Saturday, December 25, 2021

 ಬಸವನಗುಡಿಯ ಅಭೇದ್ಯ ಕೋಟೆಯ ಭೇದಿಸಿದ ಹಾರನಹಳ್ಳಿ.



ಅದು 1989  ಬಸವನಗುಡಿಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮೈ ಕೊಡವಿ ಮತ್ತೆ ಎದ್ದು ನಿಂತಿತ್ತು 224 ರಲ್ಲಿ 178 ಸೀಟ್ಗಳನ್ನು ಗೆದ್ದು ಕೊಂಡು ಭಾರಿ ಬೀಗಿತ್ತು , ಆದರೆ ಕಾಂಗ್ರೆಸ್ನ ಹಿರಿಯ ಮುತ್ಸದ್ದಿ ಹಾರನಹಳ್ಳಿ ರಾಮಸ್ವಾಮಿಗಳಿಗೆ ಬಸವನಗುಡಿ ಕ್ಷೇತ್ರ ಕೈ ಹಿಡಿಯಲಿಲ್ಲಅಂದು ರಾಮಸ್ವಾಮಿಗಳು ಗೆದ್ದಿದೆ ಆಗಿದ್ದರೆ ಕರ್ನಾಟಕ್ಕೆ ಅತ್ಯುತ್ತಮ್ಮ ಮುಖ್ಯಮಂತ್ರಿ ದೊರಕುತ್ತಿದ್ದರೇನೋ ಎಂದು ಈಗಲೂ ಅರಸೀಕೆರೆ , ಹಾಸನ ಮತ್ತು ಹಳೆಯ ಕಾಂಗ್ರೆಸ್ಸಿಗರು ಹಾಗು ಭಾ   ಮಿತ್ರರು ಹಾರನಹಳ್ಳಿ ಅವರ ವಿಷಯ ಬಂದಾಗ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ , ಅದಿರಲಿ ಇಂದು ಅದರ ಪ್ರಸ್ತಾಪವೇಕೆ ಎಂದರೆ ಮೊನ್ನೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ.

 ಹಿಂದೆ ನಡೆದ  ಬ್ರಾಹ್ಮಣ ಮಹಾಸಭಾ ಚುನಾವಣೆ ಒಂದೋ ಅವಿರೋಧವಾಗಿ , ಅಥವಾ ಏಕಪಕ್ಷೀಯ ಚುನಾವಣೆಯ ರೀತಿಯಲ್ಲಿ ನಡೆಯುತ್ತಿತ್ತು ಆದರೆ  ಬಾರಿ ಹಿರಿಯ ನ್ಯಾಯವಾದಿ ಶ್ರೀ ಅಶೋಕ ಹಾರನಹಳ್ಳಿ ಅವರ ಸ್ಪರ್ದೆಯಿಂದಾಗಿ ಇಡೀ ರಾಜ್ಯದಲ್ಲೇ ಸಂಚಲನವನ್ನು ಮೂಡಿಸಿತ್ತು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ  ಪ್ರಪ್ರಥಮ ಬಾರಿಗೆ ಬಸವನಗುಡಿಯ ಬೇಲಿ ದಾಟಿ ಕರ್ನಾಟಕದಾದ್ಯಂತ ಆರೋಗ್ಯಕರ ಚರ್ಚೆ ಮತ್ತು ಚಿಂತನೆಗಳಿಗೆ ನಾಂದಿ ಹಾಡಿತ್ತು ಅಷ್ಟೇ ಅಲ್ಲ ಯಾವ ಒಂದು ವಿಧಾನಸಭಾ ಹಾಗು ಲೋಕಸಭಾ ಚುನಾವಣೆಗಳಿಗೆಕಡಿಮೆ ಇಲ್ಲದಂತೆ ಪ್ರಚಾರ ದೊರೆಯಿತು

