ಅವರೊಬ್ಬರಿದ್ದರು ಕೆ ಕಾಮರಾಜ್ ಶಾಸ್ತ್ರೀಜಿಯವರ ಬೆನ್ನಿಗೆ.
ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ಜಯಲಲಿತಾ ಮರಣಾ ನಂತರದ ಬೆಳವಣಿಗೆಯನ್ನು ನೋಡಿದವರಿಗೆ, ಇದೇನಾಗುತ್ತಿದೆ
"The Most Intellectual " ನಾಡಿನಲ್ಲಿ ಎಂದೆನಿಸಿದರೆ ಅದು ಸಹಜ, ಏಕೆಂದರೆ ತಮಿಳುನಾಡಿನಲ್ಲಿ
೧೯೬೭ರ ನಂತರ ಕೇವಲ ದ್ವಿಪಕ್ಷಿಯರಾಜಕೀಯವೇ, ಒಮ್ಮೆ "DMK" ಇಡೀ ಸರಕಾರವನ್ನು ತಹಬಂದಿಗೆ
ತಂದು ಕೊಂಡರೆ ಇನ್ನೊಮ್ಮೆ "AIADMK
" , DMK ಯಾದರು ತನ್ನ ಎರಡನೇ ಸಾಲಿನ ನಾಯಕರನ್ನು ತಯಾರು ಮಾಡಿ "DMK " ಅಲ್ಲಿ
ನಾಯಕರಿಲ್ಲ ಎಂಬ ಕೊರಗಿಗೆ ತಕ್ಕ ಮಟ್ಟಿಗಾದರೂ ಇತಿಶ್ರೀ ಹಾಕಿದೆ, ಎರಡನೇ ಸಾಲಿನ ನಾಯಕರೆಂದು ರೂಪು
ಗೊಂಡವರಲ್ಲಿ ಆ ಬಗೆಯ "ವರ್ಚಸ್ವಿ" ನಾಯಕರ್ಯಾರು ಹೊರ ಹೊಮ್ಮಲಿಲ್ಲ, ಎಲ್ಲರು ಆಜ್ನ್ಯ
ಪಾಲಕರಾದರೆ ಹೊರತು ಸ್ವಂತ ವರ್ಚಸ್ಸನ್ನು ಬೆಳಸಿಕೊಳ್ಳಲಿಲ್ಲ, ಅದೆಲ್ಲದರ ಪರಿಣಾಮವಾಗಿಯೇ ನಾವು ಇತ್ತೀಚಿಗೆ
ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದೆವು, ಅರೆ, ಒಬ್ಬ ಹಂಗಾಮೀ ಮುಖ್ಯ ಮಂತ್ರಿಗೆ ರೆಸಾರ್ಟ್ ಒಳಗೆ
ಪ್ರವೇಶ ವಿಲ್ಲಾ ಎಂದರೆ ಹೇಗೆ ? ಕೊನೆಗೂ ಹಾಗು ಹೀಗೂ ಕ್ಷಣ ಕ್ಷಣಕ್ಕೂ ಕುತೂಹಲದ ತಿರುವಿನೊಂದಿಗೆ
"ಪಳನಿ ಸ್ವಾಮಿ" ಮುಖ್ಯಮಂತ್ರಿಯಾಗಿ ಆಯ್ಕೆ ಯಾದರು, ಇಷ್ಟೆಲ್ಲಾ ಪ್ರಹಸನದ ಮದ್ಯೆ ಕೆಲವರ
ಕೂಗು ಪಳನಿ ಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರಬಹುದು ಆದರೆ ಅವರನ್ನು ಅಕ್ಷರಶಃ ನಿಭಾಯಿಸುತ್ತಿರುವುದು
"ಶಶಿಕಲಾ" ಎಂಬ ಕೂಗು.
