ಸಾವರ್ಕರ್ ಹೆಸರನ್ನು ಪುಸ್ತಕದಿಂದ ತೆಗೆಯುವ ದುಸ್ಸಾಹಸ ಮಾಡಬಹುದು, ಆದರೆ ಮಸ್ತಕದಿಂದ ತೆಗೆಯಲಾರಿರಿ.
ಕಾರ್ತಿಕ್ ಎಸ್ ಬಾಪಟ್
ಇತ್ತೀಚಿಗೆ
ಚಾತುರ್ಮಾಸದಲ್ಲಿದ್ದ ಗುರುಗಳೊಬ್ಬರು ಭಿಕ್ಷಾ ಸಮರ್ಪಣೆಯ ಸಂಧರ್ಭದಲ್ಲಿ ಕಷ್ಟ ಇದೆ ಸನಾತನಿಗಳು ಒಗ್ಗೂಡುವುದೇ ಕಷ್ಟವಿದೆ ಎಂದು ಹೇಳುತ್ತಾ ಬಾಂಗ್ಲಾ
ದೇಶದಲ್ಲಿ ಅಲ್ಪ ಸಂಖ್ಯಾತ ನಾಗರಿಕರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಗಮನ ಸೆಳೆದರು. ಒಟ್ಟಿನಲ್ಲಿ
ಅವರಾಡಿದ ಅರವತ್ತರಿಂದ ತೊಂಬತ್ತು ನಿಮಿಷಗಳ ಮಾತಿನಲ್ಲಿ ಕಂಡು ಕೊಂಡಿದ್ದು ಸನಾತನ ಧರ್ಮದ ಬಗ್ಗೆ ಅವರಿಗಿದ್ದ ಕಾಳಜಿ
ಹಾಗು ಅದರಲ್ಲೂ ಭಾರತೀಯ ಸಂಸ್ಕೃತಿಯ ತಳಹದಿಯಲ್ಲಿ ಉಗಮಗೊಂಡ ಮತ ಧರ್ಮಗಳ ಸಂಸ್ಕೃತಿಯನ್ನು ಮುಂದಿನ
ದಿನಗಳಲ್ಲಿ ರಕ್ಷಿಸುವವರಾರು ಎಂಬ ಪ್ರಶ್ನೆ. ಗುರುಗಳು ಎತ್ತಿದ್ದ ಪ್ರಶ್ನೆ ಈ ಹೊತ್ತಿನ ಅತ್ಯಂತ ಕಠಿಣ
ಸವಾಲುಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವಂತಹದು ಎಂಬುದರಲ್ಲಿ ಎರಡು ಮಾತಿಲ್ಲ. ಮೇಲ್ನೋಟಕ್ಕೆ ಕೆಲವು
ದೇಶಗಳು ಪ್ರಜಾಪ್ರಭುತ್ವವನ್ನು ಪರಿಪಾಲಿಸುವ ದೇಶಗಳಂತೆ ಕಂಡು ಬಂದರು ಯಾವ ದೇಶ ಯಾವ ಯಾವ ಮತ ಧರ್ಮಗಳ
ಪರ ಒಲವನ್ನು ಹೊಂದಿದ ದೇಶಗಳಾಗಿವೆ ಎಂದು ಯಾವ ಅಂಕಿ ಅಂಶ ಇಲ್ಲದೆ ಹೇಳಬಹುದು, ಆದರೆ ಸನಾತನಿಗಳಿಗೆ
ಅಥವಾ ಸನಾತನ ಧರ್ಮದ ಪರ ಒಲವುಳ್ಳ ಯಾವುದಾದರು ಒಂದು ದೇಶವಿದೆಯೇ ಎಂದು ಹುಡುಕಿದರೆ ಭಾರತವನ್ನು ಬಿಟ್ಟರೆ
ಬೇರಾವ ದೇಶ ಕಾಣುವುದಿಲ್ಲ. ಅದು ಕೂಡ ಸನಾತನಿಗಳು ಭಾರತದಲ್ಲಿ ಬಹುಸಂಖ್ಯಾತರಾಗಿರುವವರೆಗೆ ಮಾತ್ರ ಏಕೆಂದರೆ ಸ್ವತಂತ್ರ ಸಿಕ್ಕ ಸಮಯದಲ್ಲಿ ಇಲ್ಲದ ಸೆಕ್ಯುಲರ್
ಪದವನ್ನು 1976 ರಲ್ಲಿ ಅಂದಿನ ಪ್ರಧಾನಿ ನೆಹರು ಸಂವಿಧಾನದಲ್ಲಿ ಸೇರಿಸಿ ಭಾರತವನ್ನೊಂದು ನಿಧರ್ಮಿ ದೇಶವನ್ನಾಗಿಸಿದ ಕೀರ್ತಿಗೆ ಪಾತ್ರರಾದರು.
