Tuesday, May 21, 2024

 ಮೈಕ್ರೋಸಾಫ್ಟ್  ಮೇಲೇಕೆ ಓಲಾ ಒಡೆಯನ  ರೋಷಾವೇಶ ? - ಕಾರ್ತಿಕ್ ಎಸ್ ಬಾಪಟ್

ಬಹುಶಃ ನಗರ ಪ್ರದೇಶಗಳಲ್ಲಿ ಅದರಲ್ಲೂ ಬೆಂಗಳೂರು , ಮುಂಬೈ , ಚೆನ್ನೈ , ದೆಹಲಿ , ಹೈದೆರಾಬಾದ್  ಇಂತಹ  ಮಹಾನಗರಗಳಲ್ಲಿ  ಓಲಾ ಹೆಸರನ್ನು ಕೇಳದವರು ಹಾಗು ಒಳ ಟ್ಯಾಕ್ಸಿ ಯನ್ನು ಬಳಸದವರೇ  ಇಲ್ಲ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ  ಓಲಾ ನಮ್ಮೆಲ್ಲರ  ದೈನಂದಿನ ಜೀವನದ ಭಾಗವೇ ಆಗಿ ಹೋಗಿದೆ. ಅಂತಹ ಓಲಾ ಸಂಸ್ಥೆಯ ಒಡೆಯ ಭಾವಿಶ್ ಅಗರ್‌ವಾಲ್ ಇತ್ತೀಚೆಗೆ ಮೈಕ್ರೋಸಾಫ್ಟ್ ನ ಅಂಗ ಸಂಸ್ಥೆ (Linkedin) ಲಿಂಕ್ಡ್‌ಇನ್ ಸಂಸ್ಥೆಯ ಮೇಲೆ ಹರಿ ಹಾಯ್ದಿದ್ದಾರೆ.  ಲಿಂಕ್ಡ್‌ಇನ್ ಎಂಬುದು ಫೇಸ್ ಬುಕ್ ಹಾಗು ಇನ್ಸ್ಟಾಗ್ರಾಮ್ ಗಳಂತೆಯೇ ಇರುವ ಕಾರ್ಪೊರೇಟ್  ಸೋಶಿಯಲ್ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಆದರೆ ಇದು ಕೇವಲ ವೃತ್ತಿಪರ ನೆಟ್‌ವರ್ಕಿಂಗ್ ಉದ್ದೇಶಕ್ಕೆ ಮಾತ್ರ ಬಳಸುವ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್, ಅಂದರೆ ಈ ನೆಟ್ವರ್ಕಿಂಗ್ ವೇದಿಕೆಯಲ್ಲಿ ಸಂಸ್ಥೆಯ ಅಥವಾ ವ್ಯಕ್ತಿಯ ಶಿಕ್ಷಣ, ವೃತ್ತಿಪರ ಅನುಭವ ಹಾಗು ಕೌಶಲ್ಯವನ್ನು ಪರಿಚಯಿಸಿಕೊಳ್ಳುವುದು ತನ್ಮೂಲಕ ಆ ವೇದಿಕೆಯನ್ನು ಹೆಚ್ಚಿನ ವೃತ್ತಿಪರ ಅವಕಾಶಕ್ಕಾಗಿ ಬಳಸಿಕೊಳ್ಳುವುದು  ಇದರ ಉದ್ದೇಶ, ಹಾಗಾದರೆ ಇಲ್ಲಿ ನಡೆದದ್ದೇನು ಓಲಾ ಒಡೆಯ ಭಾವೀಶ್ ಅಗರವಾಲ್ ಲಿಂಕ್ಡ್‌ಇನ್ ಸಂಸ್ಥೆಯ ಮೇಲೆ ಸಿ ಕಿಡಿ ಕಾರಿದ್ದೇಕೆ? 