ಇದೇನಿದು ಖುರ್ಚಿಗಾಗಿ ಕಾದಾಟ, ಜಗ್ಗಾಟ ನಾಯಿ ಕತ್ತೆಗಳೆಂಬ ಪದ ಪ್ರಯೋಗಗಳ
ಮದ್ಯೆ ನೆನಪಾದವರು ಒಲಿದು ಬಂದ"ಪ್ರದಾನ ಮಂತ್ರಿ"
ಗಾದಿಯನ್ನು ನಯವಾಗಿ ತಿರಸ್ಕರಿಸಿ ಪಕ್ಷ ಸಂಘಟನೆಗಾಗಿಯೇ "ಮುಖ್ಯಮಂತ್ರಿ ಪದವಿಯನ್ನು"
ಬಿಟ್ಟುಕೊಟ್ಟ ದೂರಗಾಮಿ ನೆಲೆಯಲ್ಲಿ ಚಿಂತಿಸುತಿದ್ದ ತಮಿಳುನಾಡು ಕಂಡಂತಹ ಅಪರೂಪದ ನಾಯಕ "ಕೆ
ಕಾಮರಾಜ್" ಮತ್ತು ರೈಲ್ವೆ ದುರಂತ ವಾದಾಗ ನೈತಿಕ ಹೊಣೆಯನ್ನು ಹೊತ್ತು ಮಂತ್ರಿ ಪದವಿಯನ್ನು ತ್ಯಜಿಸಿದ
ಭಾರತ ಕಂಡಂತಹ ಕಠಿಣ ಧೋರಣೆಯ ಮೃದು ಹೃದಯದ ಮಾಜಿ ಪ್ರಧಾನಿ ಶಾಸ್ತ್ರಿಜಿ .
ಅದು ೧೯೧೯ರ ಸಮಯ ರೌಲಟ್ಟ್ ಆಕ್ಟ್ (rowlatt act) ಎಂಬ ಅಮಾನವೀಯ ಆಕ್ಟ್
ಅನ್ನು ಭಾರತೀಯರ ಮೇಲೆ ಹೇರಲಾಗಿತ್ತು , ಇದರ ಪ್ರಕಾರ ಬಂಡಾಯದ ಬಾವುಟವನ್ನೇರಿಸಿದ ಕಿಂಚಿತ್ ಅನುಮಾನ ಬಂದರು ಅವರನ್ನು ನಿರ್ದಾಕ್ಷಿಣ್ಯವಾಗಿ
ಜೈಲಿಗಟ್ಟಲಾಗುತ್ತಿತ್ತು , ಇದರ ವಿರುದ್ಧ ಭಾರತೀಯರು ಸಹಜವಾಗಿಯೇ ಸಿಡಿದಿದ್ದೆರು, ಆಗ ಗಾಂಧೀಜಿಯವರು
ಈ ಖಠಿಣ ನಿಯಮದ ಬಗ್ಗೆ ಸಮರ ಸಾರಿ ದೇಶದೆಲ್ಲಡೆ ಈ
ನಿರ್ಧಾರದ ವಿರುದ್ಧ "ಸತ್ಯಾಗ್ರಹಕ್ಕೆ" ಆದೇಶಿಸಿದ್ದರು, ಅದಾದ ನಂತರ ಎರಡೇ ದಿನಕ್ಕೆ
ಗಾಂಧೀಜಿಯವರ ಬಂಧನವಾಯಿತು. ಗಾಂಧೀಜಿಯವರ ಬಂಧನ ದೇಶದೆಲ್ಲಡೆ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿತ್ತು.
ಅದಾದನಂತರ ಡಾ||ಕಿಚುಲು (Dr || kitchlu) ಮತ್ತು ಡಾ|| ಸತ್ಯಪಾಲ್ ಎಂಬ ಹೋರಾಟಗಾರರ ಬಂಧನವಾಯಿತು
(10th ಏಪ್ರಿಲ್ 1919). ಇದೆಲ್ಲದರ ವಿರುದ್ಧ ಅಮೃತ್ಸರದ ಜನತೆ ದೊಡ್ಡ ಮೆರವಣಿಗೆಯನ್ನು ಮಾಡಿ ಬ್ರಿಟಿಷರ
ದಬ್ಬಾಳಿಕೆಯನ್ನು ಖಂಡಿಸಿದರು. ಆದರೆ ಇದರ ಮರುದಿನ ಅಂದರೆ ಏಪ್ರಿಲ್ 13 ೧೯೧೯ ರಂದು, ಬ್ರಿಟಿಷರ ವಿರುದ್ಧ
ಒಂದು ಸಭೆಯನ್ನು ಏರ್ಪಡಿಸಲಾಗುತ್ತದೆ ಮತ್ತು ಪವಿತ್ರ "ಬೈಸಾಕಿಯ" ದಿನವೂ ಕೂಡ ಆಗಿರುತ್ತದೆ.