ಎರಡೇ ಎರಡು ತಿಂಗಳ ಹಿಂದೆ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಹಾರ್ನಹಳ್ಳಿಯವರಿಗ ಸಂಘಟನೆ ಮತ್ತಷ್ಟು ಬಲ ಪಡಿಸಿ ಕರ್ನಾಟಕದ ಸಮಸ್ತ ಬ್ರಾಹ್ಮಣ ಕುಟುಂಬದ ಏಳಿಗೆಗೆ ಇನ್ನಷ್ಟು ಹೆಚ್ಚು ಶ್ರಮಿಸಬೇಕು ಎಂದೆನಿಸಿ ಚುನಾವಣೆಗೆ ಧುಮುಕಿಯೇ ಬಿಟ್ಟರು , ಹಾಗೆ ಚುನಾವಣಾ ಕಣಕ್ಕೆ ಧುಮುಕಿದಾಗ ಇದರ ಆಳ ಅಗಲ ಖುದ್ದು ಅಶೋಕ ಹಾರನಹಳ್ಳಿ ಅವರ ಊಹೆಗೆ ಮೀರಿದಾಗಿತ್ತು , ಆದರೆ ಕರ್ನಾಟಕದಾದ್ಯಂತ ಸುತ್ತಾಡಿ ಬಸವನಗುಡಿಯಲ್ಲೇಜಡವಾಗಿದ್ದ ಬ್ರಾಹ್ಮಣ ಸಭಾ ಗೆ ವೇಗವನ್ನು ಕೊಟ್ಟು ಚುನಾವಣೆ ಹಾಗು ಸಂಘಟನೆಯ  ಪ್ರಾಮುಖ್ಯತೆ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅರಿವಾಗುವಂತೆ ಮಾಡಿತು.

ಇವರ ವೇಗ ಕಂಡು ಪ್ರತಿಸ್ಪರ್ಧಿಗಳು ಕೂಡ ಬಸವನಗುಡಿಯಾಚೆ ಮುಖ ಮಾಡುವಂತೆ ಮಾಡಿತುಮೊದಲೆರಡು ಸುತ್ತಿನಲ್ಲಿ ಅಶೋಕ ಹಾರ್ನಹಳ್ಳಿ ಅವರು ೧೫೦೦ ಮತಗಳ ಅಂತರದಿಂದ ಮುಂದಿದ್ದರು , ಆದರೆ ಪ್ರತಿಸ್ಪರ್ಧಿ ರಘುನಾಥ್ ಹಾಗು ಲಕ್ಷ್ಮಿಕಾಂತ್ ಕೂಡ ಒಟ್ಟಾರೆ ಉತ್ತಮ ಮತಗಳನ್ನು ಪಡೆದಿದ್ದರಿಂದ ಕೊನೆಯ ಸುತ್ತಿನವರೆಗೂ ಎಲ್ಲರು ಫಲಿತಾಂಶಕ್ಕಾಗಿ ಕಾಯುವಂತೆ ಮಾಡಿತು ಕೊನೆಯಲ್ಲಿ  ಅಶೋಕ್ ಹಾರನಹಳ್ಳಿಅವರು ವಿಜಯಿಯಾದರುಕೇವಲ ಎರಡೇ ಎರಡು ತಿಂಗಳ ಮುಂಚೆ ಮಹಾ ಸಭಾದ ಹೊಸ್ತಿಲ್ಲಲ್ಲಿ ಬಂದು ನಿಂತ ಹಾರನಹಳ್ಳಿ ಅವರು ಎಲ್ಲರು ನಿಬ್ಬೆರಗಾಗುವಂತೆ ಬಸವನಗುಡಿಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎಂಬ  ಅಭೇದ್ಯ ಕೋಟೆಯನ್ನು  ಭೇದಿಸಿ ಬ್ರಾಹ್ಮಣ ಮಹಾಸಭಾ ಕರ್ನಾಟಕದ ಮನೆ ಮಾತಾಗುವಂತೆ ಮಾಡಿದರು.

