
ಟೈಗರ್ ಹಿಲ್ ಟು ಬಾಲಾಕೋಟ್
ಅದು ಕಾರ್ಗಿಲ್
ಯುದ್ಧದ ದಿನಗಳು, ಈಗಿರುವಷ್ಟು ಮಾಧ್ಯಮಗಳ ಕಾರು ಬರು ಇರಲಿಲ್ಲ ಆದರೆ
ಸುದ್ದಿಗೆ ಯಾವುದೇ
ಬರವಿರಲಿಲ್ಲ, ಪತ್ರಿಕೆ ತೆಗೆದರೆ ಕಾರ್ಗಿಲ್, ಟೀ ಕುಡಿಯಲು ಹೋದರೆ
ಕಾರ್ಗಿಲ್ ,
ಕಟಿಂಗ್ ಶಾಪ್ ಗೆ ಹೋದರೆ ಕಾರ್ಗಿಲ್ , ಆಟವಾಡಲು ಹೊರಟರೆ ಅಲ್ಲಿ
ಕಾರ್ಗಿಲ್ ,
ಶಾಲಾ ಕಾಲೇಜುಗಳಲ್ಲಿ ಕಾರ್ಗಿಲ್ ಹೀಗೆ ಎಲ್ಲೆಡೆ ಕಾರ್ಗಿಲ್ ಸುದ್ದಿ ,
ದೇಶ ಪ್ರೇಮದ
ಒರತೆ ಇನ್ನಿಲದಂತೆ ಉಕ್ಕಿ ಹರಿಯುತಿತ್ತು, ಇದೆಲ್ಲಕ್ಕೂ ಮಿಗಿಲಾಗಿ
ಅಕ್ಷರ ಬ್ರಹ್ಮ
ಬೆಳೆಗೆರೆ ಖುದ್ದು ಕಾರ್ಗಿಲ್ನ ಯುದ್ಧ ಭೂಮಿಯಲ್ಲಿ ಕುಳಿತು ವರದಿ
ಮಾಡುತ್ತಿದ್ದರೆ
ಯುದ್ಧದ ಇಂಚಿಂಚು ವರದಿಗೇನು ಬರ, ಅದಿರಲಿ ನಾನು ಮತ್ತು ನನ್ನ
ಸ್ನೇಹಿತರು ಆದಾಗ
ತಾನೇ ಕಾಲೇಜು ಮೆಟ್ಟಿಲು ಹತ್ತಿದೆವು , ನಮಗೋ ತೀವ್ರ ಕೂತುಹಲ
ಯುದ್ಧ ಪುಸ್ತಕಗಳನ್ನು
ಒನ್ ಸ್ಟ್ರೋಕ್ ನಲ್ಲಿ ಓದಿ ಮುಗಿಸಿದ್ದೆವು , ದಾರಿಯಲ್ಲಿ
ಸಾಲು ಸಾಲು ಸೈನ್ಯದ
ವಾಹನಗಳು ಹೋಗುತ್ತಿದ್ದರೆ ನಮ್ಮ ಸ್ನೇಹಿತರ ದಂಡು ವಂದೇ ಮಾತರಂ,
ಜೈ ಹಿಂದ್ ಎಂದು
ಕೂಗುತಿದ್ದವು , ಅದರಲ್ಲಿ ನನ್ನ ಸ್ನೇಹಿತನೊಬ್ಬ ಒಂದು ಪ್ಯಾಕೆಟ್
ಬ್ರೆಡ್ , ಬಿಸ್ಕತ್
ಹೀಗೆ ಬೇಕರಿಗೆ ಹೋಗಿ ದಂಡಿಯಾಗಿ ತಿಂಡಿ ತಿನಿಸನ್ನು ತಂದು
ಸೈನಿಕರನ್ನು
ಕರೆದು ಕೊಂಡು ಹೋಗುವ ವಾಹನಗಳ ಬೆನ್ನು ಹತ್ತಿ ಅವರಿಗೆ ಆ ತಿಂಡಿ
ತಿನಿಸುಗಳನ್ನು
ಕೊಡಲು ಪ್ರಯತ್ನಿಸುತ್ತಿದ್ದನು , ಅವರೋ ನಹಿ ಚಾಹಿಯೇ ರೆಹ್ನ್ ದೋ
ಅಂದರೆ , ಕೇಳುವರ್ಯಾರು
ಜನರ ಪ್ರೀತಿ ಆದರದ ಮೇಲೆ ಸೈನಿಕರು ಮೂಕ ವಿಸ್ಮಿತ ರಾಗಿದ್ದರು