ಇದರ ಬಗ್ಗೆ ಅರಿವಿಲ್ಲದೆ "ಜನರಲ್ ಡೈಯರ್" ಯಾವುದೇ ತರಹದ ಸಭೆ ಸಮಾರಂಭಗಳನ್ನು ಮಾಡುವಂತಿಲ್ಲ
ಎಂದು ನಿಷೇದಾಜ್ಞೆ ಹೊರಡಿಸಿರುತ್ತಾನೆ. ಇದನ್ನರಿಯದ ಎಷ್ಟೋ ಜನ ಮುಗ್ದರು "ಜಲಿಯನ್ ವಾಲಾಬಾಗ್"
ನಲ್ಲಿ ೧೩ನೆ ಏಪ್ರಿಲ್ ೧೯೧೯ ರಂದು ಸೇರಿರುತ್ತಾರೆ, ಇದರ ಸೂಕ್ಷ್ಮತೆಯನ್ನು ಅರಿಯದ ಡೈಯರ್ ಶಸ್ತ್ರಾಸ್ತ್ರಗಳನ್ನೇ
ನೋಡದ ಮುಗ್ಧ ಜನರ ಮೇಲೆ ಮದ್ದು ಗುಂಡುಗಳನ್ನು ಭೋರ್ಗರಿಯಲು ಆದೇಶ ನೀಡುತ್ತಾನೆ.
ಈ ದುರಂತ ಮುಂದೆ ಹಲವಾರು ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು, ಆದರೆ ದೂರದ
ತಮಿಳುನಾಡಿನ ವಿರುದ ನಗರದೂರಿನ ಒಬ್ಬ ೧೫ ವರ್ಷದ ಬಾಲಕನಿಗೆ ಸ್ವತಂತ್ರ ಸಂಗ್ರಾಮದಲ್ಲಿ ಧುಮುಕುವಂತೆ
ಪ್ರೇರೇಪಿಸಿತ್ತು. ಆ ಬಾಲಕ ಮತ್ತಾರು ಅಲ್ಲ , ಅವರೇ "ಕೆ ಕಾಮರಾಜ್" , ಇದಾದ ೨ ವರ್ಷದಲ್ಲಿ
ಗಾಂಧೀಜಿಯವರ ಸಾಂಗಾತ್ಯಾ ದೊರೆತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಲ್ಲಿ ಸಕ್ರಿಯರಾದರು, ಆದಾದ ನಂತರ
ಕಾಮರಾಜ್ ಹಿಂತಿರುಗಿ ನೋಡಲೇ ಇಲ್ಲ. ಹತ್ತು ಹಲವು ಸ್ವತಂತ್ರ ಚಳುವಳಿಗಳಲ್ಲಿ ಪಾಲ್ಗೊಂಡು ಸೆರೆಮನೆ
ವಾಸವನ್ನು ಅನುಭವಿಸಿದರು.
ಸ್ವತಂತ್ರ ನಂತರ ೧೯೫೪ ರಲ್ಲಿ ಮದ್ರಾಸ್ ಪ್ರಾಂತ್ಯದ ಮುಖ್ಯ ಮಂತ್ರಿಯಾಗಿ
ಆಯ್ಕೆಯಾಗಿ ಸರಿ ಸುಮಾರು ೯ ವರ್ಷಗಳ ಉತ್ತಮ ಆಡಳಿತವನ್ನು ನಡೆಸಿದರು, ಮನಸ್ಸು ಮಾಡಿದ್ದಾರೆ ಇನ್ನಷ್ಟು
ವರ್ಷಗಳ ಕಾಲ ಮುಖ್ಯಮಂತ್ರಿ ಯಾಗಿ ಮುಂದುವರೆಯ ಬಹುದಾಗಿತ್ತು, ಆದರೆ ಯಾರು ಊಹಿಸಲಸಾಧ್ಯವಾದ ಬೆಳವಣಿಗೆ
ನಾಂದಿ ಹಾಡಿ ಎಲ್ಲರು ಆಚ್ಚರಿಗೊಳ್ಳುವಂತೆ ಮಾಡಿದವರು ಕಾಮರಾಜ್.
ಎಲ್ಲವೂ ಚೆನ್ನಾಗಿರುವಾಗಲೇ ಕಾಮರಾಜ್ ಕಂಡುಕೊಂಡಿದ್ದೇನೆಂದರೆ ಪಕ್ಷ ಇನ್ನಷ್ಟು
ಬಲಿಷ್ಠವಾಗಬೇಕು ಎಂದು, ಕಾಮರಾಜ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಶಕ್ತಿ
ತುಂಬುವ ಕೆಲಸಕ್ಕೆ ಧುಮುಕಿದರು , ಅಷ್ಟೇ ಅಲ್ಲದೇ ಎಲ್ಲ ಹಿರಿಯರು ಉನ್ನತ ಹುದ್ದೆಗಳನ್ನು ತೊರೆದು
ಕಾಂಗ್ರೆಸ್ ಪಕ್ಷವನ್ನ ಬಲಿಷ್ಠಗೊಳಿಸುವಲ್ಲಿ ತೊಡಗಬೇಕೆಂದು ಕೇಳಿಕೊಂಡರು ಮುಂದೇ ಈ ನಿರ್ಧಾರ
" ಕಾಮರಾಜ್ ಯೋಜನೆ " ಎಂದೇ ಖ್ಯಾತಿಯಾಯಿತು. ಕಾಮರಾಜ್ ಅವರ ಸೇವೆ ಕೇವಲ ತಮಿಳುನಾಡಿಗೆ
ಸೀಮಿತವಾಗಿರಬಾರದೆಂದು ಮನಗೊಂಡು ನೆಹರು ಅವರು ( ೯ ನೇ ಅಕ್ಟೋಬರ್ ೧೯೬೩) ಕಾಮರಾಜ್ ಅವರು ಭಾರತೀಯ
ನ್ಯಾಷನಲ್ ಕಾಂಗ್ರೆಸನ ಅಧ್ಯಕ್ಷರಾಗುವಂತೆ ನೋಡಿಕೊಂಡರು.
ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ
ಕಾದಿತ್ತು. ೧೯೬೪ ಮೇ ೨೭ ರಂದು ನೆಹರು ನಿಧನಾನಂತರ ಕಾಂಗ್ರೆಸನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ
ಬಂದಾಗ ಆ ಸವಾಲನ್ನ ಸಮರ್ಥವಾಗಿ ನಿಭಾಯಿಸಿದರು ಕಾಮರಾಜ್. ಅದಾಗಲೇ ನೆಹರು ಅವರ ಸಮರ್ಥ ಉತ್ತರಾಧಿಕಾರಿಯಾಗಿ
ಬಿಂಬಿತರಾಗಿದ್ದವರು " ಲಾಲ್ ಬಹದ್ದೂರ್ ಶಾಸ್ತ್ರೀಜಿ " ಶಾಸ್ತ್ರೀಜಿ ನೆಹರು ಅವರ ಕ್ಯಾಬಿನೆಟ್ನ
ವಿಶೇಷ ಮಂತ್ರಿಯಾಗಿದ್ದರು ,ಆದರೆ ಕಾಂಗ್ರೆಸ್ನಲ್ಲಿ ಅವರ ವಿರೋಧಿಗಳಿಗೇನು ಕಡಿಮೆ ಇರಲಿಲ್ಲ.
ಆದರೆ ಶಾಸ್ತ್ರಿಜಿಯ್ವರಿಗಾಗಲಿ ಕಾಮರಾಜ್ ಅವರಿಗಾಗಲಿ ಪಕ್ಷದ ನಾಯಕನ ಆಯ್ಕೆಗಾಗಿ
ಚುನಾವಣೆ ನಡೆಯುವ / ನಡೆಸುವ ಪ್ರಮೇಯವೇ ಬೇಕಿರಲಿಲ್ಲ ,ಆ ಸಂದರ್ಭದಲ್ಲಿ ತಮ್ಮ ಈ ಇಂಗಿತವನ್ನು ಕಾಮರಾಜ್
ಇತರರ ಬಳಿ ವ್ಯಕ್ತ ಪಡಿಸಿದರು ; ಗುಲ್ಜಾರಿ ಲಾಲ್ ನಂದ ಅವರನ್ನು ಹಂಗಾಮಿ " care
taker " ಪ್ರಧಾನ ಮಂತ್ರಿಗಳಾಗಿ ನೇಮಿಸಲಾಗಿತ್ತು
ಆದರೆ ಮುರಾರ್ಜಿ ದೇಸಾಯಿಯವರು ಕೂಡ ನಾನು ಒಬ್ಬ ಪ್ರಬಲ
ಸ್ಪರ್ಧಿ / ಆಕಾಂಕ್ಷಿಯೆಂಬ ಸಂದೇಶವನ್ನು ಸಹ ಕಳಿಸಿದ್ದರು . ಆಗ ಶಾಸ್ತ್ರೀಜಿಯವರು ನಾನು ದೇಸಾಯಿಯವರ
ವಿರುದ್ಧ ಸ್ಪರ್ಧಿಸಿ ಗೆಲ್ಲ ಬಲ್ಲೆ ಆದರೆ ನನ್ನ ಮನಸ್ಸಿಗೆ ಈ ತಕ್ಷಣಕ್ಕೆ ತೋಚುತ್ತಿರುವ ಹೆಸರು
" JP " ಮತ್ತು " ಇಂದಿರಾ " ಇವರಿಬ್ಬರಲ್ಲಿ ಯಾರೇ ಆದರೂ ಸಂತೋಷವೇ ( ಇಂದಿನ
ಪರಿಸ್ಥಿತಿಗೆ ಹೋಲಿಸಿ ನೋಡಿ , ನನ್ನ ಹೆಸರು ಪಟ್ಟಿಯಲ್ಲಿಲ್ಲ ಎಂದು ಲಾಬಿ ಮಾಡುವ ರಾಜಕಾರಣಿಗಳಿಗೂ
ಅಂದಿನ ರಾಜಕಾರಣಿಗಳ ಮನಸ್ಥಿತಿಗೆ ಹಿಡಿದ ಕನ್ನಡಿ ) ಎಂದರು.