ನಡೆದಿದ್ದಿಷ್ಟೇ ಭಾವೀಶ್ ತನ್ನ ಪರಿಚಯವನ್ನು  ಲಿಂಕ್ಡ್‌ಇನ್ ವೇದಿಕೆಯಲ್ಲಿ ಇಂಗ್ಲಿಷ್ನಲ್ಲಿ  ಬರೆದು ಪೋಸ್ಟ್ ಮಾಡಿದ್ದಾರೆ,  ಆದರೆ  Linkedin ನ AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ )  ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬಳಸುವ  ಸರ್ವನಾಮದ ಬದಲಾಗಿ Linkedin ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಹಾಯದಿಂದ  ಸಾಮಾನ್ಯವಾಗಿ ರೂಡಿಯಲ್ಲಿ ಬಳಸುವ  ಸರ್ವನಾಮದ ಪದವನ್ನು ಉಪಯೋಗಿಸದೆ ತಾನೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಹಾಯದಿಂದ  ರೂಢಿಗೆ ವಿರುದ್ಧವಾದ  ಸರ್ವ ನಾಮವನ್ನು ಉಪಯೋಗಿಸಿದೆ ಆಗ ಈ ಕ್ರಮವನ್ನು ಪ್ರಶ್ನಿಸಿ ಭಾವೀಶ್ ಮತ್ತೊಂದು ಪೋಸ್ಟ್ ಅನ್ನು ಲಿಂಕ್ಡ್‌ಇನ್ ನಲ್ಲಿ ಹಾಕಿದಾಗ  ಯಾವುದೇ ಸೂಚನೆ ನೀಡದೆ ಆ ಪೋಸ್ಟ್ ಅನ್ನು ಲಿಂಕ್ಡ್‌ಇನ್ ಅಳಿಸಿ ಹಾಕಿದೆ. ಭಾವೀಶ್ ತಾನೇ ಹೇಳಿದಂತೆ  ಬರೆದದ್ದು ಭಾವೀಶ್ ಕಂಪ್ಲೀಟೆಡ್  "his"  ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಫ್ರಮ್ ಐಐಟಿ ಎಂದು  ಆದರೆ ಲಿಂಕ್ಡ್‌ಇನ್ ತನ್ನ AI ಮೂಲಕ ಈ ವಾಕ್ಯವನ್ನು ಭಾವೀಶ್ ಕಂಪ್ಲೀಟೆಡ್ "their "  ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಫ್ರಮ್ ಐಐಟಿ ಎಂದು ಬದಲಾಯಿಸಿತು. ಇಲ್ಲಿ AI his ನ ಬದಲಾಗಿ their  ಎಂಬ ಸರ್ವನಾಮದ (pronoun ) ಪ್ರಯೋಗ ಮಾಡಿದೆ ಒಂದು  ಉದಾಹರಣೆ ಮೂಲಕ ಹೇಳುವುದಾದರೆ:  ರವೀಶ್ ಒಬ್ಬ ವೈದ್ಯ ಆತ/ಅವನು  ವಿಜಯನಗರದಲ್ಲಿ ವಾಸಿಸುತ್ತಾನೆ ಇಲ್ಲಿ ಆತ/ಅವನು ಎಂಬುದು ಸರ್ವನಾಮ ಆದರೆ ಆತ/ಅವನು  ಎಂಬ ಜಾಗದಲ್ಲಿ ಅವರು  ಎಂದು ಪ್ರಯೋಗಿಸಿದರೆ  