ಇದು
ಚುನಾವಣೆ ನಡೆದ ರೀತಿ ಹಾಗು ಸಮೀಕ್ಷೆಗಳ ಸಂಗತಿಯಾದರೆ
ಭಾರತದ ರಾಜಕೀಯ ಮತ್ತೆ ವಾಜಪೇಯೀ ಯುಗದತ್ತ ತಿರುಗುತ್ತಿದೆ. ಮೇಲ್ನೋಟಕ್ಕೆ ಮೋದಿ
3.೦ ಸರ್ಕಾರದ ರಚನೆ ಯಾವ ಅಡೆತಡೆಗಳಿಲ್ಲದೆ ರಚನೆಯಾಯಿತು
ಎಂದು ಭಾಸವಾಗುತ್ತಿದೆ ಆದರೆ ಹೀಗೆ ರಚನೆಯಾದ ಸರ್ಕಾರ ಎಷ್ಟು ದಿನ ಬಾಳುವುದು ಎಂಬುದು ಮಾತ್ರ ನಿತೀಶ್
ಬಾಬು ಹಾಗು ಚಂದ್ರಬಾಬು ಇವರಿಬ್ಬರ ಮರ್ಜಿಯ ಮೇಲೆ
ನಿರ್ಧರಿತವಾಗುತ್ತದೆ , ಹಾಗೆ ನೋಡಿದರೆ ಈ ಇಬ್ಬರು ಬಾಬುಗಳಿಗೆ ಸಮ್ಮಿಶ್ರ ಸರ್ಕಾರಗಳು ಮತ್ತು ಅದರ
ಕಾರ್ಯವೈಖರಿ ಯಾವುದು ಹೊಸದಲ್ಲ ಆದರೆ ಮೋದಿಯವರಿಗೆ ಇದು ಹೊಸ ಅಧ್ಯಾಯ , ಕಾರಣವಿಷ್ಟೇ ಗುಜರಾತಿನಿಂದಾದಿಯಾಗಿ ದೆಹಲಿಯವರೆಗೆ ಮೋದಿ ಆಡಳಿತ ನಡೆಸಿದ್ದು ಪರಿಪೂರ್ಣ ಬಹುಮತದಲ್ಲಿ ಆದರೆ ಇದೀಗ ಬೆಳಗಾಗೆದ್ದು ಬಾಬುಗಳಿಗೆ ಹಲೋ
ಹೇಳಬೇಕು ಮೋದಿಜಿ ಬಾಬುಗಳಿಗಿರಲಿ ತಮ್ಮ ಪಕ್ಷದವರಿಗೆ ಹಲೋ ಹೇಳುವುದಿಲ್ಲ , ಎಂಬುದು ಅವರ ಮೇಲಿರುವ
ಅಪವಾದ ಇದು ಸುಳ್ಳೇ ಆಗಿದ್ದರು ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಈ ರೀತಿಯ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತವೆ
ಪ್ರಸ್ತುತ ಸನ್ನಿವೇಶದಲ್ಲಂತೂ ಅದನ್ನು ಬದಲಾಯಿಸುವುದು ಬಲು ಕಷ್ಟ, ಅಷ್ಟಲ್ಲದೇ ಅಟಲ್ ಜಿ ಕಾಲದ ಏನ್ ಡಿ ಏ ಮಿತ್ರ ಪಕ್ಷಗಳಿಗೂ ಈಗಿನ ಏನ್ ಡಿ ಏ ಮಿತ್ರ ಪಕ್ಷಗಳಿಗೂ ಬಹಳಷ್ಟು ವ್ಯತ್ಯಾಸವಿದೆ ಆಗ ಏನಕೇನ ಅಕಾಲಿ ದಳ , ಬಾಳಸಾಹೇಬರ ಶಿವಸೇನಾ ಇವರೆಲ್ಲರೂ ನ್ಯಾಚುರಲ್ ಅಲಯನ್ಸ್ ನಂತೆ ಇದ್ದವರು