ಆದರೆ ಕಾಮರಾಜ್ ತನ್ನೊಂದಿಗೆ
ಅಹಿಂದೀಯೇತರ ರಾಜ್ಯಗಳ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡರು ( ಸಂಜೀವ್ ರೆಡ್ಡಿ ,ನಿಜಲಿಂಗಪ್ಪ , ಅತುಲ್ಯ ಘೋಷ್, S
K ಪಾಟೀಲ್ ) ನಮ್ಮ ಆಯ್ಕೆ ಶಾಸ್ತ್ರೀಜಿ ಎಂದು ಷರಾ ಬರೆದರು ಮತ್ತು ಶಾಸ್ತ್ರೀಜಿಯವರ ಪರ ಎಲ್ಲೆಡೆ
ಅಭಿಪ್ರಾಯ ವ್ಯಕ್ತವಾಗುತ್ತಿತ್ತು ಇದಕ್ಕೆ ಪೂರಕವಾಗಿ ಶಾಸ್ತ್ರೀಜ ಅಂತಹ ಚತುರ ಮತಿಯ ನಾಯಕನೊಬ್ಬ ಭಾರತದ
ಪ್ರಧಾನಮಂತ್ರಿಯಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಶೋಭೆ ತಂದಿತು .
ಶಾಸ್ತ್ರೀಜಿಯವರ ಹಾದಿ
ಅಷ್ಟೊಂದು ಸುಗಮವಾಗಿ ಏನು ಇರಲಿಲ್ಲ , ಅವರ ಮುಂದೆ ಹಲವು ಸವಾಲುಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಿತ್ತು
,ಮೊದಲಿಗೆ " ತೀನ್ ಮೂರ್ತಿ ಭವನ್ "( teen
moorti bhavan ) ಬಗ್ಗೆ ಇದ್ದ ಗೊಂದಲ ಮತ್ತು ಅದರ ನಿರ್ವಹಣೆ ಹೀಗೆ ಅದರ
ಸಮಸ್ಯೆ ಕಾಣುತಿತ್ತು . ಶಾಸ್ತ್ರೀಜಿಯವರಂತು ಒಮ್ಮೆ ತೀನ್ ಮೂರ್ತಿ ಭವನ್ ವಿಚಾರವಾಗಿ ಕೆಲವರ ಅಭಿಪ್ರಾಯದಿಂದ
ನೊಂದು ಅದರ ಬಗ್ಗೆ ಬೇಸರಿಸಿ ಕೊಂಡು ಆ ಕಡೆ ತಲೆ ಹಾಕಿಯೂ ಮಲಗುವುದಿಲ್ಲ ಎಂದು ನಿರ್ಧರಿಸಿದ್ದರು
. ಈಗಾಗಲೇ ಹೇಳಿದಂತೆ ಶಾಸ್ತ್ರೀಜಿಯವರ ಪದಗ್ರಹಣದ
ಮೂರೇ ತಿಂಗಳಲ್ಲಿ ಅವ್ರ ವಿರುದ್ಧ ಸಂಸತ್ತಿನಲ್ಲಿ ಅವವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು ಆದ್ರೆ
ಈ ಸವಾಲನ್ನು ಯಶಸ್ವಿಯಾಗಿ ಹಿಮ್ಮೆಟಿಸಿದ್ದಿರು ಶಾಸ್ತ್ರೀಜಿ .ಆದರೆ ಸವಾಲುಗಳು ಮತ್ತು ಕಷ್ಟಗಳು ಯಾರನ್ನು
ಕೇಳಿ ಬರುವುದಿಲ್ಲ ೧೯೬೫ ರಲ್ಲೇ ಆಹಾರ ಪಧಾರ್ಥಗಳ
ಉಪಲಬ್ಧತೆ ಕಡಿಮೆಯಾಯಾಯಿತು ಆಹ್ರ ಪದಾರ್ಥಗಳ ದಾಸ್ತಾನು ಕೊರತೆ ಶಾಸ್ತ್ರೀಜಿಯವರ ನಿದ್ದೆಗೆಡಿಸ್ಸಿತ್ತು,
ಈ ಸಂದರ್ಭದಲ್ಲಿ ಅವರು ಕೊಟ್ಟ ಕರೆ ಮತ್ತು ಅವರ ನಡೆ ಎಲ್ಲೆದ್ದೆ ಪ್ರಶಂಸೆಗೆ ಪಾತ್ರವಾಯಿತು.