ಹಲವು ಸಂಘ ಸಂಸ್ಥೆಗಳಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿರುವಹಳ್ಳಿಯಿಂದ ದಿಲ್ಲಿಯವರೆಗೆ ತನ್ನದೇ ಆದವರ್ಚಸ್ಸನ್ನು ಹೊಂದಿರುವ ಹಾರನಹಳ್ಳಿಯವರತ್ತ ಇಡೀ ಬ್ರಾಹ್ಮಣ ಸಮಾಜ ಬದಲಾವಣೆಗಾಗಿ ನೋಡುತ್ತಿದೆ , ಮುಂಬರುವ ದಿನಗಳಲ್ಲಿ ಹಾರನಹಳ್ಳಿ ಅವರು ಈಗಾಗಲೇ ಸಿದ್ಧಪಡಿಸಿಕೊಂಡಿರುವ ಬದಲಾವಣೆಯ ನೀಲ ನಕ್ಷೆಯಶಸ್ವಿಯಾಗಿ ಮೈದೆಳೆಯಲಿ ,  ಮೂಲಕ ಬ್ರಾಹ್ಮಣ ಸಮಾಜದ ಏಳಿಗೆಯಾಗಲಿ ಎಂದು  ಸಮಸ್ತ ಬ್ರಾಹ್ಮಣ ಸಮಾಜ ಹಾರೈಸುತ್ತಿದೆ .

 

ಕಾರ್ತಿಕ್ ಬಾಪಟ್.






Wednesday, December 15, 2021

ಕಂಡಲ್ಲಿ ಗುಂಡಿಕ್ಕಿ ಎಂಬ ಬ್ರಿಟೀಷರ ಆದೇಶವನ್ನು ಧಿಕ್ಕರಿಸಿ ಕರ್ನಾಟಕದ  ನಲವತ್ತು ಹಳ್ಳಿಗಳನ್ನು ಸ್ವತಂತ್ರ ಭಾರತವೆಂದು ಘೋಷಿಸಿದ ಕನ್ನಡದ ಕಟ್ಟಾಳು  ಹಾರನಹಳ್ಳಿ ರಾಮಸ್ವಾಮಿಯವರು . 

ಆಗಸ್ಟ್ 8 1942 ನೇ ಇಸವಿ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾಗಿತ್ತು , ಎಲ್ಲೆಲ್ಲೂ ಮಾಡು ಇಲ್ಲವೇ ಮಡಿ ಎಂಬಂತೆ ಯುವ ಸಮೂಹ ಬ್ರಿಟೀಷರ ವಿರುದ್ಧ ತಿರುಗಿಬಿದ್ದಿತ್ತು , ಮಹಾತ್ಮಾ ಗಾಂಧೀಜಿ ಅವರ ಪ್ರಭಾವ ಎಲ್ಲೆಲ್ಲೂ ಹಬ್ಬಿತ್ತು, ಸಾವಿರಾರು ಯುವಕರು ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದರು,ಕ್ರಾಂತಿಕಾರಿ ಯುವ ನಾಯಕರಗಿದ್ದ ಜಯಪ್ರಕಾಶ ನಾರಾಯಣ, ಅಶೋಕ ಮೆಹ್ತಾ , ಅಚ್ಚುತ ಪಟವರ್ಧನ್ ದೇಶದ ನಾನಾ ಭಾಗಗಳಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದರು, ಇತ್ತ ಹಾರನಹಳ್ಳಿ ರಾಮಸ್ವಾಮಿ ಅವರು ಕರ್ನಾಟಕದಲ್ಲಿ ಹೋರಾಟದ ಮುಂದಾಳತ್ವವನ್ನು ವಹಿಸಿದ್ದರು.