ಅಂದರೆ ಸ್ವಾಭಾವಿಕ ಮಿತ್ರರರು ಅವರು ಅಧಿಕಾರ ಇದ್ದರು
ಇಲ್ಲದಿದ್ದರೂ ಜೊತೆಗಾರರಾಗಿದ್ದವರು ಆದರೆ ಇಂದಿನ
ಜೊತೆಗಾರರು ಇ ಡಿ ಅಥವಾ ಇನ್ಯಾವುದೋ ತನಿಖಾ
ಸಂಸ್ಥೆಯ ಹಂಗಿಗೆ ಬೆಸುಗೆ ಗೊಂಡವರು ಬಲವಂತದ ಬೆಸುಗೆಗೆ ಬಿರುಕನ್ನು ತಾಳುವ ಶಕ್ತಿಯಿರುವುದಿಲ್ಲ ಹಾಗು ಬೆಸುಗೆಯ ಮುನ್ನ ಕಬ್ಬಿಣವನ್ನು ಕಾಯಿಸಿದ ಪರಿ ಬಹಳ
ಮುಖ್ಯ ಆ ಜೊತೆಗಾರರಿಗೆ ಆ ನೆನಪು ಮಾಸಿದ್ದರೆ ಚಿಂತೆಯಿಲ್ಲ ಅದೇನಾದರೂ ಮಾಸದೆ ಬೆಸುಗೆಯ ಗಾಯಗಳು ತಾಜಾ
ಇದ್ದರೆ ಏನ್ ಡಿ ಏ ಸರ್ಕಾರ ಹಾಗು ಮೋದಿ ಗ್ಯಾರಂಟೀಗಳು ಅಡ ಕತ್ತರಿಯಲ್ಲಿಸಿಕ್ಕು ಒದ್ದಾಡಲಿವೆ. ಬಾಬುಗಳ
ಮರ್ಜಿಯಲ್ಲಿ ಮೋದಿ ಗ್ಯಾರಂಟೀಗಳು ಮರೆಯಾಗಿ ಕಾಮನ್ ಮಿನಿಮಂ ಗ್ಯಾರಂಟೀಗಳು ತಲೆಯೆತ್ತಲಿವೆ , ಇದಿಷ್ಟೇ
ಆದರೆ ತೊಂದರೆಯಿಲ್ಲ ಇಬ್ಬರು ಬಾಬುಗಳು ಒಳ್ಳೆಯ ಚೌಕಾಸಿ ನಿಪುಣರೆ ಆದ್ದರಿಂದ ಯಾರು ಯಾವ ವಿಷಯದಲ್ಲಿ
ತಗಾದೆ ತೆರೆಯುತ್ತಾರೆ ಎಂದು ಹೇಳುವುದು ಕಷ್ಟ . ಹಿಂದೊಮ್ಮೆ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಚಂದ್ರ
ಬಾಬು ನಾಯ್ಡು ಏನ್ ಡಿ ಏ ಸಂಚಾಲಕರಾಗಿದ್ದ ನೆನಪು ಆಗ ಚಂದ್ರ ಬಾಬು ನಾಯ್ಡು 118 ಬೇಡಿಕೆಗಳನ್ನು ಅಟಲ್
ಜಿ ಮುಂದೆ ಇಟ್ಟಿದ್ದರಂತೆ, ಅದರಲ್ಲಿ 118 ನೆಯ ಬೇಡಿಕೆ ಇನ್ಶೂರೆನ್ಸ್
ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫೀಸ್ ಹೈದೆರಾಬಾದ್ನಲ್ಲೇ ಸ್ಥಾಪನೆಯಾಗಬೇಕೆಂಬ