ಅದು ಕನ್ನಡಲ್ಲಿ ಸರಿಯಾದ ಅರ್ಥವನ್ನು ಸೂಚಿಸುತ್ತದೆ ಆದರೆ ಇಂಗ್ಲಿಷ್ ಭಾಷೆಯಲ್ಲಿ ಆತ ಎಂಬ ಜಾಗದಲ್ಲಿ he ಎಂದು ಪ್ರಯೋಗಿಸಬೇಕೇ ಹೊರತು them /they (ಅವರು) ಎಂದು ನಾವು ಪ್ರಯೋಗಿಸುವುದಿಲ್ಲ. ಆದರೆ ಇತ್ತೀಚೆಗೆ inclusiveness ನ ಕಾರಣ ಕೊಟ್ಟು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ  ಆ ವ್ಯಕ್ತಿಯು ಪುರುಷನೋ ಮಹಿಳೆಯೋ ಅಥವಾ  ತೃತೀಯ ಲಿಂಗಿಯೋ ಎಂಬ ಮಾಹಿತಿ ಇಲ್ಲದ ಸಂಧರ್ಭದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಸಹಾಯ ಪಡೆದು  ಮೊದಲೇ ನಿರ್ದೇಶಿತ ಸರ್ವನಾಮವನ್ನು ಬಳಸುತ್ತದೆ. ಇಲ್ಲಿ ಆಗಿದ್ದು ಅದೇ  ಆದರೆ ಭಾವೀಶ್ ವಾದ  ಲಿಂಗ ಸಮಾನತೆಯ ನೆಪವೊಡ್ಡಿ  ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು  ನಮ್ಮ  ನೆಲದ ಕಟ್ಟು ಪಾಡುಗಳನ್ನು ಬದಿಗೊತ್ತಿ ನಮಗೆ ಬೇಕೋ ಬೇಡವೋ ಜನರ ಮೇಲೆ ಆ ದೇಶದ ನಿಲುವನ್ನು, ಅಭ್ಯಾಸವನ್ನು ಅಥವಾ ಆ ನೆಲದ ಕಾನೂನಿನ ನಿಲುವನ್ನೇ   ಸಮರ್ಥಿಸುವಂತೆ ನಮ್ಮ ಮೇಲೆ ನಿಬಂಧನೆಗಳನ್ನು   ಹೇರುತ್ತಿವೆ ಆದ್ದರಿಂದ ಇದು wokeism ಅಲ್ಲದೆ ಇನ್ನೇನು  ಎಂಬ ಗಂಭೀರ ಆರೋಪವನ್ನು ಮಾಡುತ್ತಾರೆ. ಈ ಆರೋಪ   ಕಾರ್ಪೊರೇಟ್ ಲೋಕದಲ್ಲಿ ಭಾವೀಶ್ ಪರ ಹಾಗು ವಿರೋಧವಾಗಿ ಒಂದು ಚರ್ಚೆಯನ್ನೇ ಹುಟ್ಟುಹಾಕಿದೆ..

 

ಅದೇನೇ ಇರಲಿ ಈ ಸಮಸ್ಯೆಯಲ್ಲಿ wokeism ನೊಂದಿಗೆ ಚರ್ಚೆಯಾಗಬೇಕಿರುವ ವಿಷಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್  (AI ) ಗಳ ಕಾರ್ಯಕ್ಷಮತೆಯ ಬಗ್ಗೆ ಇಲ್ಲಿ Linkedin ನ AI ಒಂದು ಹೆಜ್ಜೆ ಮುಂದೆ ಹೋಗಿ ಭಾವೀಶ್ ಬಗ್ಗೆ ಇರುವ ಮಾಹಿತಿಯನ್ನು  ಹೆಚ್ಚಿನ ಪರಿಶೀಲನೆ ಮಾಡಿ ಸೆಲ್ಫ್ ಲರ್ನಿಂಗ್ (ಸ್ವಯಂ ಕಲಿಕೆ) ಮಾಡುವದರ ಮೂಲಕ  ಭಾವೀಶ್ ಅಗರ್ವಾಲ ನನ್ನು  them ಎಂದು ಸಂಬೋಧಿಸುವ ಬದಲು he/his   ಎಂದು ಸಂಬೋಧಿಸಬೇಕಿತ್ತು ಎಂದು ಕೆಲವರ ವಾದ,  ಆದರೆ   ಇದು AI ವೈಫಲ್ಯ ಎಂದು ಮೇಲ್ನೋಟಕ್ಕೆ ಕಂಡರೂ ಈ AI ಗಳಲ್ಲಿ ಪ್ರೋಗ್ರಾಮಿಂಗ್ ಮಾಡಿದವರು ಅಮೆರಿಕನ್ನರು ಹಾಗು ಸಹಜವಾಗಿ ಎಂಬಂತೆ ಒಂದು ಪ್ರದೇಶದ ಜನರ ಆಚಾರ ವಿಚಾರಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಅಮೇರಿಕಾ ದ ಪರಿಸರದಲ್ಲಿ ಯಾವುದು ಒಪ್ಪಿತವೋ ಅದನ್ನೇ  ನಾವು ಸಹ ಒಪ್ಪಿಕೊಳ್ಳಬೇಕು ಎಂಬ ಧೋರಣೆ ಇರುವುದರಿಂದಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗೆ ಸೆಲ್ಫ್ ಲರ್ನಿಂಗ್ ಕೆಪ್ಯಾಸಿಟಿ ಇದ್ದರು ಹೀಗೆಯೇ ಮಾಡಬೇಕೆಂಬ ಪೂರ್ವ ನಿರ್ದೇಶಿತ ಪ್ರೋಗ್ರಾಮಿಂಗ್ ಮಾಡಿರುವದರಿಂದ   AI ನ ತಪ್ಪೆಂದು ಗೋಚರಿಸಿದರೂ ಇದು ಅಮೆರಿಕಾದ ಪಡಸಾಲೆಯಲ್ಲಿ ಪುಟಿದೆದ್ದ  woke ವಾದ ಅಥವಾ  wokeisam ನ ಬಳುವಳಿ  ಎಂಬುದು ಇನ್ನೊಂದು  ವರ್ಗದ  ವಾದ, ಹಾಗಾದರೆ   ವೋಕಿಸಂ ಎಂದರೇನು ?  ವೋಕಿಸಂ  ಎಂದರೆ  ಇದು ಹೀಗೆ ಎಂದು ಅಷ್ಟು ಸುಲಭವಾಗಿ ಉತ್ತರ ಕಂಡುಕೊಳ್ಳುವುದು ಕಷ್ಟ ವೋಕಿಸಂ ಕನ್ನಡದಲ್ಲಿ  ತರ್ಜುಮೆ ಮಾಡಿದರೆ  ಬಹುಷಃ ಜಾಗ್ರತವಾದ ಎಂದು ಹೇಳಬಹುದೇನೋ , ಒಹೋ ಜಾಗ್ರತವಾದ ವಾದರೆ ಒಳ್ಳೆಯದೇ ಅಲ್ಲವೇ ತಪ್ಪೇನು ಎಂದು ಕೇಳಬಹುದು ಆದರೆ ಈ ಸಿದ್ದಾಂತ ಒಪ್ಪುವವರು ಈ ಸಿದ್ದಾಂತವನ್ನು  ಜಾಗ್ರತವಾದ ಪದದಷ್ಟೇ ಸರಳ ವಾಗಿ  ಒಪ್ಪಿಕೊಂಡಿದ್ದರೆ ಒಳ್ಳೆಯದಿತ್ತು ಆದರೆ ಆಗುತ್ತಿರುವುದೇ ಬೇರೆ ಆದರೆ ವೋಕಿಸಂ ಪರಿಧಿ ಕಾಲಕ್ಕೆ ತಕ್ಕಂತೆ ಹಳೆಯ ವಿಷಯಗಳನ್ನು ಬಿಟ್ಟು ಹೊಸ ಹೊಸ ವಿಷಯಗಳನ್ನು ಒಳಗೊಳ್ಳುತ್ತ ಹೋಗುತ್ತಿದೆ   ಆದ್ದರಿಂದ  ವೋಕಿಸಂ ಎಂದರೇನು ಎಂದರೆ  ನೀವು ವೋಕಿಸಂ ಎಂದರೇನು ಎಂದು ಯಾರನ್ನು ಕೇಳುತ್ತಿರೋ ಅವರ ಮೇಲೆ ಹಾಗು ಅವರ ವ್ಯಖ್ಯಾನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು  ಕೆಲವರು ವೋಕಿಸಂ ಈಸ್ ನಥಿಂಗ್ ಬಟ್ ನ್ಯೂ ವೈನ್ ಇನ್ ಓಲ್ಡ್ ಬಾಟಲ್ ಅಂದರೆ  ವೋಕಿಸಂ ಎನ್ನುವುದು ಕಮ್ಯುನಿಸ್ಟ್ ಹಾಗು ಮಾರ್ಕ್ಸಿಸಂ ಸಿದ್ದಾಂತವೇ ಆದರೆ ಪಾತ್ರದಾರಿಗಳು ಮಾತ್ರ ಬದಲಾಗಿದ್ದಾರೆ , ಹಾಗು ಈ ಸಿದ್ದಂತಾ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತ ಹೋಗುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ  ವಿಚಿತ್ರವೆಂದರೆ ಕೆಲವೊಮ್ಮೆ ನೈಸರ್ಗಿಕವಾಗಿ ಹಾಗು ವ್ಯದ್ಯಕೀಯವಾಗಿ ಒಪ್ಪಿತ ವಿಧಿ ವಿಧಾನಗಳನ್ನು ಸಹ ಈ ವಾದ  ಧಿಕ್ಕರಿಸುತ್ತದೆ , ಇಂದು ಅಮೇರಿಕಾ ದ ಯೂನಿವೆರ್ಸಿಟಿಗಳಲ್ಲಿ ಹಮಾಸ್ ಪರವಾಗಿ ವಿದ್ಯಾರ್ಥಿಗಳು ಪ್ಲೇ ಕಾರ್ಡ್ ಹಿಡಿದು ಇಸ್ರಾಯ್ಲ್ ವಿರುದ್ಧ ಘೋಷಣೆ ಕೂಗುತ್ತಿದ್ದ್ದಾರೆಂದರೆ ಅದು ವೋಕಿಸಂ ನ ಕೊಡುಗೆ ಎಂದರೆ ತಪ್ಪಾಗುವುದಿಲ್ಲ ಆದ್ದರಿಂದ wokeism ಬಗ್ಗೆ ಹಾಗು ಇದರ ಸರಿ ತಪ್ಪುಗಳ ಬಗ್ಗೆ  ಚರ್ಚೆಗೆ ಕುಳಿತರೆ ಇದು  ಮುಗಿಯದ ವಿಷಯ  ಆದ್ದರಿಂದ ವೋಕಿಸಂ ಹಾಗು AI ಇವೆರಡರೊಟ್ಟಿಗೆ  ಭಾವಿಶ್  ಮೂಲವಾಗಿ ಎತ್ತಿದ ವಿಷಯವನ್ನುಮತ್ತೊಂದು ಮಗ್ಗುಲಿನಿಂದ ಗ್ರಹಿಸಬೇಕು

ಭಾವಿಶ್ ಲಿಂಕ್ಡ್ಇನ್ ಪ್ರಹಸನದಿಂದಾಗಿ ಬೇಸರಗೊಂಡು ತನ್ನ ಓಲಾ ಸಂಸ್ಥೆಯ IT ಇನ್ಫ್ರಾಸ್ಟ್ರಕ್ಚರ್ ಎಲ್ಲ ಸೇವೆಯನ್ನು Microsoft Azure ಕ್ಲೌಡ್ ಪ್ಲಾಟ್ಫಾರ್ಮ್ ನಿಂದ ಹಿಂದೆಗೆದು ತನ್ನದೇ ಸಂಸ್ಥೆಯ "ಕೃತ್ರಿಮ" ಪ್ಲಾಟ್ಫಾರ್ಮ್ ಗೆ ಎಲ್ಲ ಸೇವೆಯನ್ನು ವರ್ಗಾಯಿಸುವದಾಗಿ ಘೋಷಿಸಿದೆ ಅಷ್ಟಲ್ಲದೇ  ಬೇರೆ ಸಂಸ್ಥೆಗಳು   