ಅದು ಹಾಸನದ ಮಲೆನಾಡಿನ ದಟ್ಟಾರಣ್ಯ ಪ್ರದೇಶ ಆ ಪ್ರದೇಶಕ್ಕೆ ಸೇರಿದ ನಲವತ್ತು ಹಳ್ಳಿಗಳನ್ನು ಸ್ವತಂತ್ರ ಭಾರತ ಎಂದು ಘೋಷಿಸಿ ಹಾರನಹಳ್ಳಿ ರಾಮಸ್ವಾಮಿಗಳು ಹೋರಾಟಕ್ಕೆ ಧುಮುಕಿಯೇ ಬಿಟ್ಟರು , ಆ ನಲವತ್ತು ಹಳ್ಳಿಗಳು ಬ್ರಿಟಿಷರಿಗೆ ಕಂದಾಯ ಕೊಡುವಂತಿಲ್ಲ ಎಂದು ಘೋಷಿಸಿದರು , ಯಾವುದೇ ಬ್ರಿಟಿಷ್ ಅಧಿಕಾರಿಗಳು ಹಾಗು ನೌಕರರು ಆ ನಾಲ್ಕು ಹಳ್ಳಿಗೆ ಕಾಲಿಡುವಂತಿಲ್ಲ ಎಂದು ತಾಕೀತು ಮಾಡಿ ಹಳ್ಳಿ ಹಳ್ಳಿಗಳಲ್ಲಿ ಮಿಂಚಿನ ಸಂಚಾರ ಮಾಡಿ ಜನರನ್ನು ಹುರಿದುಂಬಿಸುತ್ತಿದ್ದರು , ಪೊಲೀಸರಿಗೆ ಚಳ್ಳೆ ಹಣ್ಣನು ತಿನ್ನಿಸಿ ರಾತ್ರಿ ಹೊತ್ತಿನಲ್ಲಿ ಒಂದೂರಿಂದ ಇನ್ನೊಂದೂರಿಗೆ ಪ್ರಯಾಣಿಸುತ್ತಿದ್ದರು , ಇದೆಲ್ಲವನು ಪ್ರತಿಷ್ಠೆಯಾಗಿ ತೆಗೆಂದು ಕೊಂಡ ಬ್ರಿಟಿಷ್ ಸರ್ಕಾರ , ಇವರನ್ನು "ಕಂಡಲ್ಲಿ ಗುಂಡಿಕ್ಕಿ" ಎಂಬ ಆದೇಶ ಹೊರಡಿಸಿತು , ಮೀಸಲು ಪಡೆ ಪೊಲೀಸರು ಹಳ್ಳಿ ಹಳ್ಳಿಗೆ ರಾಮಸ್ವಾಮಿಗಳನ್ನು ಹುಡುಕುತ್ತ ಸಾಗಿದ್ದರು , ರಾಮಸ್ವಾಮಿಗಳು ಯಾವ ಕಾರಣಕ್ಕೂ ಅಧೀರರಾಗಲಿಲ್ಲ , ಎರಡು ಮೂರು ಕಡೆ ಗೋಲಿಬಾರ್ ಕೂಡ ನಡೆಯಿತು ಹಾಗು ರಾಮಸ್ವಾಮಿ ಗಳು ಹಲವು ಪ್ರತಿರೋಧವನ್ನು ಒಡ್ಡಿದರು , ಆದರೆ ಒಂದು ದಿನ ಕಾಡಿನ ದಾರಿಯಲ್ಲಿ ಉತ್ತರ ಕರ್ನಾಟಕದ ಕಡೆಗೆ  ನಡೆದು ಹೋಗುತ್ತಿದಾಗ ಬಾಣಾವರದ ಕಡೆಗೆ ಹೋಗುತಿದ್ದ ಗಾಡಿಯೊಂದನ್ನು ನಿಲ್ಲಿಸಿ ಏರಿದರು , ಆದರೆ ಆ ಗಾಡಿ ತುಂಬಾ ಇದ್ದದ್ದು ಪೊಲೀಸರೇ ಆದರೂ ಕಂಗೆಡದ ರಾಮಸ್ವಾಮಿ ಗಳು ಭಾರತ ಮಾತ ಕಿ ಜೈ ಎಂದು ಬಾನೆತ್ತರಕ್ಕೆ ಕೂಗುವಂತೆ ಹೇಳಿದರಂತೆ , ಪೊಲೀಸರು ಒಮ್ಮೆ ಧಿಗ್ಬ್ರಾಂತರಾದರು ಆದರೆ ಒಬ್ಬ ದೇಶಭಕ್ತನನ್ನು ಬಂಧಿಸಲು ಒಂದಿಡೀ ಬಸ್ಸಿನಲ್ಲಿ ಬಂದ ಪೊಲೀಸರು ಯಶಸ್ವಿಯಾದರು , ಸರಿ ಸುಮಾರು ಮೂರರಿಂದ ನಾಲ್ಕು ತಿಂಗಳ ಕಾಲ ಸೆಂಟ್ರಲ್ ಜೈಲ್ ನಲ್ಲಿ ಸೆರೆವಾಸ ಕೂಡ ಅನುಭವಿಸಿದರು, ಇದು ಸ್ವತಂತ್ರ ಪೂರ್ವದ ಸಂಗತಿ ಈಗ ನೀವೇ ಹೇಳಿ ನಿನ್ನೆಯಿಂದ ರಾಮಸ್ವಾಮಿಗಳಿಗೆ ಪ್ರಭುತ್ವವನ್ನು ಎದರು ಹಾಕಿಕೊಳ್ಳುವ ಧೈರ್ಯವಿರಲಿಲ್ಲ  ಹಾಗೆ ಹೀಗೆ ಎಂದು ಪುಂಖಾನುಪುಂಖವಾಗಿ ಹರಿಯ ಬಿಡುತ್ತಿರುವ ಪುಕಾರುಗಳಿಗೆ ಏನೆನ್ನಬೇಕೆಂದು.

