ಆಕೆ ಪ್ರೀತಿಸಲು ಒಲ್ಲೆ ಎಂದರು ದ್ವೇಷಿಸಲಾರಳು ….
ಅದೇಕೋ ಇತ್ತೀಚಿನ ತರುಣ ತರುಣಿಯರನ್ನು ಕಂಡಾಗ ಎಲ್ಲವಿದ್ದೂ ವಂಚಿತರು ಎಂದೆನಿಸಿತು, ಮೊದಲು ಯಾವುದೇ ಸಂಬಂಧಗಳಲ್ಲಿ ತಾಳುವಿಕೆಗೆ ಬಹಳ ಮಹತ್ವವಿತ್ತು , ಅದೇನೋ ತಾಳಿದವನು ಬಾಳಿಯಾನು ಅನ್ನುತ್ತೇವಲ್ಲ ಹಾಗೆ ಎಂದರು ತಿಳಿದುಕೊಳ್ಳಬಹುದು, ತಾಳುವಿಕೆಗೆ ಆ ಬಗೆಯ ಮಹತ್ವವಿತ್ತು ಮತ್ತು ತಾಳುವ ತಪನೆಯಲ್ಲಿ ಮಿಂದು ಬೆಂದರು, ಆ ತಾಳುವಿಕೆಗೆ ಇದ್ದ ಶ್ರೇಷ್ಠತೆ ತಾಳಿದವನೇ ಬಲ್ಲನು, ಇದೆಲ್ಲ ವಿಷಯವನ್ನು ಲೋಕಾರೂಡಿಯಾಗಿ ಗೆಳೆಯರೆಲ್ಲರೂ ಸೇರಿದಾಗ ಪ್ರೇಮ ನಿವೇದನೆಯ ಚರ್ಚೆ ಬಂದಾಗ ನಿಮ್ಮ ಬಳಿ ಹೇಳಕೊಳ್ಳಬೇಕೆನಿಸಿತು, ಈಗಿನ ಪ್ರೇಮ ಬಿನ್ನಹಕ್ಕೆ ತಾಳುವಿಕೆಯಿಲ್ಲ , ತಾಳುವಿಕೆಯಿದ್ದರೂ ಅದಕ್ಕಿದ ಬೆರಗು ಅಂದ ಚೆಂದವಂತೂ ಇಲ್ಲವೇ ಇಲ್ಲ, ಈಗೆಲ್ಲ ಒಂದು "ಸಂದೇಶ" ಅಷ್ಟೇ ಅದು ವಾಟ್ಸಪ್ ಮೂಲಕ , ಅದು ಕನ್ನಡದಲ್ಲಿರಲಂತೂ ಸಾಧ್ಯವೇ ಇಲ್ಲ ಬಿಡಿ , ಎಲ್ಲಾ ಆಂಗ್ಲಮಯ ಮೊದಲ ದಿನ ವಾಟ್ಸಪ್ , ಎರಡನೆಯ ದಿನ ಓಹ್ ಲುಕಿಂಗ್ ಸಕತ್ ಹಾಟ್ , ಮೂರನೆಯ ದಿನ "I like you " & "I love you " ಹೀಗೆ ಸಾಗುತ್ತದೆ, ಆ ಬದಿಯಿಂದ ಆಕೆ ಇದೆಲ್ಲವನ್ನು ನೋಡಿ ಇದೇನಿದು ಎಂದು ತಲ್ಲಣಗೊಂಡರೆ ಅದು ಅವಳ ಪ್ರಾಬ್ಲಮ್ , ಆಕೆ ಏನಾದರು ನಿರುತ್ತರಳಾದರೆ , ಇವನ ಇನ್ನೊಂದು ಮೆಸೇಜು I Really Can Not Live Without You . ಇಷ್ಟು ವರ್ಷ ಸಾಕಿ ಸಲುಹಿದ ತಂದೆ, ತಾಯಿ, ಅಣ್ಣ, ತಮ್ಮ , ಅಕ್ಕ , ತಂಗಿ ಇವರೆಲ್ಲರನ್ನು ಬಿಟ್ಟು ಕೇವಲ ನಾಲ್ಕೇ ದಿನ ಒಡನಾಡಿದವ್ರನ್ನು ಬಿಟ್ಟು ಇವನಿರಲಾರನಂತೆ, ಇಷ್ಟಾಗಿಯೂ ಆ ಬದಿಯಿಂದ ಯಾವುದೇ ಸಂದೇಶ ಬರಲಿಲ್ಲವೆನ್ನಿ ಈತ ಅದೇ ಸಂದೇಶವನ್ನುಬೇರೋಬ್ಬಳಿಗೆ ಕಳುಹಿಸುತ್ತಾನೆ, ಏಕೆಂದರೆ ಮೊದಲಿನ ಹಾಗೆ ಈಗ ಸಂದೇಶ ಕಳುಹಿಸಿವುದು ಅಷ್ಟು ಕಷ್ಟವಲ್ಲ , ಏಕೆಂದರೆ ಈಗ ಎಲ್ಲರ ಮೊಬೈಲ್ ಅಲ್ಲೂ ಜುಗ ಜುಗ "ಜಿಯೋ" ಕೃಪಾಕಟಾಕ್ಷ, ಹಾಳಾಗಿ ಹೋಗಲಿ ಅವಳಿಗೆ ಬೇರೆ ಯಾವುದಾದರು ಸುಂದರ ಸಂದೇಶ ಕಳುಹಿಸಿದನೋ? ಇಲ್ಲ ಅದೇ ಸಂದೇಶವನ್ನು ಕಾಪಿ ಪೇಸ್ಟ್ ಮಾಡಿ ಇನ್ನೊಬ್ಬಳಿಗೆ ಕಳುಹಿಸುತ್ತಾನೆ , ಅಂದರೆ ಆತ ಎಲ್ಲಿಯೂ ಬೆವರು ಸುರಿಸಲಾರ ಅಂದರೆ ಈಗಿನ ಪ್ರೀತಿ ಪ್ರೇಮಕ್ಕೆ ಹುಡುಗರಾಗಲಿ , ಹುಡುಗಿಯರಾಗಲಿ ಯಾವುದೇ ಸುಂಕ ಕಟ್ಟಲು ತಯಾರಿಲ್ಲ , ಹಾಗೆಂದು ಒಂದು ಇಡೀ ಯುವ ವೃಂದವೇ ಈ ಪರಿಭಾಷೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದರೆ ತಪ್ಪಾಗಬಹುದು, ಆಧುನಿಕತೆಯ ಅಬ್ಬರದಲ್ಲಿ ಸರಿ ತಪ್ಪುಗಳ ಅರಿವು ಹಿಂದೆಂದಿಗಿಂತಲೂ ಹೆಚ್ಚಿದ್ದರೂ, ಅವನಿಗೆ ಅಥವಾ ಅವಳಿಗೆ ಸಹನೆ ಎಂಬ "ಅನುಭೂತಿ" ಮಾಯವಾಗಿ ready to eat ಮಾದರಿಯಲ್ಲಿ ಇಂದು ಬುಲೆಟ್ ಟ್ರೈನ್ ವೇಗದಲ್ಲಿ ಪ್ರೇಮ ನಿವೇದನೆ ಮಾಡಿದರೆ ನಾಳೆ ಮೋಟಾರ್ ಬೈಕ್ನ ಹಿಂಬಂದಿಯ ಸೀಟಿನಲ್ಲಿ ಆಕೆಯಿರಬೇಕು ಆಕೆ ಅದಕೊಲ್ಲೆ ಎಂದಳೋ, ಒಂದೋ ಮಗದೊಬ್ಬಳಿಗೆ ಅದೇ ಮೆಸೇಜು ಇಲ್ಲವೇ ಹೊಂಚು ಹಾಕಿ ಅವಳ ಮೇಲೆ ಉಗ್ರಾಲೋಪ.