ಬೇಡಿಕೆಯಾಗಿತ್ತಂತೆ , ಇನ್ಶೂರೆನ್ಸ್ ಕಂಪನಿಗಳ ಆಫೀಸಗಳು ಮುಂಬೈನಲ್ಲಿದ್ದರೆ ಅವುಗಳನ್ನು ನಿಯಂತ್ರಿಸುವ ರೆಗ್ಯುಲೇಟರಿ ಸಂಸ್ಥೆ ಮಾತ್ರ ಹೈದೆರಾಬಾದ್ ನಲ್ಲೆ ಆಗಬೇಕು ಅದಕ್ಕೆ ಕೊಟ್ಟ ಕಾರಣಗಳು ಇಂಟೆರೆಸ್ಟಿಂಗ್
ಇನ್ಶೂರೆನ್ಸ್ ಕಂಪನಿಗಳ ಆಫೀಸರ್ಗಳು ಆಗಾಗ ಹೈದೆರಾಬಾದ್ ಗೆ ಹೋಗಿಬರುವದರಿಂದ ವಿಮಾನ ಯಾನ ಸಂಸ್ಥೆಗಳಿಗೆ ಒಂದಿಷ್ಟು ವ್ಯಪಾರ ಆಗುತ್ತದೆ
ಮತ್ತು ಸಂಬಂಧ ಪಟ್ಟ ವ್ಯಪಾರ ವಹಿವಾಟಿಗೂ ಪ್ರೋತ್ಸಾಹ ದೊರೆಯುತ್ತದೆ , ಹೀಗೆ ಅವರದೇ ವಾದ ಮಂಡಿಸಿದ್ದರು
, ಅಟಲ್ ಜಿ ಆ 118 ಬೇಡಿಕೆಗಳಲ್ಲಿ ಬಾಬುಗರು ನಿಮ್ಮ 118 ನೇ ಬೇಡಿಕೆಗೆ ಒಪ್ಪಿಗೆ ಕೊಟ್ಟಿದ್ದೇವೆ
ಅಂದಿದ್ದರಂತೆ ಆಗ ಚಂದ್ರಬಾಬು ನೂರಾ ಹದಿನೆಂಟು ಬೇಡಿಕೆಗಳಿಗೂ ಅಸ್ತು ಎಂದಿದ್ದಾರೆ ಎಂದೇ ಭಾವಿಸಿದ್ದರಂತೆ,
ಅಂದರೆ ಬದಲಾದ ಸನ್ನಿವೇಶದಲ್ಲಿ ಮಹತ್ತರವಾದ ಖಾತೆಗಳಿಗೆ ಮಿತ್ರ ಪಕ್ಷಗಳು ಬೇಡಿಕೆಯಿಟ್ಟರೆ ಅದರ ಪರಿಣಾಮಗಳು
ಏನಾಗಬಹುದು ಎಂಬುದಕ್ಕೆ ಇದು ನಿದರ್ಶನ.
ಇನ್ನು
ನಿತೀಶ್ ಕುಮಾರ್ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲ, ಇತ್ತೀಚಿನ ದಿನಗಳಲ್ಲಿ ಯುವಕರಿಂದಾದಿಯಾಗಿ ಹಿರಿಯರವರೆಗೂ ಎಲ್ಲರೂ ನಿತೀಶ್ ಕುಮಾರರನ್ನು ಪಲ್ಟು ಚಾಚಾ
, ಜಂಪಿಂಗ್ ಸ್ಟಾರ್ ಎಂದು ಆಡಿಕೊಂಡಿದ್ದೆ ಆಡಿಕೊಂಡಿದ್ದು ಆದರೆ ಇದೀಗ ನೋಡಿ ಜಗತ್ತಿನ
ಅತ್ಯಂತ ಪ್ರಭಾವಿ ನಾಯಕ ಇಂದು ನಿತೀಶ್ ಹಂಗಿನಲ್ಲಿ ಸರ್ಕಾರ ರಚಿಸಬೇಕು. ಸರಿ ಸುಮಾರು ಇಪ್ಪತ್ತು
ವರುಷಗಳಿಂದ ನಿತೀಶ್ ಕುಮಾರ್ ತಾವೇ ಆಡಳಿತ ನಡೆಸುತ್ತಿದ್ದರು ಹಮ್ ಬಿಹಾರ್ ಮೆ ಜಂಗಲ್ ರಾಜ್ ಕೋ ಹಠಾನೆ