, ಅದೇ ಯುದ್ಧೋನ್ಮಾದ
ಅದಕ್ಕಿಂತಲೂ ಹೆಚ್ಚು ಕಿಚ್ಚು ಇಂದು ಇಪ್ಪತ್ತು ವರ್ಷಗಳ ನಂತರ
ಮರುಕಳಿಸಿದೆ
ಇಪ್ಪತ್ತು ವರುಷಗಳ ಹಿಂದೆಯೂ ಇದೇ ಉಗ್ರಗಾಮಿ ಮತ್ತು ಅದೇ ಪಾಪಿ
ಪಾಕಿಸ್ತಾನದ
ವಿರುದ್ಧ ಹೋರಾಡಿದ್ದರು ಇಂದಿಗೂ ಈ ವಿಷಯ ತಹ ಬಂದಿಗೆ
ಬಂದಿಲ್ಲವೆಂಬುವುದು
ಬಹು ದೊಡ್ಡ ವಿಪರ್ಯಾಸ ,
ಹಾಗೆ ನೋಡಿದರೆ
ಅಂದು ನಡೆದ ಕಾರ್ಗಿಲ್ ಕದನಕ್ಕೂ ಇಂದಿನ ಪುಲ್ವಾಮಾ ದಾಳಿ ಹಾಗು ತದ
ನಂತರದ ಬಾಲಕೋಟ್
ದಾಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವೊಂದು ಬದಲಾವಣೆಗಳಾಗಿವೆ
,ಅಂದು ಕಾಲ್ಕೆರೆದು
ತಂಟೆ ಮಾಡಿ ಜಗಳಕ್ಕೆ ಬಂದವರು ಪಾಕಿಗಳೇ ಅಂದರೆ ಕಾರ್ಗಿಲ್
ಯುದ್ಧದ
ಸಮಯದಲ್ಲಿ ಪಾಕಿಸ್ತಾನದ ಸೈನಿಕರೇ ಕಾರ್ಗಿಲ್ನ ಆಯಾ ಕಟ್ಟಿನ ಜಾಗದಲ್ಲಿ
ಸದ್ದಿಲದೆ ಬಂದು
ಕುಳಿತಿದ್ದರು , ಮೊದಲಿಗೆ ಬಹುಶ ಇವರು ಮುಜಾಹಿದ್ದೀನ್ಗಳಿರಬೇಕು
ಎಂದು ಭಾರತ ಭಾವಿಸಿತ್ತು
, ಆದರೆ ಅಷ್ಟೇ ವೇಗವಾಗಿ ಗೊತ್ತಾದ ಸಂಗತಿಯೆಂದರೆ ಅವರು
ಮುಜಾಹಿದ್ದೀನ್ಗಗಳಲ್ಲ
ಆದರೆ ಪಾಕಿ ಸೈನಿಕರು ಎಂದು , ಇವರನ್ನು ಹಿಮ್ಮೆಟಿಸಲು
ಆಪರೇಷನ್ ವಿಜಯ್
ಎಂಬ ಸಂಕಲ್ಪ ತೊಟ್ಟು ಭಾರತ ಯುದ್ಧಕ್ಕೆ ನಿಂತಿತು ಮತ್ತು ಸರಿ
ಸುಮಾರು ಎರಡು
ತಿಂಗಳುಗಳ ಯುದ್ಧದ ನಂತರ ಭಾರತ ವಿಜಯೋತ್ಸವವನ್ನು ಆಚರಿಸಿತು , ಇಲ್ಲಿ
ಗಮನಿಸ ಬೇಕಾದ
ಸಂಗತಿಯೆಂದರೆ ಪ್ಯಾರಾ ಮಿಲಿಟರಿ ಫೋರ್ಸ್ , ನೇವಿ, ಹಾಗೂ ಇಂಡಿಯನ್ ಏರ್
ಫೋರ್ಸ್ ಎಲ್ಲವು
ಯುದ್ದದಲಿ ತೊಡಗಿದ್ದರು ಪ್ರಮುಖವಾಗಿ ಪ್ಯಾರಾ ಮಿಲಿಟರಿ ಫೋರ್ಸ್
ಯುದ್ಧದಲ್ಲಿ
