ ಕುಳಿತಿದ್ದರು ಅಷ್ಟೇ ಅಲ್ಲ ಒಂದು ಹೆಜ್ಜೆ ಮುಂದೆ ಹೋಗಿ  ಶೇಕ್ ಅಬ್ದುಲ್ಲಾ is  my  blood brother a man above suspicion ಎಂಬ ಹೇಳಿಕೆ ಕೊಟ್ಟು ಭಾರತವನ್ನು ಒಡೆಯುವ ಪ್ರಯತ್ನಕ್ಕೆ ಇನ್ನಷ್ಟು ಇಂಪು ಕೊಟ್ಟಿದ್ದರು , ಇದೆಲ್ಲದರ ಫಲವಾಗಿ ಶೇಕ್ ಅಬ್ದುಲ್ಲಾ ಕಾಶ್ಮೀರದ  ಹೆಡ್ ಹಾಫ್ ಎಮರ್ಜೆನ್ಸಿ ಅಡ್ಮಿನಿಸ್ಟ್ರೇಟರ್ ಎಂದು   ನೇಮಕನಾಗಿ ಮುಂದೆ ಕಾಶ್ಮೀರದ ಮುಖ್ಯಮಂತ್ರಿಯಾಗಿ  ನೆಹರು ಸರ್ಕಾರವನ್ನು ತನ್ನ ಅಣತಿಯಂತೆ ಆರ್ಟಿಕಲ್ 370 ಮತ್ತು 35 ಎ ಒಡಂಬಡಿಕೆಗೆ ಒಪ್ಪುವಂತೆ ಮಾಡಿತು , ಹೀಗೆ ಕಾಶ್ಮೀರಿ ಮೂಲನಿವಾಸಿಗಳ, ಕಾಶ್ಮೀರಿ ಪಂಡಿತರ ನರಮೇಧದ ಮುನ್ನುಡಿ ಅಂದಿನಿಂದಲೇ ಬರೆಯಲಾಯಿತು , ಇದು 1990 ರಲ್ಲಿ ಅತ್ಯಂತ ತೀವ್ರವಾಗಿ ಪಂಡಿತರ ಮಹಾವಲಸೆಗೆ ಹಾಗು ಕಂಡು ಕೇಳಿರದ ನರಮೇಧಕ್ಕೆ  ಕಾರಣವಾಯಿತು ಇದೇ ಅಂಶವನ್ನು ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರ ಎಳೆ ಎಳೆಯಾಗಿ ಕಟ್ಟಿ ಕೊಟ್ಟಿದೆ.

ಸಾಮಾನ್ಯವಾಗಿ ಭಾರತೀಯರಿಗೆ ಪುರಾಣ ಪ್ರಜ್ಞೆ ಇದ್ದಷ್ಟು ಇತಿಹಾಸ ಪ್ರಜ್ಞೆ ಇಲ್ಲ ಎಂಬ ಆರೋಪ ಇದೆ ಆದರೆ ಸರಿಯಾದ ಇತಿಹಾಸವನ್ನು ಹೇಳುವ , ಬರೆಯುವ ದ್ರಾಷ್ಟ್ಯ  ಇದ್ದರು ಅದನ್ನು ಮುಕ್ತವಾಗಿ ಭಾರತೀಯರಿಗೆ ತಲುಪದಿರುವಂತೆ ಮಾಡಿದ ಕೈಗಳಾವುವು ಎಂಬುದು  ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ ಬಿಡಿ ಆದರೆ ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರದ ಮೂಲಕ ಈ ಕೆಲಸವಾಗಿದೆ  ಕೆಲವು ನಿರ್ಬಂಧಗಳ ಹಿನ್ನಲೆಯಲ್ಲಿ ದಿ ಕಾಶ್ಮೀರ ಫೈಲ್ಸ್  ಚಲನ ಚಿತ್ರ ಕೂಡ ಕೆಲವು ವಿಷಯಗಳನ್ನು ಕೇವಲ ಒಂದು glimpse ಅಥವಾ birds  eye view ಎಂಬಂತೆ  ತೋರಿಸಿದ್ದರು ಇತಿಹಾಸದ ಗರ್ಭದಲ್ಲಿ ಹುದುಗಿರುವ  ಕಪ್ಪು ಪುಟಗಳ ಅನಾವರಣಕ್ಕೆ ಮುನ್ನುಡಿ ಬರೆದಿದೆ ಎಂದರೆ ತಪ್ಪಾಗಲಾರದು ಹಾಗು ಇದರ ಕೀರ್ತಿ ವಿವೇಕ್ ಅಗ್ನಿಹೋತ್ರಿ ತಂಡಕ್ಕೆ ಸಂಪೂರ್ಣವಾಗಿ ಸಲ್ಲುತ್ತದೆ.

ಒಂದು ಸಮಾಜ  ಮೂಲಭೂತವಾದಿ ಭಯೋತ್ಪಾದಕರ ವಿರುದ್ಧ ಹೋರಾಡಲು  ಸಿದ್ಧವಾಗದಿದ್ದರೆ ಏನಾಗುತ್ತದೆ ಎಂಬುದರ ಕಥೆಯಾಗಿ ದಿ ಕಾಶ್ಮೀರ ಫೈಲ್ಸ್ ನಿಮ್ಮ ಮುಂದೆ ಅನಾವರಗೊಳ್ಳುತ ಹೋಗುತ್ತದೆ ಅಷ್ಟೇ ಅಲ್ಲ ಒಂದು ಜವಾಬ್ದಾರಿಯುತ ಹಾಗು ಕ್ರಿಯಾಶೀಲ ಆಡಳಿತ ವ್ಯವಸ್ಥೆ ಇಲ್ಲದಿದ್ದಲ್ಲಿ  ಏನೇನಾದೀತು ಎಂಬುದೇ ದಿ ಕಾಶ್ಮೀರ ಫೈಲ್ಸ್ ಹೂರಣ .

ಒಂದಂತೂ ಸತ್ಯ ಇತರೆ ಚಲನ ಚಿತ್ರಗಳಾಗಿದ್ದಲ್ಲಿ ನೋಡಿ ಆನಂದಿಸಿ ಎನ್ನ ಬಹುದಾಗಿತ್ತು    ಆದರೆ  ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರ ಅಂತಹುದಲ್ಲ , ಚಲನ ಚಿತ್ರ ನೋಡಿ ಹೊರಬರುವಾಗ  ತೇವಗೊಳ್ಳದ , ರೋಷಗೊಳ್ಳದ ಕಣ್ಣುಗಳನಂತೂ ನಾ ಕಾಣಲಿಲ್ಲ ಹಾಗೆಂದು ನೀವು ಈ ಚಲನ ಚಿತ್ರವನ್ನು ನೋಡದೆ ಇದ್ದಲ್ಲಿ ಅಂದು ನಡೆದ ನರಮೇಧದ ಪ್ರಭಾವದ ಅರಿವು ನಿಮಗೆಂದು ಆಗಲಿಕ್ಕಿಲ್ಲ ಅಷ್ಟೇ ಅಲ್ಲ ಇದೆಲ್ಲದರ ಮಧ್ಯೆ  ನನ್ನನ್ನು ತೀವ್ರವಾಗಿ ಕಾಡಿದ್ದು ಇಂತಹ ಸನ್ನಿವೇಶದಲ್ಲೂ ಮೆರೆದ ರಾಜಕೀಯ ಹಾಗು  ಸ್ವಾರ್ಥ.

ಬಹುಷ್ಯ ಇತಿಹಾಸ ಎಂದರೆ ಮೂಗು ಮುರಿಯುವ ಕೆಲವರಿಗಾಗದರು ಈ ಚಿತ್ರ ವೀಕ್ಷಿಸಿದ ಮೇಲೆ  ಇತಿಹಾಸದ ಅರಿವು ನಮಗೇಕಿರಬೇಕೆಂದು ಅರಿವಾಗಿರಬಹದು ಎಂದು ಅಂದು ಕೊಂಡಿದ್ದೇನೆ , ಅಂದ ಹಾಗೆ ದಿ ಕಾಶ್ಮೀರ ಫೈಲ್ಸ್ ಚಲನ ಚಿತ್ರವನ್ನು ತಾವುಗಳು ನೋಡಿಲ್ಲವಾದರೆ ಒಮ್ಮೆ ನೋಡಿ, ಯಾವ ರಾಜಕೀಯದ ಗೊಡವೆಗೆ ಹೋಗದೆ  ಅಂದು ಈ ಭೀಕರ ಕುಕೃತ್ಯಕ್ಕೆ ತುತ್ತಾದ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ನಾವುಗಳು ಹೇಗೆ ಕೈಜೋಡಿಸಬೇಕೆಂದು ಕೇಳಿ, ನೀವೇನು ಮಾಡಿದಿರೆಂದು  ನಮ್ಮನಾಳುವ  ಸರ್ಕಾರಕ್ಕೂ    ಒಕ್ಕೂರಲಿನಿಂದ ನ್ಯಾಯ ಸಿಗುವವರೆಗೂ ಕೇಳುತ್ತಲೇ ಇರಿ. ಏಕೆಂದರೆ ಇದು ಚಂದಮಾಮನ ಕಥೆಯಂತೆ ಕೇಳಿ ಹಾಗು ನೋಡಿ ಮರೆಯುವ ವಿಷಯವಲ್ಲ.

ನಿಮ್ಮ ,

ಕಾರ್ತಿಕ್ ಎಸ್ ಬಾಪಟ್ .