ಆದರೆ ಪ್ರೀತಿಯ ಸಾರ್ಥಕತೆಯಿರುವುದು ನಿಜವಾಗಿಯೂ ಪ್ರೀತಿಸುವವನು ಅಥವಾ ಪ್ರೀತಿಸುವವಳು ಸಂತೋಷವಾಗಿರಲಿ ಎಂದು ಹರಿಸುವ ಮನೋಭಾವನೆಯಿಂದ ಆದರೆ ಇಂದು ಮನೋಭಾವನೆಯೇ ಕಳೆದು ಹೋಗಿ ತ್ಯಾಗದ ಅರ್ಥವೇ ಗೊತ್ತಿಲ್ಲದ "ದಾರಿ ತಪ್ಪಿದ ಪ್ರೇಮ ಭಕ್ತರಾಗಿ" ತಮಗೆ ತಾವೇ ವಂಚಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಅಂದು ಈ ತಲ್ಲಣಗಳು, ಮನಸ್ತಾಪಗಳು ಇರಲಿಲ್ಲವೇ? ಅಂದು ಈ ಪ್ರೇಮ ನಿವೇದನೆಗೆ ಈಗಿನ ವೇಗವಿರಲಿಲ್ಲವೇ, ಇಲ್ಲ ಎಂದವರ್ಯಾರು ಅಂದೂ ತಲ್ಲಣಗಳಿದ್ದವು, ಮನಸ್ತಾಪಗಳಿದ್ದವು ಆದರೆ ಪ್ರೇಮಿ ಆ ಬಗೆಯಲ್ಲಿ ಪ್ರೇಮ ಭ್ರಷ್ಟನಾಗುತಿರಲಿಲ್ಲ, ಪ್ರೇಮ ನಿವೇದನೆಗೆ ಆ ಬಗೆಯ ವೇಗವಿಲ್ಲದಿದ್ದರು ತಾಳುವ ತಲ್ಲಣವಿತ್ತು, ಆ ಪ್ರೇಮ ನಿವೇದನೆಯಲ್ಲಿ ಏನೋ ಒಂದು ಹೊಳಪಿತ್ತು, ಒಂದು ಉತ್ಸಾಹವಿತ್ತು, ಆಕೆಯ ಬರುವಿಕೆಗಾಗಿ ಕಾಯುವುದು, ಅಥವಾ ಅವನ ಇರುವಿಕೆಗಾಗಿ ಕಾಯುವುದು , ಆಕೆ ಏಕಾಂತದಲ್ಲಿ ಎಲ್ಲಿ ಸಿಕ್ಕಿಯಾಳು ಎಂದು ಹೊಂಚು ಹಾಕಿ ಕಾಯುವುದು ಏಕಾಂತದಲ್ಲಿ ಸಿಗುವ ಲಕ್ಷಣಗಳಿಲ್ಲ ಎಂದಾದರೆ ಅಲ್ಲೇ ಆಕೆಯ ಸುತ್ತ ಗಮನ ಹರಿಸುವಂತೆ ಹಿಂದೆ ಮುಂದೆ ಫೋಸು ಕೊಟ್ಟು ಅಡ್ಡಾಡುವುದು ಹೀಗೆ, ಆದರೆ ಇಂದು ಅದರ ಗೋಜಿಲ್ಲ ಫೇಸ್ಬುಕ್ ಗೆ ಲಗ್ಗೆಯಿಟ್ಟರೆ , ಆಕೆಯ ಇಷ್ಟ ಕಷ್ಟಗಳ ಸಮಗ್ರ ಪಟ್ಟಿ ಕಣ್ಮುಂದೆ , ಮೊದಲು ಫೇಸ್ಬುಕ್ ರಿಕ್ವೆಸ್ಟ್ , ನಂತರ ಒಪ್ಪಿಕೊಂಡರೆ breakfast ಅಲ್ಲೇನೋ ಮುನಿಸಾಯಿತೆಂದರೆ "break the request " ಹೀಗೆ ಸಾಗುತ್ತಿದೆ.
