ರಾಷ್ಟೀಯ ಏಕತಾ ದಿವಸ್ - ಪಟೇಲರ ನೆನಪಿನಲ್ಲಿ
ವಲ್ಲಭರೆಂದರೆ ಸುಮ್ಮನೆಯಲ್ಲ ಅವರಿಗೆ ಸರಿಸಾಟಿಯಾಗುವ ಹೆಸರೊಂದಿಲ್ಲ - ಕಾರ್ತಿಕ್ ಎಸ್ ಬಾಪಟ್
ಅದು ಅಕ್ಟೋಬರ್ ೩೧ 2018 ರ ಸಮಯ ವಲ್ಲಭರ ಮೂರುತಿ "The Statue of Unity " ಮೇಲೆದ್ದು ನಿಂತಿತ್ತು , ಅಷ್ಟ್ರಲ್ಲಿ ಕೆಲವು ಅತೃಪ್ತ ಆತ್ಮಗಳು ಇದೆಲ್ಲ ಬೇಕಿತ್ತಾ ಇಷ್ಟೊಂದು ಖರ್ಚು ಅದು ೩೦೦೦ ಕೋಟಿ ಖರ್ಚು ಮಾಡುವ ದರ್ದೆನಿತ್ತು ಎಂದು ಪ್ರಶ್ನಿಸಿದ್ದವು , ಹಾಗೆ ನೋಡಿದರೆ ನಾವು ಮಾಡುವ ಪ್ರತಿಯೊಂದು ಕೆಲಸಗಳು ಅದರ ಕಾರ್ಯಶೈಲಿ ಎಲ್ಲವು ದುಂದುವೆಚ್ಚವೆನೋ ಎಂಬಂತೆ ಭಾಸವಾಗುತ್ತದೆ ಆದರೆ ಕೆಲವು ಕಾರ್ಯಕ್ರಮಗಳನ್ನು ಆರ್ಥಿಕ ನೆಲೆಯಲ್ಲಿ ನೋಡದೆ, ಕಟ್ಟಿಕೊಟ್ಟ ಮೌಲ್ಯಗಳ ಹಿನ್ನಲೆಯಲ್ಲಿ ನೋಡಬೇಕು , ಅದಿರಲಿ ಇಂದು ವಲ್ಲಭರು ನಮ್ಮೊಂದಿಗಿಲ್ಲ ವಲ್ಲಭರೇನಾದರೂ ಇಂದು ನಮ್ಮೊಂದಿಗಿದ್ದಿದ್ದರೆ ಆ ತ್ಯಾಗ ಜೀವಿಯ ಮನಸು ಎಷ್ಟು ನೊಂದುಕೊಳ್ಳುತ್ತಿತ್ತೋ ಏನೋ, ಅಂದು ಸ್ವತಂತ್ರಾ ನಂತರ ಪಟೇಲರು ಏಕೀಕೃತ ಭಾರತಕ್ಕೆ ಪಣತೊಡದಿದ್ದರೆ ಇಂದು ಭಾರತದ ಪರಿಸ್ಥಿತಿ ಊಹಿಸಲು ಅಸಾಧ್ಯ.
ಪಟೇಲರ ಕಾರ್ಯಶೈಲಿಯನ್ನುಹಾಗು ಅವರ ದೇಶ ಸೇವೆಯನ್ನು ನಾವು ಎರಡು ನೆಲೆಗಳಲ್ಲಿ ನೋಡಬೇಕಾಗುತ್ತದೆ , ಸ್ವಾತಂತ್ರಸಂಗ್ರಾಮದಲ್ಲಿ ಅವರ ದೇಶ ಸೇವೆ ಒಂದು ತೂಕದದ್ದಾರೆ , ಅದಕ್ಕೂ ಮೀರಿದ್ದು ಸ್ವಾತಂತ್ರಾನಂತರದ ದೇಶ ಸೇವೆ ಮತ್ತು ಕೊಡುಗೆ, ಭಾರತದ ಏಕೀಕರಣದ ಶಿಲ್ಪಿ ಸರ್ದಾರ್ ಪಟೇಲರು ೫೫೦ಕ್ಕೂ ಹೆಚ್ಚು ಸಣ್ಣ ಸಣ್ಣ ಹಿರಿಯ ಕಿರಿಯ ಬ್ರಿಟಿಷ್ ಆಧೀನದಲ್ಲಿದ್ದ ರಾಜರಸುಗಳಅಧೀನದಲ್ಲಿ ಚದುರಿ ಛಿದ್ರವಾಗಿದ್ದ ಭಾರತದ ಪ್ರಾಂತ್ಯವನ್ನು ಸ್ವಾತಂತ್ರಾ ಭಾರತದತೆಕ್ಕೆಗೆ ಸೇರಿಸಿದ ಕೀರ್ತಿ ಸರ್ದಾರ್ ಪಟೇಲರಿಗೆ ಸೇರಬೇಕು , ಬಹುಷ್ಯ ಸ್ವಾತಂತ್ರಾಸಂಗ್ರಾಮದಲ್ಲಿ ಗಾಂಧೀಜಿ ಅವರೊಡನೆ ಅವರಷ್ಟೇ ಸರಿ ಸಮಾನರಾಗಿ ಅವರ ನೆರಳಿನಂತೆಸ್ವಾತಂತ್ರಾ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿದ ಉದಾತ್ತ ಜೀವ ಪಟೇಲರದು ಎಂದರೆ ತಪ್ಪಾಗಲಾರದು.ಗಾಂಧೀಜಿ ಅಂದಿಗೂ , ಇಂದಿಗೂ ಮಹಾತ್ಮರೇ ಅದರಲ್ಲಿ ಎರಡು ಮಾತಿಲ್ಲ ಆದರೆ ನಾವುಗಳು, ಗಾಂಧೀಜಿ , ಜವಾಹರ್ ಲಾಲ್ ನೆಹರು ಅವರನ್ನು ವಿಜೃಂಭಿಸಿ ಬರೆದಷ್ಟು ಪಟೇಲರ ಬಗ್ಗೆ ಬರೆಯಲಿಲ್ಲ , ಕಡೆಗೆ ವಿಜೃಂಭಿಸಿ ಬರೆಯದಿದ್ದರೂ ಅವರ ಏಕೀಕರಣದ ಕೊಡುಗೆಗೆ ತಕ್ಕನಾದ ಗೌರವ ಕೊಟ್ಟಿದ್ದೇವೆಯೇ? ಎಂದು ಆತ್ಮಸಾಕ್ಷಿಯಾಗಿ ಕೇಳಿ ಕೊಳ್ಳಬೇಕು ,ಕೊಟ್ಟೀಲವೆಂದಲ್ಲ ಆದರೆ ಸ್ವಂತಂತ್ರಾ ನಂತರ ನಾವುಗಳು ಪ್ರಧಾನ ಮಂತ್ರಿಯೊಬ್ಬರಿಗೆ ಕೊಟ್ಟಷ್ಟು ಪ್ರಚಾರವನ್ನು ಸ್ವಾತಂತ್ರಾ ಸಂಗ್ರಾಮದಿಂದಾದಿಯಾಗಿ ಹಿಡಿದು ಭಾರತದಏಕೀಕರಣವಾಗುವವರೆಗೂ ಶ್ರಮಿಸಿ , ನಿಭಾಯಿಸಿದ ವಲ್ಲಭಾಯಿ ಪಟೇಲರಿಗೆ ನಾವು ತಕ್ಕದಾದಗೌರವ ಕೊಟ್ಟಿದ್ದೇವೆಯೇ? , ಅವರ ಸೇವಾ ಕೈಕರ್ಯವನ್ನು ಮನೆ ಮನಗಳಿಗೆ ತಲುಪಿಸಿದ್ದೇವೆಯೇ ಎಂದು ಪಕ್ಷಾತೀತವಾಗಿ ಕೇಳಿಕೊಳ್ಳಬೇಕು, ನೀವು ಕೂತುಹಲಕ್ಕಾಗಿ"ನ್ಯಾಷನಲ್ ಬುಕ್ ಟ್ರಸ್ಟ್" ಹೊರತರುವ "ಇಂಡಿಯಾ ಇಯರ್ ಬುಕ್ " ಅನ್ನು ಗಮನಿಸಬೇಕು ಸುಮಾರು ಐವತ್ತರಿಂದ, ನೂರು ಯೋಜನೆಗಳಿಗೆ ಹೆಸರು ಒಂದೋ ಜವಾಹರ್ ಲಾಲ್ ನೆಹರು ಹಾಗು ಇಂದಿರಾ ಗಾಂಧಿ ಯವರದು ಇಲ್ಲವೋ ರಾಜೀವ್ ಗಾಂಧಿಯವರ ಹೆಸರಲ್ಲಿರುತ್ತದೆ , ಅವರ ಹೆಸರಿಡಬಾರದೆಂದಲ್ಲ ಈ ದೇಶ ಕಂಡ ಪ್ರಧಾನ ಮಂತ್ರಿಗಳವರು ಆದರೆ ಎಷ್ಟು ಯೋಜನೆಗಳಿಗೆ ? ಎಷ್ಟು ವರ್ಷ ? ಅವರಷ್ಟೇ ಅಥವಾ ಅವರಿಗಿಂತ ಹೆಚ್ಚು ದೇಶ ಸೇವೆಯಲ್ಲಿ ತೊಡಗಿಸಿಕೊಂಡ ಮಹಾನ್ ಚೇತನಗಳ ಹೆಸರು ಮುನ್ನೆಲೆಗೆ ಬರಬೇಕಲ್ಲವೇ? ಆ ಮೂಲಕವಾದರೂ ಇಂದಿನ , ಮುಂದಿನ ಪೀಳಿಗೆಯವರಿಗೆ ಅವರ ಹೆಸರನ್ನು ಪರಿಚಯಿಸುವ ಆದ್ಯ ಕೆಲಸವನ್ನು ಪಕ್ಷಾತೀತವಾಗಿ ಹಾಗು ಜಾತ್ಯತೀತವಾಗಿ ಮಾಡುವುದು ಸರ್ಕಾರದ ಕೆಲಸವಾಗಬೇಕು.