ಅವರು ತಮ್ಮ ಶ್ರೀಮತಿಗೆ
ಮನೆಯಲ್ಲ ನಾವೆಲ್ಲರೂ ಒಂದು ಹೊತ್ತಿಗೆ ಊಟವಿಲ್ಲದೆ ಇರಬಹುದೇ ಎಂದು ನೋಡಣ ಎಂದು ಮೊದಲ ಪ್ರಯೋಗವನ್ನು
ಮನೆಯಿಂದಲೇ ಪ್ರಾರಂಭಿಸಿದರು.ಯಾವಾಗ ಒಂದು ದಿವಸ ತನ್ನ ಮನೆಯಲ್ಲಿ
ಉಪವಾಸವಿರಬಹುದು ಎಂದು ಸ್ವತಃ ಅನುಭವಕ್ಕೆ ತಂದುಕೊಂಡರೋ ಆಗ ಇಡೀ ರಾಷ್ಟ್ರಕ್ಕೆ ಸಾದ್ಯವಾದರೆ
ವಾರಕೊಮ್ಮೆ ಒಪ್ಪತ್ತು ಉಪವಾಸ ಮಾಡಿ ಎಂದು ಕೇಳಿಕೊಂಡರು ಮತ್ತು ಇನ್ನು ಒಂದು ಹೆಜ್ಜೆ ಮುಂದೆ
ಹೋಗಿ ತನ್ನ ನಿವಾಸದಲ್ಲಿ ಇದ್ದ "ಲಾನ್" ಅನ್ನು ತೆಗಸಿ ಅಲ್ಲಿಯೇ ನೇಗಿಲು ಹೂಡಿದರು,
ಈ "ಕಿಚನ್ ಗಾರ್ಡನ್" ಪರಿಕಲ್ಪನೆ ಎಷ್ಟು ಪ್ರಮುಕ್ಯತೆ
ಪಡೆಯೆತೆಂದರೆ , ಎಲ್ಲಿ ಸಣ್ಣ ಜಾಗ ಸಿಕ್ಕರೂ ಅಲ್ಲಿ ಬೆಳೆ ತೆಗೆದು
ದೇಶದ ಪ್ರಗತಿಗೆ ನಾಂದಿ ಹಾಡಬೇಕು ಎಂಬ ಸಂದೇಶವನ್ನು ಸಾರಿದರು.
