Wednesday, December 15, 2021

ಕಂಡಲ್ಲಿ ಗುಂಡಿಕ್ಕಿ ಎಂಬ ಬ್ರಿಟೀಷರ ಆದೇಶವನ್ನು ಧಿಕ್ಕರಿಸಿ ಕರ್ನಾಟಕದ  ನಲವತ್ತು ಹಳ್ಳಿಗಳನ್ನು ಸ್ವತಂತ್ರ ಭಾರತವೆಂದು ಘೋಷಿಸಿದ ಕನ್ನಡದ ಕಟ್ಟಾಳು  ಹಾರನಹಳ್ಳಿ ರಾಮಸ್ವಾಮಿಯವರು . 

ಆಗಸ್ಟ್ 8 1942 ನೇ ಇಸವಿ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾಗಿತ್ತು , ಎಲ್ಲೆಲ್ಲೂ ಮಾಡು ಇಲ್ಲವೇ ಮಡಿ ಎಂಬಂತೆ ಯುವ ಸಮೂಹ ಬ್ರಿಟೀಷರ ವಿರುದ್ಧ ತಿರುಗಿಬಿದ್ದಿತ್ತು , ಮಹಾತ್ಮಾ ಗಾಂಧೀಜಿ ಅವರ ಪ್ರಭಾವ ಎಲ್ಲೆಲ್ಲೂ ಹಬ್ಬಿತ್ತು, ಸಾವಿರಾರು ಯುವಕರು ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದರು,ಕ್ರಾಂತಿಕಾರಿ ಯುವ ನಾಯಕರಗಿದ್ದ ಜಯಪ್ರಕಾಶ ನಾರಾಯಣ, ಅಶೋಕ ಮೆಹ್ತಾ , ಅಚ್ಚುತ ಪಟವರ್ಧನ್ ದೇಶದ ನಾನಾ ಭಾಗಗಳಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದರು, ಇತ್ತ ಹಾರನಹಳ್ಳಿ ರಾಮಸ್ವಾಮಿ ಅವರು ಕರ್ನಾಟಕದಲ್ಲಿ ಹೋರಾಟದ ಮುಂದಾಳತ್ವವನ್ನು ವಹಿಸಿದ್ದರು.

ಅದು ಹಾಸನದ ಮಲೆನಾಡಿನ ದಟ್ಟಾರಣ್ಯ ಪ್ರದೇಶ ಆ ಪ್ರದೇಶಕ್ಕೆ ಸೇರಿದ ನಲವತ್ತು ಹಳ್ಳಿಗಳನ್ನು ಸ್ವತಂತ್ರ ಭಾರತ ಎಂದು ಘೋಷಿಸಿ ಹಾರನಹಳ್ಳಿ ರಾಮಸ್ವಾಮಿಗಳು ಹೋರಾಟಕ್ಕೆ ಧುಮುಕಿಯೇ ಬಿಟ್ಟರು , ಆ ನಲವತ್ತು ಹಳ್ಳಿಗಳು ಬ್ರಿಟಿಷರಿಗೆ ಕಂದಾಯ ಕೊಡುವಂತಿಲ್ಲ ಎಂದು ಘೋಷಿಸಿದರು , ಯಾವುದೇ ಬ್ರಿಟಿಷ್ ಅಧಿಕಾರಿಗಳು ಹಾಗು ನೌಕರರು ಆ ನಾಲ್ಕು ಹಳ್ಳಿಗೆ ಕಾಲಿಡುವಂತಿಲ್ಲ ಎಂದು ತಾಕೀತು ಮಾಡಿ ಹಳ್ಳಿ ಹಳ್ಳಿಗಳಲ್ಲಿ ಮಿಂಚಿನ ಸಂಚಾರ ಮಾಡಿ ಜನರನ್ನು ಹುರಿದುಂಬಿಸುತ್ತಿದ್ದರು , ಪೊಲೀಸರಿಗೆ ಚಳ್ಳೆ ಹಣ್ಣನು ತಿನ್ನಿಸಿ ರಾತ್ರಿ ಹೊತ್ತಿನಲ್ಲಿ ಒಂದೂರಿಂದ ಇನ್ನೊಂದೂರಿಗೆ ಪ್ರಯಾಣಿಸುತ್ತಿದ್ದರು , ಇದೆಲ್ಲವನು ಪ್ರತಿಷ್ಠೆಯಾಗಿ ತೆಗೆಂದು ಕೊಂಡ ಬ್ರಿಟಿಷ್ ಸರ್ಕಾರ , ಇವರನ್ನು "ಕಂಡಲ್ಲಿ ಗುಂಡಿಕ್ಕಿ" ಎಂಬ ಆದೇಶ ಹೊರಡಿಸಿತು , ಮೀಸಲು ಪಡೆ ಪೊಲೀಸರು ಹಳ್ಳಿ ಹಳ್ಳಿಗೆ ರಾಮಸ್ವಾಮಿಗಳನ್ನು ಹುಡುಕುತ್ತ ಸಾಗಿದ್ದರು , ರಾಮಸ್ವಾಮಿಗಳು ಯಾವ ಕಾರಣಕ್ಕೂ ಅಧೀರರಾಗಲಿಲ್ಲ , ಎರಡು ಮೂರು ಕಡೆ ಗೋಲಿಬಾರ್ ಕೂಡ ನಡೆಯಿತು ಹಾಗು ರಾಮಸ್ವಾಮಿ ಗಳು ಹಲವು ಪ್ರತಿರೋಧವನ್ನು ಒಡ್ಡಿದರು , ಆದರೆ ಒಂದು ದಿನ ಕಾಡಿನ ದಾರಿಯಲ್ಲಿ ಉತ್ತರ ಕರ್ನಾಟಕದ ಕಡೆಗೆ  ನಡೆದು ಹೋಗುತ್ತಿದಾಗ ಬಾಣಾವರದ ಕಡೆಗೆ ಹೋಗುತಿದ್ದ ಗಾಡಿಯೊಂದನ್ನು ನಿಲ್ಲಿಸಿ ಏರಿದರು , ಆದರೆ ಆ ಗಾಡಿ ತುಂಬಾ ಇದ್ದದ್ದು ಪೊಲೀಸರೇ ಆದರೂ ಕಂಗೆಡದ ರಾಮಸ್ವಾಮಿ ಗಳು ಭಾರತ ಮಾತ ಕಿ ಜೈ ಎಂದು ಬಾನೆತ್ತರಕ್ಕೆ ಕೂಗುವಂತೆ ಹೇಳಿದರಂತೆ , ಪೊಲೀಸರು ಒಮ್ಮೆ ಧಿಗ್ಬ್ರಾಂತರಾದರು ಆದರೆ ಒಬ್ಬ ದೇಶಭಕ್ತನನ್ನು ಬಂಧಿಸಲು ಒಂದಿಡೀ ಬಸ್ಸಿನಲ್ಲಿ ಬಂದ ಪೊಲೀಸರು ಯಶಸ್ವಿಯಾದರು , ಸರಿ ಸುಮಾರು ಮೂರರಿಂದ ನಾಲ್ಕು ತಿಂಗಳ ಕಾಲ ಸೆಂಟ್ರಲ್ ಜೈಲ್ ನಲ್ಲಿ ಸೆರೆವಾಸ ಕೂಡ ಅನುಭವಿಸಿದರು, ಇದು ಸ್ವತಂತ್ರ ಪೂರ್ವದ ಸಂಗತಿ ಈಗ ನೀವೇ ಹೇಳಿ ನಿನ್ನೆಯಿಂದ ರಾಮಸ್ವಾಮಿಗಳಿಗೆ ಪ್ರಭುತ್ವವನ್ನು ಎದರು ಹಾಕಿಕೊಳ್ಳುವ ಧೈರ್ಯವಿರಲಿಲ್ಲ  ಹಾಗೆ ಹೀಗೆ ಎಂದು ಪುಂಖಾನುಪುಂಖವಾಗಿ ಹರಿಯ ಬಿಡುತ್ತಿರುವ ಪುಕಾರುಗಳಿಗೆ ಏನೆನ್ನಬೇಕೆಂದು.