ಅದಿರಲಿ ಸ್ವಾತಂತ್ರ ನಂತರ ಇಡೀ ದೇಶವೇ ತುರ್ತು ಪರಿಸ್ಥಿತಿಯ ಹೊಡೆತಕ್ಕೆ ನಲುಗಿರುವಾಗ  ಲಕ್ಷಾಂತರ ಜನರನ್ನು ಸೆರೆವಾಸಕ್ಕೆ ತಳ್ಳಿತ್ತು ಆಗ  ಜೆ ಪಿ , ಕೃಪಲಾನಿ ಇವರ ನೇತೃತ್ವದಲ್ಲಿ  ಇಂದಿರಾ ಸರ್ಕಾರದ ವಿರುದ್ಧ ಬಹಳ ದೊಡ್ಡ ಆಂದೋಲನಗಳು ನಡೆದವು , ರಾಮಸ್ವಾಮಿಗಳು ಕೂಡ ಈ ನಡೆಯನ್ನು ಮೌನವಾಗಿದ್ದೆ  ವಿರೋಧಿಸಿದ್ದಲ್ಲದೆ ಮತ್ತೊಮ್ಮೆ ಪ್ರಭುತ್ವವನ್ನು ಎದರು ಹಾಕಿಕೊಂಡು (ಅಂದರೆ ಇಂದಿರಾಗಾಂಧಿ ಯವರನ್ನು) ಆ ದಿನಗಳಲ್ಲಿ  ಹಾಸನ  ಹಾಗು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆ ಪಕ್ಷ ಈ ಪಕ್ಷ ಎಂಬ ಗೋಜಿಲ್ಲದೆ ಯಾರ ಯಾರನ್ನು ತುರ್ತು ಪರಿಸ್ಥಿತಿಯ ನೆಪವೊಡ್ಡಿ ಬಂಧಿಸಲಾಗಿತ್ತೋ ಅವರೆಲ್ಲರನ್ನು ಕೋರ್ಟಿನ ಮೂಲಕ ಬಿಡಿಸುವ ಕೈoಕರ್ಯಕ್ಕೆ ಕೈ ಜೋಡಿಸಿದ್ದರು , ಅದರಲ್ಲಿ ಆರ್ ಎಸ್ ಎಸ್ , ಜನ ಸಂಘದ ಕಾರ್ಯಕರ್ತರು ಮುಂಚೂಣಿಯಲ್ಲಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸತ್ಯ, ಈಗ ನೀವೇ ಹೇಳಿ ರಾಮಸ್ವಾಮಿಗಳ ವ್ಯಕ್ತಿತ್ವ ಎಂತಹದು ಎಂದು , ಆದ್ದರಿಂದ ಇಂತಹ   ಮಹಾನ್ ಮುತ್ಸದ್ದಿ ನಾಯಕನ ವಿರುದ್ಧ ಅದ್ಯಾರೋ ಇತಿಹಾಸದ ಅರಿವಿಲ್ಲದೆ ರಾಮಸ್ವಾಮಿವರ ಕೊಡುಗೆಯೇನು ಎಂದು ಪ್ರಶ್ನೆ ಮಾಡುವವರಿಗೆ ಉದಾಸೀನವೇ ಮದ್ದು  .