೧೯೬೫ರಲ್ಲಿ ಭಾರತ ಮತ್ತು ಪಾಕ್
ಯುದ್ಧದಲ್ಲಿ ಅವರು ತೋರಿದ ನಿಲುವಂತೂ, ಅವರ ಕಠಿಣ ನಿಲುವನ್ನು ತೆಗೆದುಕೊಳ್ಳಬಹುದಾದ
ವ್ಯಕ್ತಿತ್ವಕ್ಕೆ ಉದಾಹರಣೆಯಾಗಿತ್ತು. ಅದುವರೆಗೂ ವಿಶ್ವ ಅವರನ್ನು ಮೃದು ಹೃದಯೇ ಕಠಿಣ
ಧೋರಣೆಯನ್ನ ಅನುಸರಿಸಲಾಗದ ಪ್ರಧಾನಮಂತ್ರಿಯೆಂದು ನೋಡುತಿತ್ತು. ಅದು ೧೯೬೫ರ ಸಮಯ , ೧೯೬೨ರ ಇಂಡೋ ಚೀನಾ ಯುದ್ಧದ ಗಯಾ ಇನ್ನು ಮಾಸಿರಲಿಲ್ಲ , ಪಾಕಿಸ್ತಾನ
ಇದೆ ಸರಿಯಾದ ಸಮಯ ಹೇಗಿದ್ದರೂ ದುರ್ಬಲ ಪ್ರದಾನಿಯಿದ್ದಾರೆ ಮತ್ತು ೧೯೬೨ ಗಾಯ ಮಾಸಿಲ್ಲವೆಂದು
ತಿಳಿದು ಗುಜರಾತ್ - ಕಚ್ (Katch) ನ "ಕಂಜರ್ ಕೋಟ್" ನ
ಮೇಲೆ ಮುಗಿಬಿದ್ದು ತನ್ನ ಬಾಹುಳ್ಯಕ್ಕೆ ತೆಗೆದುಕೊಂಡಿತ್ತು . ಅದೇ ರೀತಿ ಜಮ್ಮು ಕಾಶ್ಮೀರದ ಚಂಬ್
ನ ಮೇಲು ಆಕ್ರಮಣ ಮಾಡಿತ್ತು ಶತ್ರು ದೇಶ. ಆ ಭಾಗದ ಮೇಲಿನ ಆಕ್ರಮಣ ಮತ್ತು ಬಾಹುಳ್ಯವೆಂದರೆ
ಭಾರತವನ್ನು ಜಮ್ಮು ಮತ್ತು ಕಶ್ಮೀರ ಒಂದುಗೂಡಿಸುವ ಆ ಚಿಕನ್ ಪಾಯಿಂಟ್ ನ ಮೇಲೆ ಪ್ರಹಾರ ಮಾಡಿದಂತೆ
ಮತ್ತು ಎಲ್ಲಾ ಸೇವಾ ಸರಂಜಾಮುಗಳ ಪೂರೈಕೆಗೆ ಅಡ್ಡಿಮಾಡಿದಂತೆ.
ಆಗ ವಾಯುಪಡೆಯ ಉಪಯೋಗ ಮಾಡುವ
ಅನಿವಾರ್ಯ ಪರಿಸ್ಥಿತಿ ಸೇನೆಗೆ ಬಂದಿತ್ತು, ಆದರೆ ವಾಯುಪಡೆಯನ್ನು ಉಪಯೋಗಿಸುವುದೆಂದರೆ ಯುದ್ಧ
ಪಡೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವುದು ಎಂಬುದೇ ಅರ್ಥ, ಆಗ
ಶಾಸ್ತ್ರೀಜಿ ಏಕೆ ತಡಮಾಡುತ್ತಿದ್ದಿರಿ ವಾಯುಪಡೆಯನ್ನು ಉಪಯೋಗಿಸಿ ಅಂದಿದ್ದಲ್ಲದೆ, ಅವರು ಆಕ್ರಮಿಸಿದ ಜಾಗ ಅಂತರರಾಷ್ಟ್ರೀಯ ಗಡಿಯಾದರೆ,
ನಾವು ಕೂಡ ಪಂಜಾಬ್ ಮತ್ತು ರಾಜಸ್ಥಾನ್ ಮೂಲಕ ಅವರ ಗಡಿಯನ್ನು ದಾಟಲು ಮೀನಾ ಮೇಷ ಎಣಿಸುವುದೇಕೆ ಎಂಬುದಾಗಿತ್ತು, ಪಾಕಿಸ್ತಾನ ಕನಸು ಮನಸಲ್ಲೂ ಈ ಭಗೆಯ ನಿರ್ಧಾರವನ್ನು ಶಾಸ್ತ್ರೀಜಿ ಕೈಗೊಳ್ಳುತ್ತಾರೆ
ಎಂದು ಊಹಿಸಿರಲಿಲ್ಲ.