ಆದ್ದರಿಂದ ಇಂದು ನಾವು ಕೈ ಕೈ ಹಿಸುಕಿಕೊಂಡರೆ ಪ್ರಯೋಜನವಿಲ್ಲ. ಒಟ್ಟಿನಲ್ಲಿ ಪ್ರಪಂಚದ ಇತಿಹಾಸದಲ್ಲಿಯೇ ಮತಗಳ (ರಿಲಿಜನ್ - ಇಲ್ಲಿ ಧರ್ಮ ಎನ್ನುವುದು
ರಿಲಿಜನ್ ಗೆ ಸಮನಾದ ಪದ ಅಲ್ಲ ಆದ್ದರಿಂದ ಮತ ಎಂದು ಬಳಸಲಾಗಿದೆ ) ಆಧಾರದ ಮೇಲೆ ಪ್ರಾಂತ್ಯವನ್ನು ಇಬ್ಭಾಗ
ಮಾಡಿದರೂ ಹಾಗೆ ಇಬ್ಬಾಗ ಆದ ಮೇಲೆ ಪಾಕಿಸ್ತಾನ ತಾನು ಇಸ್ಲಾಮಿಕ್ ರಿಪಬ್ಲಿಕ್
ಎಂದು ಘೋಷಿಸಿಕೊಂಡಿತು, ಆದರೆ ಭಾರತ ಮಾತ್ರ
ಸರ್ವ ಜನಾಂಗದ ಶಾಂತಿಯ ಜಾತ್ಯತೀತ ದೇಶವಾಯಿತು. ಹಾಗಾದರೆ ಜಾತ್ಯತೀತ ನಿಲುವು ತಪ್ಪೇ ? ತಪ್ಪಲ್ಲ ಸೆಲೆಕ್ಟಿವ್ ಜಾತ್ಯತೀತ ನಿಲುವುಗಳ ಸಮರ್ಥನೆ ತಪ್ಪು. ಬಾಂಗ್ಲಾದೇಶದಲ್ಲಿ
ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಎಷ್ಟು ದೇಶಗಳು ಖಂಡಿಸಿವೆ? ಬೆರಳೆಣಿಕೆಯಷ್ಟು. ದೇಶಗಳು
ಬಿಡಿ ಭಾರತದಲ್ಲಿ ಜಾತ್ಯತೀತತೆಯ ಬಗ್ಗೆ ದಿನಂಪ್ರತಿ
ಉಪನ್ಯಾಸಗಳನ್ನು ಕೊಡುವ ಪಕ್ಷಗಳು ಏನು ಮಾಡುತ್ತಿವೆ? ಪಾಪ ಇಲ್ಲಿನ ಬುದ್ಧಿ ಜೀವಿಗಳು ಯಾರ
ಫಾರ್ಮನಿಗೆ ಕಾಯುತ್ತಿದ್ದರೋ ಏನೋ ಆದರೆ ಅದೇ ಗಾಜ ಪಟ್ಟಿಯ ಜನರ ಮೇಲೆ ಹಲ್ಲೆಗಳಾದ ಸಂಧರ್ಭದಲ್ಲಿ ನಾನಾ
ದೇಶಗಳಲ್ಲಿ ಕ್ಯಾಂಡಲ್ ಮಾರ್ಚ್ಗಳೇನು, ಪಂಜಿನ ಮೆರವಣಿಗೆಯೇನು ಯಾವುದಕ್ಕೂ ಕಡಿಮೆ ಇರಲಿಲ್ಲ ಆದರೆ ಬಾಂಗ್ಲಾದಲ್ಲಿ ಚೀತ್ಕರಿಸುತ್ತಿರುವ ಸನಾತನಿಯೆ ಕೂಗಿಗೆ
ಭಾರತವನ್ನು ಹೊರತು ಪಡಿಸಿ ಮೊದಲು ದನಿಯಾಗಿದ್ದು ಇಸ್ರೇಲ್. ಅಮೇರಿಕಾ ಹಾಗು ಯೂರೋಪಿನ ಜಾತ್ಯತೀತತೆ
ಎಲ್ಲಿ ಮರೆಯಾಗಿತ್ತೆಂದು ಸರ್ವ ಜನಾಂಗದ ಶಾಂತಿಯ ತೋಟದ ಹೂವುಗಳೇ ಹೇಳಬೇಕು.