ಹಾಗೆ ನೋಡಿದರೆ ಸ್ವಾತಂತ್ರ್ಯ ನಂತರ ಪ್ರಧಾನ ಮಂತ್ರಿಯ ಪದವಿ ತನ್ನಿಂದ ತಾನೇ ಪಟೇಲರಿಗೆ ಒಲಿದು ಬರಬೇಕಿತ್ತು , ಆದರೆ ಅದು ಆಗಲಿಲ್ಲ, ಹೀಗೇಕೆ? ಗಾಂಧೀಜಿವರಿಗೆ ಪಟೇಲರ ಮೇಲೆ ಪ್ರೀತಿ ವಿಶ್ವಾಸವಿರಲಿಲ್ಲ ಎಂದಲ್ಲ ಹಾಗು ಪಟೇಲರಿಗೆ ದೇಶದ ಮಹತ್ವದ ಹುದ್ದೆ ನಿರ್ವಹಿಸುವ ಚಾಕಚಕ್ಯತೆ ಇರಲಿಲ್ಲವೆಂದಲ್ಲ , ಖೇಡಾ ಸತ್ಯಾಗ್ರಹ , ಬಾರ್ದೋಲಿಯ ಸತ್ಯಾಗ್ರಹ ಹಾಗು ಇತರೆ ಚಳುವಳಿಗಳಲ್ಲಿ ಪಟೇಲರ ಚಾಕಚಕ್ಯತೆಯನ್ನುಗಾಂಧೀಜಿ ಬಹಳ ಹತ್ತಿರದಿಂದ ನೋಡಿ ಬಲ್ಲವರಾಗಿದ್ದರು, ಬಾರ್ದೋಲಿಯ ಸತ್ಯಾಗ್ರಹವಂತೂ ಪಟೇಲರಿಗೆ "ಸರ್ದಾರ್" ಎಂಬ ಬಿರುದನ್ನೂ ಕೊಟ್ಟಿತ್ತು , ಅದಲ್ಲದೆ ಗುಜರಾತ್ನ ಜನತೆ ಪಟೇಲರಿಗೆ ಪ್ರೀತಿಯಿಂದ "ಸುಬ" ಎಂದು ಕರೆಯುತ್ತಿದ್ದರು, "ಸುಬ" ಅಂದರೆ ರಾಜ ಮತ್ತು ಉತ್ತಮ ಆಡಳಿತಗಾರ ಎಂದು ಇದೆಲ್ಲವೂ ಕಣ್ ಮುಂದೆ ರಾಚುವಂತಿದ್ದರು ಅಂದು ಪ್ರಧಾನಿಯಾಗಬೇಕೆಂದು ಗಾಂಧೀಜಿ ಬಯಸಿದ್ದು ಜವಾಹರ್ಲಾಲ್ ರನ್ನು, ಇದಕ್ಕಕಾರಣವೇನೆಂದು ಹುಡುಕಲು ಹೊರಟರೆ ಇಂದು ಮಹಾತ್ಮರು ಇಲ್ಲ ಮಹಾತ್ಮರ ನೆರಳಿನಂತೆ ಹಗಳಿರಲು ಶ್ರಮಿಸಿದ ಪಟೇಲರು ಇಲ್ಲ , ಆದರೆ ಗಾಂಧಿ ಕೂಡ ಒಬ್ಬ ಹುಲುಮಾನವ ಎಂದು ಮರೆಯಬಾರದು ಈ ಮಾತನ್ನು ಏಕೆ ಹೇಳಿದೆನೆಂದರೆ , ತಪ್ಪುಗಳು ಮನುಷ್ಯರಿಂದಲೇ ಆಗುವುದೇ ಹೊರತು ಮರಗಳಿಂದಲ್ಲ , ಗಾಂಧೀಜಿವರಿಗೆ ಅಂದಿದ್ದ ಸಂಧಿಗ್ಧ ಪರಿಸ್ಥಿತಿಗಳೇನೋ ಬಲ್ಲವ್ರ್ಯಾರು , ಗಾಂಧೀಜಿಯವರ ಹೆಸರು ಸೂರ್ಯ ಚಂದ್ರರಿರುವವರೆಗೂ ಸ್ಥಾಯಿಗಾಗಿರಲಿದೆ ಅದು ಅವರ ದೇಶಸೇವೆ ಮತ್ತು ಪ್ರತಿಪಾದಿಸಿದ ಅಹಿಂಸಾ ನಿಲುವಿಗೆ ಸಲ್ಲಬೇಕಾದ ಗೌರವ ಕೂಡ ಹೌದು , ಆದರೆ ಗಾಂಧಿ ನೆಹರುರಂತೆಯೇ , ಪಟೇಲ್ ,ಶಾಸ್ತ್ರೀಜಿ , ಭಗತ್ ಸಿಂಗ್ , ಚಂದ್ರಶೇಖರ್ ಆಜ್ಹಾದ್, ಸಾವರ್ಕರ್ , ಬಲವಂತ ಫಡಕೆ ಇವರ ಹೆಸರುಗಳು ಸ್ಥಾಯಿಯಾಗಿರಬೇಕಲ್ಲವೇ? ಮೇಲ್ನೋಟಕ್ಕೆ ಅಂದು ೩೦೦೦ ಕೋಟಿ ರೂಪಾಯಿಯ ಪ್ರಾಜೆಕ್ಟ್ (ಪಟೇಲರ ಮೂರುತಿ ) ಎಂದರೆ ತುಸು ಹೆಚ್ಚಾಯಿತೇನೋ ಅನಿಸುವುದು ಸಹಜವೇಎಂದು ಯಾರು ಬೇಕಾದರೂ ಹೇಳಬಹುದು ಆದರೆ ಎಕನಾಮಿಕ್ಸ್ನ ಗೊಡವೆಗೆ ಹೋಗದೆ ಒಂದು ಕ್ಷಣ ಯೋಚನೆ ಮಾಡಬೇಕು , ಬಹುಶ ಅಂದು ಭಾರತದ ಏಕೀಕರಣದ ಸಂಕಲ್ಪ ಪಟೇಲರು ಮಾಡದಿದ್ದರೆ ನಮ್ಮ ಭಾರತದ ನಕ್ಷೆಯನ್ನು ನಾವು ಊಹಿಸಲು ಅಸಾಧ್ಯವಾಗುತ್ತಿತು, ಕಾಶ್ಮೀರದ ವಿಷಯದಲ್ಲಿ ಆದ ಅಚಾತುರ್ಯದ ನಡೆ ಸ್ವಾತಂತ್ರ ಸಿಕ್ಕ ನಂತರವೂ ಮಗ್ಗುಲ ಹುಣ್ಣಿನಂತೆ ಎಡೆಬಿಡದೆ ನಮ್ಮನು ಕಾಡುತ್ತಿದೆ , ಅದಕ್ಕೆ ವ್ಯಯಿಸಿದ ಕೋಟಿಗಳೆಷ್ಟೋ? ಹೀಗೆ ಕೆಲವೊಂದು ವಿಷಯವನ್ನು ಹಾಗು ಕೆಲವರ ವ್ಯಕ್ತಿತ್ವವನ್ನು ಆರ್ಥಿಕ ಹಿನ್ನಲೆಯಲ್ಲಿ ನೋಡುವುದು ತಪ್ಪಾಗಬಹುದು ಅವರ ವ್ಯಕ್ತಿತ್ವ ನಡೆ ನುಡಿ ಬಿಟ್ಟು ಹೋದ ಮೌಲ್ಯಗಳು ಎಂದೆಂದಿಗೂ ಬೆಲೆ ಕಟ್ಟಲಾಗದು ಸರ್ದಾರ್ ಪಟೇಲರ ಜೀವನದ ಕೆಲವು ನಿರ್ಧಿಷ್ಟ ಸನ್ನಿವೇಶಗಳನ್ನು ಸೂಕ್ಷ್ಮವಾಗಿಅವಲೋಕಿಸಿದರೆ ನಮಗೆ ಅವರ ಯೋಚನಾ ಲಹರಿ ಮತ್ತು ಆಡಳಿತ ವ್ಯಕರಿ ಹೇಗಿತ್ತೆಂದು ತಿಳಿಯಲು ಸಹಾಯ ಮಾಡುತ್ತದೆ.