ಬಳಸಲ್ಪಟ್ಟಿತ್ತು , ತದ ನಂತರ ನೇವಿ ಆಪರೇಷನ್ ತಲವಾರ್ ಮೂಲಕ ಕರಾಚಿ
ಬಂದರನ್ನು ಕಟ್ಟಿ
ಹಾಕಿತ್ತು, ಕೊನೆಯ ಹಂತದಲ್ಲಿ ಇಂಡಿಯನ್ ಏರ್ ಫೋರ್ಸ್ ಕೈ
ಜೋಡಿಸಿತು ,
ಆದರೆ IAF ಭಾರತದ ಗಡಿ ದಾಟಿ ಹೋಗಿರಲಿಲ್ಲ ಆದರೆ ಭಾರತದ ಗಾಡಿಯಲ್ಲೇ
ಇದ್ದು ಕೊಂಡು
ಬಾಂಬರ್ಗಳನ್ನು ಲಾಂಚ್ ಮಾಡಿತ್ತು , ಹೀಗೆ ಸತತ ಎರಡು ತಿಂಗಳ ಹೋರಾಟದ
ನಂತರ ಟೈಗರ್
ಹಿಲ್ಸ್ ನ ಮೇಲೆ ಭಾರತದ ತ್ರಿವರ್ಣ ಧ್ವಜ ಮತ್ತೆ ರಾರಾಜಿಸಿತು ,
ಅದಕ್ಕೂ ಮುಂಚೆ
ಎರಡು ಬಾರಿ ಯುದ್ಧದಲ್ಲಿ ಸೋತ ಪಾಕಿಸ್ತಾನ ಭುದ್ದಿ ಕಲಿತಿರಲಿಲ್ಲ
ಮತ್ತೆ ಕಾಶ್ಮೀರ
ವಿಷಯವನ್ನು ಎತ್ತಿ ಕೊಂಡು ಕಾರ್ಗಿಲ್ ಕದನಕ್ಕೆ ಅಣಿಯಾಗಿತ್ತು ,
ಕಾರ್ಗಿಲ್ ಕದನದಲ್ಲಿ
ಇನ್ನಿಲದಂತೆ ಹೊಡೆತ ತಿಂದ ಪಾಕ್ ಇಲ್ಲಿಯವರೆಗೂ ತನ್ನ
ಚಾಳಿಯನ್ನು ಬಿಟ್ಟಿಲ್ಲ
ಆದರೆ ಸತತ ಸೋಲುಗಳಿಂದ ಪಾಕಿಸ್ತಾನ ಕಂಡು ಕೊಂಡಿದ್ದೇನೆಂದರೆ
, ಅಜಾನುಬಾಹು
ಭಾರತವನ್ನು ನೇರ ನೇರವಾಗಿ ಯುದ್ದದಲಿ ನಿಂತು ಹಣಿಯಲು ಸಾಧ್ಯವಿಲ್ಲ ,
ಆದ್ದರಿಂದ ಉಗ್ರಗಾಮಿ
ಸಂಘಟನೆಗಳು ಹಾಗು ಸ್ಲೀಪರ್ ಸೆಲ್ಗಳು ಭಾರತಾದ್ಯಂತ ಬೇರೂರುವಂತೆ
ಮಾಡುವುದು ,
ಹಾಗು ಭಾರತವೆಂಬ ಅಜಾನುಬಾಹುವನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ
ಬ್ಲೀಡ್ ಮಾಡುವುದು,
ಹೀಗೆ ಪಾಕಿಸ್ತಾನವೆಂಬ ಪಾಪಿಸ್ತಾನ ಭಾರತವನ್ನು ಅಧೀನ ಗೊಳಿಸುವ
ಒಂದಂಶದ ಕಾರ್ಯಕ್ರಮವನ್ನು
ಸ್ವಾತಂತ್ರಾನಂತರ ಹಮ್ಮಿಕೊಂಡು ಬರುತ್ತಲೆ ಇದೇ ಆದರೆ ಇಂದು
ಭಾರತ ಬದಲಾಗಿದೆ
ಪತ್ತರ್ ಕ ಜವಾಬ್ ಪತ್ತರ್ ಸೆ ಹಿ ಎಂದು ಕುಳಿತಿಲ್ಲ , ಆದರೆ ಪತ್ತರ್