ಇನ್ನು
ಕೆಲವರು ಭಾರತದಲ್ಲೂ ಬಾಂಗ್ಲಾದಂತೆ ಆಗಲಿದೆಯೇ ಎಂದು
ಆತಂಕ ವ್ಯಕ್ತ ಪಡಿಸಿದ್ದರು, ಆದರೆ ಭಾರತದಲ್ಲಿ ಆ ರೀತಿ ಯಾವ ಕಾರಣಕ್ಕೂ ಆಗುವುದಿಲ್ಲ ಭಾರತದ ಅಂತಃಸತ್ವವೇ
ವ್ಯವಿಧ್ಯತೆ, ಭಾರತದ ವಿವಿಧತೆ ಜಗತ್ತಿಗೆ ಮಾದರಿ. 700 ಕ್ಕೂ ಹೆಚ್ಚು ಭಾಷೆಗಳು , ಉಪ ಭಾಷೆಗಳು
, ಸಾವಿರಾರು ಜನ ಸಮುದಾಯಗಳು , ಸಂಪ್ರದಾಯಗಳು ಹಾಗು
ಆಚರಣೆಗಳು, ಮೇಲಾಗಿ ಇಲ್ಲಿ ತರ್ಕಕ್ಕೆ ಅವಕಾಶವಿದೆ ಆದ್ದರಿಂದ ಕಟ್ಟುಪಾಡುಗಳ ಹಂಗಿಲ್ಲ ಹಾಗೆಂದು ನಂಬಿಕೆಗಳೊಡನೆ
ಯಾವುದೇ ಕಾರಣಕ್ಕೆ ರಾಜಿಯಿಲ್ಲ ಅದು ಅವರವರ ಭಾವಕ್ಕೆ , ಭಕುತಿಗೆ ಬಿಟ್ಟ ವಿಷಯ. ಆದರೆ ಭಾರತದಲ್ಲೂ
ಬಾಂಗ್ಲಾದಂತಾದರೆ ಏನು ಗತಿ ಎಂಬ ಆತಂಕ ವ್ಯಕ್ತವಾಗಲು ಕಾರಣ ನಾಗರಿಕರಲ್ಲಿ ಚಿಕ್ಕಂದಿನಿಂದ ತುಂಬಿದ
ಅತಿಯಾದ ಶಾಂತಿ ಜಪ. ಇನ್ನಾದರೂ ಅಹಿಂಸಾ ಪರಮೋ ಧರ್ಮಃ
ಎಂಬ ಅರ್ಧ ಶ್ಲೋಕದ ಜಪವನ್ನು ಬಿಟ್ಟು "ಅಹಿಂಸಾ ಪರಮೋ ಧರ್ಮಃ, ಧರ್ಮ ಹಿಂಸಾ ತಥೈವಚ"
ಎಂಬ ಪೂರ್ಣ ಶ್ಲೋಕದ ಪಾಠ ಮಾಡಬೇಕು ಅಂದರೆ "ಅಹಿಂಸೆ ಅತ್ಯುನ್ನತ ಕರ್ತವ್ಯ ನಿಜ , ಆದರೆ ಸದಾಚಾರವನ್ನು
ರಕ್ಷಿಸಲು ಅಗತ್ಯವಾದಾಗ ಹಿಂಸೆಯೂ ಕರ್ತವ್ಯವೇ ಎಂಬುದು ಮರೆಯಬಾರದು ಎಂಬ ನಿಲುವಿರಬೇಕು, ಆ ನಿಲುವನ್ನು