ಅದಿರಲಿ, ಒಂದು ಪ್ರೇಮ ಪತ್ರ ಕೊಡಬೇಕೆಂದರೆ ಎಷ್ಟೊಂದು ಫಜೀತಿ , ಆ ಪ್ರೇಮ ಪತ್ರವನ್ನು ತಲುಪಿಸುವ ಎದೆಗಾರಿಕೆ ಯಾರಿಗಿದೆ ಎಂದು ಕಂಡು ಹಿಡಿಯಬೇಕು ಕೊನೆಗೆ ಕಂಡು ಹಿಡಿದರು, ಏನು ಬರೆಯಬೇಕು? ಎಂಬುದು ಇನ್ನೊಂದು ಯಕ್ಷಪ್ರಶ್ನೆ, ಕೆಲವರು ಸ್ವತಹ ತಾವೇ ಕವಿಗಳಾದರೆ, ಇನ್ನು ಕೆಲವರು ತಮ್ಮ ತಮ್ಮ ಸ್ನೇಹ ವಲಯದಲ್ಲಿರಬಹುದಾದ ಅಲ್ಪ ಸ್ವಲ್ಪ ಕವಿತೆಯನ್ನು ಮೈಗೂಡಿಸಿಕೊಂಡವರಿಗೆ ಒಂದು ಸಿಗರೇಟು ಅಥವಾ ಒಂದು ಮಸಾಲೆ ದೋಸೆ ಕೊಡಿಸಿದರೆ ಸಾಕು ಇವನ ಪ್ರೇಮ ಬಿನ್ನಹದ ಪತ್ರ ತಯಾರು.
ಇನ್ನು ಕೆಲವರ ಸಹಾಯಕ್ಕೆ ಬರುತ್ತಿದ್ದವರು ಹಿಂದಿ ಹಾಗು ಕನ್ನಡ ಚಿತ್ರರಂಗದ ಸಹೃದಯಿ ಕವಿಗಳು, ಗೀತ ರಚನೆಕಾರರು ಬರೆದ ಅದ್ಭುತ ಗೀತೆಗಳೇ ಇವರ ಸಾಲಾಗುತ್ತಿದ್ದವು ಉದಾಹರಣೆಗೆ R N ಜಯಗೋಪಾಲ್ ಪ್ರೇಮಿಗಾಗಿ ಬರೆದಿರುವ ಪ್ರೇಮ ಬಿನ್ನಹದ ಪತ್ರ ಅದುವೇ "ಒಲವಿನ ಉಡುಗರೆ ಕೊಡಲೇನು ರಕುತದಿ ಬರೆದೇನು ಇದ ನಾನು" ಅಂದರೆ ಅವರ ಪ್ರೇಮಿ ಎಷ್ಟೊಂದು ಸಂಭಾಳಿತಾನು , ಪ್ರೇಮ ಪತ್ರ ಕೊಡುವ ಮೊದಲೇ ಕೇಳುತ್ತಾನೆ ಒಲವಿನ ಉಡುಗರೆ ಕೊಡಲೇನು ರಕ್ತದಲ್ಲಿ ಬರೆದಿದ್ದೀನಿ ಇದನ್ನ ನಾನು , ಅಂದರೆ ಅಲ್ಲಿ ಪ್ರೇಮ ಪ್ರೀತಿ ಎಂಬುದು ಒಂದು ಮೌಲ್ಯ , ಪ್ರೇಮ ಪತ್ರ ಕೊಟ್ಟ ಮೇಲೆ ಅವಳೇನಾದರೂ ಅಪದ್ಧ ಆಂದು ಕೊಂಡರೆ ಎಂಬ ನಿಷ್ಕಲ್ಮಶ ಕಾಳಜಿ.
ಅದೇ ರೀತಿ "ಅನ್ಪಡ್"/ Anpad ಹಿಂದಿ ಚಿತ್ರದ "ರಾಜ್ ಮೆಹದಿ ಅಲಿ ಖಾನ್" ಬರೆದಿರುವ
"ಆಪಕಿ ನಝರೋ ನೇ ಸಮಝಾ" ಕವಿತೆಯ ಮೇಲೆ ಕಣ್ಣಾಡಿಸಿ ಅಲ್ಲಿ ಪ್ರೀತಿಯ ತನ್ಮತೆಯಿದೆ, ಅಲ್ಲಿ ಆಕೆಗೆ ತಾನು ಮೋಸ ಹೋದೆನೆಂಬ ಭಯವಿಲ್ಲ , ಪ್ರೀತಿಗೆ ಘಾಸಿಯಾಗುವ ಆತಂಕವಿಲ್ಲ. ಅವನ ಪ್ರೇಮ ನಿವೇದನೆಗೆ ಆಕೆಯ ಉತ್ತರ ಹೀಗೆ ಸಾಗುತ್ತದೆ .
ಜಿ ಹಮೆ ಮನ್ ಝುರ್ ಹೈ ( manzoor hai ), ಆಪ್ ಕಿ ಏ ಫೈಸ್ಲಾ
ಕರ್ ರಹಿ ಹರ್ ನಝರ್ , ಬಂದ ಪರ್ವರ್ ಶುಕ್ರಿಯ
ಹಸ್ಕೆ ಅಪನೀ ಜಿನದಗಿ ಮೇ ಕರ್ಲಿಯ ಶಾಮಿಲ್ ಮುಝೆ
ಆಪಕಿ ನಜ್ರೋನ್ ನೇ ಸಮಝಾ .......
ಅಂದರೆ ಈ ಇಡೀ ಗೀತೆಯ ಈ ಸಾಲುಗಳ ಹೂರಣವಿಷ್ಠೆ "ನಿನ್ನ ಈ ನಿರ್ಣಯ ನನಗೆ ಒಪ್ಪಿಗೆಯಾಗಿದೆ, ನನ್ನ ಪ್ರತಿ ಕಣ್ ರೆಪ್ಪೆಯ ಅದೆಷ್ಟು ಬಾರಿ ಬಡಿಯುವುದೋ ಅಷ್ಟು ಬಾರಿ ಆ ದೇವರಿಗೆ ಧನ್ಯವಾದಗಳು, ನಗುಮುಖದಿ ನನ್ನನ್ನು ನಿಮ್ಮ ಜೀವನದ ಭಾವ ಯಾನದಲ್ಲಿ ಸೇರಿಸಿಕೊಂಡಿದ್ದೀರ ... ಹೀಗೆ ಸಾಗುತ್ತದೆ
ಈಗ ಹೇಳಿ ಪ್ರೇಮ ನೀವಿದನೆಗೆ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ , ಬರೇ "ಐ ಲವ್ ಯು" ಅಂದರೆ ಆಕೆ ಒಪ್ಪಿಯಾಳೇ? ಅದರ ಬದಲು ಒಂದೊಳ್ಳೆ ಪ್ರೇಮ ಪಾತ್ರ ಉದಾಹರಣೆಗೆ ಈ ಮೇಲಿನ ಪ್ರೇಮ ತನ್ಮತೆಯ ಸಾಲನ್ನು ಅಂದರೆ ಈ ಸಾಲು ಕೇವಲ ಭಟ್ಟಿ ಇಳಿಸುವಿಕೆಯಾಗಿರದೆ ಆ ಪತ್ರದಲ್ಲಿ ಆ ಪ್ರೇಮ ತೀವ್ರತೆ ಇದ್ದು ಎದುರಿಗೆ ಸಿಕ್ಕಾಗ ಆ ಪ್ರೇಮ ತೀವ್ರತೆ ನಿಮ್ಮ ಕಂಗಳಲ್ಲಿ ಪ್ರತಿಫಲಿಸುತ್ತಿದರೆ "ಆಕೆ ಪ್ರೀತಿಸಲು ನಾನೊಲ್ಲೆ ಎಂದರು ನಿಮ್ಮನ್ನು ಮುಂದಿನ ಏಳು ಏಳು ಜನ್ಮಕ್ಕೂ ದ್ವೇಷಿಸಲಾರಳು ಅಲ್ಲವೇ"...…
ನಿಮ್ಮ
ಕಾರ್ತಿಕ್ ಎಸ್ ಬಾಪಟ್
Picture Courtesy : Saregama

No comments:
Post a Comment