Microsoft azure ಕ್ಲೌಡ್ ಪ್ಲಾಟ್ಫಾರ್ಮ್ ನಿಂದ ತನ್ನ ಕೃತ್ರಿಮ ಪ್ಲಾಟ್ಫಾರ್ಮ್ಗೆ ಸಂಸ್ಥೆಯ   ವ್ಯವಹಾರದ ಡೇಟಾ ಹಾಗು ಅಪ್ಲಿಕೇಶನ್ ಮ್ಯಾನೇಜ್ಮೆಂಟ್ ಅನ್ನು  ವರ್ಗಾಯಿಸುವ ಇಚ್ಛೆ ಇದ್ದಲ್ಲಿ ಸರಿ ಸುಮಾರು ಒಂದು ವರ್ಷಗಳಷ್ಟು ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ , ಬೆಳವಣಿಗೆಯಿಂದಾಗಿ ಮೈಕ್ರೋಸಾಫ್ಟ್ ಸಂಸ್ಥೆಗೆ ಅಂದಾಜು  100 ಕೋಟಿಯಷ್ಟು ನಷ್ಟವಾಗಬಹುದೆಂದು ಊಹಿಸಲಾಗಿದೆ ಆದರೆ  ಮೈಕ್ರೋಸಾಫ್ಟ್ ಅಂತಹ ದೈತ್ಯ  ಸಂಸ್ಥೆಗೆ ಇದ್ಯಾವುದು ದೊಡ್ಡ ವಿಷಯವೇ ಅಲ್ಲ ಏಕೆಂದರೆ ಕೇವಲ ಭಾರತದ ವಹಿವಾಟಿನಿಂದ 2023 ರಲ್ಲಿ ಮೈಕ್ರೋಸಾಫ್ಟ್ ಗಳಿಸಿದ್ದು ಅಂದಾಜು  19230 ಕೋಟಿ ರೂಪಾಯಿಗಳು, ಅಂದರೆ  ಭಾವಿಶ್ ಸುಪ್ತವಾಗಿ ಪ್ರಸ್ತಾಪಿಸಿದ್ದು ವಿಷಯವನ್ನೇ  Information Technology ಕ್ಷೇತ್ರದಲ್ಲಿ ಭಾರತಕ್ಕೆ  ತನ್ನದೇ ಆದ ಸ್ಥಾನಮಾನವಿರುವುದು  ನಿಜ ಆದರೆ ಇವೆಲ್ಲವೂ IT ಸರ್ವಿಸಸ್

ಕ್ಷೇತ್ರದಲ್ಲಿ ಮಾತ್ರ   IT ಪ್ರಾಡಕ್ಟ್ ಕ್ಷೇತ್ರದಲ್ಲಿ ಒಂದೆರಡು ಹೆಸರುಗಳನ್ನೂ ಬಿಟ್ಟರೆ ಬಗೆಯ ಸಾಧನೆಯನ್ನು   ಕ್ಷೇತ್ರದಲ್ಲಿ ಕಾಣ ಸಿಗುವುದಿಲ್ಲ ಉದಾಹರಣೆಗೆ  ಮೈಕ್ರೋಸಾಫ್ಟ್ಫೇಸ್ ಬುಕ್ಗೂಗಲ್ , ಆಪಲ್ ಇಂತಹ ಪ್ರಾಡಕ್ಟ್ ಬೇಸ್ಡ್ ಕಂಪನಿಗಳು ಭಾರತದ ನೆಲದಿಂದ ಉತ್ಪತ್ತಿಯಾಗುತಿಲ್ಲ, ಅರ್ಥವಿಷ್ಟೆ  ಅಮೇರಿಕಾ  ಸಂಶೋಧನೆಗೊಳಪಡಿಸಿ  ಅಭಿವೃದ್ಧಿ ಪಡಿಸಿದ ಟೆಕ್ನಾಲಜಿ ಪ್ಲಾಟ್ಫಾರ್ಮ್ ಗಳ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ ಇನ್ನು  ಸರಳವಾಗಿ ಹೇಳುವುದಾದರೆ ಒಂದು ಮನೆ ಕಟ್ಟಲು ಫೌಂಡೇಶನ್ ಅತ್ಯಗತ್ಯ ಫೌಂಡೇಶನ್ ನಂತರ  ಅದರ ಮೇಲೆ ಇಟ್ಟಿಗೆ ಇಟ್ಟು ಕಟ್ಟಡವನ್ನು ಕಟ್ಟುತ್ತೇವೆ, ಫೌಂಡೇಶನ್ ಅಮೇರಿಕಾ ತಯಾರಿಸಿದರೆ ಅದರ ಮೇಲಿನ ಕಟ್ಟಡವನ್ನು ಮಾತ್ರ ಭಾರತ ತಯಾರಿಸುತ್ತಿದೆ  ಅಂದರೆ ಇಲ್ಲಿ ಟೆಕ್ನಾಲಜಿ ಪ್ಲಾಟ್ಫಾರ್ಮ್ಗಳನ್ನು ಫೌಂಡೇಶನ್ ಗೆ ಹೋಲಿಸಬಹುದು ಅದರ ಮೇಲೆ ಕಟ್ಟುವ ಕಟ್ಟಡ ಅಪ್ಪ್ಲಿಕೇಷನ್ಗಳಿಗೆ ಹೋಲಿಸಬಹುದು.ಇದರ ಅರ್ಥವಿಷ್ಟೆ R & D ಗೆ ಭಾರತ ಹೆಚ್ಚು ಹೆಚ್ಚು ಒತ್ತು  ಕೊಡಬೇಕು ಆ ಮೂಲಕ  knowledge usage ನಿಂದ  knowledge creator ರ ಆಗುವತ್ತ ಭಾರತ  ಹೆಜ್ಜೆ ಇಡಬೇಕು  ಒಂದು ಹಂತದಲ್ಲಿ  ನಮ್ಮ ನೆರೆಯ ರಾಷ್ಟ್ರ ಚೈನಾ  ಮಾಡಿದ್ದೂ ಇದನ್ನೇ ಚೈನಾ  ಪ್ರಾರಂಭದ ದಿನಗಳಲ್ಲಿ  ಭಾರತದಂತೆ ಕೇವಲ manufacture ಹಬ್ ಆಗಿ ತನ್ನನ್ನು ತಾನು ತೊಡಗಿಸಿಕೊಂಡಿತ್ತು ಆದರೆ ಕಾಲ ಕ್ರಮೇಣ ಚೈನಾ ಮ್ಯಾನುಫ್ಯಾಕ್ಚರಿಂಗ್   ಲೇಬರ್ ಹಬ್ ನಿಂದ knowledge ಹಬ್ ಆಗುವದರತ್ತ ತನ್ನೆಲ್ಲ ಪ್ರಯತ್ನವನ್ನು ಕೇಂದ್ರೀಕರಿಸಿ ಇಂದು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎಲ್ಲರೂ ಬೆರಗಾಗುವಂತೆ ಎದ್ದು ಕುಳಿತಿದೆ, ಈ ನಿಟ್ಟಿನಲ್ಲಿ ಭಾವಿಶ್ ನಿರ್ಣಯ ನಿರ್ಣಾಯಕವಾದದ್ದೆಂದೇ ಹೇಳಬಹುದು, ಇದುವರೆಗೆ ಭಾವಿಶ್ ನಡೆದು ಬಂದ ಹಾದಿ ನೋಡಿದರೆ ಇದು ಅಸಾಧ್ಯವೂ ಅಲ್ಲ ..

ಭಾವಿಶ್ IIT ಯಲ್ಲಿ ವಿದ್ಯಾಭ್ಯಾಸ ಮುಗಿಸಿ ಎರಡು ವರ್ಷಗಳ ಕಾಲ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿಯೇ ಕಾರ್ಯನಿರ್ವಹಿಸಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಮೈಕ್ರೋಸಾಫ್ಟ್ ಕೆಲಸವನ್ನು ಬಿಟ್ಟ ಯುವಕ   ಕಟ್ಟಿದ್ದು ಓಲಾ ಎಂಬ  ಬಿಲಿಯನ್ ಡಾಲರ್  ಕಂಪನಿಯನ್ನು , ಹಾಗೆ ನೋಡಿದರೆ ಓಲಾ ಹುಟ್ಟಿದ್ದೇ ಒಂದು ಇಂಟೆರೆಸ್ಟಿಂಗ್ ಕಹಾನಿ ಭಾವಿಶ್ ಬೆಂಗಳೂರಿನಿಂದ ಬಂಡೀಪುರಕ್ಕೆ ಹೋಗಬೇಕೆಂದು