ಪರಿಪಾಲಿಸಲು ಯಾವ ಜಾತಿ ಧರ್ಮಗಳು ಅಡ್ಡ ಬರಬಾರದು. ಗಾಂಧಿ ಪರ್ವದೊಂದಿಗೆ ಸಾವರ್ಕರ್ ಪರ್ವಕ್ಕೂ ಆದ್ಯತೆ
ಇರಬೇಕು. ಶಾಂತಿ ಹಾಗು ಶೌರ್ಯದ ಟ್ರ್ಯಾಕ್ ಜೊತೆಜೊತೆಯಲ್ಲೇ
ಸಾಗಬೇಕು. .ಇನ್ನಾದರೂ ಮುಂದಿನ ಪೀಳಿಗೆಗೆ ಶಿವಾಜಿ ಹಾಗು ಬಾಜಿ ರಾವ್ ರಂತಹ ಶೌರ್ಯದ ಯಶೋಗಾಥೆಯನ್ನು ತಿಳಿಹೇಳಬೇಕು ಏಕೆಂದರೆ ಶಾಲಾ ಕಾಲೇಜುಗಳ ಪಠ್ಯಕ್ರಮಗಳಲ್ಲಿ ಬಾಜಿ ರಾವ್ ಕಲಿಸಲಾಗುತ್ತಿಲ್ಲ.ಶಿವಾಜಿಯ ಬಗ್ಗೆ ಅಷ್ಟಿಷ್ಟು
ಬರೆದು ಶಿವಾಜಿಯ ಕಾಲಾನಂತರ ಸೀದಾ ಬ್ರಿಟಿಷರತ್ತ ಇತಿಹಾಸ ಹೊರಳುವಂತೆ ಪುಸ್ತಕಗಳಲ್ಲಿ ಚಿತ್ರಿಸಿರುತ್ತಾರೆ.
ನಾಮ್ ಕೆ ವಾಸ್ತೆ ಎಂಬಂತೆ ಪೇಶ್ವಾ ರಘುನಾಥ್ ರಾವ್ ಹಾಗು ನಾನಾ ಸಾಹೇಬ್ ಪೇಶ್ವಾ ಬಗ್ಗೆ ಎರಡು ಸಾಲು
ಬರೆದು ಆಯಿತು ಎನಿಸುತ್ತಾರೆ. ದೂರದ ದೇಶದ ನೆಪೋಲಿಯನ್ ಬೊನಾಪಾಟೆ ಹಾಗು ಸಿಂಧು ನದಿಯ ದಾಟಲಾರದವನ
ಚರಿತ್ರೆಯನ್ನು ಜಗವನ್ನೇ ಗೆದ್ದ ಅಲೆಕ್ಸಾಂಡರ್ ದಿ ಗ್ರೇಟ್ ಎಂದು ಕಲಿಸಲಾಗುತ್ತದೆ. ಆದರೆ ನಲವತ್ತೇ ವರ್ಷದಲ್ಲಿ ಸತತವಾಗಿ
ನಲವತ್ತೊಂದು ಯುದ್ದಗಳನ್ನು ಗೆದ್ದ ಅಪರಾಜಿತ ಅಜೇಯ ಯೋದ್ಧ ಪೇಶ್ವಾ ಬಾಜಿರಾವ ಕಲಿಸಲಾಗುವುದಿಲ್ಲ.
