ಅಮೂರ್ತ ರೂಪಗಳಿಗೆ ಮೂರ್ತ ರೂಪ ಕೊಡುವುದರಲ್ಲಿ ಕಲಾವಿದರನ್ನು ಬಿಟ್ಟರೆ ಬೇರೆ ಯಾರು ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ, ಯಾವೊದೋ ಒಂದು ಭಾವನೆ ನಮ್ಮಲಿ ಅಸ್ಪಷ್ಟವಾಗಿ ಆವೀರ್ಭವಿಸುತ್ತದೆ, ಆ ಆವೀರ್ಭವಿಸುವಿಕೆ ನಮ್ಮಲಿ ಹಾಗೆಯೆ ಉಳಿಯುತ್ತದೆ, ಹೇಳಬೇಕು ಹೇಳಲಾಗುವುದಿಲ್ಲ , ಸ್ವಲ್ಪ ಮಟ್ಟಿಗೆ ಕೆಲವರು ಹೇಳಬೇಕಾದ್ದನ್ನು ಹೇಳಾಗದೆ ಇದ್ದಾಗ ಬರೆಯುವ ಮೂಲಕ ಅದಕ್ಕೊಂದು ಮೂರ್ತ (ಸ್ಪಷ್ಟತೆ) ರೂಪ ಕೊಡಲು ಪ್ರಯ್ತ್ನಿಸುತ್ತಾನೆ, ಅದನ್ನು ಓದಿದ ಓದುಗನಿಗೆ ಆ ಮೂರ್ತತೆಯ ಕಲ್ಪನೆಯೊಂದು ಸ್ಮ್ರಿತಿ ಪಟಲದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಆದರೆ ಏಕೋ ಒಂದು ಬಗೆಯ ಅಮೂರ್ತತೆ ಕಾಡುತ್ತಲೇ ಇರುತ್ತದೆ, ಆ ಅಮೂರ್ತತೆಗೆ ಇದು ಹೀಗೆ ಎಂದು ಮೂರ್ತ ರೂಪದ ಕಲ್ಪನೆ ಸಿಗುವುದು ಕೊನೆಗೆ ಕಲಾವಿದನಲ್ಲಿಯೇ ಅದು ಕಲಾವಿದನ ಕುಂಚದಲ್ಲಿರಬಹುದು, ನಟನೆಯಲ್ಲಿರಬಹುದು ಅಥವಾ ನವರಸ ಅಭಿನಯದ ತನ್ಮಯತೆಯಲ್ಲಿರಬಹದು, ಹೀಗೆ ಇಷ್ಟೆಲ್ಲ ಕಲಾವಿದನ ಶಕ್ತಿಯ ಬಗ್ಗೆ ವರದಿಯೊಪ್ಪಿಸಿದ ಮೇಲೆ ಕನ್ನಡ ಕುಲಕೋಟಿಗಳ ಹೃದಯ ಸಾಮ್ರಾಟ್ ಡಾ ರಾಜ್ ಅವರ ಬಗ್ಗೆ ಮಾತಾಡದೆ ಇದ್ದರೆ ಹೇಗೆ, ನೀವು ನಿಮ್ಮ ಮುಂದೆ ಕೃಷ್ಣದೇವರಾಯನನ್ನು ತಂದುಕೊಳ್ಳಿ ಆದರೆ ಕಣ್ಮುಂದೆ ಬರುವುದು ಡಾ ರಾಜ್ ರೂಪದ ಕೃಷ್ಣದೇವರಾಯ, ಭಕ್ತ ಕುಂಬಾರನನ್ನು ತಂದುಕೊಳ್ಳಿ ಕಣ್ ಮುಂದೆ ಬರುವುದು ಡಾ ರಾಜ್ ಹೀಗೆ ಡಾ ರಾಜ್ ನಾವೆಂದು ಪ್ರಸ್ತುತ ಕಾಲ ಘಟ್ಟದಲ್ಲಿ ನೋಡದ ಪಾತ್ರಗಳಿಗೆ ಒಂದು ಬಗೆಯ ಲವಲವಿಕೆ ತುಂಬಿ ಕೃಷ್ಣದೇವರಾಯನೆಂದರೆ ಹೀಗೆಯೇ ಇದ್ದನು ಅಥವಾ ಭಕ್ತ ಕುಂಬಾರ ಹೀಗೆ ಇದ್ದನೆಂದು ನಮ್ಮ ಮನದಲ್ಲಿ ಚಿತ್ರಣವನ್ನು ಮೂಡಿಸುತ್ತಾರೆ, ಹೀಗೆ ಒಂದು ಚಿತ್ರಣವನ್ನು ಮೂಡಿಸಿ ಅಸ್ಪಷ್ಟ ಚಿತ್ರಣಕ್ಕೆ ಸ್ಪಷ್ಟ ಚಿತ್ರಣವನ್ನು ಯಾವುದೇ ಪಾತ್ರಕ್ಕೆ ಕೊಡುವ ಶಕ್ತಿ ಕನ್ನಡವಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಇದ್ದಿದ್ದರೆ ಅದು ಡಾ ರಾಜ್ ಮಾತ್ರ, ಇತ್ತ ಪೊಲೀಸ್ ಅಧಿಕಾರಿಯಾಗಿಯೂ ಸೈ ಅತ್ತ ಪೌರಾಣಿಕ ಪಾತ್ರಕ್ಕೂ ಸೈ ಹೀಗೆ ನಾನಾ ಪಾತ್ರಗಳನ್ನು ಮಾಡಿ ಕನ್ನಡ ಕುಲಕೋಟಿಗಳ ಹೃದಯದಲ್ಲಿ ಶಾಶ್ವತ ಜಾಗ ಮಾಡಿ ಕೊಂಡ ರಾಜಣ್ಣ ನ ೮೮ ನೇ ಜನ್ಮೋತ್ಸವ ಹಲವು ಕಾರಣಗಳಿಗೆ ನೆನಪಲ್ಲಿ ಉಳಿಯುವಂತಾಗಿದೆ.
ಮೊನ್ನೆ
ಮೊನ್ನೆ ೨೪ ರಂದು ಡಾ
ರಾಜ್ ರವರ ೮೮ ನೇ
ಹುಟ್ಟು ಹಬ್ಬದ ಸಂಭ್ರಮದಲ್ಲಿ ಇಡೀ
ಕರುನಾಡೇ ಪಾಲ್ಗೊಂಡಿತ್ತು. ಸಮಸ್ತ
ಕನ್ನಡಿಗರಲ್ಲಿ ಸಾಹಿತಿಗಳನ್ನು ಹೊರತಾಗಿ,ಕನ್ನಡ ಪ್ರಜ್ಞೆಯನ್ನು
ಬೆಳಗಿಸಿದ ಹರಿಕಾರನೊಬ್ಬನಿದ್ದರೆ ಅದು
ಡಾ ರಾಜ್ ಮಾತ್ರ ಆ
ಸರಳ ವ್ಯಕ್ತಿತ್ವದ ಯುಗಪುರಷನ ಹುಟ್ಟು ಹಬ್ಬದೊಂದು ಸಂತಸವನ್ನು
ಉಂಟು ಮಾಡಿದ ಮತ್ತೊಂದು ವಿಷಯವೆಂದರೆ
ಅಂದು ಗೂಗಲ್ ಡೂಡಲ್ ನಲ್ಲಿ
ಡಾ ರಾಜ್ ರಾರಾಜಿಸಿದ್ದು. ಐ
ಟಿ , ಬಿ ಟಿ ಯಲ್ಲಿ
ಕಾಯಕ ಕಂಡು ಕೊಂಡ ಕನ್ನಡಿಗರಂತೂ
ಅಂದು ತಮ್ಮ ಚಿತ್ರವನ್ನೇ ಗೂಗಲ್
ಡೂಡಲ್ ನಲ್ಲಿ ಹಾಕಿದ್ದಾರೆ ಎಂಬಷ್ಟು
ಸಂತಸಗೊಂಡಿದ್ದರು.ಗೂಗಲ್ ಡೂಡಲ್ ನಲ್ಲಿ
ಪ್ರಕಟವಾದ ಆ ಚಿತ್ರವನ್ನು ತೆಗೆದು
ವಾಟ್ಸಪ್, ಫೇಸ್ಬುಕ್ ಹೀಗೆ ಹಲವು ಸಾಮಾಜಿಕ