ಅದು ೧೯೧೫ ರ ಸಮಯ ಗಾಂಧಿ ಮತ್ತೆ ಭಾರತಕ್ಕೆ ಹಿಂತಿರುಗಿದ್ದರು, ಸೌತ್ ಆಫ್ರಿಕಾದಲ್ಲಿ ಅವರ ಸತ್ಯಾಗ್ರಹ ಹೋರಾಟದ ಮೂಲಕ ದೇಶದೆಲ್ಲೆಡೆ ಹೆಸರು ಮಾಡಿದ್ದರು, ಇಡೀ ದೇಶಕ್ಕೆದೇಶವೇ ಗಾಂಧಿ ಗುಣಗಾನ ಮಾಡುತಿತ್ತು , ಗಾಂಧೀಜಿ ಅವರ ಸರಳತೆ ಸತ್ಯಾಗ್ರಹದಲ್ಲಿದ್ದನಂಬಿಕೆ ಹೀಗೆ ಎಲ್ಲವನ್ನು ಜನರು ಬೆರಗು ಕಣ್ಣಲ್ಲಿ ನೋಡುತ್ತಿದ್ದರು , ಆದರೆ ವಲ್ಲಭರಿಗೆ ಇದ್ಯಾವದು ಅಷ್ಟಾಗಿ ಆಕರ್ಷಿಸಿರಲಿಲ್ಲ ಮತ್ತು ಅವರ ಧೋರಣೆಗಳನ್ನು ಅಷ್ಟಾಗಿ ಅಪ್ಪಿಕೊಂಡಿರಲಿಲ್ಲ , ಬಹುಷ್ಯ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಧೋರಣೆಯ ಮನೋಸ್ಥಿತಿಯಿಂದ ಹಾಗಾಗಿರಬೇಕು , ಆದರೆ ಮುಂದೆ ಚಂಪಾರಣ್ಯದ ಗಾಂಧೀಜಿಯವರ ಹೋರಾಟ ವಲ್ಲಭ್ ಭಾಯ್ ಪಟೇಲರ ಮೇಲೆ ಘಾಡವಾಗಿ ಪರಿಣಾಮ ಬೀರಿತು, ತದ ನಂತರ ವಲ್ಲಭಭಾಯ್ ಪಟೇಲರು ಗಾಂಧಿಯವರೊಡನೆ ಒಡಗೂಡಿ ಖೇಡಾ ಚಳುವಳಿ, ರೌಲತ್ ಕಾಯಿದೆಯ ವಿರುದ್ಧ ಹೋರಾಟ, ಅಸಹಕಾರ ಚಳುವಳಿ ಹೀಗೆ ಹತ್ತು ಹಲವು ಚಳುವಳಿಗಳಲ್ಲಿ ಗಾಂಧಿ ನೆರಳಿನಂತೆ ಭಾಗವಹಿಸಿದರು,
ಸ್ವತಂತ್ರ ಸಂಗ್ರಾಮದಲ್ಲಿ ಅವರ ದೇಶ ಪ್ರೇಮ ಅವರ ರೋಮ ರೋಮಗಳಲ್ಲಿ ಹರಡಿತ್ತು, ಸರ್ದಾರ್ ಪಟೇಲರು ಯಾವುದನ್ನೂ ಅಷ್ಟು ಸೂಕ್ಷ್ಮವಾಗಿ ಅಳೆದು ತೂಗಿ ನೋಡದೆ ಒಪ್ಪಿಕೊಳ್ಳುತ್ತಿರಲಿಲ್ಲ, ಸರ್ದಾರ್ ಎಂದರೆ ತಾಳ್ಮೆ ಮತ್ತು ಸರ್ದಾರ್ ಎಂದರೆ ಪ್ರಶ್ನೆ , ಯಾವುದನ್ನೂ ಮತ್ತು ಯಾರನ್ನಾದರೂ ಪ್ರಶ್ನಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ , ಬ್ರಿಟಿಷ್ ಅಧಿಕಾರಿಗಳಂತೂ ಅವರ ಪ್ರಶ್ನೆಗಳಿಗೆ ಕಂಗಾಲಾಗಿಬಿಡುತ್ತಿದ್ದರಂತೆ, ಒಬ್ಬ ಬ್ರಿಟಿಷ್ ಅಧಿಕಾರಿಯಂತು ಪಟೇಲರಿಗೆ ಶಿಕ್ಷೆ ಕೊಡಬೇಕಾಗಿ ಬಂದಾಗ ಪಟೇಲರ ಮುಂದೆ ಅವರಿಗೆ ಕೊಡಮಾಡುವ ದಂಡನೆಯನ್ನು ಓದಲಾಗದೆ , ಹಾಳೆಯಲ್ಲಿ ಬರೆದು ಎದ್ದು ಹೋಗಿದ್ದನಂತೆ , ಅದು ಪಟೇಲರಿಗಿದ್ದ ವರ್ಚಸ್ಸು ಮತ್ತುಶಕ್ತಿ.
ಇನ್ನೊಂದು ಘಟನೆ ೧೯೪೭ರಲ್ಲಿ ಇನ್ನೇನು ಸ್ವತಂತ್ರ ಬಂದೆ ಬಿಟ್ಟಿತು, ಎಂಬ ಅಭಿಪ್ರಾಯಎಲ್ಲೆಡೆ ಕಾಣುತ್ತಿತ್ತು. ಆಗ ಸ್ವತಂತ್ರ ಹೋರಾಟಗಾರರು ಹಾಗು ಮುತ್ಸದ್ಧಿಗಳಾದ ಹಾರ್ನಳ್ಳಿ ರಾಮಸ್ವಾಮಿಗಳು ದೆಹಲಿಗೆ ಸೇವಾದಳ ಶಿಬಿರಕ್ಕೆ ಹೋಗಿದ್ದರಂತೆ ಅಲ್ಲಿ ನಡೆದಎರಡು ಘಟನೆಗಳನ್ನು ಅವರು ಹೀಗೆ ವಿವರಿಸುತ್ತಾರೆ , ಲಕ್ಷಾಂತರ ನಿರಾಶ್ರಿತರು ದೆಹಲಿಯ ಹಾದಿ ಬೀದಿಗಳಲ್ಲಿ ಓಡಾಡುತ್ತಿದ್ದರು, ನೆಹರು ಒಂದು ಬೀದಿಯಲ್ಲಿ ಹಾಗೆ ಹಾದುಹೋಗುತ್ತಿದ್ದರಂತೆ, ಒಂದು ಹೆಣ್ಣು ಮಗು ರಸ್ತೆಯಲ್ಲಿ ಹರಕಲು ಬಟ್ಟೆ ಹಾಕಿಕೊಂಡು ಅಳುತ್ತ ನಿಂತಿತ್ತು, ನೆಹರುಅವರಿಗೆ ಈ ದ್ರಶ್ಯ ಕಂಡು ಸಂಕಟವಾಗಿ , ಆ ಹುಡುಗಿಯನ್ನುಕರೆದು ಕಾರಿನಲ್ಲಿ ಕುಳ್ಳಿರಿಸಿ ಮನೆಗೆ ಹೋಗಿ , ಊಟ ಬಟ್ಟೆ ಕೊಡಿಸಿ ಕಳುಹಿಸಿದರಂತೆ ಮತ್ತೊಂದು ರಸ್ತೆಯಲ್ಲಿ ಹಾದು ಹೋಗುತಿದ್ದ ಪಟೇಲರ ಕಣ್ಣಿಗೂ ಅಂತಹುದೇ ದೃಶ್ಯ ಕಂಡು ಬಂದಿತಂತೆ , ಆದರೆ ಪಟೇಲರು ಒಬ್ಬರನ್ನು ಮಾತಾಡಿಸಲಿಲ್ಲ , ನೇರ ಅವರ ಕಚೇರಿಗೆ ಹೋಗಿಸೈನ್ಯದ ಕಮಾಂಡೆಂಟ್ ಅವರನ್ನು ಕರೆದು ನಾಳೆ ಬೆಳಗ್ಗೆ ಒಳಗೆ ಹತ್ತು ಸಾವಿರವಿರಲಿ, ಇಪ್ಪತ್ತು ಸಾವಿರವಿರಲಿ ಎಷ್ಟು ಬೇಕು ಅಷ್ಟು ಅಗತ್ಯವಿದ್ದ ಟೆಂಟುಗಳನ್ನು ಹಾಕಿ , ಆ ಅನಾಥರ ತಲೆಯ ಮೇಲೆ ನೆರಳಿರಬೇಕು , ಪ್ರತಿಯೊಬ್ಬರಿಗೂ ಊಟ ಒದಗಿಸಬೇಕು , ನಾಳೆ ಹತ್ತು ಗಂಟೆಯ ಒಳಗೆ ನನಗೆ ಇದರ ವರದಿ ಬರಬೇಕು ಎಂದು ಆದೇಶಿಸದ್ದರಂತೆ , ಹೀಗೆ ಈ ಸನ್ನಿವೇಶವೇ ಸಾಕು ಪಟೇಲರ ಯೋಚನಾ ಲಹರಿ ವ್ಯಕ್ತಿತ್ವ ಹೇಗಿತ್ತೆಂದು ತಿಳಿದು ಕೊಳ್ಳಲು ಹೀಗೆ ಅಪಾರ ತಾಳ್ಮೆಯ , ಕಠೋರ ನಡೆ ನುಡಿಯ ಮತ್ತು ಅಪಾರ ರಾಜತಾಂತ್ರಿಕ ಗುಣಗಳನ್ನು ಮೈಗೂಡಿಸಿಕೊಂಡ ಪಟೇಲರಿಗೆ ಆಗಿದ್ದು ಹೆಜ್ಜೆ ಹೆಜ್ಜೆಗೆ ದೊಡ್ಡ ಹುದ್ದೆಯ ಮರೀಚಿಕೆ, ಇನ್ನೇನು ಕಾಂಗ್ರೆಸ್ ಪಕ್ಷದ (ಸ್ವತಂತ್ರ ಪೂರ್ವದಲ್ಲಿ ) ಅಧ್ಯಕ್ಷರಾಗಬೇಕು ಎನ್ನುವಶ್ಟರಲ್ಲಿ ಅಧ್ಯಕ್ಷರಾದವರು ಮೋತಿಲಾಲ್ ನೆಹರು, ಇನ್ನೇನು ಯಾರ ವಿರೋಧವು ಇಲ್ಲದೆ ಸ್ವತಂತ್ರ ಭಾರತದ ಪ್ರಧಾನಿಯಾಗಬೇಕು ಎಂದು ಕೊಂಡಾಗ ಪ್ರಧಾನಿಯಾದದ್ದು ನೆಹರು , ಒಮ್ಮೆ ಹಾಗೆ ಊಹಿಸಿಕೊಳ್ಳಿ ಈ ಪರಿಸ್ಥಿತಿ ಇಂದೇನಾದರೂ ಇದ್ದಿದ್ದರೆ ಕ್ಷಣ ಕ್ಷಣಕ್ಕೂ ಹೊಸ ತಿರುವು , ರೆಸಾರ್ಟ್ ರಾಜಕೀಯಕ್ಕೆ ಕ್ಷಣ ಗಣನೆ ಎಂಬ ವಾರ್ತೆ ,
ಅಂದಿಗೂ ಇಂದಿಗೂ ಇರುವ ವ್ಯತಾಸವಿದೆ , ಇಂಥಹವರೊಬ್ಬರಿದ್ದರು ಮತ್ತು ಅವರ ಚಾಣಾಕ್ಷ ನಡೆಗಳಿಂದಲೇ ಛಿದ್ರ ಛಿದ್ರವಾಗಿ ಹರಿದು ಹೋಗಬಹುದಾಗಿದ್ದ ಭಾರತದ ಭೂಪಟವು ಯಾರಿಂದಲೂ ಛಿದ್ರ ಗೊಳಿಸಲಾಗದಷ್ಟು ಘಟ್ಟಿಯಾದ ತಳಪಾಯದ ಮೇಲೆ ನಿಂತುಕೊಂಡಿದೆ ಎಂಬುದನ್ನು ಮುಂದೆ ಹುಟ್ಟುವ ಪ್ರತಿ ಮಗುವಿಗೂ ತಿಳಿಯಬೇಕಲ್ಲವೇ, ಇಂತಹ ಮಹಾನ ಮುತ್ಸದ್ದಿಗಳು ಕೂಡ ರಾಜಕೀಯದ ಅಂಗಳದಲಿದ್ದರು ಎಂದು ಮುಂದಿನ ಪೀಳಿಗೆಗೆ ಸಾರಿ ಸಾರಿ ಹೇಳಬೇಕಲ್ಲವೇ, ಈಗ ಹೇಳಿದರೆ ಆಳಿಗೊಂದು ಕಲ್ಲು ಎಂಬಂತೆ ಬಿಡ್ರಿ ಅವರ ಕೈಯಲ್ಲಿ ಪವರ್ ಇತ್ತು ಬರಲ್ಲ ಅಂದರೆ ಮಿಲಿಟರಿ ಕಳುಹಿಸ್ತೀನಿ ಅಂತಿದ್ರು ಆಮೇಲೆ ರಾಜಾರು ಹೆದರಿ ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳುತ್ತಿದ್ದರು ಎಂದು ಆದರೆ ಇಂದು ಸುಸಜ್ಜಿತವಾದ ಪೊಲೀಸ್ ಪಡೆ, ಬೇಹುಗಾರಿಕೆ ಎಲ್ಲವನ್ನು ಇಟ್ಟುಕೊಂಡು ಗ್ರಹ ಇಲಾಖೆಯನ್ನು ಮುನ್ನಡೆಸುವುದೆಂದರೆ ಕಾಯ್ದ ಕಬ್ಬಿಣದ ಸಲಾಕೆಯ ಮೇಲೆ ಹೆಜ್ಜೆಯಿಟ್ಟಂತೆ ಎಂಬುದು ಕಹಿ ಸತ್ಯ.