ಸರಿ
ಸುಮಾರು ಹತ್ತು ಶತಮಾನಗಳ ಹಿಂದೆಯೂ ಇದೇ ರೀತಿಯ ಅನ್ಯ ಸಂಸ್ಕೃತಿಗಳ ದಾಳಿ ಒಂದಿಡೀ ಭರತ ಖಂಡ ದ ಮೇಲೆ, ಭಾರತೀಯ ಸಂಸ್ಕೃತಿಯ ಮೇಲೆ ನಿರಂತರವಾಗಿ ನಡೆದು ಬಂದಿತ್ತು.
ಅದು ಶಕರಿಂದಾದಿಯಾಗಿ, ಗುಣ , ಗ್ರೀಕ್, ಘೋರಿ, ಮೊಘಲ್, ಫ್ರೆಂಚ್, ಡಚ್ ಹಾಗು ಬ್ರಿಟಿಷರವರೆಗೆ ಒಂದಾದ
ಮೇಲೆ ಒಂದರಂತೆ ಆಕ್ರಮಣ ನಡೆಯುತ್ತಲೇ ಬಂದಿತ್ತು. ಹಾಗೆ ಏಳನೇ ಶತಮಾನದಿಂದಾಚೆ ಪ್ರಾರಂಭವಾದ ಅನ್ಯ
ಸಂಸ್ಕೃತಿಯ ದಾಳಿ ಸರಿ ಸುಮಾರು 1400 ವರುಷಗಳ ಕಾಲ
ಹಂತ ಹಂತ ಹಂತವಾಗಿ ನಡೆಯುತ್ತಲೇ ಇತ್ತು. ಅಂತಹ ಗಾಡಾಂಧಕಾರದ ದಿನಗಳಿಂದ ಮುಕ್ತಿ ಗೊಳಿಸಲು
ಉದಯಿಸಿದ್ದು ಹಿಂದವೀ ಸ್ವರಾಜ್ಯ ಕಲ್ಪನೆಯ ಪ್ರಖರ ಸೂರ್ಯ ಛತ್ರಪತಿ ಶಿವಾಜಿ. ಆ ಹಿಂದವೀ ಸ್ವರಾಜ್ಯದ ಬೆಳಕನ್ನು ದಶ ದಿಕ್ಕಿಗೆ ಪಸರಿಸಿದ್ದು
ಬಾಜಿರಾವ್. ಯುದ್ಧಗಳ ಮೇಲೆ ಯುದ್ಧಗಳನ್ನು ಗೆದ್ದು
ಶತ್ರುಗಳಿಗೆ ಸಿಂಹ ಸ್ವಪ್ನವಾಗಿದ್ದ ಈ ಮಹಾನ್ ಯೋದ್ಧರು ಅತ್ಯಲ್ಪ ಕಾಲದಲ್ಲೇ ಕಾಲವಾದರು ಇದು ಭಾರತೀಯರ ದುರ್ವಿಧಿ. ಬಹುಶಃ ಅವರಿಬ್ಬರೂ
ಇನ್ನಷ್ಟು ಕಾಲ ಬದುಕಿದ್ದಿದ್ದರೆ ಭಾರತದ ಗಡಿಗಳು
ಅಂದೇ ಬದಲಾಗುತ್ತಿತ್ತೋ ಏನೋ. ಆದರೆ ಇಂದಿಗೂ ಭಾರತ ಅಂದು ಬಾಜಿರಾವ್ ಹಿಂದವೀ ಸ್ವರಾಜ್ಯದ
ಸ್ಥಾಪನೆಗಾಗಿ ಒಬ್ಬ ಪೇಶ್ವೇಯಾಗಿ ಎದುರಿಸಿದ್ದ ಸವಾಲುಗಳನ್ನೇ ಎದುರಿಸುತ್ತಿದೆ. ಇಂದು ಕೂಡ ತನ್ನ
ಸಾರ್ವಭೌಮತ್ವವನ್ನು ಕಾಪಿಟ್ಟುಕೊಳ್ಳಲು ಭಾರತ ನಾನಾ
ರೀತಿಯ ಹೊಸ ಹೊಸ ಮಾದರಿಯ ಸವಾಲುಗಳನ್ನು ಎದುರಿಸುತ್ತಲೇ ಇದೆ. ಆದ್ದರಿಂದ ಅಂದಿನಂತೆ ಇಂದು ಕೂಡ ಪೇಶ್ವಾ
ಮನೋಸ್ಥಿತಿಯ ನಾಯಕತ್ವವೇ ಈ ಹೊತ್ತಿನ ಅನಿವಾರ್ಯ ಎಂದು