ತಾಣದಲ್ಲಿ ಹೆಮ್ಮೆಯಿಂದ ಹರಿಯಬಿಟ್ಟಿದೆ ಬಿಟ್ಟಿದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದ್ದರು ತಾವು
ಕೆಲಸ ಮಾಡುವ ಜಾಗದಲ್ಲಿ ಒಂದೋ
ತಮಿಳರ ಪ್ರಾಭಲ್ಯ, ಇಲ್ಲವೇ ತೆಲುಗರ ಪ್ರಾಭಲ್ಯ
ಅದು ಇಲ್ಲದಿದ್ದರೆ ಗುಜರಾತಿಗಳ ಪ್ರಾಭಲ್ಯವನ್ನು ಕಂಡು ರೋಸಿ ಹೋಗಿದ್ದ
ಕನ್ನಡಿಗ ಅಂದು ಡಾ ರಾಜ್
ಅಂದ್ರೆ ಏನು ತಿಳ್ಕೊಂಡಿದೀರಾ ಕಣ್ರೀ
"ಈವನ್ ಗೂಗಲ್ ಮಾರ್ಕ್ ರೆಸ್ಪೆಕ್ಟ್
ಟು ಹಿಮ್ " ಎಂದು ತಮ್ಮ ಬೆನ್ನನ್ನು
ತಾವೇ ತಟ್ಟಿಕೊಂಡರು, ಕೆಲವರು ಅದ್ರಲ್ಲೇನಿದೆ ಮಹಾ
ಎಂದು ಹೇಳಬಹದು ಆದರೆ ಈ
ವಿಷಯಗಳು ನಿಮಗೆ ಗೊತ್ತಿರಬೇಕು ಇದುವರೆಗೆ
ಕೆಲವೇ ಕೆಲವು ಹಿಂಧಿ ಸಿನಿ
ತಾರೆಯರು ಈ ಗೌರವಕ್ಕೆ ಪಾತ್ರರಾದವರು
ಅವರಲ್ಲಿ ನರ್ಗಿಸ್ ದತ್, ರಾಜ್
ಕಪೂರ್ ಹೀಗೆ ಕೆಲವೇ ಹೆಸರುಗಳು,
ಈ ಮಧ್ಯೆ ಕೆಲವರ
ಅತಿಉತ್ಸಾಹದಲ್ಲಿ ಇದು ನಿಮಗೆ ಗೊತ್ತಿರಲಿ
ದಕ್ಷಿಣ ಭಾರತದ ಯಾವ ನಾಯಕನಿಗೂ
ಇದುವರೆಗೆ ಸಿಕ್ಕಿಲ್ಲ, ಈ ಗೌರವಕ್ಕೆ ಭಾಜನವಾದವರು ನಾವೇ
ಫಸ್ಟ್ ತಮಿಳಿನ ಈ ನಟನಿಗೂ
ಸಿಕ್ಕಿಲ್ಲ , ತೆಲುಗಿನ ಆ ನಟನಿಗೂ
ಸಿಕ್ಕಿಲ್ಲ ಎಂದು ಟ್ರೊಲ್ ಮಾಡಿದರು
ಬಹುಷ್ಯ ಇದು ಬೇಕಾಗಿರಲಿಲ್ಲ ಡಾ
ರಾಜ್ ನಮ್ಮೆಲ್ಲರ ಹೆಮ್ಮೆ ನಿಜ ಹಾಗು
ಅವರೆಂದು ತಾನೇ ದೊಡ್ಡವನು ಅಂದುಕೊಂಡಿರಲಿಲ್ಲ
ಆದ್ದರಿಂದ ಬೇರೆಯವರ
ಭಾವನೆಗಳನ್ನು ಘಾಸಿಗೊಳಿಸಿ ಟ್ರೊಲ್ ಮಾಡುವ ಅವಶ್ಯಕತೆ
ಇರಲಿಲ್ಲವೇನೋ ಅದೇನೇ ಇರಲಿ ಅಭಿಮಾನಿಗಳ
ಅಭಿಮಾನವೇ ಆ ಬಗೆಯದು ಆದ್ದರಿಂದಲೇ
ಅಲ್ಲವೇ ಅಣ್ಣಾವ್ರು "ಅಭಿಮಾನಿ ದೇವರುಗಳೇ" ಎಂದು
ಅಭಿಮಾನಿಗಳನ್ನು ಸಂಭೋದಿಸಿದ್ದು, ಹೀಗೆ ಅಂದು ಗೂಗಲ್
ನ ಆಹ್ಲಾದಕರವಾದ ಕೊಡುಗೆ
ಎಲ್ಲರನ್ನು ಸಂತಸಗೊಳಿಸಿತ್ತು.