ಕ ಜವಾಬ್ ಬಂದೂಕ್
ಅವರ್ ಬಾರೂದ್ ಸೆ ಎಂದು ಮೇಲೆರಗುತ್ತಿದೆ , ಇದನ್ನು ನೀವು
ಗಮನಿಸಬೇಕಾದರೆ
ಕಾರ್ಗಿಲ್ ಯುದ್ಧದಲ್ಲಿ IAF (ಇಂಡಿಯನ್ ಏರ್ ಫೋರ್ಸ್) ಅನ್ನು
ಸೀಮಿತವಾಗಿ ಅಂದರೆ
ನಮ್ಮ ಗಡಿ ಭಾಗದಲ್ಲಿ ಇದ್ದು ಕೊಂಡೆ ಪಾಪಿಸ್ತಾನದ ಮೇಲೆ ಮದ್ದು
ಗುಂಡುಗಳನ್ನು
ಲಾಂಚ್ ಮಾಡಲು ಬಳಸಲಾಗಿತ್ತು ಆದರೆ ಇಂದು ನೋಡಿ ಭಾಲ್ಕೋಟ್ನ ಉಗ್ರ ದಮನ
ಕಾರ್ಯಾಚರಣೆಯಲ್ಲಿ
IAF ದೇ ಪ್ರಮುಖ ಪಾತ್ರ , ಮತ್ತು ತದ ನಂತರ ರಾಜತಾಂತ್ರಿಕವಾಗಿ ಈ
ದಾಳಿಗೆ ಚೀನಾ
ಒಳಗಂಡಂತೆ ಪ್ರಪಂಚಾದ್ಯಂತ ಭಾರತದ ಪರ ನಿಲುವು ಮೂಡಿ ಬರುವಂತೆ
ನೋಡಿಕೊಂಡಿದ್ದು
ಮತ್ತೊಂದು ಪ್ರಶಂಸಾರ್ಹ ಹೆಜ್ಜೆಯೇ ಸರಿ , ಹೀಗೆ ಭಾರತ ದಿಟ್ಟ
ಹೆಜ್ಜೆಯನ್ನು
ಇಡುತಿದ್ದರೆ ಕೆಲಸಕೆ ಬಾರದ ಟೀಕೆಗಳಿಗೆ ಕಡಿಮೆಯೇನಿಲ್ಲ ಕೆಲವು ಪಕ್ಷದ
ಮುಖಂಡರು ಸರ್ಕಾರ
ನಮ್ಮನು ಕರೆದು ಮಾತನಾಡಲಿಲ್ಲ ದಾಳಿ ಮಾಡುವ ಮುಂಚೆ ನಮ್ಮನು
ಕೇಳಲಿಲ್ಲ ಎಂದು
ಡಂಗುರ ಸಾರುತ್ತಿವೆ , ನಿಮ್ಮನ್ನು ಕೇಳುವದೇನು ಸ್ವಾಮಿ ಆನ್ಲೈನ್
ನಲ್ಲಿ ಒಂದು
ಒಪೀನಿಯನ್ ಪೋಲ್ ಮಾಡಿಸಿಬಿಡಿ "ಶುಡ್ ವೀ ಅಟ್ಯಾಕ್ ಆನ್ ಭಾಲ್ಕೋಟ್"
ಓರ್ ನಾಟ್ ಎಂದು
, ಕಡೆಯ ಪಕ್ಷ ಭಾರತದ ಅಖಂಡತೆ ಮತ್ತು ಸುರಕ್ಷತೆ ವಿಷಯ ಬಂದಾಗ
ನೀವೆಲ್ಲರೂ ಒಟ್ಟಾಗಿ
ನಿಲ್ಲ ಬೇಕಲ್ಲವೇ ? ಅದು ಬಿಟ್ಟು ಒಬ್ಬರ ಕಾಲನ್ನು ಒಬ್ಬರು
ಎಳೆದು ನಿಮ್ಮ
ನಿಮ್ಮನ್ನೇ ಕೆಡವಲು ಕುಳಿತರೆ ಹೇಗೆ ಈಗ ನಾವು ಕೆಡವ ಬೇಕಾಗಿರುವುದು
ಆಂತರಿಕ ಶತ್ರುಗಳನ್ನು
ಮತ್ತು ಬಾಹ್ಯ ಶತ್ರುಗಳನ್ನು ಎಂಬುದು ಯಾರು ಮರೆಯಬಾರದು.