ಎಲ್ಲರೂ ತಿಳಿದುಕೊಳ್ಳಬೇಕು.ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳ ಸಾಮ್ಯವಿದೆ, ಅಂದು ಬಾಜಿ
ರಾವ್ ಮುಘಲ್ ರೊಡನೆ , ಫ್ರೆಂಚ್ ರೊಡನೆ , ನಿಜಾಮರೊಡನೆ
ಎಲ್ಲ ದಿಕ್ಕುಗಳಲ್ಲೂ ಏಕಕಾಲಕ್ಕೆ ಹೋರಾಡಬೇಕಿತ್ತು. ಇಂದು ಭಾರತವು ಕೂಡ ತನ್ನ ಸುತ್ತಲಿರುವ ಎಲ್ಲ ದೇಶಗಳೊಡನೆ ಪ್ರತ್ಯಕ್ಷವಾಗಿ
ಅಥವಾ ಪರೋಕ್ಷವಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ
ಬಂದೆರಗಿದೆ. ಪಾಕಿಸ್ತಾನದೊಡನೆ ಪ್ರತ್ಯಕ್ಷ ಹೋರಾಟವಾದರೆ , ಚೀನಾ ದ ಕುತಂತ್ರದಿಂದಾಗಿ ಶ್ರೀಲಂಕಾ,
ನೇಪಾಳ , ಮಾಲ್ಡಿವ್ಯ್ಸ್ ಇದೀಗ ಬಂಗ್ಲಾದೊಡನೆಯೂ ಪರೋಕ್ಷವಾಗಿ ಹೊರಡುವ ಸ್ಥಿತಿ ಸೃಷ್ಟಿಯಾಗಿದೆ. ಹಾಗೆಂದು
ನಾಳೆಯಿಂದಲೇ ಭಾರತ ಶಸ್ತ್ರ ಸುಸಜ್ಜಿತವಾಗಿ ಶತ್ರುಗಳ ಮೇಲೆ ದಂಡೆತ್ತಿ ಹೋಗಬೇಕೆಂದಲ್ಲ ಆದರೆ ತಾನು
ಯುದ್ದಕ್ಕೂ ಸಿದ್ದ ಶಾಂತಿಗು ಭದ್ದ ಎಂದು ಕಾಲಕಾಲಕ್ಕೆ ಸಂದೇಶಗಳನ್ನು ರವಾನಿಸುತ್ತಿರಬೇಕು. ಒಂದು ದೇಶ ಯುದ್ದಕ್ಕೆ ಹೋಗುವುದೆಂದರೆ ಅದು ಕೇವಲ ದೇಶದ
ಸೈನ್ಯ ಹಾಗು ಸೈನಿಕ ಯುದ್ಧ ಮಾಡುವುದೆಂದಲ್ಲ ಆ ದೇಶದ
ಪ್ರತಿಯೊಬ್ಬ ನಾಗರಿಕನು ಆ ಯೋದ್ಧನ ಮನಸ್ಥಿತಿಯಲ್ಲಿರಬೇಕಾಗುತ್ತದೆ. ಆದ್ದರಿಂದ ಚಿಕ್ಕಂದಿನಿಂದಲೇ
ಪ್ರತಿಯೊಬ್ಬ ನಾಗರಿಕರಿಗೆ ಶಾಂತಿ ಯೊಂದಿಗೆ ಶೌರ್ಯದ
ಇತಿಹಾಸವನ್ನು ಭೋದಿಸುವ ಅಗತ್ಯವಿದೆ. ಈ ವಿಷಯವನ್ನು
ಸಾವರ್ಕರ್ ಎಂದೋ ಗ್ರಹಿಸಿದ್ದರು ಆದ್ದರಿಂದಲೇ ಸಾವರ್ಕರ್ " ಹೇ ಹಿಂದು ನರಸಿಂಹ ಪ್ರಭೋ
ಶಿವಾಜಿ ರಾಜ" ಎಂದು ಶಿವಾಜಿ ಮಹಾರಾಜರನ್ನು ಮುಕ್ಕೋಟಿ ದೇವರುಗಳ ಸಾಲಿನಲ್ಲಿ ನಿಲ್ಲಿಸಿ
ಅವರ ಬಗ್ಗೆ ಅವರ ಶೌರ್ಯವನ್ನು ಕೊಂಡಾಡುವ ಆರತಿಯನ್ನು
ರಚಿಸಿದ್ದರು.