ಇತ್ತ ಸರ್ಕಾರವು
ಒಂದು ಹೆಜ್ಜೆ ಮುಂದೆ ಹೋಗಿ ಡಾ ರಾಜ್ ಜನ್ಮೋತ್ಸವವನ್ನು ಇನ್ನುಮುಂದೆ ಸರ್ಕಾರೀ ಕಾರ್ಯಕ್ರಮವಾಗಿ ಆಚರಿಸುತ್ತೇವೆ
ಎಂದು ಘೋಷಿಸಿದೆ, ಈ ಘೋಷಣೆ ಕೇವಲ ತೋರುಗಾಣಿಕೆಯ ಸಂಭ್ರಮ ವಾಗದೆ ಆ ದಿನದಂದು ಕೇವಲ ಸರ್ಕಾರೀ ಕಚೇರಿಗಳಲ್ಲಿ
ಡಾ ರಾಜ್ ಅವರ ಬಗ್ಗೆ ಒಂದು ಭಾಷಣ ಮಾಡಿ ಪುಷ್ಪ ಮಾಲೆ ಸಮರ್ಪಿಸಿ ಮುಗಿಯಿತು ಎನ್ನುವ ಮನೋಭಾವನೆ ಇರಬಾರದು
ಏಕೆಂದರೆ ಈ ಕೆಲಸವನ್ನು ಸರ್ಕಾರ ಮಾಡದಿದ್ದರೂ ಅವರ ಅಭಿಮಾನಿಗಳು ಸೂರ್ಯ ಚಂದ್ರರಿರುವ ವರೆಗೂ ಮಾಡಿಯೇ
ಮಾಡುತ್ತಾರೆ , ಕರುನಾಡು ಎಂಬ ಈ ನಾಡು ಭೂಪಟದಲ್ಲಿ ಅಸ್ಥಿತ್ವದಲ್ಲಿರುವ ವರೆಗೂ ಡಾ ರಾಜ್ ಒಂದಲ್ಲ ಒಂದು ಕಡೆ ಹಾಡುತಿರುತ್ತಾರೆ, ಜನ ಅವರ ಅಭಿನಯವನ್ನು
ಕಂಡು ಕಣ್ ತುಂಬಿಸಿಕೊಳ್ಳುತ್ತಿರುತ್ತಾರೆ ಆದ್ದರಿಂದ ಡಾ ರಾಜ್ ಜನ್ಮದಿನೋತ್ಸವ ಕೇವಲ ಸರ್ಕಾರೀ ಪ್ರಾಯೋಜಿತ
ಕಾರ್ಯಕ್ರಮವಾಗದೆ ಅಂದು ಒಂದು ದಿನವಾದರೂ ಪಕ್ಷಭೇದ ಮರೆತು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದು
ಕನ್ನಡ ನಾಡಿನ ಒಳಿತು, ಕನ್ನಡ ಮತ್ತು ಕನ್ನಡ ನೆಲದ ಸಮಗ್ರ ಅಭಿವೃದ್ಧಿ ಹಾಗು ಕನ್ನಡ ಕೆಲಸಗಳ ಬಗ್ಗೆ
ಚರ್ಚೆ ಮಾಡಿ ಆ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಣಯವನ್ನು ತೆಗೆದುಕೊಳ್ಳುವಂತಾದರೆ ಅದು ಡಾ ರಾಜ್ ಅವರಿಗೆ
ಸಮರ್ಪಣೆ ಮಾಡಬಹುದಾದ ಅತಿ ದೊಡ್ಡ ಗೌರವ , ಡಾ ರಾಜ್
ಹೇಳುವ ಹಾಗೆ ಕಲಾವಿದನೊಬ್ಬ ಬಯಸುವುದು ಒಂದೊಳ್ಳೆ ಮಾತು ಮತ್ತು ಚಪ್ಪಾಳೆ ಎಂಬ ಪ್ರೋತ್ಸಾಹ
, ಅದೇ ರೀತಿ ಡಾ ರಾಜ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶಯ ಅಂದಿಗೂ, ಇಂದಿಗೂ ಎಂದೆಂದಿಗೂ
ಕರುನಾಡು ಮತ್ತು ಕರುನಾಡಿನ ಕಟ್ಟಕಡೆಯ ಪ್ರಜೆಯ ಸಮಗ್ರ ಅಭ್ಯುದಯ, ನೀವು ಅದನ್ನೇ ಬಯಸುತ್ತೀರೆಂದುಕೊಂಡಿದ್ದೇನೆ
- ಜೈ ಭುವನೇಶ್ವರಿ.

No comments:
Post a Comment