ಕಾರ್ತಿಕ್  ಬಾಪಟ್.


Tuesday, December 7, 2021

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಹೊಸ್ತಿಲಲ್ಲಿ , ಬದಲಾವಣೆಯ ಸಿಹಿಗಾಳಿ.

ನೀವು ಬೆಂಗಳೂರಿನಲ್ಲಿದ್ದು ಅದರಲ್ಲೂ ಬಸವನಗುಡಿ , ವಿಜಯನಗರ, ಮಲ್ಲೇಶ್ವರ ಹಾಗು ರಾಜಾಜಿನಗರದ ಭಾಗದಲ್ಲಿ ಇದ್ದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಆಗು ಹೋಗುಗಳ  ಬಗ್ಗೆ ಆಗಾಗೇ ಕೇಳಿರುತ್ತೀರಿ, ಆದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೆಲಸ ಕಾರ್ಯಗಳು  ಬಸವನಗುಡಿ  ದಾಟಿ ಸದ್ದು ಮಾಡಿದ್ದು ಬಹಳ ಕಡಿಮೆ, ಇದೆಲ್ಲದಕ್ಕೂ ವ್ಯತಿರಿಕ್ತವೆಂಬಂತೆ  ಈ ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ  ಪ್ರಪ್ರಥಮ ಬಾರಿಗೆ ಬಸವನಗುಡಿಯ ಬೇಲಿ ದಾಟಿ ಕರ್ನಾಟಕದಾದ್ಯಂತ ಆರೋಗ್ಯಕರ ಚರ್ಚೆ ಮತ್ತು ಚಿಂತನೆಗಳಿಗೆ ನಾಂದಿ ಹಾಡಿದೆ , ಹಾಗು ಹೀಗೊಂದು ಸಂಘಟನೆಯು ಉಂಟು ಎಂಬ ಮನವರಿಕೆ ಅದೆಷ್ಟೋ ಬ್ರಾಹ್ಮಣ ಸಂಘ ಸಂಸ್ಥೆಗಳಿಗೆ ಸಮುದಾಯಕ್ಕೆ ಪ್ರಪ್ರಥಮವಾಗಿ ಮನವರಿಕೆಯಾಗಿದೆ ಎಂದರೆ ತಪ್ಪಿಲ್ಲ. ಇದು ನಿಜಕ್ಕೂ ಗಮನಾರ್ಹ, ಹೀಗಾಗಲು ಕಾರಣ ಶ್ರೀಯುತ ಅಶೋಕ ಹಾರನಹಳ್ಳಿ ಎಂದರೆ ತಪ್ಪಾಗಲಾರದು , ಅದು ಅವರಿಗಿರುವ ಗರಿಮೆ ಮತ್ತು ಅವರ ಹಿರಿಯರಿಂದ ಬಂದ ಬಳುವಳಿಯೂ ಹೌದು , ಇವರ ತಂದೆ  ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ಅವರ ರಾಜಕೀಯ ಚಿಂತನಾ ಲಹರಿ , ಸಾಹಿತ್ಯ ಪ್ರೇಮ, ಸಂಘಟನಾ ಕೌಶಲ್ಯ , ಗ್ರಾಮೀಣ ಪ್ರೇಮ , ಸದಾ ಸಮಾಜ ಮತ್ತು ಜನಾಂಗದ ಶ್ರೇಯೋಭಿವೃದ್ಧಿಗಾಗಿ  ತುಡಿಯುವ ಗುಣಗಳನ್ನು ಹೊಂದಿದ್ದರು. ಇವೆಲ್ಲ ಕೌಶಲ್ಯಗಳು  ಅಶೋಕ ಹಾರನಹಳ್ಳಿಯವರಿಗೆ ಬಳುವಳಿಯಾಗಿ ಬಂದಿದೆ. ರಾಜಕೀಯ ಪ್ರವೇಶದ ಅವಕಾಶಗಳಿದ್ದಾಗ್ಯೂ ಅವೆಲ್ಲವನ್ನು ಬದಿಗೊತ್ತಿ ಆಯ್ಕೆ ಮಾಡಿಕೊಂಡಿದ್ದು ವಕೀಲ ವೃತ್ತಿ ಮತ್ತು ರಾಜಕೀಯೇತರ ಸಮಾಜ ಸೇವೆ.