ಹೀಗೆ ಭಾರತ ನವ
ಭಾರತವಾಗಿ ದಿಟ್ಟ ಹೆಜ್ಜೆಗಳನ್ನು ಮತ್ತು ದಿಟ್ಟ ನಿರ್ಧಾರವನ್ನು
ತೆಗೆದುಕೊಳ್ಳುತ್ತಾಳೆ
ಇದೇ , ಮತ್ತು ಮೊನ್ನೆಯ ಭಾಲ್ಕೋಟ್ ಉಗ್ರ ದಾಳಿ ನಮ್ಮ ಸೈನ್ಯವೇ
ಮಾಡಿರಬಹುದು
ಹಾಗು ಅದರ ಸಂಪೂರ್ಣ ಶ್ರೇಯ ನಮ್ಮ ಭಾರತದ ಸೈನ್ಯಕ್ಕೆ ಸಲ್ಲ ಬೇಕು
ಇದರಲ್ಲಿ ಎರಡು
ಮಾತಿಲ್ಲ , ಆದರೆ ಇದರ ಶ್ರೇಯಸ್ಸನ್ನು ಮೋದಿ ಸರ್ಕಾರಕ್ಕೂ ನಾವು
ಕೊಡಲೇಬೇಕು ಕಾರಣವಿಷ್ಟೇ
" when it comes to making tough decision
political
will matters a lot " ಹೀಗೆ ದೇಶಕ್ಕೆ ದೇಶವೇ ಪ್ರಧಾನಿಯ ಬೆನ್ನಿಗೆ
ನಿಂತಿರುವಾಗ
, ತಮ್ಮ ಬೇಳೆ ಬೇಯಿಸಿಕೊಳ್ಳಲು ನಮಗೆ ಏರ್ ಸ್ಟ್ರೈಕ್ ನ ಪ್ರೂಫ್ ಕೊಡಿ ,
ಮತ್ತೊಂದು ಕೊಡಿ
ಎಂದರೆ ಪ್ರಜೆಗಳು ಸುಮ್ಮನಿರುವರೇ , ಇನ್ನಾದರೂ ಇಂತಹ ಖುಹಕ ನುಡಿ
ಮುತ್ತುಗಳನ್ನಾಡದೆ
ದೇಶ ಕಟ್ಟಲು ಮುಂದಾದರೆ ಇರುವ ಅರೆ ಕಾಸು ಮರ್ಯಾದೆ ಉಳಿದೀತು.
ಅದಿರಲಿ ಯಾರು
ಏನೇ ಮಾತಾಡಲಿ ಭಾರತದ ಸೌರ್ವ ಭಾವಮತ್ವಕ್ಕೆ ಮತ್ತು ದೇಶ ಪ್ರೇಮಕ್ಕೆ
ಎಂದೆಂದಿಗೂ ಧಕ್ಕೆಯಾಗಲಾರದು
ಎಂದು " ವಿಂಗ್ ಕಮ್ಯಾಂಡರ್ ಅಭಿನಂದನ್ " ರಂತಹ ಯೋಧರು
ಮತ್ತೆ ಮತ್ತೆ
ನೆನಪಿಸುತ್ತಿರುತ್ತಾರೆ, ವಿಂಗ್ ಕಮ್ಯಾಂಡರ್ ಅಭಿನಂದನ್ ಒಂದಿಡೀ
ತಲೆಮಾರಿಗೆ ಇಂದು
ಸ್ಪೂರ್ತಿಯಾಗಿದ್ದಾರೆ , ಹಾಗು ಮುಂದೆ ಅದೆಷ್ಟೋ ತಲೆಮಾರಿಗೆ
ಸ್ಪೂರ್ತಿಯಾಗಲಿದ್ದಾರೆ,
ಅದು ಭಾರತದ ಮಣ್ಣಿನ ಗುಣ ಆದ್ದರಿಂದಲೇ ಅಲ್ಲವೇ ಅಟಲ್ ಜಿ
ಹೇಳಿದ್ದು ವಂದನ್
ಕಿ ಧರ್ತಿ ಹೇ ಅಭಿನಂಧನ್ ಕಿ ಧರ್ತಿ ಹೇ ಎಂದು... ಕೊನೆಯದಾಗಿ
ಕೇಳಿಬರುತ್ತಿರುವ
ಜನಾಭಿಪ್ರಾಯವೆಂದರೆ , ನೀವು ಮೋದಿ ಸರ್ಕಾರದ ಯೋಜನೆಗಳನ್ನು ಹೆಜ್ಜೆ
ಹೆಜ್ಜೆ ಗೆ ಪ್ರಶ್ನಿಸಿ
ಉತ್ತರ ಕಂಡು ಕೊಳ್ಳಿ ಅದಕ್ಕೆ ತಕರಾರಿಲ್ಲ ಆದರೆ ಭಾರತದ
ಅಸ್ತಿತ್ವಕ್ಕೆ
, ಭಾರತದ ಭದ್ರತೆಗೆ ಧಕ್ಕೆ ಯುಂಟಾದಾಗ ಸ್ಥಾಪಿತ ಸರ್ಕಾರದೊಂದಿಗೆ
ಹೆಜ್ಜೆ ಹಾಕಿ
ಎಂದು
ಜೈ ಹಿಂದ್
ಕಾರ್ತಿಕ್ ಯಸ್
ಬಾಪಟ್
No comments:
Post a Comment