ಟ್ರಾವೆಲ್ಸ್ ಅವರೊಂದಿಗೆ ಹೋಗುತ್ತಿದ್ದಾಗ ವಾಗ್ವದವಾಗಿ ಕಾರಿನ ಮಾಲೀಕ ಮಾರ್ಗ ಮಧ್ಯದಲ್ಲಿ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾನೆ ಹಾಗು ಮಾರ್ಗ ಮಧ್ಯದಲ್ಲೇ ಭಾವಿಶ್ ನನ್ನು ಬಿಟ್ಟು ಹೋಗುತ್ತಾನೆ , ಹೀಗೆ ಅಂದು  ಬಂಡೀಪುರದ ಪ್ರವಾಸದ  ಆಸೆಗೆ ತಣ್ಣೀರು ಎರೆಚಿದಾಗಲೇ   ಹುಟ್ಟಿದ್ದು ಓಲಾ ಕ್ಯಾಬ್ಸ್ ಐಡಿಯಾ , ನಂತರ ಭಾವಿಶ್ ಮತ್ತು ಅಂಕಿತ್ ಭಾಟಿಯಾ ಸ್ನೇಹಿತರಿಬ್ಬರು  ಸೇರಿ ಓಲಾ ಕ್ಯಾಬ್ಸ್ ಪ್ರಾರಂಭಿಸಿದರು ಈಗ ಅದು ಇತಿಹಾಸ. ಇದೀಗ ಮೂರು ವರುಷಗಳ ಹಿಂದೆ ಓಲಾ  ಎಲೆಕ್ಟ್ರಿಕ್  ಕಾರ್ಖಾನೆಯನ್ನು ಸ್ಥಾಪಿಸಿದ್ದು    ಖಾರ್ಕಾನೆಯಲ್ಲಿ   ಡೆಸೈನಿನಿಂಗ್ ನಿಂದ ಹಿಡಿದು ಬೈಕ್ ಅಸ್ಸೆಂಬಲ್ ವರೆಗೆ 100 ಕ್ಕೆ 100 ಪ್ರತಿಶತ ಹೆಣ್ಣು ಮಕ್ಕಳೇ ಕೆಲಸ ನಿರ್ವಹಿಸುತ್ತಿರುವುದು  ಮತ್ತೊಂದು ಹೆಮ್ಮೆಯ ಸಂಗತಿ  ಮುಂದಿನ ದಿನಗಳಲ್ಲಿ ಓಲಾ  20000 ಕ್ಕೂ ಹೆಚ್ಚು ಉದ್ಯೋಗಾವಕಾಶವನ್ನು ಸೃಷ್ಟಿ ಮಾಡಲಿದೆಈಗಾಗಲೇ 5000 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಭಾವಿಶ್ ಓಲಾ ಕೃತ್ರಿಮ್ ಎಂಬ ಕನಸನ್ನು ಬೆನ್ನೇರಿ ಹೊರಟಿದ್ದಾರೆ ಕೆಲವರು ಒಂದೇ ವಾರದಲ್ಲಿ Microsoft Azure cloud  platform  ನಿಂದ ಓಲಾ Krutrim cloud   ಪ್ಲಾಟ್ಫಾರ್ಮ್ ಗೆ ಡೇಟಾ ಮೂವ್ ಮಾಡುವುದು ಹುಡುಗಾಟವಲ್ಲ ಇದೆಲ್ಲ ಪೂರ್ವನಿರ್ಧಾರಿತ ಪಬ್ಲಿಸಿಟಿ ಸ್ಟಂಟ್ ಎಂದು ಮಾತನಾಡುತ್ತಿದ್ದಾರೆ. ಪಬ್ಲಿಸಿಟಿ ಸ್ಟಂಟ್ ಎಂದೇ ಅಂದು ಕೊಂಡರು Microsof Azure , Google Cloud , Amazon AWS , Oracle ಹಾಗು  IBM ನೊಂದಿಗೆ ಪೈಪೋಟಿಗಿಳಿದಿರುವುದು ಸುಳ್ಳಲ್ಲ.

ಕಾರ್ತಿಕ್ ಎಸ್ ಬಾಪಟ್




No comments:

Post a Comment