ಈ ನಿರ್ಧಾರದಿಂದಾಗಿ ಯುದ್ಧಭೂಮಿ
ಅಕ್ಷರಶಃ ರಣ ರಂಗವಾಗಿ ಮಾರ್ಪಾಡಾಗಿತ್ತು, ಶಾಸ್ತ್ರೀಜಿಯವರ ಈ ಒಂದು ದಿಟ್ಟ
ನಿರ್ಧಾರದಿಂದ ಲಾಹೋರ್ ಇನ್ನೇನು ಕ್ಷಣಮಾತ್ರದ ಗುರಿಯಾಗಿತ್ತು, ಕಾಶ್ಮೀರದ
" ಹಾಜಿ ಪೀರ್" ಕೂಡ ಭಾರತದ ತಹಬಂದಿಗೆ
ಬಂದಾಗಿತ್ತು. ಲಾಹೋರ್ನಂತೆ ಸಿಯಲ್ ಕೋಟ್ ಕೂಡ ಕ್ಷಣಮಾತ್ರದ ಗುರಿಯಾಗಿತ್ತು.ಹೀಗೆ ಸಿಯಾಲ್ಕೋಟ್
ಮತ್ತು ಲಾಹೋರ್ ಕ್ಷಣಮಾತ್ರದ ಗುರಿಯಾಗಿದ್ದರು , ಸಂಪೂರ್ಣವಾಗಿ
ಆಕ್ರಮಿಸದೇ ಹಾಗೆ ಬಿಟ್ಟುಕೊಟ್ಟಿದ್ದು ಕೂಡ ಶಾಸ್ತ್ರೀಜಿಯವರ ನಿಪುಣತೆಗಿದ್ದ ಸಾಕ್ಷಿ . ಮುಂದೆ
"ಯುನೈಟೆಡ್ ನೇಶನ್"(United
nation ) ಹಾಗು ಜಾಗತಿಕ ಒತ್ತಡದಿಂದಾಗಿ ಯುದ್ಧ ಒಂದು ಹಂತಕ್ಕೆ ತಲುಪಿ
, ಪಾಕಿಸ್ತಾನ ಭಾರತದೊಂದಿಗೆ ಕಾದಾಡಿ ನಿಸ್ತೆಜನಾಗಿ ಬಂದ ದಾರಿಗೆ
ಮಮ್ಮಲು ಮರಗಿ ಯುದ್ಧದಲ್ಲಿ ಸೋತು ಹೋಯಿತು , ಭಾರತ ತಾನು
ಆಕ್ರಮಿಸಿಕೊಂಡಿದ್ದ ಪ್ರದೇಶವನ್ನು ಪುನಃ ಪಾಕಿಸ್ತಾನಕ್ಕೆ ಓಪ್ಪಿಸಿ ತನ್ನ ಹಿರಿಮೆ ಮತ್ತು
ಗರಿಮೆಯನ್ನು ಮರುಸ್ಥಾಪಿಸಿತು.
ಮುಂದೆ ಶಾಸ್ತ್ರೀಜಿಯವರು
ಅಲಹಾಬಾದ್ನಲ್ಲಿ ಮೊಳಗಿಸಿದ ಘೋಷ ವಾಕ್ಯ "ಜೈ ಜವಾನ್ ಜೈ ಕಿಸಾನ್" ಇಂದಿಗೂ ಪ್ರಸ್ತುತ, ತದನಂತರ ಶಾಸ್ತ್ರೀಜಿ ತಾಷ್ಕೆಂಟ್ನಲ್ಲಿ ಭಾರತಕೊಸ್ಕರ ಕಾರ್ಯ ನಿರ್ವಹಿಸುತ್ತಿದ್ದಾಗ
ಹೃದಯಾಘಾತವಾಗಿ ನಿಧನ ಹೊಂದಿದರು. ಅವರ ಅಗಲಿಕೆ ನೈತಿಕ ಮೌಲ್ಯಗಳಿಗಾದ ಆಘಾತವೇ ಸರಿ. ಇತ್ತೀಚಿನ
ತಮಿಳ್ ನಾಡಿನ ರಾಜಕೀಯವನ್ನು ಗಮನಿಸುತ್ತಿದ್ದಾಗ ಕಾಮರಾಜ್ ನೆನಪಾದರು , ಅವರ ನೆನಪಿನೊಂದಿಗೆ ಶಾಸ್ತ್ರೀಜಿ ಕೂಡ ನೆನಪಾದರು , ಹೀಗೆ
ಶಾಸ್ತ್ರೀಜಿ ಕೇವಲ ೧೮ ತಿಂಗಳು ಪ್ರಧಾನಿ ಹುದ್ದೆಯಲ್ಲಿದ್ದರು ಜನಮಾನಸದಲ್ಲಿ ಇಂದಿಗೂ ಅವರ
ನೆನಪಿರುವುದು ಅವರ ಸರಳತೆಯಿಂದ ಮತ್ತು ಜನಾನುರಾಗಿ/ಸಮಾಜಮುಖಿ ಕಾರ್ಯಗಳಿಂದ ಇಂತಹ
ನಾಯಕರಿಂದಾಗಿಯೇ ನಮಗೆಲ್ಲಾ ಇಂದು ಆಶಾಭಾವವೊಂದು ಜೀವಂತವಾಗಿದೆ.
No comments:
Post a Comment