ಇತ್ತೀಚಿಗೆ ಬದಲಾದ ಸನ್ನಿವೇಶದಲ್ಲಿ (On 2nd  July 2021)  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅನಿವಾರ್ಯವಾಗಿ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು   ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸರ್ವಸಮ್ಮತವಾಗಿ ಸೂಚಿತವಾದ ಹೆಸರು  "ಶ್ರೀ ಅಶೋಕ ಹಾರನಹಳ್ಳಿ". ಹಾಗಾದರೆ ಈಗೇಕೆ ಚುನಾವಣೆ ಎಂದರೆ ? ಪ್ರತಿ ಮೂರು ವರ್ಷಗಳ ನಂತರ ಈ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳಾಗಬೇಕು. 

ಹಿರಿಯ ನ್ಯಾಯವಾದಿಗಳು, ಹಲವು ಶಿಕ್ಷಣ ಸಂಸ್ಥೆಗಳನ್ನು, ಗೋಶಾಲೆಗಳನ್ನು ನಡೆಸುತ್ತಿರುವವರು  ಯಾವ ಒಂದು ಬಿಡಿಗಾಸಿನ ಅಪೇಕ್ಷೆಯಿಲ್ಲದೆ  ಮಠ ಮಾನ್ಯಗಳ ಹಾಗು ರಾಮ ಮಂದಿರದ ಪರವಾಗಿ ವಕಾಲತ್ತು ವಹಿಸಿದವರು ಹಲವು ಯುವ ನಾಯಕರಿಗೆ ದಾರಿ ದೀಪವಾದವರು , ಹೀಗೆ ಯಾವುದೇ ದೃಷ್ಟಿ ಕೋನದಿಂದ ನೋಡಿದರು, ಅಶೋಕ ಹಾರನಹಳ್ಳಿ ಅವರು  ಅವಿರೋಧವಾಗಿ ಆಯ್ಕೆ ಆಗಬೇಕಾಗಿತ್ತು ಆದರೆ ಹೀಗೇಕೆ ಎಂದು ನಾನೆ ಅವರನ್ನು ಪ್ರಶ್ನೆ ಮಾಡಿದ್ದೆ, ಹಲವಾರು ಬ್ರಾಹ್ಮಣ ಮುಖಂಡರು, ಸಂಸ್ಥೆಗಳು  ಕೂಡ ಇದೆ ಪ್ರಶ್ನೆಯನ್ನು ಅವರ ಮುಂದಿಟ್ಟಿದ್ದರು , ಆಗ ಅವರಿಂದ ಬಂದ ಉತ್ತರ ನಿಜಯವಾಗಿಯೂ ಪ್ರಶಂಸನೀಯ. ಯಾವತ್ತಿಗೂ ಚುನಾವಣೆಗಳೆಂಬುದು ಒಂದು understanding ನಲ್ಲಿ ನಡೆಯಬಾರದು, ಪ್ರಜಾಪ್ರಭುತ್ವದ ತಳಹದಿಯಲ್ಲಿ ಚುನಾವಣೆಗಳ ಮೂಲಕ  ಸ್ಪಷ್ಟ ಬಹುಮತದಿಂದ ಆಯ್ಕೆಯಾದಾಗ ಸಂಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನೂ ತರಬಹುದು ಎಂಬುದು ಅವರ ಉತ್ತರವಾಗಿತ್ತು. ಅದಷ್ಟೇ ಅಲ್ಲ ತಮ್ಮ ಅಗಾಧವಾದ ನಲವತ್ತು ವರುಷಗಳ ವಕೀಲ ವೃತ್ತಿಯ ಅನುಭವದ ಮೇಲೆ ಹೇಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಒಂದು ಸಂವಿಧಾನಿಕ ಕಾಯಕಲ್ಪವನ್ನು ಕೊಡಬೇಕು ಆ ಮೂಲಕ ಸಂಘಟನೆ ಹಾಗು ಸಂಘಟನೆಯ ಯೋಜನೆಗಳು  ಕರ್ನಾಟಕದ  ವಿಪ್ರ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಎಂದು  ವಿವರಿಸಿದಾಗ ನನಗನಿಸಿದ್ದು ಅಶೋಕ ಹಾರನಹಳ್ಳಿ ಅವರನ್ನು ಆಯ್ಕೆ ಮಾಡದೇ ಇದ್ದಲ್ಲಿ ಅವರಿಗೇನು ನಷ್ಟವಿಲ್ಲಾ ಆದರೆ ನಷ್ಟಕ್ಕೆ ಒಳಗಾಗುವುದು ಕರ್ನಾಟಕದ ಸಮಸ್ತ ವಿಪ್ರ ಸಮುದಾಯ.ಹೀಗೆ ಬ್ರಾಹ್ಮಣ ಸಮಾಜದ ಒಳಿತಿಗಾಗಿ ಸದಾ ತುಡಿಯುವ ಅಶೋಕ್ ಹಾರನಹಳ್ಳಿ ವಿಪ್ರ ಸಮುದಾಯದ ಸೇವೆಗೆ ಕಾಯ ವಾಚಾ ಮನಸಾ ಕಟಿ ಬದ್ಧರಾಗಿ ನಿಂತಿದ್ದಾರೆ. ಬಹುಷಃ ಇದು ಕರ್ನಾಟಕದ  ತ್ರಿಮತಸ್ಥ ಬ್ರಾಹ್ಮಣರಿಗೆ  ಬಂದೊದಗಿರುವ ಸುವರ್ಣ ಅವಕಾಶ ಎಂದರೆ ತಪ್ಪಾಗಲಾರದು.  ಈ ಅವಕಾಶವನ್ನು ಕರ್ನಾಟಕದ ಸಮಸ್ತ ವಿಪ್ರ ಬಾಂಧವರು ಉಪಯೋಗಿಸಿಕೊಳ್ಳುತ್ತೀರೆಂದು ನನ್ನ ಅನಿಸಿಕೆ ಅಂದ ಹಾಗೆ ಸಭೆಗಳಿಗೆ   ಬರುತ್ತಿರುವ ಜನರೆಲ್ಲರೂ 12 /12 /2021 ರಂದು (ಮೊದಲ ಹಂತ )  ಹಾಗು  19 /12 /2021 ರಂದು  (ಎರಡನೆಯ ಹಂತ  ) ಚುನಾವಣೆಗೂ  ಬಂದರೆ ಅಶೋಕ್ ಹಾರನಹಳ್ಳಿ ಅವರ ಗೆಲುವು ಶತಸಿದ್ಧ.


ಕಾರ್ತಿಕ್ ಎಸ್ ಬಾಪಟ್ 

ಹವ್ಯಾಸಿ ಲೇಖಕ.