ಕೇಲಿಯೆ ಮೈತ್ರಿ ಮಾಡಿ ಕೊಂಡಿದ್ದೇವೆ ಎಂದು ಹೇಳುತ್ತಿರುತ್ತಾರೆ. ಡೆಲ್ಲಿ ಯ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವಾಗ ಏನ್ ಡಿ ಯೆ ಕಾಮನ್ ಮಿನಿಮಂ ಗ್ಯಾರಂಟೀಗಳ ಬಗ್ಗೆ ಮಾತನಾಡಿ ವಿಮಾನ ಹತ್ತಿದೊಡನೆ ಜಾತಿ ಗಣತಿ , ಜೆಪಿ, ಲೋಹಿಯಾ ಹಾಗು
ಸಮಾಜವಾದದ ನೆನಪಾಗಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ
ಬಂದಿಳಿದಾಗ ಇಂಡಿಯಾ ಮೈತ್ರಿಕೂಟಕ್ಕೆ ಚಾಲನೆ ಕೊಟ್ಟು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಪಶ್ಚಾತಾಪದ
ಬೇಗೆಯಲ್ಲಿ ಬೆಂದು ಅವರ ಕಛೇರಿ ತಲುಪುವುದರೊಳಗೆ ಇಂಡಿಯಾ ಕೂಟದ ಶರದ್ ಪವಾರರನ್ನು ಸಂಪರ್ಕಿಸುವ ಸಾಧ್ಯತೆಗಳಿರುತ್ತವೆ,
ಇದೆಲ್ಲದರ ಪರಿಣಾಮವಾಗಿ ಇಷ್ಟವಿದೆಯೋ ಇಲ್ಲವೋ ಮೋದಿಜಿ ಬಾಬುಗಳಿಗೆ ಹಲೋ ಹೇಳುವ ಮೂಲಕ ದಿನಚರಿ ಪ್ರಾರಂಭಿಸಬೇಕು
ಸ್ವಲ್ಪ ಏಮಾರಿದರು ಮತ್ತೊಂದು ಚುನಾವಣೆಗೆ ಸಿದ್ಧರಾಗಬೇಕು ಹಾಗೇನಾದರೂ ಮತ್ತೆ ಚುನಾವಣೆ ಆಗುವುದಾದರೆ
ಮ್ಯಾನ್ ಒಫ್ ದಿ ಮ್ಯಾಚ್ ಎಂದು ಘೋಷಿತರಾದರು ಕಪ್ ಪಡೆದುಕೊಳ್ಳಲಾಗದೆ ಚಡ ಪಡಿಸುತ್ತಿರುವ ಅಖಿಲೇಶ್ ಕಪ್ ಹಾಗು ಮ್ಯಾನ್ ಒಫ್ ದಿ ಮ್ಯಾಚ್ ಎರಡು ನಿಮಗೆ ಬಂದು ಬಿಡಿ ಬೇಗ ಎಂಬ ರೆಕಾರ್ಡೆಡ್ ಮೆಸೇಜ್ಅನ್ನು ಸದಾ ಕೇಳಿಸುವ ಸಂಭವವಿರುತ್ತದೆ.
ಆದ್ದರಿಂದ ಮನ್ ಕಿ ಬಾತ್ ಕೇಳುವ ಮುನ್ನ ಬಾಬುಗಳಿಬ್ಬರ ದಿಲ್ ಕಿ ಬಾತ್
ಕೇಳುವದು ಅನಿವಾರ್ಯ.
ಕಾರ್ತಿಕ್
ಎಸ್ ಬಾಪಟ್.

No comments:
Post a Comment