ಅದಿರಲಿ ಸ್ವಾತಂತ್ರ ನಂತರ ಇಡೀ ದೇಶವೇ ತುರ್ತು ಪರಿಸ್ಥಿತಿಯ ಹೊಡೆತಕ್ಕೆ ನಲುಗಿರುವಾಗ  ಲಕ್ಷಾಂತರ ಜನರನ್ನು ಸೆರೆವಾಸಕ್ಕೆ ತಳ್ಳಿತ್ತು ಆಗ  ಜೆ ಪಿ , ಕೃಪಲಾನಿ ಇವರ ನೇತೃತ್ವದಲ್ಲಿ  ಇಂದಿರಾ ಸರ್ಕಾರದ ವಿರುದ್ಧ ಬಹಳ ದೊಡ್ಡ ಆಂದೋಲನಗಳು ನಡೆದವು , ರಾಮಸ್ವಾಮಿಗಳು ಕೂಡ ಈ ನಡೆಯನ್ನು ಮೌನವಾಗಿದ್ದೆ  ವಿರೋಧಿಸಿದ್ದಲ್ಲದೆ ಮತ್ತೊಮ್ಮೆ ಪ್ರಭುತ್ವವನ್ನು ಎದರು ಹಾಕಿಕೊಂಡು (ಅಂದರೆ ಇಂದಿರಾಗಾಂಧಿ ಯವರನ್ನು) ಆ ದಿನಗಳಲ್ಲಿ  ಹಾಸನ  ಹಾಗು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆ ಪಕ್ಷ ಈ ಪಕ್ಷ ಎಂಬ ಗೋಜಿಲ್ಲದೆ ಯಾರ ಯಾರನ್ನು ತುರ್ತು ಪರಿಸ್ಥಿತಿಯ ನೆಪವೊಡ್ಡಿ ಬಂಧಿಸಲಾಗಿತ್ತೋ ಅವರೆಲ್ಲರನ್ನು ಕೋರ್ಟಿನ ಮೂಲಕ ಬಿಡಿಸುವ ಕೈoಕರ್ಯಕ್ಕೆ ಕೈ ಜೋಡಿಸಿದ್ದರು , ಅದರಲ್ಲಿ ಆರ್ ಎಸ್ ಎಸ್ , ಜನ ಸಂಘದ ಕಾರ್ಯಕರ್ತರು ಮುಂಚೂಣಿಯಲ್ಲಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸತ್ಯ, ಈಗ ನೀವೇ ಹೇಳಿ ರಾಮಸ್ವಾಮಿಗಳ ವ್ಯಕ್ತಿತ್ವ ಎಂತಹದು ಎಂದು , ಆದ್ದರಿಂದ ಇಂತಹ   ಮಹಾನ್ ಮುತ್ಸದ್ದಿ ನಾಯಕನ ವಿರುದ್ಧ ಅದ್ಯಾರೋ ಇತಿಹಾಸದ ಅರಿವಿಲ್ಲದೆ ರಾಮಸ್ವಾಮಿವರ ಕೊಡುಗೆಯೇನು ಎಂದು ಪ್ರಶ್ನೆ ಮಾಡುವವರಿಗೆ ಉದಾಸೀನವೇ ಮದ್ದು  .

ಕಾರ್ತಿಕ್  ಬಾಪಟ್.


No comments:

Post a Comment