ಆದರೆ ಪಟೇಲರು ದೇಶದ ಪ್ರಪ್ರಥಮ ಗ್ರಹ ಮಂತ್ರಿಯಾದಾಗ ದೇಶದೆಲ್ಲೆಡೆ ತಂಡವವಾಡುತ್ತಿದದು ಅರಾಜಕತೆ, ಮತೀಯ ಗಲಭೆ , ಗಾಂಧೀಜಿ ಸಾವು, ಏಕೀಕರಣದ ಸಮಸ್ಯೆ , ಆಂತರಿಕ ಭದ್ರತೆ ಹೀಗೆ ಇಂತಹ ಹತ್ತು ಹಲವು ಸವಾಲುಗಳಿದ್ದರು ಭಾರತವನ್ನು ದಡ ಸೇರಿಸಿದ ಸರದಾರ ಸರ್ದಾರ್ವ ಲ್ಲಭ್ ಭಾಯ್ ಪಟೇಲ್ , ಅಸಲಿಗೆ ಜನಸಾಮಾನ್ಯರಲ್ಲಿ ವಲ್ಲಭರಿಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯ ಬರಲು ಈ ಒಂದು ಸರಳ ಘಟನೆಯೇ ಸಾಕು ೧೯೫೪ ರಲ್ಲಿ ಭಾರತ್ ಸರ್ಕಾರವು "ಭಾರತ ರತ್ನ" ಎಂಬ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ಥಾಪಿಸಿತು , ಆದರೆ ಅದನ್ನು ಕೊಡ ಮಾಡುವ ಸರ್ಕಾರಮಾಡಿದ್ದೇನು? ೧೯೫೫ ರಲ್ಲಿ ನೆಹರು ತಮಗೆ ತಾವೇ ಆ ಪ್ರಶಸ್ತಿ ಕೊಟ್ಟು ಕೊಂಡರು, ಆಗಅವರಿಗೆ ಗತಿಸಿ ಹೋದ ಭಾರತದ ಬಿಸ್ಮಾರ್ಕ್ ಪಟೇಲರು ಕಾಣಲಿಲ್ಲವೇ? ಹೋಗಲಿ ೧೯೭೧ ರಲ್ಲಿ ಇಂದಿರಮ್ಮನ್ನು ಕೂಡ ಭಾರತರತ್ನವನ್ನು ತಮಗೆ ತಾವೇ ಕೊಡ ಮಾಡಿ ಕೊಂಡರು ಅಂದರೇನು ಅರ್ಥ ? ಆದರೆ ನರಸಿಂಹ ರಾಯರು ಕೊಂಚ ಮಟ್ಟಿಗೆ ಸಮಾಧಾನ ಪಡುವಂತೆ ೧೯೯೧ ರಲ್ಲಿ ಸರದಾರ್ಪ ಟೇಲರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದರು ಅದೇನೋ ಸರಿ ಆದರೆ ರಾಯರಿಗೆಯಾರ ಒತ್ತಡವಿತ್ತೋ ಕಾಣೆ ರಾಜೀವ್ ಗಾಂಧಿಯವರಿಗೂ ಭಾರತ್ ರತ್ನ ಪ್ರಶಸ್ತಿ ಕೊಡಬೇಕಾಗಿಬಂತು, ಹೀಗೆ ಸದ್ದಿಲ್ಲದೇ ನಮ್ಮ ಸ್ವತಂತ್ರ ಸಂಗ್ರಾಮದ ನಿಜ ನಾಯಕರನ್ನು ಮುನ್ನೆಲೆಗೆತರುವ ಪ್ರಯತ್ನಕ್ಕೆ ಎಳ್ಳು ನೀರು ಬಿಡುವ ಪ್ರಯತ್ನ ಮೊದಲಿನಿಂದಲೂ ಸಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಅದು ಬದಲಾಗಿದೆ. ಈ ರೀತಿಯ ಬದಲಾವಣೆ ಅವಶ್ಯವು ಹೌದು ಇಲ್ಲವಾದಲ್ಲಿ ಮುಂದಿನ ಪೀಳಿಗೆಗಳಿಗೆ ಭರವಸೆಯ ಬೆಳಕನ್ನು ತೋರಿಸಲು "ಐಕಾನ್" ಗಳೇ ಇಲ್ಲದಂತಾಗುತ್ತದೆ , ಆದ್ದರಿಂದ ಕೆಲವೊಮ್ಮೆ ಇಂತಹ ಮಹಾನ್ ನಾಯಕರ ಬಗ್ಗೆ ಯಾವುದಾದರು ಕಾರ್ಯಕ್ರಮ ಹಮ್ಮಿಕೊಂಡಾಗ ಇಂತಹ ಕಾರ್ಯಕ್ರಮವನ್ನು ಕೇವಲ ಆರ್ಥಿಕ ನೆಲೆಯಲ್ಲಿ ನೋಡದೆ, ಕಟ್ಟಿಕೊಟ್ಟ ಮೌಲ್ಯಗಳ ಹಿನ್ನಲೆಯಲ್ಲಿ ನೋಡಬೇಕು , ಅದು ಮುಂಬರುವ ದಿನಗಳಲ್ಲಿ ಪ್ರಾಮಾಣಿಕತೆ, ದೇಶಪ್ರೇಮ, ತ್ಯಾಗ, ಬಲಿದಾನದ ಮೌಲ್ಯಗಳ ಬೀಜಬಿತ್ತಲು ಸಹಕಾರಿಯಾದೀತು...
ಕಾರ್ತಿಕ್ ಎಸ್ ಬಾಪಟ್
ಲೇಖನ ಮನಮುಟ್ಟುವ ತರಹ ಇದೆ,
ReplyDeleteThanks a lot
Deleteಅದ್ಭುತ ಲೇಖನ - ವಲ್ಲಭಭಾಯಿ ಪಟೇಲರ ಕೊಡುಗೆಗೆ ಬೆಲೆ ಕಟ್ಟಲಾಗದು! ಎಲ್ಲವನ್ನೂ ಖರ್ಚಿನ ಲೆಕ್ಕದಲ್ಲೇ ನೋಡುವವರಿಗೆ ವಲ್ಲಭಭಾಯಿ ಅರ್ಥ ಆಗಲಾರರು.
ReplyDelete👌👌🙏🙏
ReplyDelete