ಒಮ್ಮೆ
ಸಾವರಕರ್ ಅವರನ್ನು ಅವರ ಕಟು ವಿಮರ್ಶಕರೊಬ್ಬರು ಕೇಳಿದರಂತೆ ನೀವೇನು ಯಾವಾಗಲು ಹಿಂದೂ ದೇಶ ಹಿಂದೂ ಹಿಂದೂ ಹಿಂದೂ ಎಂದು ಹೇಳುತ್ತಿರುತ್ತೀರಿ,
ನಿಮ್ಮ ಅಂತಿಮ ಉದ್ದೇಶವೇನು ಎಂದು ಕೇಳಿದರಂತೆ, ಆಗ ಸಾವರ್ಕರ್ ಹೇಳುತ್ತಾರೆ ನನ್ನನು ಯಾರಾದರೂ ನಿನ್ನ
ಜಾತಿ ಯಾವುದು ಎಂದು ಕೇಳಿದರೆ ನಾನು ನನ್ನ ಜಾತಿ ಮನುಷ್ಯ ಜಾತಿ ಎಂದು ಹೇಳಲು ಆನಂದವಾಗುತ್ತದೆ ಎಂದು
ಹೇಳಿದರಂತೆ. ನಿಮ್ಮ ರಾಷ್ಟ್ರ ಯಾವುದು ಎಂದು ಯಾರಾದರೂ ಕೇಳಿದರೆ ಪೃಥ್ವಿಯೇ ನನ್ನ ರಾಷ್ಟ್ರ ಎಂದು
ಹೇಳಲು ನನಗೆ ಆನಂದವಾಗುತ್ತದೆ ಎಂದು ಹೇಳಿದರಂತೆ. ಅಂದರೆ ಅವರ ಭಾವನೆ ಹಾಗು ಭಾವ ವಸುಧೈವ ಕುಟುಂಬಕಂ
ಎಂಬುದಾಗಿತ್ತು, ಹೀಗಿದ್ದಾಗಿಯೂ ಇಂದಿಗೂ ಕೆಲವರು ಸಾವರ್ಕರ್ ಒಪ್ಪುವುದಿಲ್ಲ. ಅಷ್ಟೇ ಅಲ್ಲ ಅವರ ಹೆಸರನ್ನು
ಅವರ ಪಠ್ಯವನ್ನು ಪುಸ್ತಕದಿಂದ ತೆಗೆದು ಹಾಕಿದರು, ಆದರೆ ಹಾಗೆ ಮಾಡಿದವರಿಗೆ ಒಂದಂಶ ತಿಳಿದಿರಬೇಕು
ಅವರು ಸಾವರ್ಕರ್ ಹೆಸರನ್ನು ಪುಸ್ತಕದಿಂದ ತೆಗೆಯಬಹುದು ಮಸ್ತಕದಿಂದ ತೆಗೆಯಲಾರರು.
https://epaper.samyukthakarnataka.com/edition/Ballari/SMYK_BALL/SMYK_BALL_20240819/page/8
ಕಾರ್ತಿಕ್ ಎಸ್ ಬಾಪಟ್.

No comments:
Post a Comment